ಏರ್‌ಟೆಲ್‌ ಗ್ರಾಹಕರೇ 4G ಸಿಮ್‌ ಆಕ್ಟಿವ್‌ ಮಾಡಲು ಹೀಗೆ ಮಾಡಿ!

|

ಭಾರತೀಯ ಟೆಲಿಕಾಂ ವಲಯ ವೇಗವಾಗಿ ಬೆಳೆಯುತ್ತಿದ್ದು, ಹೈ ಸ್ಪೀಡ್‌ ನೆಟವರ್ಕ್ 5G ಬಳಕೆಯ ತಯಾರಿಯಲ್ಲಿದೆ. ಆದರೆ ಇನ್ನೂ ಅದೆಷ್ಟೊ ಬಳಕೆದಾರರು ದೇಶದಲ್ಲಿ ಲಭ್ಯವಿರುವ 4G ನೆಟವರ್ಕ್‌ ಅನ್ನೇ ಸರಿಯಾಗಿ ಬಳಕೆಮಾಡುತ್ತಿಲ್ಲ. ಅವರ ಸ್ಮಾರ್ಟ್‌ಫೋನ್‌ಗಳು 4G ನೆಟವರ್ಕ್‌ ಬೆಂಬಲಿತವಾಗಿದ್ದರು, ಬಳಕೆದಾರರು ಮಾತ್ರ ಇನ್ನು 3G ಮಾದರಿಯ ಸಿಮ್‌ ಅನ್ನು ಹೊಂದಿದ್ದಾರೆ. ನೀವು ಇನ್ನು 3Gಯಲ್ಲಿದ್ದರೇ, ಬೇಗ 4G ಅಪ್‌ಗ್ರೇಡ್‌ ಮಾಡಿಕೊಳ್ಳಿರಿ.

ಏರ್‌ಟೆಲ್‌ ಗ್ರಾಹಕರೇ 4G ಸಿಮ್‌ ಆಕ್ಟಿವ್‌ ಮಾಡಲು ಹೀಗೆ ಮಾಡಿ!

ಹೌದು, ದೇಶದಲ್ಲಿ 4G ನೆಟವರ್ಕ್‌ ಬಂದು ವರ್ಷಗಳೇ ಕಳೆದಿವೆ. ಈ ನಿಟ್ಟಿನಲ್ಲಿ ಏರ್‌ಟೆಲ್‌ ಸೇರಿದಂತೆ ಇತರೆ ಟೆಲಿಕಾಂ ಕಂಪನಿಗಳು ಬಳಕೆದಾರ ಸಿಮ್‌ ಅನ್ನು 4Gಗೆ ಅಪ್‌ಗ್ರೇಡ್‌ ಮಾಡಿಕೊಟ್ಟಿದ್ದರು, ಇನ್ನೂ ಅನೇಕ ಬಳಕೆದಾರರು 3G ನೆಟವರ್ಕ್‌ ಸಿಮ್‌ಗಳನ್ನು ಬಳಸುತ್ತಿದ್ದಾರೆ. ಕೇಲವು ಸುಲಭ ಹಂತಗಳ ಅನುಕರಿಸುವ ಮೂಲಕ 3G ಸಿಮ್‌ನಿಂದ 4G ನೆಟವರ್ಕ್‌ಗೆ ಅಪ್‌ಗ್ರೇಡ್‌ ಮಾಡಿಕೊಳ್ಳಬಹುದಾಗಿದೆ.

ಏರ್‌ಟೆಲ್‌ ಗ್ರಾಹಕರೇ 4G ಸಿಮ್‌ ಆಕ್ಟಿವ್‌ ಮಾಡಲು ಹೀಗೆ ಮಾಡಿ!

4G ನೆಟವರ್ಕ್‌ ವೇಗದ ಉತ್ತಮವಾಗಿದ್ದು, ನಿಮ್ಮ ಇಂಟರ್ನೆಟ್‌ ಆಧಾರಿತ ಕೆಲಸಗಳಲ್ಲಿ ವೇಗವನ್ನು ಕಾಣುತ್ತಿರಿ. ಹೀಗಾಗಿ ಇಂದಿನ ಲೇಖನದಲ್ಲಿ ಏರ್‌ಟೆಲ್‌ 4G ಸಿಮ್‌ ಅನ್ನು ಕಾರ್ಯಗತಗೊಳಿಸುವುದು ಹೇಗೆ ಎಂಬುವುದರ ಬಗ್ಗೆ ಮಾಹಿತಿ ನೀಡಲಾಗಿದೆ. ಹಾಗಾದರೇ ಏರ್‌ಟೆಲ್‌ 4G ಸಿಮ್‌ ಆಕ್ಟಿವ್‌ ಮಾಡಲು ಬಳಕೆದಾರರು ಅನುಸರಿಸಬೇಕಾದ ಹಂತಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಓದಿರಿ : 'ಬ್ರೆವ್‌' ಬ್ರೌಸರ್‌ ಎಂಟ್ರಿಯಿಂದ 'ಗೂಗಲ್‌ ಕ್ರೋಮ್‌'ಗೆ ಶುರುವಾಗಿದೆ ಕಂಟಕ!ಓದಿರಿ : 'ಬ್ರೆವ್‌' ಬ್ರೌಸರ್‌ ಎಂಟ್ರಿಯಿಂದ 'ಗೂಗಲ್‌ ಕ್ರೋಮ್‌'ಗೆ ಶುರುವಾಗಿದೆ ಕಂಟಕ!

4G ಸಿಮ್‌ ಪಡೆಯಿರಿ

4G ಸಿಮ್‌ ಪಡೆಯಿರಿ

ಏರ್‌ಟೆಲ್‌ ಸ್ಟೋರ್‌ನಲ್ಲಿ 3G ಸಿಮ್‌ ಬದಲು ಮೊದಲು 4G ಆಧಾರಿತ ಹೊಸ ಸಿಮ್ ಪಡೆಯಿರಿ. ಆನಂತರ ಸಿಮ್‌ ಹಿಂಬದಿಯಲ್ಲಿರುವ 20 ಡಿಜಿಟ್ ಸಂಖ್ಯೆಗಳನ್ನು ಬರೆದಿಟ್ಟುಕೊಳ್ಳಿ. ಆ 20 ನಂಬರ್‌ಗಳನ್ನು ನಮೂದಿಸಿ 121 ಸಂಖ್ಯೆಗೆ ಟೆಕ್ಸ್ಟ್‌ ಮೆಸೆಜ್‌ ಮಾಡಿರಿ. ಈ ಮೆಸೆಜ್‌ ಅನ್ನು ನಿಮ್ಮ ಹಳಯ ಸಿಮ್‌ಮೂಲಕವೇ ಮಾಡಬೇಕು.

ಎಸ್‌ಎಮ್‌ಎಸ್‌ ಮಾಡಿರಿ

ಎಸ್‌ಎಮ್‌ಎಸ್‌ ಮಾಡಿರಿ

ಹೊಸ ಸಿಮ್‌ನ 20 ಡಿಜಿಟ್‌ ಸಂಖ್ಯೆಗಳನ್ನು 121 ಸಂಖ್ಯೆಗೆ ಟೆಕ್ಸ್ಟ್‌ ಮೆಸೆಜ್‌ ಮಾಡಿದ ನಂತರ ನಿಮ್ಮ ನಂಬರಗೆ ಒಂದು ಮೆಸೆಜ್‌ ಬರುವುದು. ಆಗ ಸಂಖ್ಯೆ 1 ಒತ್ತಿರಿ. ಈ ಮೆಸೆಜ್‌ ನೀವು 4G ಸಿಮ್‌ ಆಕ್ಟಿವ್‌ಗೆ ಕಳುಹಿಸಿದ ರಿಕ್ವೆಸ್ಟ್‌ ಅನ್ನು ಕನ್ಫರ್ಮ್‌ ಮಾಡುವುದಕ್ಕಾಗಿ ಆಗಿದೆ.

ಓದಿರಿ : ಪತಂಜಲಿ ಮೆಸೆಜ್‌ ಆಪ್‌ ಈ ಬಾರಿ ಪುಟಿದೆಳುವುದೇ?..ಹಾಗಾದ್ರೆ ವಾಟ್ಸಪ್‌ ಕಥೆ ಏನು? ಓದಿರಿ : ಪತಂಜಲಿ ಮೆಸೆಜ್‌ ಆಪ್‌ ಈ ಬಾರಿ ಪುಟಿದೆಳುವುದೇ?..ಹಾಗಾದ್ರೆ ವಾಟ್ಸಪ್‌ ಕಥೆ ಏನು?

ಸಿಮ್‌ ಬದಲಿಸಿ

ಸಿಮ್‌ ಬದಲಿಸಿ

4G ಆಕ್ಟಿವೇಶನ್ ಮೆಸೆಜ್‌ ಕನ್ಫರ್ಮ್‌ ಆದ ನಂತರ ನಿಮ್ಮ 3G ನೆಟವರ್ಕ್‌ ಆಟೋಮ್ಯಾಟಿಕ್ ಆಗಿ ಬಂದ್ ಆಗುವುದು. ಆಗ ನಿಮ್ಮ ಸ್ಮಾರ್ಟ್‌ಫೋನ್‌ ಸ್ವಿಚ್‌ ಆಫ್‌ ಮಾಡಿರಿ ಮತ್ತು ಹಳೆಯ 3G ಸಿಮ್‌ ತೆಗೆದು ಹೊಸ 4G ಸಿಮ್‌ ಸ್ಮಾರ್ಟ್‌ಫೋನಿನಲ್ಲಿ ಇನ್‌ಸರ್ಟ್ ಮಾಡಿರಿ. ಆ ನಂತರ ನಿಮ್ಮ ಸಿಮ್‌ 4G ನೆಟವರ್ಕ್‌ಗೆ ಆಕ್ಟಿವೆಟ್‌ ಆಗಿರುತ್ತದೆ.

ಆಫರ್‌ ಚೆಕ್‌ ಮಾಡಿ

ಆಫರ್‌ ಚೆಕ್‌ ಮಾಡಿ

4G ಗೆ ಅಪ್‌ಗ್ರೇಡ್‌ ಆದ ನಂತರ ಮೊದಲು 51111 ಕರೆ ಮಾಡಿ ಉಚಿತ ಡೇಟಾ ಆಫರ್‌ಗಾಗಿ ರಿಜಿಸ್ಟರ್‌ ಮಾಡಿರಿ. ನಿಮ್ಮ ನಂಬರ್‌ಗೆ ಯಾವುದಾದರೂ ಆಫರ್‌ ಲಭ್ಯವಿದ್ದಲ್ಲಿ 24ಗಂಟೆಗಳ ಒಳಗೆ ಆಫರ್‌ ನಿಮಗೆ ಲಭ್ಯವಾಗಲಿದೆ. ಕಂಪನಿಯ ಮೈ ಏರ್‌ಟೆಲ್‌ ಆಪ್‌ನಲ್ಲಿ ಡೇಟಾ ಬಳಕೆಯನ್ನು ಟ್ರಾಕ್‌ ಮಾಡಬಹುದಾಗಿದೆ.

ಓದಿರಿ : ಸೋನಿಯಿಂದ ಹೊಸ ಸೌಂಡ್‌ಬಾರ್ ಬಿಡುಗಡೆ!.ಬೆಲೆ ಮಾತ್ರ ದುಬಾರಿ!ಓದಿರಿ : ಸೋನಿಯಿಂದ ಹೊಸ ಸೌಂಡ್‌ಬಾರ್ ಬಿಡುಗಡೆ!.ಬೆಲೆ ಮಾತ್ರ ದುಬಾರಿ!

4G ಸಿಮ್‌ ಮತ್ತು ಆಫರ್‌ ಲಭ್ಯತೆ

4G ಸಿಮ್‌ ಮತ್ತು ಆಫರ್‌ ಲಭ್ಯತೆ

ಗ್ರಾಹಕರು 4G ಸಿಮ್‌ ಅನ್ನು ಏರ್‌ಟೆಲ್‌ ಸ್ಟೋರ್‌ನಲ್ಲಿ ಉಚಿತವಾಗಿ ಪಡೆಯಬಹುದಾಗಿದ್ದು, 4Gಗೆ ಅಪ್‌ಗ್ರೇಡ್‌ ಆಗುವ ಗ್ರಾಹಕರಿಗೆ ಏರ್‌ಟೆಲ್‌ನಿಂದ 30ದಿನಗಳ ವರೆಗೂ ಪ್ರತಿದಿನ 1GB ಉಚಿತ ಡೇಟಾ ಆಫರ್‌ ಲಭ್ಯವಾಗುವ ಸಾಧ್ಯತೆಗಳಿವೆ. ಆದರೆ ಈ ಆಫರ್‌ ನಿಮ್ಮ ನಂಬರ್‌ಗೆ ಲಭ್ಯವಿದೆಯಾ ಅಥವಾ ಇಲ್ಲವಾ ಎಂಬುದನ್ನು ಕಂಪನಿಯ ವೆಬ್‌ಸೈಟ್‌ನಲ್ಲಿ ಚೆಕ್‌ ಮಾಡಿಕೊಳ್ಳಬಹುದಾಗಿದೆ.

ಓದಿರಿ : ಏರ್‌ಟೆಲ್‌ನಿಂದ ಹೊಸ ವಾರ್ಷಿಕ ವ್ಯಾಲಿಡಿಟಿ ಪ್ಲ್ಯಾನ್‌!..511GB ಡೇಟಾ ಉಚಿತ! ಓದಿರಿ : ಏರ್‌ಟೆಲ್‌ನಿಂದ ಹೊಸ ವಾರ್ಷಿಕ ವ್ಯಾಲಿಡಿಟಿ ಪ್ಲ್ಯಾನ್‌!..511GB ಡೇಟಾ ಉಚಿತ!

Best Mobiles in India

English summary
If you are an Airtel subscriber who just upgraded from a 3G to 4G SIM card, here’s how to activate and use it. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X