ಫಾಸ್ಟ್ ಫೋನ್ ಚಾರ್ಜಿಂಗ್: ಇಂದೇ ಟ್ರೈ ಮಾಡಿ

By Shwetha
|

ನೀವು ಹೋಗುವಲ್ಲೆಲ್ಲಾ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ನೀವು ತೆಗೆದುಕೊಂಡು ಹೋಗುತ್ತೀರಿ ಮತ್ತು ಅದನ್ನು ಹೆಚ್ಚು ಬಳಸಿಕೊಳ್ಳುತ್ತೀರಿ. ಒಮ್ಮೊಮ್ಮೆ ನೀವು ನಿಮ್ಮ ಡಿವೈಸ್ ಅನ್ನು ಮರೆತುಹೋಗಿ ಅದರಲ್ಲಿ ಚಾರ್ಜ್ ಕಡಿಮೆಯಾದ ಸಂಭವ ಕೂಡ ಇರುತ್ತದೆ. ಫೋನ್ ಚಾರ್ಜ್ ಮಾಡಲು ನೀವು ಆಗ ಮರೆತಿರುತ್ತೀರಿ. ಸ್ವಲ್ಪ ನಿಮಿಷಗಳ ಕಾಲ ನೀವು ಡಿವೈಸ್ ಅನ್ನು ಚಾರ್ಜ್ ಮಾಡುತ್ತೀರಿ, ಫೋನ್ 2 ರಿಂದ 3 ನಿಮಿಷ ಚಾರ್ಜ್ ಅನ್ನು ಪಡೆದುಕೊಳ್ಳುತ್ತದೆ ಮತ್ತು ಪುನಃ ಬ್ಯಾಟರಿ ಕಡಿಮೆಯಾಗುತ್ತದೆ.

ಓದಿರಿ: ದಿನಕ್ಕೆ 4ಜಿ ಡೇಟಾ: ರಿಲಯನ್ಸ್ ಜಿಯೋ ಆಫರ್

ಆದರೆ ಇಂತಹ ಸ್ಥಿತಿಗಳನ್ನು ನಿವಾರಿಸಿಕೊಳ್ಳುವುದು ಹೇಗೆ ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ಚರ್ಚಿಸಲಿದ್ದೇವೆ. ಕೆಲವೊಂದು ಸರಳ ಹಂತಗಳನ್ನು ಅನುಸರಿಸುವ ಮೂಲಕ ನಿಮ್ಮ ಆಂಡ್ರಾಯ್ಡ್ ಫೋನ್ ಅನ್ನು ವೇಗವಾಗಿ ಚಾರ್ಜ್ ಮಾಡಿಕೊಳ್ಳಬಹುದಾಗಿದೆ. ತುರ್ತು ಪರಿಸ್ಥಿತಿಗಳಲ್ಲಿ ಇದರಿಂದ ನಿಮಗೆ ಸಹಾಯ ಕೂಡ ಆಗಲಿದೆ.

ವೈರ್‌ಲೆಸ್ ಚಾರ್ಜರ್ ಬೇಡವೇ ಬೇಡ

ವೈರ್‌ಲೆಸ್ ಚಾರ್ಜರ್ ಬೇಡವೇ ಬೇಡ

ನೀವು ಅವಸರದಲ್ಲಿ ಇರುವಾಗ ವೈರ್‌ಲೆಸ್ ಚಾರ್ಜರ್ ಅನ್ನು ಬಳಸದಿರಿ. ಇದು ವೇಗವಾಗಿ ಫೋನ್ ಚಾರ್ಜ್ ಅನ್ನು ಮಾಡುವುದಿಲ್ಲ. ವಾಲ್ ಚಾರ್ಜರ್‌ಗಿಂತ ಇದು ಕಡಿಮೆ ಸಮರ್ಥ ಎಂದಾಗಿರುತ್ತದೆ.

ಫಾಸ್ಟ್ ಚಾರ್ಜರ್ ಖರೀದಿಸಿ

ಫಾಸ್ಟ್ ಚಾರ್ಜರ್ ಖರೀದಿಸಿ

ಇಂದಿನ ದಿನಗಳಲ್ಲಿ ಹೆಚ್ಚಿನ ಆಂಡ್ರಾಯ್ಡ್ ಫೋನ್‌ಗಳು ಫಾಸ್ಟ್ ಚಾರ್ಜಿಂಗ್ ಫೀಚರ್‌ಗಳೊಂದಿಗೆ ಬಂದಿವೆ. ನಿಮಗೆ ಉತ್ತಮ ಫಲಿತಾಂಶ ಬೇಕು ಎಂದಾದಲ್ಲಿ ಫಾಸ್ಟ್ ಚಾರ್ಜರ್ ಅನ್ನು ಖರೀದಿಸಿ. ಉತ್ತಮ ಬ್ಯಾಟರಿ ಬೂಸ್ಟರ್ ಇರುವ ಫಾಸ್ಟ್ ಚಾರ್ಜರ್‌ಗಳ ಖರೀದಿಯನ್ನು ನಿಮಗೆ ಮಾಡಬಹುದಾಗಿದೆ.

ವಾಲ್ ಚಾರ್ಜರ್ ಬಳಸಿ

ವಾಲ್ ಚಾರ್ಜರ್ ಬಳಸಿ

ಎಲ್ಲಾ ಆಂಡ್ರಾಯ್ಡ್ ಚಾರ್ಜರ್‌ಗಳು ಯೂನಿವರ್ಸಲ್ ಫಿಟ್ಟಿಂಗ್ ಅನ್ನು ಪಡೆದುಕೊಂಡಿರುತ್ತವೆ, ನಿಮ್ಮ ಲ್ಯಾಪ್‌ಟಾಪ್‌ಗೆ ಕೇಬಲ್ ಅಳವಡಿಸಿ ಫೋನ್ ಚಾರ್ಜ್ ಮಾಡುವುದು ಅಷ್ಟೊಂದು ಉತ್ತಮ ಐಡಿಯಾವಲ್ಲ. ವಾಲ್ ಚಾರ್ಜರ್ ಹೆಚ್ಚು ಉಪಯುಕ್ತವಾಗಿರುವ ಚಾರ್ಜಿಂಗ್ ವಿಧಾನವಾಗಿದೆ.

ಫೋನ್ ಸ್ವಿಚ್ ಆಫ್ ಮಾಡುವುದು

ಫೋನ್ ಸ್ವಿಚ್ ಆಫ್ ಮಾಡುವುದು

ಸಾಧ್ಯವಾದಲ್ಲಿ, ಫೋನ್ ಅನ್ನು ಏರ್‌ಪ್ಲೇನ್ ಮೋಡ್‌ನಲ್ಲಿ ಇರಿಸುವುದಕ್ಕಿಂತ ವೇಗವಾದ ಚಾರ್ಜ್ ಅನ್ನು ನೀವು ಪಡೆದುಕೊಳ್ಳಬೇಕು ಎಂದಾದಲ್ಲಿ ಡಿವೈಸ್ ಅನ್ನು ಸ್ವಿಚ್ ಆಫ್ ಮಾಡಿ. ಇದರಿಂದ ಫೋನ್ ಆನ್ ಆಗುವವರೆಗೆ ಅಧಿಸೂಚನೆಗಳನ್ನು ಪಡೆಯದೇ ಇದ್ದರೂ, ನೀವು ಶೀಘ್ರವಾಗಿ ಬ್ಯಾಟರಿ ಚಾರ್ಜ್ ಅನ್ನು ಮಾಡಿಕೊಳ್ಳಬಹುದಾಗಿದೆ.

ಏರ್‌ಪ್ಲೇನ್ ಮೋಡ್ ಸಕ್ರಿಯೊಳಿಸಿ

ಏರ್‌ಪ್ಲೇನ್ ಮೋಡ್ ಸಕ್ರಿಯೊಳಿಸಿ

ನಿಮ್ಮ ಫೋನ್ ಅನ್ನು ತ್ವರಿತವಾಗಿ ಚಾರ್ಜ್ ಮಾಡಿಕೊಳ್ಳಬೇಕು ಎಂದಾದಲ್ಲಿ ಏರ್‌ಪ್ಲೇನ್ ಮೋಡ್ ಅನ್ನು ಸಕ್ರಿಯಗೊಳಿಸಿ. ವೈರ್‌ಲೆಸ್ ರೇಡಿಯೊ, ಹಲವಾರು ಟಾಸ್ಕ್‌ಗಳಲ್ಲಿ ಫೋನ್ ಭಾಗವಹಿಸುವುದು ಮೊದಲಾದ ಕಾರ್ಯಗಳನ್ನು ಏರ್‌ಪ್ಲೇನ್ ಮೋಡ್ ನಿರ್ಬಂಧಿಸುತ್ತದೆ.

ಪವರ್ ಸೇವಿಂಗ್ ಮೋಡ್ ಆನ್ ಮಾಡಿ

ಪವರ್ ಸೇವಿಂಗ್ ಮೋಡ್ ಆನ್ ಮಾಡಿ

ಇಂದಿನ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ಪವರ್ ಸೇವಿಂಗ್ ಮೋಡ್ ಇದ್ದೇ ಇರುತ್ತದೆ. ಚಾರ್ಜರ್ ಪ್ಲಗಿನ್ ಆಗಿರುವಾಗ ಈ ಮೋಡ್ ಅನ್ನು ಸಕ್ರಿಯಗೊಳಿಸಿಕೊಳ್ಳಬಹುದಾಗಿದೆ.

ಬೇಡದ ಫೀಚರ್‌ಗಳನ್ನು ಆಫ್ ಮಾಡಿಟ್ಟುಕೊಳ್ಳಿ

ಬೇಡದ ಫೀಚರ್‌ಗಳನ್ನು ಆಫ್ ಮಾಡಿಟ್ಟುಕೊಳ್ಳಿ

ನಿಮ್ಮ ಸ್ಮಾರ್ಟ್‌ಫೋನ್ ಅನ್ನು ನೀವು ಚಾರ್ಜರ್‌ಗೆ ಸಂಪರ್ಕ ಪಡಿಸಿದ ಸಂದರ್ಭದಲ್ಲಿ, ವೈಫೈ, ಜಿಪಿಎಸ್, ಬ್ಲ್ಯೂಟೂತ್, ಇಂಟರ್ನೆಟ್‌ಗಳು ಆಫ್ ಆಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಹಿನ್ನಲೆ ಅಪ್ಲಿಕೇಶನ್ ರನ್ ಆಗುತ್ತಿದೆಯೇ ಎಂಬುದನ್ನು ಗಮನಹರಿಸಿಕೊಳ್ಳಿ.

Best Mobiles in India

English summary
In this article we can get some tips on how to charge your phone fastly by following some tips.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X