ಎರಡು ಸರಳ ವಿಧಾನಗಳಲ್ಲಿ ಆಂಡ್ರಾಯ್ಡ್ ಸಂಪರ್ಕಗಳನ್ನು ಬ್ಯಾಕಪ್ ಮಾಡಿ

Written By:

ಆಂಡ್ರಾಯ್ಡ್ ತನ್ನ ಬಳಕೆದಾರರಿಗೆ ಅದ್ಭಯತ ಫೀಚರ್‌ಗಳನ್ನು ಒದಗಿಸುವುದರಿಂದ ಮತ್ತು ಇದು ಬಳಸಲು ಅತಿ ಸುಲಭವಾಗಿರುವುದರಿಂದ ಹೆಚ್ಚಿನವರು ಆಂಡ್ರಾಯ್ಡ್ ಅನ್ನು ಮೆಚ್ಚಿಕೊಳ್ಳುತ್ತಾರೆ. ಆದರೆ ನಿಮ್ಮೆಲ್ಲಾ ಡೇಟಾವನ್ನು ನಿಯಮಿತವಾಗಿ ಬ್ಯಾಕಪ್ ಮಾಡಿಕೊಳ್ಳುವುದು ಅತ್ಯಮೂಲ್ಯ ಸ್ಮರಣೆಗಳು ಕಳೆದುಹೋಗದಂತೆ ಮಾಡುವಲ್ಲಿ ಸಹಕಾರಿಯಾಗಿದೆ.

ಸಂಪರ್ಕಗಳು ನಿಮ್ಮ ಫೋನ್‌ನಲ್ಲಿ ಹೆಚ್ಚು ಅತ್ಯಮೂಲ್ಯ ಡೇಟಾವಾಗಿದ್ದು ಫೋನ್ ಎಲ್ಲಿಯಾದರೂ ಫಾರ್ಮಾಟ್ ಆದಾಗ ಇದೆಲ್ಲವೂ ನಷ್ಟವಾಗುತ್ತವೆ ಅಲ್ಲವೇ? ಆದರೆ ಬ್ಯಾಕಪ್ ಮಾಡುವುದರಿಂದ ಈ ನಷ್ಟ ನಿಮಗೆ ಸಂಭವಿಸುವುದಿಲ್ಲ. ನಿಮ್ಮ ಸಂಪರ್ಕಗಳನ್ನು ಬ್ಯಾಕಪ್ ಮಾಡುವುದು ಹೇಗೆ ಎಂಬುದು ನಿಮಗೆ ತಿಳಿದಿಲ್ಲ ಎಂದಾದಲ್ಲಿ ಇಲ್ಲಿ ಎರಡು ಸರಳ ಹಂತಗಳನ್ನು ನಾವು ನಿಮಗಾಗಿ ನೀಡುತ್ತಿದ್ದೇವೆ.

ಓದಿರಿ: ಆಂಡ್ರಾಯ್ಡ್ ಫೋನ್‌ನಲ್ಲಿ ನಷ್ಟವಾದ ಡೇಟಾ ಮರುಪಡೆದುಕೊಳ್ಳುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎಸ್‌ಡಿ ಕಾರ್ಡ್‌ನಲ್ಲಿ ಸಂಪರ್ಕಗಳನ್ನು ಬ್ಯಾಕಪ್ ಮಾಡುವುದು

ಎಸ್‌ಡಿ ಕಾರ್ಡ್‌ನಲ್ಲಿ ಸಂಪರ್ಕಗಳನ್ನು ಬ್ಯಾಕಪ್ ಮಾಡುವುದು

#1

ಹಂತ:1
ನಿಮ್ಮ ಡಿವೈಸ್‌ನಲ್ಲಿ ಸಂಪರ್ಕಗಳನ್ನು ತೆರೆಯಿರಿ ಮತ್ತು ಸೆಟ್ಟಿಂಗ್ಸ್ ಆಪ್ಶನ್ ಕ್ಲಿಕ್ ಮಾಡಿ. ಇಲ್ಲಿ ಮೆನು ಆಪ್ಶನ್‌ಗಳ ಪಟ್ಟಿಯೇ ದೊರೆಯುತ್ತದೆ. ಇಲ್ಲಿ ಇಂಪೋರ್ಟ್/ಎಕ್ಸ್‌ಪೋರ್ಟ್ ಮೆನು ಸ್ಪರ್ಶಿಸಿ.

ಹಂತ:2

ಹಂತ:2

#2

ಇದು ಇನ್ನೊಂದು ಮೆನುವನ್ನು ತೆರೆಯುತ್ತದೆ ಮತ್ತು 'ಎಕ್ಸ್‌ಪೋರ್ಟ್ ಟು ಎಸ್‌ಡಿ ಕಾರ್ಡ್' ಆಯ್ಕೆಯನ್ನು ಆರಿಸಿ.

ಎಸ್‌ಡಿ ಕಾರ್ಡ್‌ನಲ್ಲಿ ಬ್ಯಾಕಪ್

ಎಸ್‌ಡಿ ಕಾರ್ಡ್‌ನಲ್ಲಿ ಬ್ಯಾಕಪ್

#3

ಇದು ನಿಮ್ಮ ಆಂಡ್ರಾಯ್ಡ್ ಸಂಪರ್ಕಗಳನ್ನು ಎಸ್‌ಡಿ ಕಾರ್ಡ್‌ನಲ್ಲಿ ಬ್ಯಾಕಪ್ ಮಾಡುತ್ತದೆ ನಿಮ್ಮ ಫೋನ್‌ನಲ್ಲಿ ಇದು ಮೌಂಟ್ ಆಗುತ್ತದೆ. ಎಸ್‌ಡಿ ಕಾರ್ಡ್ ಮೆನುವಿನಿಂದ ಫೈಲ್ ಅನ್ನು ನಿಮಗೆ ಪ್ರವೇಶಿಸಬಹುದು. ಈ ಫೈಲ್ ನಿಮ್ಮ ಲ್ಯಾಪ್‌ಟಾಪ್ ಅಥವಾ ಪಿಸಿಯಲ್ಲಿ ಸೇವ್ ಆಗುತ್ತದೆ.

ಜಿಮೇಲ್‌ನಲ್ಲಿ ಆಂಡ್ರಾಯ್ಡ್ ಸಂಪರ್ಕಗಳನ್ನು ಬ್ಯಾಕಪ್ ಮಾಡುವುದು

ಜಿಮೇಲ್‌ನಲ್ಲಿ ಆಂಡ್ರಾಯ್ಡ್ ಸಂಪರ್ಕಗಳನ್ನು ಬ್ಯಾಕಪ್ ಮಾಡುವುದು

#4

ಹಂತ:1
ನಿಮ್ಮ ಆಂಡ್ರಾಯ್ಡ್ ಡಿವೈಸ್‌ನಲ್ಲಿ ಸೆಟ್ಟಿಂಗ್ಸ್ ಮೆನುವನ್ನು ತೆರೆಯಿರಿ ಮತ್ತು ಅಕೌಂಟ್ಸ್ ಅಥವಾ ಅಕೌಂಟ್ಸ್ ಮತ್ತು ಸಿಂಕ್ ಮೆನುವನ್ನು ಕ್ಲಿಕ್ ಮಾಡಿ.

ಹಂತ:2

ಹಂತ:2

#5

ಜಿಮೇಲ್ ಖಾತೆಗೆ ಹೋಗಿ ಮತ್ತು ಸಿಂಕ್ ಕಾಂಟಾಕ್ಟ್ ಆಪ್ಶನ್ ಪರಿಶೀಲಿಸಿ. ಸಿಂಕ್ ಆಗಲು ಇದು ಕೆಲವೊಂದು ನಿಮಿಷಗಳನ್ನು ತೆಗೆದುಕೊಳ್ಳಬಹುದು.

ಬ್ಯಾಕಪ್

ಬ್ಯಾಕಪ್

#6

ಈಗ ಪಿಸಿಯಲ್ಲಿ ಜಿಮೇಲ್ ಖಾತೆಯನ್ನು ತೆರೆಯಿರಿ ಮತ್ತು ಬ್ಯಾಕಪ್ ಮಾಡಲು ಇಚ್ಛಿಸುವ ಸಂಪರ್ಕಗಳನ್ನು ಆಯ್ಕೆಮಾಡಿ. ಮೋರ್ ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು ಎಕ್ಸ್‌ಪೋರ್ಟ್ ಆಪ್ಶನ್ ಆರಿಸಿ. ನಿಮ್ಮ ಪಿಸಿಯಲ್ಲಿ ಸಂಪರ್ಕಗಳನ್ನು ಉಳಿಸಲು ನಿಮಗೆ ಈಗ ಯಾವುದೇ ತೊಂದರೆ ಇಲ್ಲ.

ಭೇಟಿ ನೀಡಿ

ಭೇಟಿ ನೀಡಿ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಇನ್ನಷ್ಟು ಲೇಖನಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this article we are showing you how to backup How to backup android contacts sd card and gmail steps.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot