Just In
Don't Miss
- Sports
IND vs NZ 3rd T20: ಸರಣಿ ನಿರ್ಣಾಯಕ 3ನೇ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ & ಲೈವ್ ಸ್ಕೋರ್
- Automobiles
ಸಪ್ತ ಸಾಗರದಾಚೆಯೂ ಮಹೀಂದ್ರಾ ಕಾರಿಗೆ ಬೇಡಿಕೆ... ನೇಪಾಳದಲ್ಲಿ ಎಕ್ಸ್ಯುವಿ700 ಬಿಡುಗಡೆ
- News
ಚಿರತೆ ಹಾವಳಿ ತಡೆಗೆ ಟಾಸ್ಕ್ ಪೋರ್ಸ್ ರಚಿಸಿ ಆದೇಶ ಹೊರಡಿಸಿದ ಸರ್ಕಾರ, ತಂಡಗಳ ವಿವರ ಇಲ್ಲಿದೆ
- Movies
"ಕಾಂತಾರ' ಯಾಕೆ ಆಸ್ಕರ್ಗೆ ನಾಮಿನೇಟ್ ಆಗ್ಲಿಲ್ಲ ಅಂದ್ರೆ? ಸೀಕ್ವೆಲ್ಗೆ ಪ್ರಶಸ್ತಿ ಗ್ಯಾರೆಂಟಿ": ವಿಜಯ್ ಕಿರಗಂದೂರ್
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಐಫೋನಿನಲ್ಲಿ ಬ್ಯಾಕ್ ಅಪ್ ಸ್ಟೋರೇಜ್ ಹೇಗೆ ಮಾಡುವುದು ಗೊತ್ತಾ?
ಮೊಬೈಲ್ ಫೋನ್‌ಗಳು ಮನುಷ್ಯನ ಆಪ್ತ ಸ್ಥಾನ ಪಡೆದಿದ್ದು, ಫೋನ್ ಎಲ್ಲ ಮಾಹಿತಿ ಕೂಡಿಡುವ ಸ್ಥಳವಾಗಿಬಿಟ್ಟಿದೆ. ಫೋನಿನಲ್ಲಿ ಫೋಟೊಗಳು ಸೇರಿದಂತೆ ಅನೇಕ ಅಗತ್ಯ ಮಾಹಿತಿಗಳನ್ನು ಸ್ಟೋರ್ ಮಾಡಿರಲಾಗಿರುತ್ತದೆ. ಆದರೆ ಫೋನ್ ಕಳೆದು ಹೋದರೆ ಅಥವಾ ಹಾಳಾದರೆ ಫೋನಿನಲ್ಲಿ ಶೇಖರಿಸಿದ ದತ್ತಾಂಶಗಳ ರಕ್ಷಣೆ ಹೇಗೆ ಎಂಬುದರ ಬಗ್ಗೆ ಬಹುತೇಕ ಬಳಕೆದಾರರು ಯೋಚಿಸದೇ ಇರಲಾರರು. ಆದರೆ ಬ್ಯಾಕ್‌ಅಪ್ ಪಡೆಯುವ ಅವಕಾಶ ಇದೆ.

ಹೌದು, ಕೆಲವೊಮ್ಮೆ ಫೋನ್‌ಗಳಲ್ಲಿ ದಾಖಲಿಸಿದ ಡೇಟಾಗಳನ್ನು ಮರಳಿ ಪಡೆಯುವ ಅಗತ್ಯವಿರುತ್ತದೆ ಆಗ ಬ್ಯಾಕ್ಅಪ್ ಮಾಡಿಕೊಳ್ಳುವ ಮೂಲಕ ಫೋನಿನಲ್ಲಿ ಸ್ಟೋರ್ ಮಾಡಿರುವ ಡೇಟಾ ಪಡೆಯಬಹುದು. ಆಂಡ್ರಾಯ್ಡ್ ಫೋನ್ ಆಗಿರಲಿ ಅಥವಾ ಐಫೋನ್ ಆಗಿರಲಿ ಬಳಕೆದಾರರು ಬ್ಯಾಕ್‌ಅಪ್ ಮಾಡಿಕೊಂಡು ದತ್ತಾಂಶಗಳನ್ನು ಮರಳಿ ಪಡೆದುಕೊಳ್ಳಬಹುದಾಗಿದ್ದು, ಆದರೆ ಮೊದಲು ಬ್ಯಾಕ್‌ಅಪ್ ಸ್ಟೋರ್ ಆಯ್ಕೆ ಸಕ್ರಿಯ ಮಾಡಿಕೊಂಡಿರಬೇಕು.

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಸ್ಟೋರೇಜ್‌ಗೆ ಸ್ಥಳ ನೀಡಿರುವಂತೆ ಐಫೋನ್‌ಗೂ ಐ ಕ್ಲೌಡ್ ಸ್ಟೋರೇಜ್ ಆಯ್ಕೆ ಇದ್ದು, ಬಳಕೆದಾರರು ಕಂಪನಿಯ ಈ ಆಯ್ಕೆ ಬಳಸಿಕೊಳ್ಳುವುದರ ಮೂಲಕ ತಮ್ಮ ಪೋಟೊಗಳನ್ನು, ಮೇಲ್‌ಗಳನ್ನು, ಕಾಂಟ್ಯಾಕ್ಟ್ಸ್‌ಗಳನ್ನು ಮತ್ತು ಕ್ಯಾಲೆಂಡರ ಮಾಹಿತಿಗಳನ್ನು ಬ್ಯಾಕ್‌ಅಪ್ ಸ್ಟೋರೇಜ್ ಮಾಡಿಕೊಳ್ಳಬಹುದು. ಹಾಗಾದರೇ ಐಫೋನ್‌ನಲ್ಲಿ ಬ್ಯಾಕ್‌ಅಪ್ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಐ ಕ್ಲೌಡ್
ಆಪಲ್ ಕಂಪನಿಯು ಬ್ಯಾಕ್‌ಅಪ್ ಸ್ಟೋರೇಜ್‌ಗಾಗಿ 'ಐ ಕ್ಲೌಡ್' ಫೀಚರ್ ಅನ್ನು ತನ್ನ ಐಫೋನ್‌ಗಳಲ್ಲಿ ಪರಿಚಯಿಸಿದ್ದು, ದತ್ತಾಂಶಗಳನ್ನು ಸ್ಟೋರೇಜ್ ಮಾಡಲು ಆನ್‌ಲೈನ್ ಸ್ಥಳಾವಕಾಶ ಒದಗಿಸಲಿದೆ. ಬ್ಯಾಕ್‌ಅಪ್ ದತ್ತಾಂಶಗಳು ಸೆಕ್ಯುರ್ ಆಗಿರಲಿದ್ದು, ಫೈಲ್‌ಗಳನ್ನು ಮೂಲ ರೆಸಲ್ಯೂಶನ್‌ನಲ್ಲಿಯೇ ಸ್ಟೋರ್ ಮಾಡಿಕೊಳ್ಳುತ್ತದೆ. ಐಫೋನ್ ಆಂತರಿಕ ಸಂಗ್ರಹ ಫುಲ್ ಆದಾಗ ಸ್ಟೋರ್ ಆದ ಫೈಲ್‌ಗಳು ಕಡಿಮೆ ಗಾತ್ರಕ್ಕೆ ಬದಲಾಯಿಸಿಕೊಳ್ಳುತ್ತದೆ.

ಐ ಕ್ಲೌಡ್ ಆಕ್ಟಿವ್ ಮಾಡಿ
ಐ ಕ್ಲೌಡ್ ಆಯ್ಕೆಯು ಆಕ್ಟಿವ್ ಆಗಿದ್ದರೇ ಮಾತ್ರ ಫೋಟೊ, ಕಾಂಟ್ಯಾಕ್ಟ್ಸ್, ಕ್ಯಾಲೆಂಡರ್ ಮಾಹಿತಿಗಳು ಬ್ಯಾಕ್‌ಅಪ್ ಸ್ಟೋರೇಜ್ ಆಗುತ್ತವೆ. ಹೀಗಾಗಿ ಐಫೋನಿನಲ್ಲಿ ಐ ಕ್ಲೌಡ್ ಆಕ್ಟಿವ್ ಆಗಿರುವ ಬಗ್ಗೆ ಚೆಕ್ ಮಾಡಿ. ಒಂದು ವೇಳೆ ಆಕ್ಟಿವ್ ಆಗಿರದಿದ್ದರೇ ಸೆಟ್ಟಿಂಗ್ಸ್‌ಗೆ ಆಯ್ಕೆಯಲ್ಲಿ ನಿಮ್ಮ ಹೆಸರಿನ ಐಕಾನ್ ಮೇಲೆ ಕ್ಲಿಕ್ ಮಾಡಿ ನಂತರ ಕಾಣಿಸುವ ಲಿಸ್ಟ್‌ನಲ್ಲಿ ಐ ಕ್ಲೌಡ್ ಆಯ್ಕೆ ಮಾಡಿಕೊಂಡು ಆನ್ ಮಾಡಿರಿ.

5GB ಸ್ಟೋರೇಜ್ ಸಾಮರ್ಥ್ಯ
ಐಫೋನ್‌ನ ಐ ಕ್ಲೌಡ್ ಆನ್‌ಲೈನ್ ಸ್ಟೋರೇಜ್‌ನಲ್ಲಿ 5GB ಸ್ಥಳಾವಕಾಶ ಇರಲಿದ್ದು, ಇದನ್ನು 2TB ವರೆಗೂ ವಿಸ್ತರಿಸಿಕೊಳ್ಳಬಹುದಾದ ಅವಕಾಶವಿದೆ ಆದರೆ ಅದಕ್ಕೆ ಹಣ ನೀಡಬೇಕಿದೆ. ಸೆಟ್ಟಿಂಗ್ಸ್ > ಮ್ಯಾನೆಜ್ > ಸ್ಟೋರೇಜ್ ಪ್ಲ್ಯಾನ್ > ಚೇಂಜ್ ಸ್ಟೋರೇಜ್ ಪ್ಲ್ಯಾನ್ ಆಯ್ಕೆ ಹೋಗಿ ಮೆಮೊರಿ ಹೆಚ್ಚಿಸಿಕೊಳ್ಳಬಹುದು.

ಗೂಗಲ್ ಪೋಟೊಸ್
ಐಫೋನ್ ಐ ಕ್ಲೌಡ್ ಹೊರತುಪಡೆಸಿ ಗೂಗಲ್ ಫೋಟೊಸ್ ಮೂಲಕ ಸಹ ಫೋಟೋಗಳ ಬ್ಯಾಕ್‌ಅಪ್ ಮಾಡಿಕೊಳ್ಳಬಹುದಾಗಿದೆ. ಆದರೆ ಬಳಕೆದಾರರು ಗೂಗಲ್ ಪೋಟೊಸ್ ಆಪ್ ಅನ್ನು ಆಪ್ ಸ್ಟೋರ್‌ನಿಂದ ಇನ್‌ಸ್ಟಾಲ್ ಮಾಡಿಕೊಳ್ಳಬೇಕು. ಪೋಟೋಸ್ ಸ್ಟೋರೇಜ್‌ಗಾಗಿ ಗೂಗಲ್‌ನಲ್ಲಿ 15GB ಆನ್‌ಲೈನ್ ಸ್ಥಳಾವಕಾಶ ಸೀಗಲಿದೆ.

ಐ ಟ್ಯೂನ್
ಐಫೋನ್ ಐ ಕ್ಲೌಡ್ ಆನ್‌ಲೈನ್ ಸ್ಟೋರೇಜ್ ನಂತಯೇ ಐ ಟ್ಯೂನ್ ಆಯ್ಕೆಯನ್ನು ಬಳಸಬಹುದಾಗಿದೆ. ಚಾರ್ಜ್ ಕೇಬಲ್ ಮೂಲಕ ಐಫೋನ್ ಅನ್ನು ಲ್ಯಾಪ್‌ಟಾಪ್‌ಗೆ ಕನೆಕ್ಟ್ ಮಾಡಿ ಐ ಟ್ಯೂನ್ ರನ್ ಮಾಡಿರಿ. ನಂತರ ಬ್ಯಾಕ್‌ಅಪ್ ಬಾಕ್ಸ್‌ನಲ್ಲಿ ದತ್ತಾಂಶಗಳನ್ನು ಸ್ಟೋರ್ ಮಾಡಬಹುದಾಗಿದೆ.

ಥರ್ಡ್‌ಪಾರ್ಟ್ ಆಪ್
ಬ್ಯಾಕ್ಅಪ್ ಸ್ಟೋರೇಜ್‌ಗಾಗಿ ಕಂಪನಿಯ ಆಯ್ಕೆಗಳನ್ನು ಹೊರತುಪಡಿಸಿ ಥರ್ಡ್‌ಪಾರ್ಟ್ ಆಪ್‌ಗಳನ್ನು ಸಹ ಐಫೋನ್ ಬಳಕೆದಾರರು ಬಳಸಿಕೊಳ್ಳಬಹುದಾಗಿದ್ದು, ಅವುಗಳಲ್ಲಿ ಐಫೋನ್ ಬ್ಯಾಕ್‌ಅಪ್ ಎಕ್ಟ್ಸಿರಿಯರ್ ಸಹ ಒಂದಾಗಿದೆ. ಇದರಲ್ಲಿ ಮೆಸೆಜ್, ಪೋಟೊ, ಕಾಲ್ ಹಿಸ್ಟರಿ ಸೇರಿದಂತೆ ಹಲವು ಮಾಹಿತಿಗಳ ಬ್ಯಾಕ್‌ಅಪ್ ಪಡೆಯಬಹುದಾಗಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470