ಸ್ನ್ಯಾಪ್‌ಚಾಟ್‌ನಲ್ಲಿ username ಬದಲಾಯಿಸುವುದು ಹೇಗೆ ಗೊತ್ತಾ?

|

ಜನಪ್ರಿಯ ಸಾಮಾಜಿಕ ಜಾಲತಾಣ ಪ್ಲಾಟ್‌ಫಾರ್ಮ್‌ ಗಳ ಪೈಕಿ ಸ್ನ್ಯಾಪ್‌ಚಾಟ್‌ (Snapchat) ಸಹ ಒಂದಾಗಿದೆ. ಹಲವು ಆಕರ್ಷಕ ಫೀಚರ್ಸ್‌ಗಳ ಆಯ್ಕೆಯನ್ನು ಹೊಂದಿದ್ದು, ಗ್ರಾಹಕರ ಗಮನ ಸೆಳೆದಿದೆ. ಹಾಗೆಯೇ ಸ್ನ್ಯಾಪ್‌ಚಾಟ್‌ ಬಳಕೆದಾರರಿಗೆ ಯೂಸರ್ ನೇಮ್ (Snapchat username) ಬದಲಾಯಿಸಲು ಸಹ ಅವಕಾಶ ನೀಡುತ್ತದೆ. ಆದರೆ ಈ ಮೊದಲು ಬಳಕೆದಾರರು ಅವರ ಸ್ನ್ಯಾಪ್‌ಚಾಟ್ ಡಿಸ್‌ಪ್ಲೇ ಹೆಸರನ್ನು ಮಾತ್ರ ಬದಲಾಯಿಸಬಹುದಿತ್ತು.

ಸ್ನ್ಯಾಪ್‌ಚಾಟ್‌ನಲ್ಲಿ username ಬದಲಾಯಿಸುವುದು ಹೇಗೆ ಗೊತ್ತಾ?

ಹೌದು, ಬಳಕೆದಾರರು ಸ್ನ್ಯಾಪ್‌ಚಾಟ್‌ ಖಾತೆಯಲ್ಲಿ ಇದೀಗ ಖಾತೆಯಲ್ಲಿ ಡಿಲೀಟ್ ಮಾಡದೆ ಸುಲಭವಾಗಿ ಬಳಕೆದಾರ ಹೆಸರನ್ನು (username) ಬದಲಾಯಿಸಬಹುದಾಗಿದೆ. ಇತ್ತೀಚಿಗೆ ಸ್ನ್ಯಾಪ್‌ಚಾಟ್‌ ಸಂಸ್ಥೆಯು ಐಓಎಸ್‌ ಮತ್ತು ಆಂಡ್ರಾಯ್ಡ್‌ ಆವೃತ್ತಿಯ ಎಲ್ಲ ಬಳಕೆದಾರರಿಗೆ ಬಳಕೆದಾರ ಹೆಸರುಗಳನ್ನು ಬದಲಾಯಿಸಲು ಸಾಧ್ಯವಾಗಿಸಿದೆ. ಹೀಗಾಗಿ ಕೆಲವು ಸೂಕ್ತ ಕ್ರಮಗಳನ್ನು ಅನುಸರಿಸುವ ಮೂಲಕ ಸ್ನ್ಯಾಪ್‌ಚಾಟ್‌ ಬಳಕೆದಾರ ಹೆಸರನ್ನು ಬದಲಾಯಿಸಬಹುದು. ಹಾಗಾದರೇ ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಮುಂದೆ ಓದಿರಿ.

ಸ್ನ್ಯಾಪ್‌ಚಾಟ್‌ನಲ್ಲಿ username ಬದಲಾಯಿಸುವುದು ಹೇಗೆ ಗೊತ್ತಾ?

ಬಳಕೆದಾರರ ಹೆಸರನ್ನು ಬದಲಾಯಿಸುವ ಮುನ್ನ ಈ ಸಂಗತಿ ತಿಳಿಯಿರಿ
ವರ್ಷಕ್ಕೊಮ್ಮೆ ಮಾತ್ರ ನಿಮ್ಮ ಸ್ನ್ಯಾಪ್‌ಚಾಟ್‌ ಖಾತೆಯ ಬಳಕೆದಾರ ಹೆಸರನ್ನು (username) ಬದಲಾಯಿಸಬಹುದು. ಹೀಗಾಗಿ ನೀವು ಆಯ್ಕೆ ಮಾಡುವ ಬಳಕೆದಾರರ ಹೆಸರಿನ ಬಗ್ಗೆ ಕಾಳಜಿ ಯೋಚಿಸಿ. ಅಲ್ಲದೇ ಒಮ್ಮೆ ನೀವು ನಿಮ್ಮ ಸ್ನ್ಯಾಪ್‌ಚಾಟ್‌ ಬಳಕೆದಾರ ಹೆಸರನ್ನು ಬದಲಾಯಿಸಿದರೆ, ನಿಮ್ಮ ಹಳೆಯದನ್ನು ಮತ್ತೆ ಬಳಸಲು ನಿಮಗೆ ಸಾಧ್ಯವಾಗದೇ ಇರಬಹುದು. ಹಾಗೆಯೇ ಈ ಹಿಂದೆ ಮತ್ತೊಬ್ಬ ಸ್ನ್ಯಾಪ್‌ಚಾಟ್‌ ಬಳಕೆದಾರರು ಬಳಸಿದ ಬಳಕೆದಾರ ಹೆಸರನ್ನು ಆಯ್ಕೆ ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ. ಇನ್ನು ಬಳಕೆದಾರ ಹೆಸರನ್ನು ಬದಲಾಯಿಸುವುದರಿಂದ ನಿಮ್ಮ ಕಾಂಟ್ಯಾಕ್ಟ್‌, ಸ್ನ್ಯಾಪ್ ಕೋಡ್, ಸ್ನ್ಯಾಪ್ ಸ್ಕೋರ್ ಸೇರಿದಂತೆ ನಿಮ್ಮ ಸ್ನ್ಯಾಪ್‌ಚಾಟ್‌ ಖಾತೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಸ್ನ್ಯಾಪ್‌ಚಾಟ್‌ನಲ್ಲಿ ಬಳಕೆದಾರರ ಹೆಸರು ಬದಲಾಯಿಸಲು ಈ ಕ್ರಮ ಅನುಸರಿಸಿ:

ಹಂತ 1. ಸ್ನ್ಯಾಪ್‌ಚಾಟ್‌ ಆಪ್ ತೆರೆಯಿರಿ ಮತ್ತು ನಿಮ್ಮ ಪ್ರೊಫೈಲ್ ತೆರೆಯಲು ಮೇಲಿನ ಎಡ ಮೂಲೆಯಲ್ಲಿರುವ ನಿಮ್ಮ Bitmoji (ಅಥವಾ ಪ್ರೊಫೈಲ್) ಐಕಾನ್ ಅನ್ನು ಟ್ಯಾಪ್ ಮಾಡಿ. ಪ್ರೊಫೈಲ್ ಪುಟವು ಕಾಣಿಸಿಕೊಂಡಾಗ, ಮೇಲಿನ ಬಲ ಭಾಗದ ಮೂಲೆಯಲ್ಲಿರುವ ಸೆಟ್ಟಿಂಗ್‌ಗಳ ಗೇರ್ ಐಕಾನ್ ಅನ್ನು ಟ್ಯಾಪ್ ಮಾಡಿ.

ಹಂತ 2. ಮುಂದೆ, 'ನನ್ನ ಖಾತೆ' ವಿಭಾಗದ ಅಡಿಯಲ್ಲಿ 'ಬಳಕೆದಾರ ಹೆಸರು' (username) ಮೇಲೆ ಟ್ಯಾಪ್ ಮಾಡಿ. ನಂತರ ನಿಮ್ಮ ಪ್ರಸ್ತುತ ಸ್ನ್ಯಾಪ್‌ಚಾಟ್‌ ಬಳಕೆದಾರ ಹೆಸರನ್ನು ಬದಲಾಯಿಸಲು 'ಬಳಕೆದಾರ ಹೆಸರನ್ನು ಬದಲಾಯಿಸಿ' ಮೇಲೆ ಟ್ಯಾಪ್ ಮಾಡಿ.

ಸ್ನ್ಯಾಪ್‌ಚಾಟ್‌ನಲ್ಲಿ username ಬದಲಾಯಿಸುವುದು ಹೇಗೆ ಗೊತ್ತಾ?

ಹಂತ 3. ನಿಮ್ಮ ಬಳಕೆದಾರ ಹೆಸರನ್ನು ವರ್ಷಕ್ಕೊಮ್ಮೆ ಮಾತ್ರ ಬದಲಾಯಿಸಬಹುದು ಎಂದು ಸ್ನ್ಯಾಪ್‌ಚಾಟ್‌ ಈಗ ನಿಮಗೆ ಎಚ್ಚರಿಕೆ ನೀಡುತ್ತದೆ. ಒಪ್ಪಿಗೆ ಸೂಚಿಸಲು 'ಮುಂದುವರಿಸಿ' ಟ್ಯಾಪ್ ಮಾಡಿ, 'ಬಳಕೆದಾರ ಹೆಸರು' ಟೆಕ್ಸ್ಟ್ ಬಾಕ್ಸ್‌ ನಲ್ಲಿ ನಿಮ್ಮ ಹೊಸ ಬಳಕೆದಾರ ಹೆಸರನ್ನು ಟೈಪ್ ಮಾಡಿ ಮತ್ತು 'ಮುಂದೆ' ಬಟನ್ ಒತ್ತಿರಿ.

ಹಂತ 4. ನಂತರ ನೀವು ನಿಮ್ಮ ಪಾಸ್ವರ್ಡ್ ಅನ್ನು ನಮೂದಿಸಬೇಕು ಮತ್ತು 'ದೃಢೀಕರಿಸಿ' ಬಟನ್ ಅನ್ನು ಒತ್ತಿರಿ. ದೃಢೀಕರಣ ಪ್ರಾಂಪ್ಟ್ ಕಾಣಿಸಿಕೊಂಡಾಗ, ಬದಲಾವಣೆಗಳನ್ನು ದೃಢೀಕರಿಸಲು 'ಮುಂದುವರಿಸಿ' ಒತ್ತಿರಿ.

ಹಂತ 5. ಸ್ನ್ಯಾಪ್‌ಚಾಟ್ ಬಳಕೆದಾರ ಹೆಸರನ್ನು ನೀವು ಯಶಸ್ವಿಯಾಗಿ ಬದಲಾಯಿಸಿರುವಿರಿ ಎಂಬುದನ್ನು ದೃಢೀಕರಿಸುವ ಪಾಪ್ ಅಪ್ ಅನ್ನು ಸ್ನ್ಯಾಪ್‌ಚಾಟ್ ನಿಮಗೆ ತೋರಿಸುತ್ತದೆ. ಮೊದಲೇ ಹೇಳಿದಂತೆ, ನಿಮ್ಮ ಬಳಕೆದಾರ ಹೆಸರನ್ನು ಮತ್ತೆ ಬದಲಾಯಿಸಲು ನೀವು ಒಂದು ವರ್ಷ ಕಾಯಬೇಕಾಗುತ್ತದೆ.

Best Mobiles in India

English summary
How to Change Your Snapchat Username: Follow These Steps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X