Subscribe to Gizbot

ಎಚ್‌ಟಿಸಿ ಫೋನ್ ಲಾಕ್ ಆಗಿದೆಯೇ? ಈ ವಿಧಾನ ಅನುಸರಿಸಿ

Written By:

ನಿಮ್ಮ ಎಚ್‌ಟಿಸಿ ಫೋನ್ ಪಾಸ್‌ಕೋಡ್ ಅಥವಾ ಸ್ವೈಪ್ ಪ್ಯಾಟ್ರನ್ ಅನ್ನು ಮರೆತಿದ್ದೀರಾ? ಸರಿಯಾದ ಗೂಗಲ್ ದಾಖಲೆಗಳಿದ್ದಲ್ಲಿ ಮಾತ್ರವೇ ನಿಮ್ಮ ಫೋನ್ ಪಾಸ್‌ಕೋಡ್ ಅನ್ನು ಮರುಪಡೆಯುವಂತೆ ಆಂಡ್ರಾಯ್ಡ್ ಫೋನ್ ಸೆಟ್ಟಿಂಗ್ ಅನ್ನು ಮಾಡಿದೆ. ಇದು ವಿಫಲಗೊಂಡಲ್ಲಿ, ಫೋನ್ ಅನ್ನು ಅದರ ಫ್ಯಾಕ್ಟರಿ ಸೆಟ್ಟಿಂಗ್ಸ್‌ಗೆ ಡಿವೈಸ್ ಅನ್ನು ರೀಸೆಟ್ ಮಾಡುವುದು ಮಾತ್ರವೇ ಒಂದು ಆಯ್ಕೆಯಾಗಿರಬಹುದು. ಈ ವಿಧಾನವನ್ನು ಅನುಸರಿಸಿ ನಿಮ್ಮ ಎಚ್‌ಟಿಸಿ ಫೋನ್‌ಗೆ ಪ್ರವೇಶವನ್ನು ಕೆಲವೇ ಸೆಕುಂಡುಗಳಲ್ಲಿ ನಡೆಸಬಹುದಾಗಿದೆ.

ಇದನ್ನೂ ಓದಿ: ಕೇವಲ 299 ಕ್ಕೆ ಗೂಗಲ್‌ನಲ್ಲಿ ಶಾಪಿಂಗ್ ಮಾಡಿ

ಇಂದಿನ ಲೇಖನದಲ್ಲಿ ನಿಮ್ಮ ಎಚ್‌ಟಿಸಿ ಫೋನ್‌ಗೆ ಪ್ರವೇಶವನ್ನು ಪಡೆಯುವುದು ಹೇಗೆ ಎಂಬುದನ್ನು ಕೆಳಗಿನ ವಿಧಾನದ ಮೂಲಕ ಅರಿತುಕೊಳ್ಳೋಣ. ಈ ವಿಧಾನಗಳು ಸರಳವಾಗಿದ್ದು ಖಂಡಿತ ನಿಮ್ಮ ಫೋನ್‌ನ ಪ್ರವೇಶವನ್ನು ಪಡೆದುಕೊಳ್ಳಲು ನೆರವನ್ನು ನೀಡುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನಿಮ್ಮ ಗೂಗಲ್ ಖಾತೆಯೊಂದಿಗೆ ಸೈನ್ ಇನ್ ಮಾಡುವುದು

#1

ನಿಮ್ಮ ಗೂಗಲ್ ಖಾತೆಯನ್ನು ಬಳಸಿ ಸೈನ್ ಇನ್ ಮಾಡುವುದರ ಮೂಲಕ ಪಾಸ್‌ವರ್ಡ್ ಅನ್ನು ಪಡೆದುಕೊಳ್ಳಬಹುದು.

ಪಿನ್ ಅಥವಾ ಪ್ಯಾಟ್ರನ್ ಅನ್ನು ಐದು ಬಾರಿ ಬಳಸಿ

#2

ಪಾಸ್‌ವರ್ಡ್ ಲಾಕ್ ಅನ್ನು ತೆರೆಯಲು, ಪಾಸ್‌ವರ್ಡ್ ಅನ್ನು ಐದು ಬಾರಿ ಬಳಸಬಹುದಾಗಿದೆ. ನಿಮ್ಮ ಫೋನ್ ಪುನಃ ಲಾಕ್ ಆದಲ್ಲಿ, ಪರ್ಯಾಯ ವಿಧಾನವನ್ನು ಬಳಸಿಕೊಂಡು ಲಾಗಿನ್ ಮಾಡಬೇಕಾಗುತ್ತದೆ.

#3

ಗೂಗಲ್ ಖಾತೆ ಲಾಗಿನ್ ಸ್ಕ್ರೀನ್ ಅನ್ನು ಈ ಬಟನ್ ಮೇಲಕ್ಕೆ ತರುತ್ತದೆ. ನಿಮ್ಮ ಫೋನ್‌ನೊಂದಿಗೆ ಸಂಯೋಜನೆಗೊಂಡಿರುವ ಖಾತೆಗಾಗಿ ಗೂಗಲ್ ಖಾತೆ ದಾಖಲೆಗಳನ್ನು ಒದಗಿಸುವ ಮೂಲಕ ನಿಮಗೆ ಲಾಗಿನ್ ಮಾಡಲು ಅನುಮತಿಸುತ್ತದೆ.

ನಿಮ್ಮ ಗೂಗಲ್ ಖಾತೆ ಮಾಹಿತಿಯನ್ನು ನಮೂದಿಸಿ

#4

ಗೂಗಲ್ ಖಾತೆ ಹೆಸರು ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ. ಫೋನ್ ಅನ್ನು ಮೊದಲ ಬಾರಿ ಹೊಂದಿಸಿದಾಗ ಬಳಸಿದ ಖಾತೆ ಇದಾಗಿರಬೇಕು. ನಿಮ್ಮ ಗೂಗಲ್ ಪಾಸ್‌ವರ್ಡ್ ಅನ್ನು ನೆನಪಿನಲ್ಲಿಟ್ಟುಕೊಳ್ಳಲು ನಿಮಗೆ ಸಾಧ್ಯವಿಲ್ಲದಿದ್ದಲ್ಲಿ, ಕಂಪ್ಯೂಟರ್‌ನಲ್ಲಿ ಗೂಗಲ್ ಸೈಟ್‌ಗೆ ಲಾಗಿನ್ ಮಾಡಲು ಪ್ರಯತ್ನಿಸುವ ಮೂಲಕ ಅದನ್ನು ಮರುಪಡೆದುಕೊಳ್ಳಿ.

ಹೊಸ ಪಾಸ್‌ವರ್ಡ್ ಹೊಂದಿಸಿ

#5

ಒಮ್ಮೆ ನೀವು ಲಾಗಿನ್ ಆದ ನಂತರ, ಹೊಸ ಲಾಕ್ ಸ್ಕ್ರೀನ್ ಪಾಸ್‌ವರ್ಡ್ ಅನ್ನು ಹೊಂದಿಸಿ ಇದರಿಂದ ನೀವು ಸುರಕ್ಷಿತವಾಗಿ ಲಾಕ್ ಮಾಡಬಹುದು ಮತ್ತು ನಿಮ್ಮ ಡಿವೈಸ್ ಅನ್ನು ಪುನಃ ಪ್ರವೇಶಿಸಬಹುದು.

ಫೋನ್ ರೀಸೆಟ್

#6

ಫೋನ್ ಅನ್ನು ರೀಸೆಟ್ ಮಾಡುವುದರ ಮೂಲಕ ಪಾಸ್‌ವರ್ಡ್ ಪುನಃ ಪಡೆದುಕೊಳ್ಳಿ.

ಫೋನ್ ಆಫ್ ಮಾಡಿ

#7

ರಿಕವರಿ ಮೆನುವನ್ನು ಪ್ರವೇಶಿಸುವುದಕ್ಕಾಗಿ, ನಿಮ್ಮ ಫೋನ್ ಅನ್ನು ಸ್ವಿಚ್ ಆಫ್ ಮಾಡುವುದು ಅತ್ಯವಶ್ಯಕವಾಗಿದೆ. ಪವರ್ ಮೆನು ಬರುವವರೆಗೆ ಪವರ್ ಬಟನ್ ಅನ್ನು ಒತ್ತಿ ಹಿಡಿಯಿರಿ. ಇದು ಗೋಚರಿಸಿದೊಡನೆ ಪವರ್ ಐಕಾನ್ ಒತ್ತಿ ಫೋನ್ ಶಟ್ ಡೌನ್ ಆಗುತ್ತದೆ.

ರಿಕವರಿ ಮೆನು ತೆರೆಯಿರಿ

#8

ವಾಲ್ಯೂಮ್ ಡೌನ್ ಬಟನ್ ಒತ್ತಿ ಹಿಡಿಯಿರಿ, ತದನಂತರ ಪವರ್ ಬಟನ್ ಒತ್ತಿ ಹಿಡಿಯಿರಿ. ಈ ಎರಡೂ ಬಟನ್‌ಗಳನ್ನು 30 ನಿಮಿಷಗಳ ಕಾಲ ಒತ್ತಿ ಹಿಡಿಯಿರಿ. ಆಂಡ್ರಾಯ್ಡ್ ಚಿತ್ರ ಬಂದೊಡನೆ, ನೀವು ಬಟನ್ ಅನ್ನು ಬಿಡುಗಡೆ ಮಾಡಬಹುದು.

ಫ್ಯಾಕ್ಟ್ರಿ ರೀಸೆಟ್ ನಿರ್ವಹಿಸಲು

#9

ಮೆನು ನ್ಯಾವಿಗೇಟ್ ಮಾಡಲು ವಾಲ್ಯೂಮ್ ಡೌನ್ ಬಟನ್ ಬಳಸಿ. "ಫ್ಯಾಕ್ಟ್ರಿ ರೀಸೆಟ್" ಆಯ್ಕೆಮಾಡಿ ಮತ್ತು ಮುಂದುವರಿಯಲು ಪವರ್ ಬಟನ್ ಒತ್ತಿ. ಫ್ಯಾಕ್ಟ್ರಿ ರೀಸೆಟ್ ಪ್ರಕ್ರಿಯೆ ನಡೆಯಲು ಕೆಲವು ನಿಮಿಷಗಳನ್ನು ತೆಗೆದುಕೊಳ್ಳಬಹುದು.

ಲಾಗಿನ್ ಆಗಿ ಮತ್ತು ನಿಮ್ಮ ಫೋನ್ ಅನ್ನು ಸೆಟಪ್ ಮಾಡಿ

#10

ಫ್ಯಾಕ್ಟ್ರಿ ರೀಸೆಟ್ ಸಂಪೂರ್ಣಗೊಂಡ ನಂತರ ನಿಮ್ಮ ಫೋನ್ ಅನ್ನು ಹೊಸದಾಗಿ ಸೆಟಪ್ ಮಾಡಬೇಕಾಗುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Forgot your passcode or swipe pattern to access your HTC smartphone? Android has a built-in way to bypass the lock screen if you have the right Google credentials. If that fails, resetting the device to it's factory settings may be the only option.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot