Home
ಟೆಕ್ ನೌಕರಿ

ಗೂಗಲ್‌ ಪೇ ಮತ್ತು ಫೋನ್‌ಪೇ UPI ಪಿನ್‌ ಬದಲಿಸುವುದು ಹೇಗೆ?

ಪ್ರಸ್ತುತ ದಿನಗಳಲ್ಲಿ ಡಿಜಿಟಲ್‌ ಪೇಮೆಂಟ್‌ ಸೇವೆ ಭಾರತದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ. ನೀವು ಎಲ್ಲಿಯೇ ಇದ್ದರೂ ನಿಮ್ಮವರಿಗೆ ಹಣದ ಅವಶ್ಯಕತೆ ಇದ್ದಾಗ ಮೊಬೈಲ್‌ನಿಂದಲೇ ಹಣವನ್ನು ಪಾವತಿಸಲು ಈ UPI ಸೇವೆಗಳು ಸಾಕಷ್ಟು ಉಪಯುಕ್ತವಾಗಿವೆ. ಆನ್‌ಲೈನ್ ಬಿಲ್‌ಗಳನ್ನು ಪಾವತಿಸುವುದು, ವಸತಿ ಮತ್ತು ರೈಲು, ವಿಮಾನ ಟಿಕೆಟ್‌ಗಳನ್ನು ಕಾಯ್ದಿರಿಸುವುದು ಎಲ್ಲವೂ UPI ಆಪ್‌ಗಳಿಂದ ಸಾಧ್ಯವಾಗಿದೆ. UPI ಆಪ್‌ಗಳ ಪೈಕಿ ಗೂಗಲ್‌ ಪೇ, ಫೋನ್‌ ಪೇ ಮತ್ತು ಪೇಟಿಎಂ ಭಾರತದಲ್ಲಿ ಅತಿ ಹೆಚ್ಚು ಬಳಸುವ ಯುಪಿಐ ಅಪ್ಲಿಕೇಶ್‌ನಗಳಲ್ಲಿ ಒಂದಾಗಿವೆ.

ಗೂಗಲ್‌ ಪೇ ಮತ್ತು ಫೋನ್‌ಪೇ UPI ಪಿನ್‌ ಬದಲಿಸುವುದು ಹೇಗೆ?

ಹೌದು, ಡಿಜಿಟಲ್‌ ಪೇಮೆಂಟ್‌ ಸೇವೆ ಸಾಕಷ್ಟು ಜನಪ್ರಿಯತೆಯನ್ನ ಹೊಂದಿದ್ದು, ಭಾರತದಲ್ಲಿ ಗೂಗಲ್‌ ಪೇ, ಫೋನ್‌ ಪೇ, ಪೇಟಿಎಂ ಆಪ್‌, ವಾಟ್ಸಾಪ್‌ಪೇ ಗಳು ಜನರಿಗೆ ಡಿಜಿಟಲ್‌ ಪೇಮೆಂಟ್‌ ಮಾಡುವುದಕ್ಕೆ ವೇದಿಕೆ ಆಗಿವೆ. ಆ ಪೈಕಿ ಗೂಗಲ್ ಪೇ ಮತ್ತು ಫೋನ್‌ಪೇ ಅಪ್ಲಿಕೇಶನ್‌ ಸಾಕಷ್ಟು ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡಿವೆ. ಈ ಆಪ್‌ಗಳಲ್ಲಿ ಹಣ ವರ್ಗಾವಣೆ ಸುರಕ್ಷತೆಗಾಗಿ ಬಳಕೆದಾರರು ಯುಪಿಐ ಪಿನ್ ಬದಲಿಸಬಹುದು. ಹಾಗಾದರೇ ಗೂಗಲ್ ಪೇ ಮತ್ತು ಫೋನ್‌ಪೇ ಆಪ್‌ಗಳಲ್ಲಿ ಯುಪಿಐ ಪಿನ್ ಬದಲಿಸುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಗೂಗಲ್‌ ಪೇ ಮತ್ತು ಫೋನ್‌ಪೇ UPI ಪಿನ್‌ ಬದಲಿಸುವುದು ಹೇಗೆ?

ಗೂಗಲ್ ಪೇನಲ್ಲಿ UPI ಪಿನ್ ಬದಲಾಯಿಸಲು ಹೀಗೆ ಮಾಡಿ:
ಹಂತ:1 ಗೂಗಲ್ ಪೇ ಅಪ್ಲಿಕೇಶನ್ ತೆರೆಯಿರಿ ಮತ್ತು ಅಪ್ಲಿಕೇಶನ್‌ನ ಮೇಲಿನ ಬಲ ಮೂಲೆಯಲ್ಲಿ ಇರುವ ನಿಮ್ಮ ಪ್ರೊಫೈಲ್ ಫೋಟೋ ಕ್ಲಿಕ್ ಮಾಡಿ.
ಹಂತ:2 ಈಗ 'Bank Account' ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ನೀವು ಬದಲಾಯಿಸಲು ಬಯಸುವ ಯುಪಿಐ ಬ್ಯಾಂಕ್ ಅನ್ನು ಆಯ್ಕೆ ಮಾಡಿ.
ಹಂತ:3 ನೀವು ಎಡಿಟ್‌ ಮಾಡಲು ಬಯಸುವ ಬ್ಯಾಂಕ್ ಅನ್ನು ನೀವು ಆಯ್ಕೆ ಮಾಡಿದ ನಂತರ, ನಿಮಗೆ 'Forgot UPI PIN' ಆಯ್ಕೆಯನ್ನು ಪಡೆಯಲಾಗುತ್ತದೆ.
ಹಂತ:4 ನಂತರ Forgot UPI PIN ಆಯ್ಕೆಯನ್ನು ಕ್ಲಿಕ್ ಮಾಡಿ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಒಟಿಪಿ ಆಗಿ ಕಳುಹಿಸಲಾಗುತ್ತದೆ. ನಂತರ ನಿಮಗೆ ಬಂದಿರುವ ಒಟಿಪಿಯನ್ನು ನೊಂದಾಯಿಸುವ ಮೂಲಕ ಗೂಗಲ್‌ ಪೇ ನಲ್ಲಿ ಯುಪಿಐ ಅನ್ನು ಬದಲಾಯಿಸಬಹುದಾಗಿದೆ.

ಗೂಗಲ್‌ ಪೇ ಮತ್ತು ಫೋನ್‌ಪೇ UPI ಪಿನ್‌ ಬದಲಿಸುವುದು ಹೇಗೆ?

ಫೋನ್‌ಪೇಯಲ್ಲಿ UPI ಪಿನ್ ಬದಲಾಯಿಸಲು ಹೀಗೆ ಮಾಡಿ:
ಹಂತ 1: ಮೊದಲು, ನೀವು ಪೋನ್‌ಪೇ ಡಿಸ್‌ಪ್ಲೇ ಮೇಲೆ ಬಲ ಮೂಲೆಯಲ್ಲಿ ಇರುವ ಮೆನುವನ್ನು ತೆರೆಯಬೇಕು.
ಹಂತ 2: ನೀವು ಬ್ಯಾಂಕ್‌ ಅಕೌಂಟ್‌ ವಿಭಾಗದ ಮೇಲೆ ಕ್ಲಿಕ್ ಮಾಡಬೇಕು, ನಂತರ ನೀವು ವ್ಯಾಲೆಟ್‌ ಜೊತೆಗೆ ಕನೆಕ್ಟ್‌ ಆಗಿರುವ ಬ್ಯಾಂಕ್‌ ಖಾತೆಗಳನ್ನು ಕಾಣಬಹುದು.
ಹಂತ 3: ಅದರ ನಂತರ, ನೀವು ಪಿನ್ ಬದಲಾಯಿಸಲು ಬಯಸುವ ಬ್ಯಾಂಕ್ ಖಾತೆಯನ್ನು ನೀವು ಆರಿಸಬೇಕಾಗುತ್ತದೆ.

ಹಂತ 4: ನಂತರ, ಪಾಸ್‌ವರ್ಡ್ ಬದಲಾಯಿಸಲು ಅಪ್ಲಿಕೇಶನ್ ನಿಮಗೆ ಅನುಮತಿಸುತ್ತದೆ, ಅಲ್ಲದೆ ಅಲ್ಲಿ ರಿಸೆಟ್‌ ಬಟನ್‌ ಕಂಡುಬರಲಿದೆ.
ಹಂತ 5: ನಂತರ, ನೀವು ರಿಸೆಟ್‌ ಬಟನ್‌ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ಗಳ ಕೊನೆಯ ಅಂಕಿಗಳನ್ನು ನಮೂದಿಸಬೇಕು. ಜೊತೆಎ ವ್ಯಾಲಿಡಿಟಿ ಡೇಟ್ ಅನ್ನು ಸಹ ನಮೂದಿಸಬೇಕು.
ಹಂತ 6: ಇದೀಗ ನಿಮ್ಮ ಬ್ಯಾಂಕಿನಿಂದ ನಿಮ್ಮ ಫೋನ್‌ ನಂಬರ್‌ಗೆ OTP ನಂಬರ್‌ ಬರಲಿದೆ ನಂತರ ನೀವು ಹೊಸ ಪಿನ್ ಜೊತೆಗೆ ಒಟಿಪಿಯನ್ನು ನಮೂದಿಸಬೇಕು.
ಹೀಗೆ ಹಂತಹಂತವಾಗಿ ಮಾಹಿತಿಯನ್ನು ಅನುಸರಿಸುವ ಮೂಲಕ ನಿಮ್ಮ ಫೋನ್‌ಪೇ ಯುಪಿಐ ಪಿನ್‌ ಅನ್ನು ನೀವು ಯಶಸ್ವಿಯಾಗಿ ಬದಲಾಯಿಸಬಹುದಾಗಿದೆ.

Best Mobiles in India

English summary
How To Change PhonePe and Google Pay UPI Pin.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+