Subscribe to Gizbot

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಮರೆತುಹೋದ ವೈಫೈ ಪಾಸ್‌ವರ್ಡ್‌ ರಿಕವರಿ ಹೇಗೆ?

Written By:

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಮರೆತುಹೋದ ವೈಫೈ ಪಾಸ್‌ವರ್ಡ್‌ ಅನ್ನು ರಿಕವರ್ ಮಾಡಲು ನಾವು ತಿಳಿಸುವ ಸರಳ ಹಂತಗಳನ್ನು ಪಾಲಿಸಿ.

ಆಂಡ್ರಾಯ್ಡ್ ಡಿವೈಸ್‌ಗಳು ದಿನದಿಂದ ದಿನಕ್ಕೆ ಹೆಚ್ಚು ವೈರಲ್‌ ಆಗುತ್ತಲೇ ಇವೆ. ಅಂದಹಾಗೆ ಆಂಡ್ರಾಯ್ಡ್ ಡಿವೈಸ್‌ಗಳು ದಿನನಿತ್ಯದ ಹಲವು ಕೆಲಸಗಳನ್ನು ಸರಳಗೊಳಿಸುತ್ತವೆ. ಆನ್‌ಲೈನ್ ಹಣ ಪಾವತಿ, ಹಣ ವರ್ಗಾವಣೆ, ವಿದ್ಯುತ್‌ ಬಿಲ್‌ ಪಾವತಿಸುವುದು ಹೀಗೆ ಹಲವಾರು ದೈನಂದಿನ ಕೆಲಸಗಳನ್ನು ಸರಳಗೊಳಿಸುತ್ತವೆ.

ಅಂದಹಾಗೆ ನಿವೇನಾದ್ರು ನಿಮ್ಮ ಮನೆಯ, ಕಛೇರಿಯ ವೈಫೈ ಪಾಸ್‌ವರ್ಡ್ ಅನ್ನು ಮರೆತಲ್ಲಿ, ಆಂಡ್ರಾಯ್ಡ್ ಡಿವೈಸ್‌ ಬಳಕೆದಾರರು ಸುಲಭವಾಗಿ ಪಾಸ್‌ವರ್ಡ್‌ ಅನ್ನು ರಿಕವರ್‌ ಮಾಡಿಕೊಳ್ಳಬಹುದು. ದಿನನಿತ್ಯ ನೀವು ಸಂಪರ್ಕಗೊಂಡಿರುವ ನಿಮ್ಮ ಮನೆಯ ಅಥವಾ ಕಛೇರಿಯ ವೈಫೈ ಪಾಸ್‌ವರ್ಡ್ ನಿಮ್ಮ ಆಂಡ್ರಾಯ್ಡ್ ಡಿವೈಸ್‌ನಲ್ಲಿ ಸೇವ್‌ ಆಗಿದ್ದರೆ, ಸುಲಭವಾಗಿ ಮರೆತ ಪಾಸ್‌ವರ್ಡ್‌ ಅನ್ನು ಸುರಕ್ಷತೆಗಾಗಿ ರಿಕವರ್ ಮಾಡುವುದು ಹೇಗೆ ಎಂದು ಇಂದಿನ ಲೇಖನದಲ್ಲಿ ಓದಿ ತಿಳಿಯಿರಿ.

ಆಧಾರ್‌ ಕಾರ್ಡ್ ಇದ್ದಲ್ಲಿ, 1,700 ರೂಗೆ 'ಐಫೋನ್ 7' ಖರೀದಿಸಿ!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಂತ 1

ಹಂತ 1

ಮೊದಲಿಗೆ ನೀವು ನಿಮ್ಮ ವೈಫೈ ರೂಟರ್‌ನ ಐಪಿ ವಿಳಾಸವನ್ನು ಪತ್ತೆಹಚ್ಚಬೇಕು. ಆಂಡ್ರಾಯ್ಡ್ ಡಿವೈಸ್‌ನಲ್ಲಿ ವೈಫೈ ಆಕ್ಸೆಸ್‌ ಪಡೆಯುವ ರೂಟರ್ ಐಪಿ ವಿಳಾಸ.

ಹಂತ 2

ಹಂತ 2

ನಿಮ್ಮ ಆಂಡ್ರಾಯ್ಡ್ ಡಿವೈಸ್‌ನಲ್ಲಿ ಗೂಗಲ್ ಕ್ರೋಮ್‌ ಅಥವಾ ಇತರೆ ಉತ್ತಮ ಬ್ರೌಸರ್ ಅನ್ನು ಓಪನ್‌ ಮಾಡಿ, ನಂತರ 192.168.1.1 ಅಥವಾ 192.168.0.1 ಐಪಿ ವಿಳಾಸಗಳನ್ನು ಒಂದಾದ ನಂತರ ಒಂದನ್ನು ಓಪನ್ ಮಾಡಿ. ಐಪಿ ವಿಳಾಸಗಳು ರೂಟರ್‌ ಆಧಾರಿತವಾಗಿರುತ್ತವೆ.

ಹಂತ 3

ಹಂತ 3

ಐಪಿ ವಿಳಾಸದೊಂದಿಗೆ ಯಶಸ್ವಿಯಾಗಿ ನಿಮ್ಮ ವೈಫೈ ರೂಟರ್‌ನ ಪೇಜ್‌ ಓಪನ್ ಆದ ನಂತರ ಕೆಳಗಿನ ಐಡಿ ಮತ್ತು ಪಾಸ್‌ವರ್ಡ್ ವಿವರಗಳನ್ನು ಎಂಟರ್‌ ಮಾಡಿ.
Username-admin
password-admin
ಅಥವಾ
Username-admin
password-password

ಹಂತ 4

ಹಂತ 4

ಯಶಸ್ವಿಯಾಗಿ ಲಾಗಿನ್ ಆದ ನಂತರ "security settings, wirless settings" ಇತರೆ ಸೆಟ್ಟಿಂಗ್ಸ್ ಪತ್ತೆಮಾಡಿ.

ಹಂತ 5

ಹಂತ 5

ನಂತರದಲ್ಲಿ ನಿಮ್ಮ ವೈಫೈ ಪಾಸ್‌ವರ್ಡ್‌ ಪ್ರದರ್ಶನವಾಗುತ್ತದೆ. ಪಾಸ್‌ವರ್ಡ್ ಅನ್ನು ತಿಳಿದು ಇತರೆ ಡಿವೈಸ್‌ಗಳನ್ನು ಕನೆಕ್ಟ್ ಮಾಡಲು ಬಳಸಿಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
How to Recover WiFi Password in Android Without Root. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot