ಫೇಸ್‌ಬುಕ್‌ ಖಾತೆಯ ಪೋಸ್ಟ್‌ಗಳನ್ನು ಬಲ್ಕ್ ಆಗಿ ಡಿಲೀಟ್ ಮಾಡುವುದು ಹೇಗೆ?

|

ಫೇಸ್‌ಬುಕ್ ಸಾಮಾಜಿಕ ಜಾಲತಾಣಗಳಲ್ಲಿಯೇ ದಿಗ್ಗಜ ಎಂದೆನಿಸಿಕೊಂಡಿದ್ದು, ಅತೀ ಹೆಚ್ಚಿನ ಬಳಕೆದಾರರನ್ನು ಹೊಂದಿದೆ. ತನ್ನ ಬಳಕೆದಾರರ ಅನುಕೂಲಕ್ಕಾಗಿ ಹಲವು ನೂತನ ಫೀಚರ್ಸ್‌ಗಳನ್ನು ಅಳವಡಿಸಿದ್ದು, ಬಳಕೆದಾರರ ಖಾಸಗಿ ಮಾಹಿತಿಗೆಯ ಸುರಕ್ಷತೆಗೂ ಸಹ ಹೆಚ್ಚಿನ ಒತ್ತನ್ನು ನೀಡಿದೆ. ಬಳಕೆದಾರರು ತಮ್ಮ FB ಖಾತೆಯಲ್ಲಿ ಫೋಸ್ಟ್‌ ಮಾಡಿರುವ ಫೋಸ್ಟ್‌ಗಳನ್ನು ಡಿಲೀಟ್ ಮಾಡುವ ಆಯ್ಕೆಯನ್ನು ನೀಡಿದೆ.

 ಫೋಟೊ ವಿಡಿಯೊ

ಹೌದು, ಬಳಕೆದಾರರಿಗೆ ಫೋಟೊ, ವಿಡಿಯೊ, ಲಿಂಕ್‌ಗಳನ್ನು ಪೋಸ್ಟ್‌ ಮಾಡಲು ಫೇಸ್‌ಬುಕ್ ಅತ್ಯುತ್ತಮ ಪ್ಲಾಟ್‌ಫಾರ್ಮ್ ಆಗಿದೆ. ಹಾಗೆಯೇ ಈ ಹಿಂದೆ ಎಫ್‌ಬಿಯ ಟೈಮ್‌ಲೈನ್‌ನಲ್ಲಿ ಫೋಸ್ಟ್‌ ಮಾಡಿರುವ ಫೋಸ್ಟ್‌ಗಳನ್ನು ಡಿಲೀಟ್ ಮಾಡಬಹುದಾಗಿದೆ. ಈ ಆಯ್ಕೆಯಲ್ಲಿ ಎಫ್‌ಬಿ ಟೈಮ್‌ಲೈನ್‌ನಿಂದ ಬಳಕೆದಾರರು ಹಳೆಯ ಪೋಸ್ಟ್‌ಗಳನ್ನು ಬಲ್ಕ್/ಒಟ್ಟಾರೇ ಪೋಸ್ಟ್‌ಗಳನ್ನು ತೆಗೆದುಹಾಕಬಹುದಾಗಿದೆ. ಹಾಗಾದರೇ ಫೇಸ್‌ಬುಕ್ ಟೈಮ್‌ಲೈನ್‌ನಿಂದ ಬಲ್ಕ್‌ ಆಗಿ ಪೋಸ್ಟ್‌ಗಳನ್ನು ಡಿಲೀಟ್ ಮಾಡುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ ಮುಂದೆ ಓದಿರಿ.

ಫೇಸ್‌ಬುಕ್‌ ಪೋಸ್ಟ್‌ಗಳನ್ನು ಬಲ್ಕ್‌ ಆಗಿ ಡಿಲೀಟ್ ಮಾಡಲು ಈ ಹಂತಗಳನ್ನು ಅನುಸರಿಸಿ

ಫೇಸ್‌ಬುಕ್‌ ಪೋಸ್ಟ್‌ಗಳನ್ನು ಬಲ್ಕ್‌ ಆಗಿ ಡಿಲೀಟ್ ಮಾಡಲು ಈ ಹಂತಗಳನ್ನು ಅನುಸರಿಸಿ

ಹಂತ 1: ಐಫೋನ್ ಅಥವಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಫೇಸ್‌ಬುಕ್ ಅಪ್ಲಿಕೇಶನ್ ತೆರೆಯಿರಿ.

ಹಂತ 2: ಎಫ್‌ಬಿ ಪ್ರೊಫೈಲ್ ಪುಟಕ್ಕೆ ಹೋಗಿ. ಅಪ್ಲಿಕೇಶನ್‌ನ ಮುಖಪುಟ ಪರದೆಯ ಮೇಲಿನ ಎಡ ಭಾಗದಲ್ಲಿರುವ ನಿಮ್ಮ ಪ್ರೊಫೈಲ್ ಫೋಟೋವನ್ನು ಟ್ಯಾಪ್ ಮಾಡಿ.

ಪ್ರೊಫೈಲ್ ಪುಟ

ಹಂತ 3: ಪ್ರೊಫೈಲ್ ಪುಟ ಟ್ಯಾಪ್‌ ಮಾಡಿದ ನಂತರ "Go to Activity Log" ಬಟನ್ ಟ್ಯಾಪ್ ಮಾಡಿ. ಆನಂತರ ಹ್ಯಾಂಬರ್ಗರ್ ಮೆನುವಿನಲ್ಲಿ ಟ್ಯಾಪ್ ಮಾಡಿ ಮತ್ತು ನಂತರ "Activity Log" ಟ್ಯಾಪ್ ಮಾಡಿ.

ಹಂತ 4: ಆ ನಂತರ ''Manage Activity'' ಟ್ಯಾಪ್ ಮಾಡಿ ಮತ್ತು ನಂತರ "Your Posts" ಆಯ್ಕೆ ಸೆಲೆಕ್ಟ್‌ ಮಾಡಿ.

ಸೆಲೆಕ್ಟ್‌ ಮಾಡಿ

ಹಂತ 5: ಮಲ್ಟಿಪಲ್‌ ಫೋಸ್ಟ್‌ ಡಿಲೀಟ್ ಮಾಡುವ ಆಯ್ಕೆ ಕಾಣಿಸುತ್ತದೆ. ಬಳಕೆದಾರರು ವರ್ಗ, ದಿನಾಂಕ, ಅಥವಾ ಜನರನ್ನು ಆಧರಿಸಿ ಫಿಲ್ಟರ್ ಮಾಡುವ ಮೂಲಕ ಅನೇಕ ಪೋಸ್ಟ್‌ಗಳನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ. ಈ ಆಯ್ಕೆಗಳನ್ನು ಬಳಸಿ ಅಧಿಕ ಪೋಸ್ಟ್‌ಗಳನ್ನು ಸೆಲೆಕ್ಟ್‌ ಮಾಡಿ ತೆಗೆದುಹಾಕಬಹುದು.

FB ಹಿಸ್ಟರಿ ಕ್ಲಿಯರ್ ಮಾಡಲು ಹೀಗೆ ಮಾಡಿ

FB ಹಿಸ್ಟರಿ ಕ್ಲಿಯರ್ ಮಾಡಲು ಹೀಗೆ ಮಾಡಿ

* ಫೇಸ್‌ಬುಕ್ ಖಾತೆ ತೆರೆದು, ಬಲ ಭಾಗದಲ್ಲಿ ಕಾಣಿಸುವ ಮೂರು ಗೆರೆಗಳಿರುವ ಮೆನು ಆಯ್ಕೆ ಮಾಡಿರಿ.

* ಸೆಟ್ಟಿಂಗ್ಸ್ ಮತ್ತು ಪ್ರೈವೆಸಿ ಆಯ್ಕೆ ಸೆಲೆಕ್ಟ್ ಮಾಡಿರಿ.

* ನಂತರ ಸೆಟ್ಟಿಂಗ್ಸ್‌ ಆಯ್ಕೆಯನ್ನು ಒತ್ತಿರಿ.

* ನಂತರ ಪೇಜ್ ತೆರೆದುಕೊಳ್ಳುತ್ತದೆ, ಸ್ಕ್ರಾಲ್ ಮಾಡಿ> ಆಫ್‌ ಫೇಸ್‌ಬುಕ್ ಆಕ್ಟಿವಿಟಿ ಕಾಣಿಸುತ್ತದೆ.

* ಆಗ ಆಫ್‌ ಫೇಸ್‌ಬುಕ್ ಆಕ್ಟಿವಿಟಿ ಆಯ್ಕೆಯನ್ನು ಕ್ಲಿಕ್ಕಿಸಿ, ಆಗ ನೀವು ಭೇಟಿ ನೀಡಿದ ತಾಣಗಳ ಮಾಹಿತಿ ಕಾಣಿಸುತ್ತದೆ.

* ಹಾಗೆಯೇ ಅಲ್ಲಿಯೇ ಕ್ಲಿಯರ್ ಹಿಸ್ಟರಿ ಆಯ್ಕೆಯು ಸಹ ಕಾಣಿಸುತ್ತದೆ.

* ಆಗ ವಿಂಡೊ ಒಂದು ತೆರೆದು ಕೊಳ್ಳುತ್ತದೆ, ಅಲ್ಲಿ ಕ್ಲಿಯರ್ ಹಿಸ್ಟರಿ ಬಟನ್ ಒತ್ತಿರಿ.

Best Mobiles in India

English summary
In Facebook you can now easily remove the content that you no longer want to display on your profile.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X