Just In
Don't Miss
- Movies
ಸ್ವಾತಂತ್ರ್ಯ ಹೋರಾಟಗಾರ್ತಿ 'ನೀರಾ ಆರ್ಯ' ಬಯೋಪಿಕ್ ಮೋಷನ್ ಪೋಸ್ಟರ್ ರಿಲೀಸ್
- Finance
2 ಕೋಟಿಗೂ ಕಡಿಮೆ FD ಹಣಕ್ಕೆ ಹೆಚ್ಚು ಬಡ್ಡಿ ನೀಡುವ 5 ಬ್ಯಾಂಕ್ ಯಾವವು, ಅವುಗಳ ಬಡ್ಡಿ ದರ ಬಗ್ಗೆ ತಿಳಿಯಿರಿ
- Sports
ಭಾರತ ತಂಡವನ್ನು ನೋಡಿ ಕಲಿಯಿರಿ: ಪಾಕಿಸ್ತಾನ ತಂಡವನ್ನು ತರಾಟೆಗೆ ತೆಗೆದುಕೊಂಡ ಮಾಜಿ ಕ್ರಿಕೆಟಿಗ
- News
ರಾಜಕೀಯ ದ್ವೇಷಕ್ಕೆ 15 ವರ್ಷಗಳಿಂದ ಜಮೀನಿನ ದಾರಿ ಬಂದ್; ಡಿ.ಕೆ.ಶಿ ತವರಲ್ಲಿ ಬಡ ಕುಂಟುಂಬ ಕಣ್ಣೀರು
- Automobiles
ಬೆಲೆ ಇಳಿಸಿ, ಹೆಚ್ಚಿನ ಮೈಲೇಜ್ನೊಂದಿಗೆ ಟಾಟಾ ಬಿಡುಗಡೆಗೊಳಿಸಿದ ನೆಕ್ಸಾನ್ ಇವಿ ವಿಶೇಷತೆಗಳು
- Lifestyle
ವಾರ ಭವಿಷ್ಯ ಜ.22-ಜ.28: ಈ ವಾರ ಯಾವ ರಾಶಿಯವರಿಗೆ ಅದೃಷ್ಟ, ಯಾರು ಸ್ವಲ್ಪ ಜಾಗ್ರತೆವಹಿಸಬೇಕು ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಡ್ರೈವಿಂಗ್ ಲೈಸೆನ್ಸ್‌ಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಹೇಗೆ?
ಸಮಯದ ಅಭಾವ ಯಾರಿಗೆ ತಾನೆ ಇರೊಲ್ಲ. ಎಲ್ಲರಿಗೂ ಇರುತ್ತೆ. ಹೊಸದಾಗಿ ಆಧಾರ್ ಕಾರ್ಡ್, ವೋಟರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಖಾತೆ, ಪಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಪಡೆಯುವವರಿಗಂತೂ ಸಮಯದ ಅಭಾವ ಜಾಸ್ತಿನೆ. ಯಾಕಂದ್ರೆ ಇವುಗಳನ್ನು ಪಡೆಯಲು ಕಛೇರಿಗಳಿಗೆ ಹೋಗಿ ಸಾಲಲ್ಲಿ ನಿಲ್ಲಬೇಕು, ಅಧಿಕಾರಿಗಳು ಹೇಳಿದ ಸಮಯಕ್ಕೆ ಹೋಗಬೇಕು. ಈ ಐಡಿಗಳನ್ನು ಪಡೆಯಲು ಇತರೆ ಆಧಾರಗಳನ್ನು ನೀಡಬೇಕು. ಆದ್ದರಿಂದ ಸಾಕಪ್ಪ ಸಾಕು ಈ ಗೋಳು ಎನ್ನುವವರೇ ಜಾಸ್ತಿ.
ಅಂದಹಾಗೆ ಇನ್ನೂ ಬೆಂಗಳೂರಿನಂತ ನಗರ ಪ್ರದೇಶ ವಾಸಿಗಳಿಗೆ ಅಥವಾ ದಿನನಿತ್ಯ ಬ್ಯುಸಿ ಲೈಫ್ ಲೀಡ್ ಮಾಡುವವರಿಗೆ ಮೇಲೆ ತಿಳಿಸಿದ ಐಡಿಗಳನ್ನು ಪಡೆಯಲು ಸಮಯಾನೇ ಇಲ್ಲಾ ಅಂತಾರೆ. ಯಾಕಂದ್ರೆ ಮೇಲೆ ತಿಳಿಸಿದ ಯಾವುದೇ ಐಡಿಗಳನ್ನು ಒಂದು ದಿನದಲ್ಲಿ ಪಡೆಯಲು ಸಾಧ್ಯವಿಲ್ಲ. ಆದ್ರೆ ಇತ್ತೀಚಿನ ದಿನಗಳಲ್ಲಿ ಎಲ್ಲಾ ಸರ್ಕಾರಿ ಸೇವೆಗಳು ಸಹ ಸುಲಭವಾಗಿ ದೊರೆಯುತ್ತಿವೆ.
ವೋಟ್ ಕಾರ್ಡ್‌ಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಹೇಗೆ?
'ಟೆಕ್ನಾಲಜಿ ಮೇಡ್ ಈಜೀ' ಎಂಬಂತೆ ಟೆಕ್ ಶತಮಾನದಲ್ಲಿರುವ ಎಲ್ಲರು ಇಂದು ಟೆಕ್ನಾಲಜಿ ಸದುಪಯೋಗ ಪಡೆದು ಹಲವಾರು ಸೇವೆಗಳನ್ನು ತಮ್ಮ ಬಿಡುವಿನ ಸಮಯದಲ್ಲಿ ಪಡೆಯಬಹುದಾಗಿದೆ. ಅಂದಹಾಗೆ ಇಷ್ಟೊಂದು ಪೀಠಿಕೆಗೆ ಕಾರಣ ಅಂದ್ರೆ ಇಂದಿನ ಲೇಖನದಲ್ಲಿ ಡ್ರೈವಿಂಗ್ ಲೈಸೆನ್ಸ್‌ಗಾಗಿ ಆನ್‌ಲೈನ್ ಮೂಲಕ ಅಪ್ಲಿಕೇಶನ್ ಹಾಕುವುದು ಹೇಗೆ ಎಂಬ ಮಾಹಿತಿಯನ್ನು ತಿಳಿಸುತ್ತಿದ್ದೇವೆ.
ಬ್ಯುಸಿ ಲೈಫ್ ಲೀಡ್ ಮಾಡುವ ಹಲವರಿಗೆ ಆರ್‌ಟಿಓ ಕಛೇರಿ ಮುಂದೆ ಹೋಗಿ ದಿನವೆಲ್ಲ ನಿಲ್ಲಲು ಸಮಯ ಸಾಲೋದಿಲ್ಲ. ಆದ್ದರಿಂದ ಸಮಯ ಸಿಕ್ಕಾಗ ಆನ್‌ಲೈನ್ ಮುಖಾಂತರ ಡ್ರೈವಿಂಗ್ ಲೈಸೆನ್ಸ್‌ಗಾಗಿ ಆನ್‌ಲೈನ್ ಮುಖಾಂತರ ಅರ್ಜಿಸಲ್ಲಿಸುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿದ್ದೇವೆ. ಈ ಮಾಹಿತಿಗಾಗಿ ಕೆಳಗಿನ ಸ್ಲೈಡರ್‌ಗಳನ್ನು ಓದಿರಿ. ಸ್ಲೈಡರ್‌ನಲ್ಲಿ ನೀಡಲಾಗಿರುವ ವೀಡಿಯೊ ನೋಡಿ ಸಹ ಆನ್‌ಲೈನ್ ಮೂಲಕ ಡ್ರೈವಿಂಗ್ ಲೈಸೆನ್ಸ್‌ಗಾಗಿ ಅರ್ಜಿ ಸಲ್ಲಿಸುವುದು ಹೇಗ ಎಂದು ತಿಳಿಯಿರಿ.
'ಪಾನ್ ಕಾರ್ಡ್'ಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಹೇಗೆ?

ಡ್ರೈವಿಂಗ್ ಲೈಸೆನ್ಸ್
ಭಾರತದಾದ್ಯಂತ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಆದರೆ ಆಯಾ ರಾಜ್ಯದವರು ತಮ್ಮ ತಮ್ಮ ರಾಜ್ಯಗಳ ಅಧಿಕೃತ ಆರ್‌ಟಿಓ ವೆಬ್‌ಸೈಟ್ ಮುಖಾಂತರ ಅರ್ಜಿಸಲ್ಲಿಸಬೇಕು.

rto.kar.nic.in
ಕರ್ನಾಟಕದ ಪ್ರಜೆಗಳು ಡ್ರೈವಿಂಗ್ ಲೈಸೆನ್ಸ್‌ಗಾಗಿ ಕರ್ನಾಟಕ ಆರ್‌ಟಿಓ ಅಧಿಕೃತ ವೆಬ್‌ಸೈಟ್ 'rto.kar.nic.in' ಅನ್ನು ಮೊದಲಿಗೆ ನಿಮ್ಮ ಬ್ರೌಸರ್‌ನಲ್ಲಿ ಓಪನ್ ಮಾಡಿ.
ಸೂಚನೆ : ವಯಕ್ತಿಕ ಮಾಹಿತಿ ಸುರಕ್ಷತೆ ದೃಷ್ಟಿಯಿಂದ 'safari' ವೆಬ್ ಬ್ರೌಸರ್ ಅನ್ನು ಡೌನ್‌ಲೋಡ್ ಮಾಡಿ ಬಳಸುವುದು ಉತ್ತಮ. ಅಲ್ಲದೇ safari ಬ್ರೌಸರ್‌ನಲ್ಲೇ 'rto.kar.nic.in' ವೆಬ್‌ಸೈಟ್ ಓಪನ್ ಮಾಡಿ.

ಡ್ರೈವಿಂಗ್ ಲೈಸೆನ್ಸ್‌ಗಾಗಿ ಆನ್‌ಲೈನ್ ಅರ್ಜಿ
rto.kar.nic.in ವೆಬ್‌ಸೈಟ್ ಓಪನ್ ಆದ ನಂತರ Online Applications ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.

ಡ್ರೈವಿಂಗ್ ಲೈಸೆನ್ಸ್‌ಗಾಗಿ ಆನ್‌ಲೈನ್ ಅರ್ಜಿ
Online Applications ಬಟನ್ ಕ್ಲಿಕ್ ಮಾಡಿದ ನಂತರ ಓಫನ್ ಆಗುವ ಪೇಜ್‌ನಲ್ಲಿ "Online Application For New Learner's Licence"
ಎಂಬಲ್ಲಿ ಕ್ಲಿಕ್ ಮಾಡಿ.

ಡ್ರೈವಿಂಗ್ ಲೈಸೆನ್ಸ್‌ಗಾಗಿ ಆನ್‌ಲೈನ್ ಅರ್ಜಿ
ಪ್ರಸ್ತುತ ಓಪನ್ ಆಗಿರುವ ವೆಬ್‌ಪೇಜ್ ಅನ್ನು ಕೆಳಗೆ ಸ್ಕ್ರಾಲಿಂಗ್ ಮಾಡಿ "Click here to go for Online Applications LL/DL " ಎಂಬಲ್ಲಿ ಕ್ಲಿಕ್ ಮಾಡಿ.

ಡ್ರೈವಿಂಗ್ ಲೈಸೆನ್ಸ್‌ಗಾಗಿ ಆನ್‌ಲೈನ್ ಅರ್ಜಿ
ಈ ಹಂತದಲ್ಲಿ ನೀವು safari ವೆಬ್ ಬ್ರೌಸರ್ ಉಪಯೋಗಿಸಿದ್ದೇ ಆದಲ್ಲಿ ಅಪ್ಲಿಕೇಶನ್ ಒಂದು ಓಪನ್ ಆಗುತ್ತದೆ. ಆ ಅರ್ಜಿಯಲ್ಲಿ 'ಅಪ್ಲಿಕೇಶನ್ ನಂಬರ್ ಕಾಲಂನಲ್ಲಿ ನಂಬರ್ ಈಗಾಗಲೇ ಇರುತ್ತದೆ. ಅಪ್ಲಿಕೇಶನ್ ನಂಬರ್ ಇರುವುದನ್ನು ಖಚಿತ ಪಡಿಸಿಕೊಳ್ಳಿ. ನಂತರ ನೀವು LL/DL ಯಾವುದು ಎಂದು ಕ್ಲಿಕ್ಕಿಸಬೇಕು. ನಂತರ ಅರ್ಜಿಯಲ್ಲಿ ಕೇಳಲಾದ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಬೇಕು. ಕೆಲವೊಂದು ಮಾಹಿತಿಗಳನ್ನು ನೀಡಲು ನಿಮಗೆ ತಿಳಿಯದಿರಬಹುದು. ಆದ್ದರಿಂದ ಮುಂದಿನ ಸ್ಲೈಡರ್‌ನಲ್ಲಿ ವೀಡಿಯೊ ನೋಡಿ ಯಾವ ಯಾವ ಮಾಹಿತಿಗಳನ್ನು ಹೇಗೆ ನೀಡಬೇಕು ಎಂದು ತಿಳಿಯಿರಿ.
ಡ್ರೈವಿಂಗ್ ಲೈಸೆನ್ಸ್‌ಗಾಗಿ ಆನ್‌ಲೈನ್ ಅರ್ಜಿ
ಡ್ರೈವಿಂಗ್ ಲೈಸನ್ಸ್‌ಗಾಗಿ ಆನ್‌ಲೈನ್ ಅರ್ಜಿ ಸಲ್ಲಿಸುವಲ್ಲಿ ಮಾಹಿತಿಗಳನ್ನು ನೀಡುವ ಬಗ್ಗೆ ವೀಡಿಯೊ ನೋಡಿ ತಿಳಿಯಿರಿ.

ಡ್ರೈವಿಂಗ್ ಲೈಸೆನ್ಸ್‌ಗಾಗಿ ಆನ್‌ಲೈನ್ ಅರ್ಜಿ
ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿದ ನಂತರ Submit ಎಂಬಲ್ಲಿ ಕ್ಲಿಕ್ ಮಾಡಿ, ಅಪ್ಲಿಕೇಶನ್ ಸೇವ್ ಮಾಡಿ ಮತ್ತು ನಂಬರ್ ಅನ್ನು ಬರೆದುಕೊಳ್ಳಿ. ನಂತರ rto.kar.nic.in ವೆಬ್ ಸೈಟ್ ಮಾಡಿ ಆನ್‌ಲೈನ್ ಅಪ್ಲಿಕೇಶನ್ ಬಟನ್ ಕ್ಲಿಕ್ ಮಾಡಿ ಓಪನ್ ಆದ ಪೇಜ್‌ನಲ್ಲಿ ಆರ್‌ಟಿಓ ಕಛೇರಿಗೆ ನೀಡಲು ಅಪ್ಲಿಕೇಶನ್ ಫಾರ್ಮ್ ಅನ್ನು ಪ್ರಿಂಟ್ ತೆಗೆದುಕೊಳ್ಳಿ. 10 ದಿನಗಳ ನಂತರ ನೀವು LL ಪಡೆಯುತ್ತೀರಿ. DL ಗಾಗಿಯೂ ಸಹ ಈ ರೀತಿಯಲ್ಲಿಯೇ ಆನ್‌ಲೈನ್ ಅರ್ಜಿ ಸಲ್ಲಿಸಬಹುದು. ಆದರೆ ಅರ್ಜಿ ಮೊದಲಿಗೆ DL ಆಯ್ಕೆ ಮಾಡಿಕೊಳ್ಳಬೇಕು.

ಗಿಜ್‌ಬಾಟ್

ಓದಿರಿ ಗಿಜ್‌ಬಾಟ್ ಲೇಖನಗಳು
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470