ಮೊಬೈಲ್‌ ಕಳ್ಳರಿದ್ದಾರೆ ಎಚ್ಚರ

Posted By:

ಇಂದು ಎಷ್ಟೇ ನಾವು ಸುರಕ್ಷತೆ ವಹಿಸಿದ್ದರೂ ನಮ್ಮ ಮೊಬೈಲ್‌ಗಳು ಕಳ್ಳತನವಾಗುತ್ತಿದೆ.  ಖತರ್ನಾಕ್‌ ಕಳ್ಳರು ಕೈ ಚಳಕ ಉಪಯೋಗಿಸಿಕೊಂಡು ಮೊಬೈಲ್‌ನ್ನು ಕದಿಯುತ್ತಾರೆ. ಮೊಬೈಲ್‌ ಕಳ್ಳತನವಾದ್ರೂ ಇಂದು ಆ ಮೊಬೈಲ್‌ನ್ನು ಪತ್ತೆಹಚ್ಚಬಹುದು. ಆದ್ರೆ ಈ ರೀತಿ ಪತ್ತೆ ಹಚ್ಚಬೇಕಾದ್ರೆ ನಾವು ಬಳಸುವ ಮೊಬೈಲ್‌ ಮಾಹಿತಿ ನಮ್ಮಲ್ಲಿರಬೇಕಾಗುತ್ತದೆ.ಜೊತೆಗೆ ಕೆಲವೊಂದು ಎಚ್ಚರಿಕೆಯನ್ನು ಪಾಲಿಸಬೇಕಾಗುತ್ತದೆ. ಹೀಗಾಗಿ ಮೊಬೈಲ್‌ ಕಳ್ಳರ ಪಾಲಾಗದಂತೆ ತಡೆಯಲು ಮತ್ತು ಕಳ್ಳರ ಪಾಲಾದ್ರೂ ಅದನ್ನು ಪುನ: ಮರಳಿ ಪಡೆಯುವಂತೆ ಮಾಡಲು ನಾವು ಅನುಸರಿಸಬೇಕಾದ ಎಚ್ಚರಿಕೆಯ ಕ್ರಮಗಳನ್ನು ಗಿಜ್ಬಾಟ್‌ ತಂದಿದೆ. ಒಂದೊಂದೆ ಪುಟ ನೋಡಿಕೊಂಡು ಓದಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏನು ಮಾಹಿತಿ ಬರೆಯಬೇಕು ?

ಏನು ಮಾಹಿತಿ ಬರೆಯಬೇಕು ?

ಮಾಹಿತಿ ಬರೆದಿಟ್ಟುಕೊಳ್ಳಿ

ಫೋನ್‌ ನಂಬರ್‌
ಮೋಡೆಲ್ ನಂಬರ್‌
ಪಿನ್‌ ಮತ್ತು ಸೆಕ್ಯೂರಿಟಿ ಲಾಕ್‌
ಐಎಂಇಐ ನಂಬರ್ ( *#06# ಡುಯಲ್‌ ಮಾಡಿದ್ರೆ ಐಎಂಇಐ ತಿಳಿಯುತ್ತದೆ )

ಸುರಕ್ಷತೆಗಾಗಿ ಒಂದು ಗುರುತು ಮಾಡಿಕೊಳ್ಳಿ

ಸುರಕ್ಷತೆಗಾಗಿ ಒಂದು ಗುರುತು ಮಾಡಿಕೊಳ್ಳಿ

ಸುರಕ್ಷತೆಗಾಗಿ ಒಂದು ಗುರುತು ಮಾಡಿಕೊಳ್ಳಿ

ಪರ್ಮನೆಂಟ್‌ ಮಾರ್ಕರ್‌ ಪೆನ್‌ನಿಂದ ಗುರುತಿಗಾಗಿ ಮೊಬೈಲ್‌ನಲ್ಲಿ ಎಲ್ಲಿಯಾದ್ರೂ ಒಂದು ಸಣ್ಣ ಗುರುತು ಮಾಡಿಕೊಳ್ಳಿ.ಬ್ಯಾಟರಿ ಹಿಂಭಾಗ ಇಮೇಲ್‌/ ನಿಮ್ಮ ಪರಿಚಯಸ್ಥರ ನಂಬರ್‌ ಬರೆದಿಟ್ಟುಕೊಳ್ಳಿ. ಒಂದು ವೇಳೆ ಯಾರಿಗಾದ್ರೂ ನಿಮ್ಮ ಮೊಬೈಲ್‌ ಸಿಕ್ಕಿದರೂ ಅದನ್ನು ಪುನಃ ಮರಳಿ ನಿಮಗೆ ತಲುಪಿಸಲು ಸಾಧ್ಯವಾಗುತ್ತದೆ.

ಸೆಕ್ಯೂರಿಟಿ ಲಾಕ್‌ ಅಥವಾ ಪಿನ್‌ ಆಯ್ಕೆಯನ್ನು ಬಳಸಿ

ಸೆಕ್ಯೂರಿಟಿ ಲಾಕ್‌ ಅಥವಾ ಪಿನ್‌ ಆಯ್ಕೆಯನ್ನು ಬಳಸಿ

ಸೆಕ್ಯೂರಿಟಿ ಲಾಕ್‌ ಅಥವಾ ಪಿನ್‌ ಆಯ್ಕೆಯನ್ನು ಬಳಸಿ

ಸೆಕ್ಯೂರಿಟಿ ಲಾಕ್‌ ಅಥವಾ ಪಿನ್‌ ಆಯ್ಕೆಯನ್ನು ಬಳಸುತ್ತಿರಿ, ಒಂದು ವೇಳೆ ಮೊಬೈಲ್‌ ಕಳುವಾದ್ರೂ ಮೊಬೈಲ್‌ನ ಒಳಗಿರುವಂತಹ ಮಾಹಿತಿ ಬೇರೆಯವರಿಗೆ ಸಿಗದಂತೆ ಇದರಿಂದಾಗ ಸ್ವಲ್ಪ ತಡೆಯಬಹುದು.

ಮೊಬೈಲ್‌ ನೆಟ್‌ವರ್ಕ್ ಕಂಪೆನಿಯದಲ್ಲಿ ದೂರು ನೀಡಿ

ಮೊಬೈಲ್‌ ನೆಟ್‌ವರ್ಕ್ ಕಂಪೆನಿಯದಲ್ಲಿ ದೂರು ನೀಡಿ

ಮೊಬೈಲ್‌ ನೆಟ್‌ವರ್ಕ್ ಕಂಪೆನಿಯದಲ್ಲಿ ದೂರು ನೀಡಿ

ಮೊಬೈಲ್‌ ನಾಪತ್ತೆಯಾದ ತಕ್ಷಣ ಮೊಬೈಲ್‌ ಕಂಪೆನಿಯವರಲ್ಲಿ ದೂರು ನೀಡಿ ಆ ಸಿಮ್‌ನ್ನು ಬ್ಲಾಕ್‌ ಮಾಡಿ.

ಪೊಲೀಸ್‌ ಠಾಣೆಯಲ್ಲಿ ದೂರು ನೀಡಿ

ಪೊಲೀಸ್‌ ಠಾಣೆಯಲ್ಲಿ ದೂರು ನೀಡಿ

ಪೊಲೀಸ್‌ ಠಾಣೆಯಲ್ಲಿ ದೂರು ನೀಡಿ

ಮೊಬೈಲ್‌ ಯಾವ ಸ್ಥಳದಲ್ಲಿ ನಾಪತ್ತೆಯಾಗಿದೆಯೋ ಆ ಸ್ಥಳದ ಸಮೀಪದ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿ. ದೂರಿನಲ್ಲಿ ಮೊಬೈಲ್‌ ನಂಬರ್ ಮತ್ತು ಇಎಂಇಐ ನಂಬರ್‌ ದಾಖಲಿಸಿ. ಮುಂದಿನ ತನಿಖೆಗೆ ಇದು ಸಹಕಾರಿಯಾಗುತ್ತದೆ.

ನಿಮ್ಮ ಆನ್‌ಲೈನ್‌ ಅಕೌಂಟ್‌ ಚೆಕ್‌ ಮಾಡಿಕೊಳ್ಳಿ:

ನಿಮ್ಮ ಆನ್‌ಲೈನ್‌ ಅಕೌಂಟ್‌ ಚೆಕ್‌ ಮಾಡಿಕೊಳ್ಳಿ:

ನಿಮ್ಮ ಆನ್‌ಲೈನ್‌ ಅಕೌಂಟ್‌ ಚೆಕ್‌ ಮಾಡಿಕೊಳ್ಳಿ:

ಕೆಲ ಮಂದಿ ಮೊಬೈಲ್‌ನಲ್ಲಿ ಅನ್‌ಲೈನ್‌ ವ್ಯವಹಾರಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ದಾಖಲಿಸಿರುತ್ತಾರೆ. ಹೀಗಾಗಿ ಕೂಡಲೇ ನಿಮ್ಮ ಅನ್‌ಲೈನ್‌ಗೆ ಸಂಬಂಧಿಸಿದ ದಾಖಲೆಗಳು, ಪಾಸ್‌ವರ್ಡ್‌ಗಳನ್ನು ಬದಲಾಯಿಸಿಬಿಡಿ.

ಕಳ್ಳತನ ವಿರೋಧಿಅಪ್ಲಿಕೇಶನ್‌ ಇನ್‌ಸ್ಟಾಲ್‌ ಮಾಡಿಕೊಳ್ಳಿ

ಕಳ್ಳತನ ವಿರೋಧಿಅಪ್ಲಿಕೇಶನ್‌ ಇನ್‌ಸ್ಟಾಲ್‌ ಮಾಡಿಕೊಳ್ಳಿ

ಕಳ್ಳತನ ವಿರೋಧಿಅಪ್ಲಿಕೇಶನ್‌ ಇನ್‌ಸ್ಟಾಲ್‌ ಮಾಡಿಕೊಳ್ಳಿ

ಈಗ ಬರುತ್ತಿರುವ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳಲ್ಲಿ ಈ ರೀತಿಯ ಆಯ್ಕೆ ಇರುತ್ತದೆ. ಅಪ್ಲಿಕೇಶನ್‌ ಇನ್‌ಸ್ಟಾಲ್‌ ಮಾಡಿದ್ರೆ ಸುಲಭವಾಗಿ ಕಳ್ಳರನ್ನು ಪತ್ತೆ ಹಚ್ಚಬಹುದು.

ಹೆಚ್ಚು ಜನಸಂದಣಿ ಪ್ರದೇಶದಲ್ಲಿ ಎಚ್ಚರವಾಗಿರಿ:

ಹೆಚ್ಚು ಜನಸಂದಣಿ ಪ್ರದೇಶದಲ್ಲಿ ಎಚ್ಚರವಾಗಿರಿ:

ಹೆಚ್ಚು ಜನಸಂದಣಿ ಪ್ರದೇಶದಲ್ಲಿ ಎಚ್ಚರವಾಗಿರಿ:

ಜನಸಂದಣಿ ಪ್ರದೇಶದಲ್ಲಿ ಮೊಬೈಲ್‌ ಬಳಸುವಾಗ ಎಚ್ಚರವಾಗಿರಿ.ಕಳ್ಳರು ಇದೇ ಸಮಯವನ್ನು ನೋಡಿ ಮೊಬೈಲ್‌ ಕದಿಯುತ್ತಾರೆ. ಈ ಸಮಯದಲ್ಲಿ ಯಾವತ್ತೂ ಮೊಬೈಲ್‌,ಪರ್ಸ್, ಚಿನ್ನಾಭರಣಗಳ ಮೇಲೆ ನಿಮ್ಮ ಗಮನವಿರಲಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot