ಸ್ಮಾರ್ಟ್‌ಟಿವಿಯಲ್ಲಿ YouTube ನೋಡುವಾಗ ಹೀಗೆ ಮಾಡಿ, ವಿಡಿಯೋ ಕ್ವಾಲಿಟಿ ಹೆಚ್ಚಿಸಿ!

|

ಪ್ರಸ್ತುತ ಸ್ಮಾರ್ಟ್‌ಫೋನ್‌ಗಳಂತೆ ಸ್ಮಾರ್ಟ್‌ಟಿವಿಗಳು ಸಾಮಾನ್ಯವಾಗಿವೆ. ಫೋನ್‌ಗಳಲ್ಲಿ ಇರುವಂತೆ ಸ್ಮಾರ್ಟ್‌ ಟಿವಿಗಳಲ್ಲಿ ವಿವಿಧ ಆಪ್‌ಗಳ ಬಳಕೆ ಮಾಡಬಹುದಾಗಿದೆ. ಜೊತೆಗೆ ಓಟಿಟಿ ಪ್ಲಾಟ್‌ಫಾರ್ಮ್ ವೀಕ್ಷಣೆ ಸಹ ಹೆಚ್ಚು ಜನಪ್ರಿಯತೆ ಪಡೆಯುತ್ತಿದೆ. ಹಾಗೆಯೇ ಸ್ಮಾರ್ಟ್‌ಟಿವಿಗಳಲ್ಲಿ ಜನಪ್ರಿಯ ವಿಡಿಯೋ ಸ್ಟ್ರೀಮಿಂಗ್ ತಾಣ ಎನಿಸಿರುವ ಯೂಟ್ಯೂಬ್‌ (YouTube) ವೀಕ್ಷಣೆ ಸಹ ಅಧಿಕ ಡಿಮ್ಯಾಂಡ್‌ನಲ್ಲಿದೆ. ಆದರೆ ಬಹುತೇಕ ಎಲ್ಲರೂ ಸ್ಮಾರ್ಟ್‌ಟಿವಿಗಳಲ್ಲಿ ವಿಡಿಯೋ ವೀಕ್ಷಿಸುವಾಗ ಅಧಿಕ ಗುಣಮಟ್ಟ ನಿರೀಕ್ಷಿಸುತ್ತಾರೆ.

ಗುಣಮಟ್ಟ

ಹೌದು, ಸ್ಮಾರ್ಟ್‌ಟಿವಿಗಳ ಸ್ಕ್ರೀನ್‌ನಲ್ಲಿ ಯೂಟ್ಯೂಬ್‌ (YouTube) ವಿಡಿಯೋ ನೋಡುವಾಗ ವಿಡಿಯೋಗಳ ಕ್ವಾಲಿಟಿ/ ಗುಣಮಟ್ಟ ಉತ್ತಮವಾಗಿದ್ದರೆ, ಅಧಿಕ ಪರಿಣಾಮಕಾರಿ ಎನಿಸುತ್ತದೆ. ಆದರೆ ವೀಕ್ಷಕರು ವಿಡಿಯೋ ಕ್ವಾಲಿಟಿ ಬದಲಾಯಿಸಿಕೊಂಡು ವೀಕ್ಷಣೆ ಮಾಡಬಹುದಾಗಿದೆ. ಅದಕ್ಕಾಗಿ ಕೆಲವೊಂದು ಕ್ರಮಗಳನ್ನು ಅನುಸರಿಸಬೇಕಿದೆ. ಹಾಗಾದರೆ ಸ್ಮಾರ್ಟ್‌ಟಿವಿಗಳಲ್ಲಿ ಯೂಟ್ಯೂಬ್‌ (YouTube) ವಿಡಿಯೋಗಳ ಕ್ವಾಲಿಟಿ ಬದಲಾಯಿಸುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.

ವಿಡಿಯೋ ಗುಣಮಟ್ಟ ಬದಲಾಯಿಸುವ ಆಯ್ಕೆ

ವಿಡಿಯೋ ಗುಣಮಟ್ಟ ಬದಲಾಯಿಸುವ ಆಯ್ಕೆ

ಈ ಮೊದಲು ಯೂಟ್ಯೂಬ್‌ ಸ್ಮಾರ್ಟ್‌ಟಿವಿಗಳಲ್ಲಿ ವಿಡಿಯೋ ಗುಣಮಟ್ಟವನ್ನು ಬದಲಾಯಿಸಲು ಅವಕಾಶ ನೀಡಿರಲಿಲ್ಲ. ಆದರೆ ಕಳೆದ ತಿಂಗಳ ಅಂತ್ಯದಲ್ಲಿ ಅಪ್‌ಡೇಟ್‌ ಮಾಡಿದ್ದು, ಹೀಗಾಗಿ ಸ್ಮಾರ್ಟ್ ಟಿವಿಗಳಲ್ಲಿ ವಿಡಿಯೋ ಗುಣಮಟ್ಟವನ್ನು ಬದಲಾಯಿಸಲು ಯೂಟ್ಯೂಬ್ - YouTube ಅನುಮತಿಸಲಿದೆ. ಈ ಸೌಲಭ್ಯವು ಸರಿಯಾದ ಇಂಟರ್ನೆಟ್ ಸಂಪರ್ಕವನ್ನು ಇಲ್ಲದಿರುವಾಗ ಹಾಗೂ ಇತರೆ ಕೆಲವು ಸಂದರ್ಭಗಳಲ್ಲಿ ವೀಕ್ಷಕರಿಗೆ ನೆರವಾಗಲಿದೆ.

ಈ ಹಂತಗಳನ್ನು ಅನುಸರಿಸಿ:

ಈ ಹಂತಗಳನ್ನು ಅನುಸರಿಸಿ:

ಹಂತ 1: ನಿಮ್ಮ ಸ್ಮಾರ್ಟ್ ಟಿವಿಯಲ್ಲಿ YouTube - ಯೂಟ್ಯೂಬ್ ಅಪ್ಲಿಕೇಶನ್ ಅನ್ನು ತೆರೆಯಿರಿ
ಹಂತ 2: ನಂತರ ನಿಮಗೆ ಬೇಕಾದ ಯಾವುದೇ ವೀಡಿಯೊವನ್ನು ಪ್ಲೇ ಮಾಡಿ.
ಹಂತ 3: ಸ್ಕ್ರೀನ್‌ ಮೇಲೆ ವೀಡಿಯೊ ಪ್ಲೇಬ್ಯಾಕ್ ನಿಯಂತ್ರಣಗಳನ್ನು ತರಲು ರಿಮೋಟ್ ಕಂಟ್ರೋಲ್ ಅನ್ನು ಬಳಸಿ ಮತ್ತು ಇನ್ನಷ್ಟು ಆಯ್ಕೆಗಳನ್ನು ಕ್ಲಿಕ್ ಮಾಡಿ.
ಹಂತ 4: ನಂತರ ಅಲ್ಲಿ ಕಾಣುವ ಆಯ್ಕೆಗಳಲ್ಲಿ, ನಿಮಗೆ ಅಗತ್ಯ ಎನಿಸುವ ವೀಡಿಯೊ ಗುಣಮಟ್ಟದ ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ 5: ಪಾಪ್-ಅಪ್ ಮೆನುವಿನಿಂದ, ನೀವು ವೀಡಿಯೊಗಾಗಿ ಹೊಂದಿಸಲು ಬಯಸುವ ವೀಡಿಯೊ ಗುಣಮಟ್ಟವನ್ನು ಆಯ್ಕೆಮಾಡಿ.

ಯೂಟ್ಯೂಬ್‌ನ ಈ ಫೀಚರ್ಸ್‌ ಬಳಕೆ ಮಾಡಿದ್ದಿರಾ?

ಯೂಟ್ಯೂಬ್‌ನ ಈ ಫೀಚರ್ಸ್‌ ಬಳಕೆ ಮಾಡಿದ್ದಿರಾ?

Incognito ಮೋಡ್
ಯೂಟ್ಯೂಬ್‌ನಲ್ಲಿ (YouTube) ಕೀ ವರ್ಡ್ ಎಂಟ್ರಿ ಮಾಡಿ ಸರ್ಚ್ ಮಾಡುವಾಗ ಎಂಟ್ರಿ ಮಾಡಿರುವ ಕೀ ವರ್ಡ್ / ಹುಡುಕಾಡಿದ ಪದಗಳು ಮತ್ತೆ ಕಾಣಿಸಬಾರದು ಎಂದು ನೀವು ಬಯಸದಿದ್ದರೆ ಅದಕ್ಕೆ ಈ ಆಯ್ಕೆ ಪೂರಕವಾಗಿದೆ. ಈ ಆಯ್ಕೆ ಬಳಸಿ ಗೌಪ್ಯ ಸರ್ಚ್ ಮಾಡಬಹುದಾಗಿದೆ. ಪ್ರೊಫೈಲ್ ಫೋಟೊ ಕ್ಲಿಕ್ ಮಾಡಿ ಅಲ್ಲಿ ಕಾಣಿಸುವ ಆಯ್ಕೆಗಳಲ್ಲಿ incognito mode ಆಯ್ಕೆ ಮಾಡಿಕೊಳ್ಳಿರಿ.

ಡಬಲ್-ಟ್ಯಾಪ್ ಟೈಮರ್

ಡಬಲ್-ಟ್ಯಾಪ್ ಟೈಮರ್

ಯೂಟ್ಯೂಬ್‌ನಲ್ಲಿ ವಿಡಿಯೊ ವೀಕ್ಷಿಸುವಾಗ ವಿಡಿಯೊ ಫಾರ್ವರ್ಡ್ ಮಾಡಲು/ ಮುಂದಕ್ಕೆ ಹೋಗಲು ಈ ಆಯ್ಕೆ ಬಳಕೆ ಮಾಡಬಹುದಾಗಿದೆ. ಬಳಕೆದಾರರು 10 ಸೆಕೆಂಡುಗಳವರೆಗೆ ಫಾರ್ವರ್ಡ್‌ ಅಥವಾ ಬ್ಯಾಕ್‌ವರ್ಡ್ ಮಾಡಬಹುದಾಗಿದೆ. ಎರಡು ಬಾರಿ ಟ್ಯಾಪ್ ಮಾಡಬೇಕಿರುತ್ತದೆ. ಈ ಆಯ್ಕೆಯನ್ನು ಬೇಕಿದ್ದರೇ 5, 15, 20, 30 ಅಥವಾ 60 ಸೆಕೆಂಡುಗಳಿಗೆ ಬದಲಾಯಿಸಬಹುದು.

ಹಿಸ್ಟರಿ ಕ್ಲಿಯರ್ ಮಾಡಿ

ಹಿಸ್ಟರಿ ಕ್ಲಿಯರ್ ಮಾಡಿ

ಯೂಟ್ಯೂಬ್‌ (YouTube) ಸರ್ಚ್‌ನಲ್ಲಿ ಏನೇ ಹುಡುಕಿದರೂ, ಅದು ಬೇರೊಬ್ಬರು ಸೋಡಿದಾಗ ಕಾಣದಂತೆ ಇಡಲು ಆಗಾಗಾ ಹಿಸ್ಟರಿ ಕ್ಲಿಯರ್ ಮಾಡುತ್ತಿರಿ. ಹಿಸ್ಟರಿ ಕ್ಲಿಯರ್ ಮಾಡಲು ಸರಳ ಆಯ್ಕೆಗಳು ಇವೆ. ಪ್ರೊಫೈಲ್ ಚಿತ್ರ> ಸೆಟ್ಟಿಂಗ್‌ಗಳು> ಇತಿಹಾಸ ಮತ್ತು ಗೌಪ್ಯತೆ> ಮತ್ತು ವಾಚ್ ಹಿಸ್ಟರಿ ಕ್ಲಿಯರ್ ನ್ಯಾವಿಗೇಟ್ ಮಾಡುವ ಮೂಲಕ ಹುಡುಕಾಟ ಹಿಸ್ಟರಿ ಅಳಿಸಬಹುದು.

Best Mobiles in India

English summary
How to change YouTube Video Quality on smart TV: Here's Easy Steps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X