ಆನ್‌ಲೈನ್‌ಲ್ಲಿ ಸುಲಭವಾಗಿ ಶಾಪಿಂಗ್‌ ಮಾಡುವುದು ಹೇಗೆ?

By Ashwath
|

ಇಂದು ಆನ್‌ಲೈನ್‌ಲ್ಲಿ ಶಾಪಿಂಗ್‌ ಮಾಡುವ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಿದೆ. ರಿಟೇಲ್‌ ಅಂಗಡಿಗಳಿಗಿಂತಲೂ ಕಡಿಮೆ ಬೆಲೆಯಲ್ಲಿ ವಸ್ತುಗಳು ನಮ್ಮ ಮನೆ ಬಾಗಿಲಿಗೆ ಬರುವುದರಿಂದ ಗ್ರಾಹಕರು ಇಂದು ಆನ್‌ಲೈನ್‌ ಶಾಪಿಂಗ್‌ನತ್ತ ಹೆಚ್ಚು ಆಕರ್ಷಿತರಾಗಿದ್ದಾರೆ. ಗ್ರಾಹಕರು ಆಕರ್ಷಿತರಾಗಿದ್ದೇ ತಡ ಹೆಚ್ಚು ಆನ್‌ಲೈನ್‌ ಶಾಪಿಂಗ್‌ ತಾಣಗಳು ಈಗ ಭಾರತದಲ್ಲಿ ತಲೆ ಎತ್ತಿದೆ. ಯಾವಾಗಲೂ ದುಡ್ಡಿನ ವ್ಯವಹಾರದಲ್ಲಿ ಜಾಗೃತೆ ವಹಿಸುವ ನಾವು ಆನ್‌ಲೈನ್‌ ಶಾಪಿಂಗ್ ಮಾಡುವಾಗಲೂ ಎಚ್ಚರ ವಹಿಸಲೇ ಬೇಕು.

ಒಳ್ಳೆಯದು ಕೆಟ್ಟದ್ದು ಎಲ್ಲ ಕಡೆ ಇದೆ ಅಂದ ಮೇಲೆ ಒಳ್ಳೆಯದನ್ನ ಮಿಸ್ ಮಾಡಿಕೊಳ್ಳುವ ಅವಕಾಶ ತಪ್ಪಿಸಿಕೊಳ್ಳಬಾರದು ನೋಡಿ. ಹಾಗಾಗಿಯೇ ಆನ್‌ಲೈನ್‌ ಶಾಪಿಂಗ್ ಮಾಡುವ ಸುರಕ್ಷಿತ ವಿಧಾನಗಳು ಇಲ್ಲಿವೆ. ಈ ಮಾಹಿತಿಗಳಿರುವ ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ. ನಂತರ ನಿಮಗಿಷ್ಟವಾದ ತಾಣದಲ್ಲಿ ಹೊಸ ಉತ್ಪನ್ನವನ್ನು ಖರೀದಿಸಿ.

ಇದನ್ನು ಓದಿ : ಭಾರತದ ಟಾಪ್‌ -10 ಆನ್‌ಲೈನ್‌ ಶಾಪಿಂಗ್‌ ಸೈಟ್‌ಗಳು ಇಲ್ಲಿವೆ ನೋಡಿ.

ಆನ್‌ಲೈನ್‌ ಶಾಪಿಂಗ್‌ ಟಿಪ್ಸ್‌

ಆನ್‌ಲೈನ್‌ ಶಾಪಿಂಗ್‌ ಟಿಪ್ಸ್‌

ಸರ್ಚ್ ಇಂಜಿನ್ ಮೂಲಕ ಶಾಪಿಂಗ್ ಮಾಡುವ ವೆಬ್‌ಸೈಟ್‌ ಹುಡುಕುವ ಬದಲು ಗೊತ್ತಿರುವ ಅಥವಾ ನಿಮ್ಮ ಸ್ನೇಹಿತರು ಉಪಯೋಗಿಸುವ ತಾಣಗಳಿಂದಲೇ ಖರೀದಿಸಿ. ಕೆಲವೊಂದು ವೆಬ್ ಸೈಟ್ ಗಳು ನಿಮ್ಮಲ್ಲಿನ ಅಮೂಲ್ಯವಾದ ಖಾಸಗಿ ಮಾಹಿತಿಯನ್ನ ಸಂಗ್ರಹಿಸಿ ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ.

ಆನ್‌ಲೈನ್‌ ಶಾಪಿಂಗ್‌ ಟಿಪ್ಸ್‌

ಆನ್‌ಲೈನ್‌ ಶಾಪಿಂಗ್‌ ಟಿಪ್ಸ್‌

ಸುಲಭವಾಗಿ ಊಹೆಗೆ ಸಿಕ್ಕುವ ಪಾಸ್ವರ್ಡ್ ಗಳಿಂದ ನಿಮ್ಮ ಅಕೌಂಟ್ ಅನ್ನ ಸುಲಭವಾಗಿ ಹ್ಯಾಕ್ ಮಾಡಬಹುದು. ಇದರಿಂದ ತಪ್ಪಿಸಿಕೊಳ್ಳಲು ಸಂಖ್ಯೆ ಹಾಗು ಅಕ್ಷರ ಮಿಶ್ರಿತ ಪಾಸ್ವರ್ಡ್ ಕೊಟ್ಟರೆ ನಿಮ್ಮ ಅಕೌಂಟ್ ಸುರಕ್ಷಿತವಾಗಿಡಬಹುದು.

ಆನ್‌ಲೈನ್‌ ಶಾಪಿಂಗ್‌ ಟಿಪ್ಸ್‌

ಆನ್‌ಲೈನ್‌ ಶಾಪಿಂಗ್‌ ಟಿಪ್ಸ್‌

ಆನ್‌ಲೈನ್‌ ಶಾಪಿಂಗ್ ವೆಬ್‌ಸೈಟ್‌ ಅಥವಾ ಹಣಕಾಸಿನ ವ್ಯವಹಾರದ ಸಂದರ್ಭದಲ್ಲಿ ಭೇಟಿ ನೀಡುವ ತಾಣದ ಬ್ರೌಸರ್‌ ಪರದೆಯನ್ನು ನೋಡಿ.'https:/ 'ಎಂದು ಆರಂಭವಾಗಿದೆಯೋ ನೋಡಿ.ಜೊತೆಗೆ ಈ ಬ್ರೌಸರ್ ಪರದೆಯ ಹತ್ತಿರವೆ ಪುಟಾಣಿ ಬೀಗದ ಚಿತ್ರ SSL ( secure socket locker) ಇದೆಯೋ ಎಂಬುದನ್ನು ಎಂದು ಪರೀಕ್ಷಿಸಿ.ನೀವು ಭೇಟಿ ನೀಡಿರುವ ತಾಣದಲ್ಲಿ ಇವೆರಡೂ ಇದ್ದರೆ ಮಾತ್ರ ಶಾಪಿಂಗ್‌ ನಡೆಸಿ.

ಆನ್‌ಲೈನ್‌ ಶಾಪಿಂಗ್‌ ಟಿಪ್ಸ್‌

ಆನ್‌ಲೈನ್‌ ಶಾಪಿಂಗ್‌ ಟಿಪ್ಸ್‌

ಯಾವುದೇ ಆನ್‌ಲೈನ್‌ ಶಾಪಿಂಗ್ ನಿಮ್ಮ ಸೆಕ್ಯೂರಿಟಿ ಕೋಡ್ ಮಾಹಿತಿ ಅಥವಾ ಖಾಸಗಿ ಮಾಹಿತಿ ಕೇಳುವುದಿಲ್ಲ. ಹಾಗಾಗಿ ಈ ವಿಚಾರದಲ್ಲಿ ಎಚ್ಚರ ವಹಿಸಿ.

ಆನ್‌ಲೈನ್‌ ಶಾಪಿಂಗ್‌ ಟಿಪ್ಸ್‌

ಆನ್‌ಲೈನ್‌ ಶಾಪಿಂಗ್‌ ಟಿಪ್ಸ್‌

ಕ್ರೆಡಿಟ್ ಕಾರ್ಡ್ ನ ವ್ಯವಹಾರದ ಬಗ್ಗೆ ಒಂದು ಪುಸ್ತಕದಲ್ಲಿ ಬರೆದಿಟ್ಟುಕೊಳ್ಳಿ. ಇಲ್ಲವೆ ನಿಮ್ಮ ಮೊಬೈಲ್ ಗೆ ಬರುವ ವ್ಯವಹಾರದ ಎಸ್.ಎಂ.ಎಸ್ ಆಗಾಗ ಗಮನಿಸುತ್ತಿರಿ.ಯಾವುದೇ ರೀತಿಯ ಸಂಶಯ ಬಂದಲ್ಲಿ ನೀವು ನಿಮ್ಮ ಬ್ಯಾಂಕ್ ಅನ್ನ ಸಂಪರ್ಕಿಸಬಹುದು.

ಆನ್‌ಲೈನ್‌ ಶಾಪಿಂಗ್‌ ಟಿಪ್ಸ್‌

ಆನ್‌ಲೈನ್‌ ಶಾಪಿಂಗ್‌ ಟಿಪ್ಸ್‌

ಎಲ್ಲಾ ವೆಬ್‌ಸೈಟ್‌ಗಳು ವಸ್ತುಗಳು ಎಷ್ಟು ದಿನಗಳ ಒಳಗೆ ನಿಮ್ಮ ಕೈ ಸೇರುತ್ತದೆ ಮತ್ತು ಎಷ್ಟು ಗಂಟೆಯೊಳಗೆ ತಲುಪುತ್ತದೆ ಎಂಬುದನ್ನು ಶಾಪಿಂಗ್‌ ಮಾಡುವಾಗಲೇ ತಿಳಿಸಿರುತ್ತದೆ. ಈ ದಿನಾಂಕವನ್ನು ನೋಡಿಕೊಂಡು ನೀವು ಶಾಪಿಂಗ್‌ ಮಾಡಿ.

ಆನ್‌ಲೈನ್‌ ಶಾಪಿಂಗ್‌ ಟಿಪ್ಸ್‌

ಆನ್‌ಲೈನ್‌ ಶಾಪಿಂಗ್‌ ಟಿಪ್ಸ್‌

ವಿಳಾಸ ನೀಡುವ ವಿಚಾರದಲ್ಲಿ ಬಹಳಷ್ಟು ಮಂದಿ ಎಡವುತ್ತಿದ್ದಾರೆ. ಮನೆಯ ವಿಳಾಸ ನೀಡಿದರೇ ಮನೆಯಲ್ಲೇ ವಸ್ತುವನ್ನು ಪಡೆದುಕೊಳ್ಳಿ. ಆನ್‌ಲೈನ್‌ಲ್ಲಿ ಮಾಹಿತಿ ನೀಡಿದ ಬಳಿಕ, ಡೆಲಿವರಿ ಬಾಯ್‌ ಮತ್ತೊಮ್ಮೆ ವಿಳಾಸ ತಿಳಿಸಿ ಎಂದು ನಿಮಗೆ ಕರೆ ಮಾಡದ ರೀತಿಯಲ್ಲಿ ವಿಳಾಸವನ್ನು ನೀಡಿ.

ಆನ್‌ಲೈನ್‌ ಶಾಪಿಂಗ್‌ ಟಿಪ್ಸ್‌

ಆನ್‌ಲೈನ್‌ ಶಾಪಿಂಗ್‌ ಟಿಪ್ಸ್‌

ಯವಾಗಲೂ ಆನ್‌ಲೈನ್‌ ಶಾಪಿಂಗ್‌ ಮಾಡಿದ ಬಳಿಕ ಖಾತೆ ಕ್ಲೋಸ್‌ ಮಾಡುವಾಗ ಲಾಗ್‌ಔಟ್‌ ಮಾಡುವುದನ್ನು ಮಾತ್ರ ಮರೆಯಬೇಡಿ. ಅದರಲ್ಲಿಯೂ ಪಬ್ಲಿಕ್‌ ಕಂಪ್ಯೂಟರ್‌ ಹಾಗೂ ಬೇರೆಯವರ ಲ್ಯಾಪ್‌ಟಾಪ್‌ನಲ್ಲಿ ನಿಮ್ಮ ಖಾತೆ ತೆರೆದಿದ್ದಲ್ಲಿ ಮರೆಯದೇ ಲಾಗ್‌ಔಟ್‌ ಮಾಡಿ. ಇದರಿಂದಾಗಿ ಹ್ಯಾಕರ್‌ಗಳು ನಿಮ್ಮ ಖಾತೆಯನ್ನು ಅಷ್ಟು ಸುಲಭವಾಗಿ ಹ್ಯಾಕ್‌ ಮಾಡಲು ಸಾಧ್ಯವಿಲ್ಲ.

ಆನ್‌ಲೈನ್‌ ಶಾಪಿಂಗ್‌ ಟಿಪ್ಸ್‌

ಆನ್‌ಲೈನ್‌ ಶಾಪಿಂಗ್‌ ಟಿಪ್ಸ್‌

ಕೆಲವೊಂದು ವೈರಸ್‌ಗಳು ನೇರವಾಗಿ ನಮ್ಮ್ ಕಂಪ್ಯೂಟರ್‌ನ ಮೆಮೋರಿಯಲ್ಲಿ ಸೇವ್‌ ಆಗಿಬಿಡುತ್ತವೆ ನಂತರ ನಾವೂ ಯಾವುದೇ ಖಾತೆಯನ್ನು ತೆರೆದಲ್ಲಿ ಆ ಖಾತೆಯಲ್ಲಿನ ಮಾಹಿತಿಗಳನ್ನು ವೈರಸ್‌ ಹ್ಯಾಕ್‌ ಮಾಡಿಬಿಡುತ್ತದೆ. ಆದ್ದರಿಂದ ಮೊದಲಿಗೆ ನಿಮ್ಮ ಪಿಸಿಯನ್ನು ವೈರಸ್‌ನಿಂದ ಕಾಪಾಡಲು ಫೈರ್‌ವಾಲ್‌ ಪ್ರೊಟೆಕ್ಟರ್‌ ಆಕ್ಟೀವ್‌ ಮಾಡಿಕೊಳ್ಳಿ ಹಾಗೂ ಉತ್ತಮವಾದ ಆಂಟಿವೈರಸ್‌ ಇನ್‌ಸ್ಟಾಲ್‌ ಮಾಡಿಕೊಳ್ಳಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X