ವಾಟ್ಸಾಪ್‌ನಲ್ಲಿ ನಿಮ್ಮ ಬ್ಯಾಂಕ್ ಖಾತೆಯ ಬ್ಯಾಲೆನ್ಸ್‌ ತಿಳಿಯುವುದು ಹೇಗೆ ಗೊತ್ತಾ?

|

ಸದ್ಯ ವಾಟ್ಸಾಪ್‌ ಅತೀ ಹೆಚ್ಚು ಬಳಕೆಯಲ್ಲಿರುವ ಇನ್‌ಸ್ಟಂಟ್ ಮೆಸೆಜ್ ಆಗಿ ಕಾಣಿಸಿಕೊಂಡಿದೆ. ವಾಟ್ಸಾಪ್ ಬಳಕೆದಾರರ ಅನುಕೂಲಕ್ಕಾಗಿ ಈಗಾಗಲೇ ಹಲವು ಉಪಯುಕ್ತ ಫೀಚರ್ಸ್‌ ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಅದರೊಂದಿಗೆ ವಾಟ್ಸಾಪ್ ಸಂಸ್ಥೆಯು ಗ್ರಾಹಕರಿಗೆ ವಾಟ್ಸಾಪ್ ಪೇ ಯುಪಿಐ ಪೇಮೆಂಟ್ ಸೇವೆ ಯನ್ನು ನೀಡಿದೆ. ಈ ಸೇವೆಯಲ್ಲಿ ಬಳಕೆದಾರರು ಹಣ ವರ್ಗಾವಣೆ ಮಾಡಬಹುದು ಮತ್ತು ಸ್ವೀಕರಿಸಬಹುದು. ಹಾಗೆಯೇ ಬಳಕೆದಾರರು ತಮ್ಮ ಬ್ಯಾಂಕ್ ಖಾತೆಯ ಬ್ಯಾಲೆನ್ಸ್‌ ಸಹ ಪರಿಶೀಲಿಸಬಹುದು.

ಹಾಗಾದರೇ

ಹೌದು, ಮೆಟಾ ಮಾಲೀಕತ್ವದ ವಾಟ್ಸಾಪ್‌ ಅಪ್ಲಿಕೇಶನ್ ಗೂಗಲ್‌ ಪೇ, ಪೇಟಿಎಮ್ ಮತ್ತು ಫೋನ್‌ಪೇ ಆಪ್‌ಗಳಿಗೆ ಟಾಂಗ್ ನೀಡುವ ನಿಟ್ಟಿನಲ್ಲಿ ವಾಟ್ಸಾಪ್‌ ಪೇ ಪರಿಚಯಿಸಿದೆ. ಈಗಾಗಲೇ ಚಾಲ್ತಿ ಇರುವ ವಾಟ್ಸಾಪ್ ಪೇ ಆಪ್‌ ಉಪಯುಕ್ತ ಆಯ್ಕೆಗಳನ್ನು ಒಳಗೊಂಡಿದೆ. ಇದರಲ್ಲಿ ಬಳಕೆದಾರರು ಬ್ಯಾಂಕ್ ಬ್ಯಾಲೆನ್ಸ್‌ ಅನ್ನು ಪರಿಶೀಲಿಸಬಹುದು. ಹಾಗಾದರೇ ವಾಟ್ಸಾಪ್‌ ಅಪ್ಲಿಕೇಶನ್ ನಲ್ಲಿ ಬ್ಯಾಂಕ್ ಖಾತೆಯ ಬ್ಯಾಲೆನ್ಸ್‌ ಪರಿಶೀಲಿಸುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ವಾಟ್ಸಾಪ್‌ನಲ್ಲಿ ಬ್ಯಾಂಕ್ ಬ್ಯಾಲೆನ್ಸ್‌ ಚೆಕ್ ಮಾಡಲು ಈ ಕ್ರಮ ಅನುಸರಿಸಿ:

ವಾಟ್ಸಾಪ್‌ನಲ್ಲಿ ಬ್ಯಾಂಕ್ ಬ್ಯಾಲೆನ್ಸ್‌ ಚೆಕ್ ಮಾಡಲು ಈ ಕ್ರಮ ಅನುಸರಿಸಿ:

ಹಂತ 1: ಫೋನಿನಲ್ಲಿ ವಾಟ್ಸಾಪ್‌ ಆಪ್‌ಗೆ ಹೋಗಿ ಮತ್ತು ನಂತರ ಮುಖ್ಯ ಪರದೆಯ ಮೇಲಿನ ಬಲ ಭಾಗದಲ್ಲಿರುವ ಮೂರು ಡಾಟ್ ಐಕಾನ್ ಮೇಲೆ ಟ್ಯಾಪ್ ಮಾಡುವ ಮೂಲಕ 'ಸೆಟ್ಟಿಂಗ್‌ಗಳು' ಗೆ ಹೋಗಿ,

ಹಂತ 2: ನಂತರ, 'ಪಾವತಿಗಳು' ಆಯ್ಕೆಮಾಡಿ ಮತ್ತು ಸಂಬಂಧಿತ ಬ್ಯಾಂಕ್ ಖಾತೆಯನ್ನು ಆಯ್ಕೆಮಾಡಿ.

ಹಂತ 3: 'ಖಾತೆ ಬ್ಯಾಲೆನ್ಸ್ ವೀಕ್ಷಿಸಿ' ಮೇಲೆ ಟ್ಯಾಪ್ ಮಾಡಿ ಮತ್ತು ಪಿನ್ ಇನ್‌ಪುಟ್ ಮಾಡಿ.

ಹಂತ 4: ನೀವು ಪಿನ್ ನಮೂದಿಸಿದ ನಂತರ ನಿಮ್ಮ ಖಾತೆಯ ಬ್ಯಾಲೆನ್ಸ್ ಅನ್ನು ಪ್ರದರ್ಶಿಸಲಾಗುತ್ತದೆ.

ಹಣವನ್ನು ಕಳುಹಿಸುವಾಗ ಬ್ಯಾಂಕ್ ಖಾತೆಯ ಬ್ಯಾಲೆನ್ಸ್ ಪರಿಶೀಲಿಸಲು ಹೀಗೆ ಮಾಡಿ:

ಹಣವನ್ನು ಕಳುಹಿಸುವಾಗ ಬ್ಯಾಂಕ್ ಖಾತೆಯ ಬ್ಯಾಲೆನ್ಸ್ ಪರಿಶೀಲಿಸಲು ಹೀಗೆ ಮಾಡಿ:

ಹಂತ 1: ಪಾವತಿ ಸಂದೇಶದ ಪರದೆಯಿಂದ ಲಭ್ಯವಿರುವ ಪಾವತಿ ವಿಧಾನವನ್ನು ಟ್ಯಾಪ್ ಮಾಡಿ.

ಹಂತ 2: ಮುಂದೆ, ನೀವು ಬ್ಯಾಲೆನ್ಸ್ ಪರಿಶೀಲಿಸಬೇಕಾದ ಖಾತೆಯ ಮೇಲೆ ಟ್ಯಾಪ್ ಮಾಡಿ.

ಹಂತ 3: 'ಖಾತೆ ಬ್ಯಾಲೆನ್ಸ್ ವೀಕ್ಷಿಸಿ' ಆಯ್ಕೆಮಾಡಿ ಮತ್ತು ನಂತರ ಪಿನ್ ನಮೂದಿಸಿ.

ಹಂತ 4: ನಿಮ್ಮ ಬ್ಯಾಲೆನ್ಸ್ ಅನ್ನು ನಂತರ ಪ್ರದರ್ಶಿಸಲಾಗುತ್ತದೆ.

ವಾಟ್ಸಾಪ್‌ ಪೇ ಬಳಕೆ ಮಾಡುವ ಮುನ್ನ ಈ ಸಂಗತಿಗಳು ನಿಮಗೆ ತಿಳಿದಿರಲಿ!

ವಾಟ್ಸಾಪ್‌ ಪೇ ಬಳಕೆ ಮಾಡುವ ಮುನ್ನ ಈ ಸಂಗತಿಗಳು ನಿಮಗೆ ತಿಳಿದಿರಲಿ!

ಫೇಸ್‌ಬುಕ್ ಮಾಲೀಕತ್ವದ ಜನಪ್ರಿಯ ಇನ್‌ಸ್ಟಂಟ್ ಮೆಸೆಜ್ ಅಪ್ಲಿಕೇಶನ್ ವಾಟ್ಸಾಪ್‌ ಬಹುನಿರೀಕ್ಷಿತ ವಾಟ್ಸಾಪ್‌ ಪೇ ಸೇವೆ ಪರಿಚಯಿಸಿದೆ. ಬಳಕೆದಾರರು ಚಾಟ್‌ ಮಾಡುವ ಜೊತೆಗೆ ಹಣ ಕಳುಹಿಸುವುದು ಹಾಗೂ ಸ್ವೀಕರಿಸುವುದನ್ನು ಮಾಡಬಹುದಾಗಿದೆ. ಆದರೆ ವಾಟ್ಸಾಪ್‌ ಪೇ ಬಳಕೆ ಮಾಡುವ ಮುನ್ನ ಕೆಲವು ಸಂಗತಿಗಳನ್ನು ಬಳಕೆದಾರರು ಗಮನಿಸಬೇಕಿದೆ.

ಸೇವೆಯನ್ನು

ಹೌದು, ಪ್ರಸ್ತುತ ಡಿಜಿಟಲ್ ಪೇಮೆಂಟ್‌ ಆಪ್‌ಗಳ ಬೇಡಿಕೆ ಹೆಚ್ಚಿದೆ. ಗೂಗಲ್ ಪೇ, ಫೋನ್ ಪೇ ಜನಪ್ರಿಯತೆ ಪಡೆದಿದ್ದು, ಆ ಸಾಲಿಗೆ ಈಗ ಭಾರತದಲ್ಲಿ ವಾಟ್ಸಾಪ್‌ ಪೇ ಸಹ ಲಗ್ಗೆ ಇಟ್ಟಿದೆ. ಸಂಸ್ಥೆಯು ವಾಟ್ಸಾಪ್‌ ಪೇ ಸೇವೆಯ ಬಳಕೆಗೆ ಯಾವುದೇ ಶುಲ್ಕ ಇರುವುದಿಲ್ಲ ಎಂದಿದೆ. ಆದರೆ ಬಳಕೆದಾರರು ಈ ಸೇವೆಯನ್ನು ಪ್ರಾರಂಭಿಸುವ ಮುನ್ನ ಈ ಹಂತಗಳನ್ನು ಗಮನಿಸಬೇಕು.

ರಿಜಿಸ್ಟ್ರೇಷನ್‌

ವಾಟ್ಸಾಪ್‌ ಪೇ ಸೇವೆಯನ್ನು ಸಕ್ರಿಯಗೊಳಿಸಲು ನೀವು ಬ್ಯಾಂಕ್ ಖಾತೆ ಮತ್ತು ಫೋನ್ ಸಂಖ್ಯೆಯನ್ನು ಖಾತೆಗೆ ಲಿಂಕ್ ಮಾಡಬೇಕಾಗುತ್ತದೆ. ಫೋಟೋಗಳು ಮತ್ತು ವೀಡಿಯೊಗಳನ್ನು ಕಳುಹಿಸಲು ನೀವು ಸಾಮಾನ್ಯವಾಗಿ ಬಳಸುವ ಸ್ಕ್ರೀನ್‌ನ ಕೆಳಭಾಗದಲ್ಲಿರುವ 'ಲಗತ್ತುಗಳು' ಐಕಾನ್ ಕ್ಲಿಕ್ ಮಾಡುವ ಮೂಲಕ ಪಾವತಿಗಳನ್ನು ಮಾಡಬಹುದು. ಬಳಕೆದಾರರು ಯುಪಿಐ ಪಾಸ್ಕೋಡ್ ಅನ್ನು ಸಹ ಹೊಂದಿಸಬೇಕಾಗಿದೆ. ಹಾಗೂ ಈಗಾಗಲೇ ಅಸ್ತಿತ್ವದಲ್ಲಿರುವ ಯುಪಿಐ ಅಪ್ಲಿಕೇಶನ್‌ನೊಂದಿಗೆ ಯುಪಿಐ ಪಾಸ್‌ಕೋಡ್ ಹೊಂದಿದ್ದರೆ ನೀವು ಅದೇ ಕೋಡ್ ಅನ್ನು ಬಳಸಬಹುದು.

ಇಂಟರ್ಫೇಸ್

ಗೂಗಲ್ ಪೇ, ಫೋನ್ ಪೇ, ಹಾಗೂ ವಿವಿಧ ಬ್ಯಾಂಕ್ ಅಪ್ಲಿಕೇಶನ್‌ಗಳು ಬಳಸುವ ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ನಲ್ಲಿ ವಾಟ್ಸಾಪ್ ಪೇ ಸಹ ಕಾರ್ಯನಿರ್ವಹಿಸುತ್ತದೆ. ಬಳಕೆದಾರರು ಹಣವನ್ನು ವಾಟ್ಸಾಪ್ ವ್ಯಾಲೆಟ್ ನಲ್ಲಿ ಇಟ್ಟುಕೊಳ್ಳುವ ಅಗತ್ಯವಿಲ್ಲ. ಹಣವನ್ನು ಬ್ಯಾಂಕ್ ಖಾತೆಯಿಂದ ನೇರವಾಗಿ ವಾಟ್ಸಾಪ್‌ ಪೇ ಮೂಲಕ ವರ್ಗಾಯಿಸುವ ವ್ಯವಸ್ಥೆ ಇದೆ.

ವಾಟ್ಸಾಪ್

ಬಳಕೆದಾರರು ಭೀಮ್, ಗೂಗಲ್ ಪೇ ಅಥವಾ ಫೋನ್ ಪೇ ನಂತಹ ಯಾವುದೇ ಯುಪಿಐ ಬೆಂಬಲಿತ ಅಪ್ಲಿಕೇಶನ್ ಹೊಂದಿದ್ದರೂ ವಾಟ್ಸಾಪ್‌ ಪೇ ಮೂಲಕ ಹಣವನ್ನು ಕಳುಹಿಸಬಹುದು. ವಾಟ್ಸಾಪ್ ಪಾವತಿಗಳಿಗಾಗಿ ಸ್ವೀಕರಿಸುವವರನ್ನು ನೋಂದಾಯಿಸದಿದ್ದರೆ "ಯುಪಿಐ ಐಡಿ ನಮೂದಿಸಿ" ಆಯ್ಕೆಯನ್ನು ವಾಟ್ಸಾಪ್ ನಿಮಗೆ ನೀಡುತ್ತದೆ.

ವಾಟ್ಸಾಪ್‌ನಲ್ಲಿ ನೀವು ಪೇಮೆಂಟ್‌ ಬ್ಯಾಕ್‌ಗ್ರೌಂಡ್‌ ಸೇರಿಸಲು ಹೀಗೆ ಮಾಡಿ:

ವಾಟ್ಸಾಪ್‌ನಲ್ಲಿ ನೀವು ಪೇಮೆಂಟ್‌ ಬ್ಯಾಕ್‌ಗ್ರೌಂಡ್‌ ಸೇರಿಸಲು ಹೀಗೆ ಮಾಡಿ:

ವಾಟ್ಸಾಪ್‌ ನ ಪೇಮೆಂಟ್‌ ಬ್ಯಾಕ್‌ಗ್ರೌಂಡ್‌ ಫೀಚರ್ ಗೂಗಲ್‌ ಪೇ ಆಪ್‌ನ ಪೇಮೆಂಟ್‌ ಬ್ಯಾಕ್‌ಗ್ರೌಂಡ್‌/ ಹಿನ್ನೆಲೆ (ಯಾವುದಕ್ಕೆ ಹಣ ವರ್ಗಾವಣೆ ಮಾಡಿದ್ದೆವೆ ಎಂಬುದನ್ನು ಸೂಚಿಸುವ ಸ್ಟಿಕ್ಕರ್) ವೈಶಿಷ್ಟ್ಯದಂತೆ ಕಾಣುತ್ತದೆ. ಗೂಗಲ್‌ ಪೇ ನಲ್ಲಿ, ಹಣವನ್ನು ಕಳುಹಿಸುವಾಗ ಕಂಪನಿಯು ಒದಗಿಸಿದ ಆಯ್ಕೆಯಿಂದ ನೀವು ವಿವಿಧ ಹಿನ್ನೆಲೆಗಳನ್ನು ಸೇರಿಸಬಹುದು. ಬಳಕೆದಾರರು ಈಗ ವಾಟ್ಸಾಪ್‌ನಲ್ಲಿಯೂ ಇದೇ ರೀತಿಯ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತದೆ.


* ನೀವು ಹಣವನ್ನು ಕಳುಹಿಸಲು ಬಯಸುವ ಚಾಟ್ ಅನ್ನು ಟ್ಯಾಪ್ ಮಾಡಿ.
* ನೀವು ಸಂಪರ್ಕಕ್ಕೆ ಕಳುಹಿಸಲು ಬಯಸುವ ಮೊತ್ತವನ್ನು ನಮೂದಿಸಿ
* ಹಿನ್ನೆಲೆ (background icon) ಐಕಾನ್ ಮೇಲೆ ಟ್ಯಾಪ್ ಮಾಡಿ
* ಲಭ್ಯವಿರುವ ಆಯ್ಕೆಗಳ ಮೂಲಕ ಸ್ಕ್ರಾಲ್ ಮಾಡಿ ಮತ್ತು ನೀವು ಬಳಸಲು ಬಯಸುವ ಹಿನ್ನೆಲೆಯನ್ನು ಟ್ಯಾಪ್ ಮಾಡಿ.
* ನಿಮ್ಮ ಪಾವತಿ ಸಂದೇಶಕ್ಕೆ ಹಿಂತಿರುಗಲು, ಪಾವತಿ ಮೊತ್ತವನ್ನು ಟ್ಯಾಪ್ ಮಾಡಿ ಅಥವಾ ಹಿನ್ನೆಲೆ ಆಯ್ಕೆ ಗಳನ್ನು ವಜಾಗೊಳಿಸಲು X ಅನ್ನು ಟ್ಯಾಪ್ ಮಾಡಿ.

Best Mobiles in India

English summary
How to Check Your Bank Account Balance In WhatsApp: Follow These Steps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X