ಒಂದು ದಿನಕ್ಕೆ ಎಷ್ಟು ಬಾರಿ ಫೋನ್ ಚಾರ್ಜ್ ಮಾಡಬಹುದು ಗೊತ್ತಾ?

|

ಸ್ಮಾರ್ಟ್‌ಫೋನ್‌ಗೆ ಅದರ ಬ್ಯಾಟರಿಯೇ ಜೀವಾಳ. ಅತ್ಯುತ್ತಮ ಬ್ಯಾಟರಿ ಬಾಳಿಕೆ ಇದ್ದರೇ ಸ್ಮಾರ್ಟ್‌ಫೋನ್ ಹೆಚ್ಚು ಸಮಯ ಬಳಕೆ ಸಾಧ್ಯ. ಈ ನಿಟ್ಟಿನಲ್ಲಿ ಮೊಬೈಲ್ ಕಂಪನಿಗಳು ಅಧಿಕ ಬ್ಯಾಟರಿ ಲೈಫ್ ಸಾಮರ್ಥ್ಯದಲ್ಲಿ ಸ್ಮಾರ್ಟ್‌ಫೋನ್‌ಗಳು ಪರಿಚಯಿಸುತ್ತಿವೆ. ಹಾಗೆಯೇ ಬ್ಯಾಟರಿ ವೇಗವಾಗ ಭರ್ತಿಯಾಗಲಿ ಅಂತಾ ಫಾಸ್ಟ್‌ ಚಾರ್ಜರ್‌ ಸೌಲಭ್ಯವನ್ನು ನೀಡುತ್ತಿವೆ. ಅದಾಗ್ಯೂ ಒಂದು ದಿನಕ್ಕೆ ಎಷ್ಟು ಸಾರಿ ಫೋನ್ ಚಾರ್ಜ್ ಮಾಡಬಹುದು?..ಪದೇ ಪದೇ ಫೋನ್ ಚಾರ್ಜ್ ಮಾಡಬಹುದೇ? ಎನ್ನುವ ಪ್ರಶ್ನೆಗಳು ಬಳಕೆದಾರರಲ್ಲಿ ಮೂಡಿರುತ್ತವೆ.

ಸ್ಮಾರ್ಟ್‌ಫೋನ್

ಹೌದು, ಸ್ಮಾರ್ಟ್‌ಫೋನ್ ಬಳಕೆ ಮಾಡುವ ಪ್ರತಿಯೊಬ್ಬರಲ್ಲಿಯೂ ಫೋನ್ ಚಾರ್ಜಿಂಗ್ ಬಗ್ಗೆ ಒಂದಿಲ್ಲೊಂದು ಗೊಂದಲ ಮೂಡಿರುತ್ತದೆ. ಏಕೆಂದರೇ ಎಷ್ಟೂ ಸ್ಮಾರ್ಟ್‌ಫೋನ್ ಬಳಕೆದಾರರ ಫೋನ್ ಬ್ಯಾಟರಿ ಸಾಮರ್ಥ್ಯ ಅಧಿಕವಾಗಿದ್ದರೂ ಚಾರ್ಜ್ ನಿಲ್ಲುತ್ತಿಲ್ಲ ಎಂದೆನ್ನುತ್ತಾರೆ. ಇನ್ನು ಕೆಲವರು ರಾತ್ರಿ ಫೋನ್ ಚಾರ್ಜ್‌ಗೆ ಹಾಕಿ ಮಲಗಿಬಿಡುತ್ತಾರೆ. ಮತ್ತೆ ಕೆಲವರು ಫೋನ್ ಬ್ಯಾಟರಿ ಪೂರ್ಣ ಖಾಲಿಯಾಗುವವರೆಗೂ ಬಳಕೆ ಮಾಡುತ್ತಲೇ ಇರುತ್ತಾರೆ. ಇಂತಹ ಗೊಂದಲಗಳಿಗೆ ಉತ್ತರವಾಗಿ ಇಂದಿನ ಲೇಖನದಲ್ಲಿ ಫೋನ್ ಬ್ಯಾಟರಿ ಚಾರ್ಜ್ ಮಾಡುವಾಗ ಯಾವ ಕ್ರಮ ಅನುಸರಿಸಬೇಕು ಎನ್ನುವ ಬಗ್ಗೆ ತಿಳಿಸಲಾಗಿದೆ. ಮುಂದೆ ಓದಿರಿ.

ಬ್ಯಾಟರಿ ಡ್ರೈ ಆಗಲು ಬಿಡಬೇಡಿ

ಬ್ಯಾಟರಿ ಡ್ರೈ ಆಗಲು ಬಿಡಬೇಡಿ

ಸ್ಮಾರ್ಟ್‌ಫೋನಿನ ಪ್ರಮುಖ ಅಂಗವೇ ಬ್ಯಾಟರಿ. ಫೋನಿಗೆ ಜೀವ ಒದಗಿಸುವ ಬ್ಯಾಟರಿ ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು. ಅಂದರೇ ಸ್ಮಾರ್ಟ್‌ಫೋನ್ ಬ್ಯಾಟರಿ ಪೂರ್ಣ 0 ಆಗುವವರೆಗೂ ಫೋನ್ ಬಳಕೆ ಮಾಡುವುದು ಒಳ್ಳೆಯದಲ್ಲ. ಹೀಗಾಗಿ ಫೋನ್ ಬ್ಯಾಟರಿ ಯಾವತ್ತು ಡ್ರೈ ಆಗಲು ಬಿಡಲೇಬೇಡಿ. ಶೇ.30% ಸನಿಹ ಬಂದಾಗ ಚಾರ್ಜ್ ಮಾಡುವುದು ಉತ್ತಮ.

ಬಿಸಿ ಮತ್ತು ತಂಪು ಒಗ್ಗಲ್ಲ

ಬಿಸಿ ಮತ್ತು ತಂಪು ಒಗ್ಗಲ್ಲ

ಪ್ರಸ್ತುತ ಇಂದಿನ ಬಹುತೇಕ ಸ್ಮಾರ್ಟ್‌ಫೋನ್‌ಗಳು ಲಿಥೀಯಮ್ ಬ್ಯಾಟರಿ (Lithium-ion batteries) ಗಳಿಗೆ ಅತೀಯಾದ ಬಿಸಿ ಮತ್ತು ಅತೀಯಾದ ತಂಪು ಆಗಿ ಬರುವುದಿಲ್ಲ. ಹೀಗಾಗಿ ಸ್ಮಾರ್ಟ್‌ಫೋನ್ ಚಾರ್ಜ್ ಮಾಡುವಾಗ ಎಚ್ಚರವಹಿಸಬೇಕು. ಅಗತ್ಯವಾಗ ಕ್ರಮಗಳನ್ನು ಅನುಸರಿಸಿ ಚಾರ್ಜ್ ಮಾಡುವುದು ಉತ್ತಮ.

ಚಾರ್ಜ್ ಮಾಡುವಾಗ ಫೋನ್ ಬಳಕೆ ಬೇಡ

ಚಾರ್ಜ್ ಮಾಡುವಾಗ ಫೋನ್ ಬಳಕೆ ಬೇಡ

ಬಹುತೇಕರು ಸ್ಮಾರ್ಟ್‌ಫೋನ್ ಚಾರ್ಜ್ ಮಾಡುವಾಗ ಫೋನ್ ಬಳಕೆ ಮಾಡುತ್ತಾರೆ. ಈ ರೀತಿ ಚಾರ್ಜ್ ಮಾಡುವಾಗ ಫೋನ್ ಬಳಕೆ ಮಾಡುವುದು ಬ್ಯಾಟರಿ ಲೈಫ್‌ಗೂ ಧಕ್ಕೆ ಹಾಗೂ ಅಪಾಯದ ಸಾಧ್ಯತೆಗಳಿ ಅಧಿಕವಾಗಿರುತ್ತವೆ. ಚಾರ್ಜಿಂಗ್ ವೇಳೆ ಸಾಧ್ಯವಾದಷ್ಟು ಸ್ಮಾರ್ಟ್‌ಫೋನ್ ಬಳಕೆ ಮಾಡದೇ ಇರುವುದು ಅತೀ ಉತ್ತಮ.

ಒಂದೇ ಸಾರಿ ಪೂರ್ಣ ಚಾರ್ಜ್ ಮಾಡಲೇಬೇಡಿ

ಒಂದೇ ಸಾರಿ ಪೂರ್ಣ ಚಾರ್ಜ್ ಮಾಡಲೇಬೇಡಿ

ಸ್ಮಾರ್ಟ್‌ಫೋನ್ ಬ್ಯಾಟರಿ ಪೂರ್ಣ ಖಾಲಿಯಾಗಿದ್ದಾಗ ಫೋನ್ ಚಾರ್ಜಿಂಗ್ ಹಾಕಿ. ಆದರೆ ಫೋನ್ 0% ಪರ್ಸೆಂಟ್‌ನಿಂದ 100% ವರೆಗೆ ಪೂರ್ಣ ಚಾರ್ಜ್ ಮಾಡಲೇಬೇಡಿ. ಹೀಗೆ ಒಂದೇ ಬಾರಿಗೆ ಶೂನ್ಯದಿಂದ ಪೂರ್ಣ ಚಾರ್ಜ್ ಬ್ಯಾಟರಿ ಬಾಳಿಕೆಗೆ ಹಾನಿ ಉಂಡು ಮಾಡುವ ಸಾಧ್ಯತೆಗಳಿರುತ್ತವೆ. ಸುಮಾರು 60% ನಿಂದ 75% ಪರ್ಸೆಂಟ್ ನಡುವೆ ಇದ್ದಾಗ ಚಾರ್ಜಿಂಗ್ ತೆಗೆಯಿರಿ.

ಒಂದು ದಿನಕ್ಕೆ ಎಷ್ಟು ಬಾರಿ ಫೋನ್ ಚಾರ್ಜ್ ಮಾಡಬೇಕು

ಒಂದು ದಿನಕ್ಕೆ ಎಷ್ಟು ಬಾರಿ ಫೋನ್ ಚಾರ್ಜ್ ಮಾಡಬೇಕು

ಒಂದು ದಿನಕ್ಕೆ ಒಂದೇ ಬಾರಿ ಚಾರ್ಜ್ ಮಾಡಬೇಕು ಎಂದೆನಿಲ್ಲ. ಆದರೆ ದಿನಕ್ಕೆ ಎರಡು-ಮೂರು ಬಾರಿ ಚಾರ್ಜ್ ಮಾಡುವುದರಿಂದ ಏನು ಸಮಸ್ಯೆ ಇಲ್ಲ. ಸಾಧ್ಯವಾದಷ್ಟು ಫೋನ್ ಬ್ಯಾಟರಿಯನ್ನು 60% ನಿಂದ 75% ಪರ್ಸೆಂಟ್ ನಡುವೆ ಇರುವಂತೆ ನೋಡಿಕೊಳ್ಳಿ, ಅದಾಗ್ಯೂ ಚಾರ್ಜ್ ಅನಿವಾರ್ಯ ಎಂದಾಗ ಚಾರ್ಜ್ ಮಾಡಿ ಆದರೆ ಪದೇ ಪದೇ ಚಾರ್ಜ್ ಅಂತೂ ಮಾಡಲೆಬೇಡಿ.

ಚಾರ್ಜ್ ವೇಳೆ ಹೀಗೆ ಮಾಡಿ

ಚಾರ್ಜ್ ವೇಳೆ ಹೀಗೆ ಮಾಡಿ

ಸ್ಮಾರ್ಟ್‌ಫೋನ್‌ನಲ್ಲಿ ಲೊಕೇಶನ್, ವೈಫೈ, ಬ್ಲೂಟೂತ್, ಹಾಟ್‌ಸ್ಪಾಟ್, ವೈಬ್ರೆಷನ್‌ ಮೋಡ್ ಇಂತಹ ಸೇವೆಗಳನ್ನು ಆಫ್‌ ಮಾಡುವುದು ಬ್ಯಾಟರಿ ಚಾರ್ಜಿಂಗ್‌ಗೆ ಪೂರಕ ಅನಿಸುತ್ತದೆ. ಹೀಗಾಗಿ ಚಾರ್ಜ್ ಮಾಡುವಾಗ ಈ ಸೇವೆಗಳನ್ನು ಆಫ್ ಮಾಡಿಬಿಡಿ. ಅಗತ್ಯ ಇದ್ದಾಗ ಮಾತ್ರ ಈ ಸೇವೆಗಳನ್ನು ಸಕ್ರಿಯ ಮಾಡಿಕೊಳ್ಳಿರಿ.

ಬಿಸಿಲಿನಲ್ಲಿ ಚಾರ್ಜ್ ಬೇಡ

ಬಿಸಿಲಿನಲ್ಲಿ ಚಾರ್ಜ್ ಬೇಡ

ಸ್ಮಾರ್ಟ್‌ಫೋನ್‌ ಚಾರ್ಜ್ ಮಾಡುವಾಗ ನಿಮ್ಮ ಫೋನಿಗೆ ಬಿಸಿಲು ತಾಗದಿರಲಿ. ಏಕೆಂದರೇ ಈ ಮೇಲೆ ಹೇಳಿದಂತೆ ಫೋನಿನಲ್ಲಿನ ಲಿಥೀಯಮ್ ಬ್ಯಾಟರಿ ಅತೀಯಾದ ಬಿಸಿ ಸಹಿಸಲ್ಲ. ಇದರಿಂದ ಬ್ಯಾಟರಿ ಬಾಳಿಕೆ ಕುಗ್ಗುತ್ತದೆ. ಹೀಗಾಗಿ ಸಾಧ್ಯವಾದಷ್ಟು ರೂಮ್‌ ಟೆಂಪರೇಚರ್ ಇದ್ದರೆ ಒಳ್ಳೆಯದು.

Best Mobiles in India

English summary
Charging your battery even 2–3 times a day doesn't harm your battery. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X