ನಿಮ್ಮ ಇಯರ್‌ಫೋನ್ ಸ್ವಚ್ಛಗೊಳಿಸಲು ಇಲ್ಲಿವೆ ಕೆಲವೊಂದು ಉಪಯುಕ್ತ ಸಲಹೆ!

|

ಪ್ರಸ್ತುತ ದಿನಗಳಲ್ಲಿ ಬಳಕೆದಾರರು ಸ್ಮಾರ್ಟ್‌ಫೋನಂತೆ ಇತರೆ ಸ್ಮಾರ್ಟ್‌ ಡಿವೈಸ್‌ಗಳಿಗೆ ಹೆಚ್ಚಿನ ಕಾಳಜಿ ನೀಡುತ್ತಾರೆ. ಜೊತೆಗೆ ಹೆಡ್‌ಫೋನ್, ಇಯರ್‌ಫೋನ್, ಇಯರ್‌ಬಡ್ಸ್‌, ಡಿವೈಸ್‌ಗಳನ್ನು ಉತ್ತಮವಾಗಿ ನೋಡಿಕೊಳ್ಳುತ್ತಾರೆ. ಇದರೊಂದಿಗೆ ಸದ್ಯ ಹಾಡುಗಳನ್ನು ಕೇಳಲು, ಮಾತನಾಡಲು ಮೇಲಿಂದ ಮೇಲೆ ಬಳಕೆ ಮಾಡುವ ಇಯರ್‌ಫೋನ್‌ಗಳ ಸ್ವಚ್ಛತೆಯ ಬಗ್ಗೆಯೂ ಗಮನ ನೀಡುವುದು ಉತ್ತಮವೇ ಸರಿ.

ಮುಖ್ಯವಾಗಿದೆ

ಹೌದು, ಸ್ಮಾರ್ಟ್‌ಫೋನ್ ಜೊತೆಗೆ ಹೆಚ್ಚಾಗಿ ಬಳಕೆ ಮಾಡುವ ಇಯರ್‌ಫೋನ್ ಡಿವೈಸ್ ಶುಚಿಯಾಗಿಡುವುದು ಮುಖ್ಯವಾಗಿದೆ. ಇಯರ್‌ಫೋನ್ ಬಳಕೆ ಮಾಡುವಾಗ, ಬೆವರು, ಧೂಳು ಸೇರಿದಂತೆ ಹಲವು ಕಾರಣಗಳಿಂದಾಗಿ ಅದು ಧೂಳು ಮತ್ತು ಕೊಳೆಯಾಗಿರುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಇಯರ್‌ಫೋನ್‌ ಸ್ವಚ್ಛಗೊಳಿಸುವುದು ಅಗತ್ಯ ಎನಿಸುತ್ತದೆ. ಇನ್ನು ಸ್ವಚ್ಛಗೊಳಿಸುವಾಗಲು ಎಚ್ಚರ ವಹಿಸಬೇಕು. ಇಯರ್‌ಫೋನ್‌ ನೀರಿನಿಂದ ಹಾಳಾಗದಂತೆ ನೋಡಬೇಕು. ಅದಕ್ಕಾಗಿ ಕೆಲವು ಸ್ವಚ್ಛತಾ ವಿಧಾನಗಳನ್ನು ಅನುಸರಿಸುವುದು ಉತ್ತಮ. ಆ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಇಯರ್‌ಬಡ್‌ಗಳನ್ನು ಸರಿಯಾಗಿ ಒರೆಸಿ

ಇಯರ್‌ಬಡ್‌ಗಳನ್ನು ಸರಿಯಾಗಿ ಒರೆಸಿ

ಇಯರ್‌ಬಡ್‌ ಪ್ರತಿ ಬಳಕೆಯ ನಂತರ ಬಳಕೆದಾರರು ಇಯರ್‌ಬಡ್‌ಗಳನ್ನು ರಬ್ಬಿಂಗ್ ಆಲ್ಕೋಹಾಲ್ ವೈಪ್‌ನೊಂದಿಗೆ ಒರೆಸುವುದು ಅವಶ್ಯಕ. ಇದು ಕೇವಲ ಅವುಗಳನ್ನು ಸ್ವಚ್ಛಗೊಳಿಸುವುದಿಲ್ಲ ಆದರೆ ಯಾವುದೇ ವೈರಸ್ ಅಥವಾ ಬ್ಯಾಕ್ಟೀರಿಯಾವನ್ನು ಹಿಡಿಯುವುದನ್ನು ತಪ್ಪಿಸುತ್ತದೆ. ಮೆಡಿಕಲ್ ಅಂಗಡಿಗಳಲ್ಲಿ ಅಥವಾ ಯಾವುದೇ ಕಿರಾಣಿ ಅಂಗಡಿಯಲ್ಲಿ ನೀವು ಆಲ್ಕೋಹಾಲ್ ವೈಪ್ ಅನ್ನು ಕಾಣಬಹುದು. ಇಯರ್‌ಬಡ್‌ಗಳು ಸ್ವಚ್ಛವಾಗಿಷ್ಟು ಚೆನ್ನ.

ಸ್ವಚ್ಛ ಮಾಡುವಾಗ ಮೃದುವಾದ ಬಟ್ಟೆ ಬಳಕೆ ಮಾಡಿರಿ

ಸ್ವಚ್ಛ ಮಾಡುವಾಗ ಮೃದುವಾದ ಬಟ್ಟೆ ಬಳಕೆ ಮಾಡಿರಿ

ಇಯರ್‌ಬಡ್‌ಗಳನ್ನು ಸ್ವಚ್ಛಗೊಳಿಸುವಾಗ ಮೈಕ್ರೋಫೈಬರ್ ಬಟ್ಟೆ ಅಥವಾ ಮೃದುವಾದ ಬಟ್ಟೆ ಯನ್ನು ಬಳಕೆ ಮಾಡುವುದು ಉತ್ತಮ. ಇದರಿಂದ ಡಿವೈಸ್‌ಗಳಿಗೆ ಯಾವುದೇ ಗೀರುಗಳು ಬೀಳುವುದಿಲ್ಲ.

ಡಿವೈಸ್‌ಗಳನ್ನು ಚಾರ್ಜಿಂಗ್ ಕೇಸ್‌ನಲ್ಲಿ ಇರಿಸಿ.

ಡಿವೈಸ್‌ಗಳನ್ನು ಚಾರ್ಜಿಂಗ್ ಕೇಸ್‌ನಲ್ಲಿ ಇರಿಸಿ.

ಇಯರ್‌ಬಡ್ ಗಳನ್ನು ಚಾರ್ಜಿಂಗ್ ಕೇಸ್ ನಲ್ಲಿ ಇಡುವುದು ಉತ್ತಮ. ಏಕೆಂದರೇ ಚಾರ್ಜಿಂಗ್ ಕೇಸ್ ನಲ್ಲಿ ಇಯರ್‌ಬಡ್‌ಗಳನ್ನು ಕೊಳಕು, ನೀರು ಮತ್ತು ಹಲವಾರು ಇತರ ಕೊಳೆಯಿಂದ ರಕ್ಷಿಸುತ್ತದೆ. ಆದರೆ ಇಯರ್‌ಬಡ್‌ಗಳನ್ನು ಡಾಕ್ ಮಾಡುವ ಮೊದಲು ಚಾರ್ಜಿಂಗ್ ಕೇಸ್ ಸಹ ಸ್ವಚ್ಛವಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವುದು ಸಹ ಅಗತ್ಯವಾಗಿದೆ. ಯಾವುದೇ ತೇವಾಂಶ ಅಥವಾ ದ್ರವವು ನಿಮ್ಮ ಇಯರ್‌ಬಡ್‌ಗಳಿಗೆ ತೊಂದರೆ ಉಂಟುಮಾಡಬಹುದು.

ಸ್ವಚ್ಛಗೊಳಿಸುವ ಟೂಲ್ ಕಿಟ್ ಬಳಕೆ ಮಾಡಿ

ಸ್ವಚ್ಛಗೊಳಿಸುವ ಟೂಲ್ ಕಿಟ್ ಬಳಕೆ ಮಾಡಿ

ಡಿವೈಸ್‌ಗಳನ್ನು ಸ್ವಚ್ಛಗೊಳಿಸಲು ಆನ್‌ಲೈನ್‌ ಇ ಕಾಮರ್ಸ್‌ಗಳಲ್ಲಿ ಸೂಕ್ತ ಕಿಟ್ ಸಿಗುತ್ತದೆ. ಈ ಕಿಟ್ ಮೃದುವಾದ ಬ್ರಿಸ್ಟಲ್ ಬ್ರಷ್‌ಗಳು, ಫೈನ್ ಕ್ಲೀನಿಂಗ್ ಸ್ವ್ಯಾಬ್‌ಗಳು, ಸಾಫ್ಟ್ ಬ್ರಷ್‌ಗಳು, ಕ್ಲೀನಿಂಗ್ ಸ್ಪ್ರೇ ಬಾಟಲಿಗಳು ಮತ್ತು ಆಂಟಿ-ಸ್ಟ್ಯಾಟಿಕ್ ಕ್ಲೀನಿಂಗ್ ವೈಪ್‌ಗಳನ್ನು ಒಳಗೊಂಡಿರುತ್ತದೆ. ಸಾಧ್ಯವಾದರೇ ಆ ರೀತಿಯ ಕಿಟ್ ಗಳ ಮೂಲಕ ಸಹ ಸ್ವಚ್ಛ ಮಾಡಬಹುದು.

ಸ್ಮಾರ್ಟ್‌ಫೋನ್ ಚಾರ್ಜ್ ಮಾಡುವ ಬಗ್ಗೆ ಈ ಸಂಗತಿ ತಿಳಿಯಿರಿ

ಸ್ಮಾರ್ಟ್‌ಫೋನ್ ಚಾರ್ಜ್ ಮಾಡುವ ಬಗ್ಗೆ ಈ ಸಂಗತಿ ತಿಳಿಯಿರಿ

ಯಾವಾಗ ಚಾರ್ಜ್‌ ಮಾಡಬೇಕು?
ಸ್ಮಾರ್ಟ್‌ಫೋನ್‌ ಅನ್ನು ಇದೇ ಟೈಮಿನಲ್ಲಿ ಚಾರ್ಜ್‌ ಮಾಡಬೇಕೆಂದು ಯಾವುದೇ ರೂಲ್ಸ್‌ ಇಲ್ಲ. ಆದರೆ ಬ್ಯಾಟರಿ ಸಾಧ್ಯವಾದಷ್ಟು ಶೇ.50% ಟು ಶೇ.100% ಅಡುವಿನ ಅಂತರದಲ್ಲಿರಲಿ. ಅಂದರೇ 50 ಪರ್ಸೆಂಟ್‌ಗಿಂತ ಕಡಿಮೆಯಾದಾಗ ಚಾರ್ಜ್‌ ಮಾಡಬೇಕು ಮತ್ತು ಚಾರ್ಜಿಂಗ್ ಪೂರ್ಣ 100 ಪರ್ಸೆಂಟ್‌ ತಲುಪುವುದಕ್ಕೆ ಬಿಡಬಾರದು. 90ರ ಗಡಿ ದಾಟಿದಾಗ ಅನ್‌ಪ್ಲಗ್‌ ಮಾಡುವುದು ಒಳಿತು. ಇದು ಬ್ಯಾಟರಿಗೆ ದಕ್ಕೆ ಎನಿಸುವುದಿಲ್ಲ.

ಫುಲ್‌ 100 ಪರ್ಸೆಂಟ್ ಚಾರ್ಜ್‌ ಮಾಡಬೇಕಾ?

ಫುಲ್‌ 100 ಪರ್ಸೆಂಟ್ ಚಾರ್ಜ್‌ ಮಾಡಬೇಕಾ?

ಫುಲ್‌ 100 ಪರ್ಸೆಂಟ್ ಚಾರ್ಜ್‌ ಮಾಡಬೇಕಾ?. ಖಂಡಿತಾ ಮಾಡಬೇಡಿ. ಚಾರ್ಜಿಂಗ್ ಪಾಯಿಂಟ್ ನೂರರ ಸನಿಹ ಬಂದಾಗ ಚಾರ್ಜ್‌ ತೆಗೆದುಬಿಡಿ. ಆದರೆ ಎಕ್ಸ್‌ಪರ್ಟ್ಸ್‌ಗಳು ಹೇಳುವ ಪ್ರಕಾರ ತಿಂಗಳಿಗೆಮ್ಮೆ ಸ್ಮಾರ್ಟ್‌ಫೋನ್‌ ಅನ್ನು 0 ದಿಂದ 100 ವರೆಗೂ ಪೂರ್ಣಚಾರ್ಜ್‌ ಮಾಡಬೇಕಂತೆ. ಇದು ಸ್ಮಾರ್ಟ್‌ಫೋನ್‌ ಬ್ಯಾಟರಿಗೆ ರೀಸ್ಟಾರ್ಟ್‌ ಮಾಡಿದಂತೆ.

ರಾತ್ರಿಯಿಡಿ ಚಾರ್ಜ್‌ ಹಾಕಬಹುದೇ?

ರಾತ್ರಿಯಿಡಿ ಚಾರ್ಜ್‌ ಹಾಕಬಹುದೇ?

ರಾತ್ರಿ ಚಾರ್ಜ್‌ ಹಾಕಬಹುದು ಆದರೆ ಫೋನ್‌ 100 ಪರ್ಸೆಂಟ್‌ ಆಗಿದ್ದರು ಚಾರ್ಜ್‌ ಹಾಗೇ ಇರುತ್ತದೆ. ಆಫ್‌ ಮಅಡುವುದೇ ಇಲ್ಲ. ಇದರಿಂದ ಫೋನ್‌ ಬಿಸಿಯಾಗಿ ಅವಘಡಗಳು ಆಗುವ ಛಾನ್ಸ್‌ ಇರುತ್ತದೆ. ಹೀಗಾಗಿ ರಾತ್ರಿಯಿಡಿ ಚಾರ್ಜ್‌ ಹಾಕುವುದು ಒಳ್ಳೆಯದಲ್ಲ. ಇತ್ತೀಚಿನ ನೂತನ ಸ್ಮಾರ್ಟ್‌ಫೋನ್‌ಗಳು ಚಾರ್ಜ್‌ ಪೂರ್ಣವಾದ ನಂತರ ಚಾರ್ಜಿಂಗ್ ತೆಗೆದುಕೊಳ್ಳುವುದನ್ನು ಸ್ಟಾಪ್ ಮಾಡಿಕೊಳ್ಳುತ್ತವೆ.

ಬೇರೆ ಫೋನ್‌ ಚಾರ್ಜರ್‌ ಬಳಸಬಹುದೇ?

ಬೇರೆ ಫೋನ್‌ ಚಾರ್ಜರ್‌ ಬಳಸಬಹುದೇ?

ನಿಮ್ಮ ಸ್ಮಾರ್ಟ್‌ಫೋನ್‌ಗೆ ಕಂಪನಿಯು ನೀಡಿರುವ ಚಾರ್ಜರ್‌ ಮಾತ್ರ ಬಳಸಿ. ಥರ್ಡ್‌ಪಾರ್ಟಿ ಚಾರ್ಜರ್ ಮತ್ತು ಬೇರೆ ಕಂಪನಿಯ ಚಾರ್ಜರ್‌ಗಳನ್ನು ಬಳಸದಿರಿ. ಅದರಲ್ಲೂ ಕಡಿಮೆ ಬೆಲೆಗೆ ಸೀಗುವ ಚಾರ್ಜರ್‌ಗಳನ್ನು ಬಳಸುವ ಮುನ್ನ ಯೋಚಿಸಿ. ಯಾಕಂದ್ರೆ ಇವುಗಳು ನಿಮ್ಮ ಫೋನ್‌ ಬ್ಯಾಟರಿ ಬಾಳಿಕೆಯನ್ನು ಹಾಳುಮಾಡುವ ಸಾಧ್ಯತೆಗಳಿರುತ್ತವೆ.

ಫಾಸ್ಟ್‌ ಚಾರ್ಜಿಂಗ್ ಉತ್ತಮವೇ?

ಫಾಸ್ಟ್‌ ಚಾರ್ಜಿಂಗ್ ಉತ್ತಮವೇ?

ಇತ್ತೀಚಿನ ಸ್ಮಾರ್ಟ್‌ಫೋನ್‌ಗಳಲ್ಲಿ ಫಾಸ್ಟ್‌ ಚಾರ್ಜಿಂಗ್ ತಂತ್ರಜ್ಞಾನದ ಚಾರ್ಜರ್‌ ನೀಡುತ್ತಿದ್ದು, ಇದರಿಂದ ಫೋನ್‌ಗಳು ಬೇಗನೆ ಚಾರ್ಜ್‌ ಪಡೆದುಕೊಳ್ಳುತ್ತವೆ. ಫೋನ್‌ಗಳ ಬ್ಯಾಟರಿಯಲ್ಲಿ ಪವರ್‌ ಮ್ಯಾನೇಜಮೆಂಟ್‌ ಐಸಿ ಚಿಪ್‌ ಇರುತ್ತದೆ (PMIC). ಫಾಸ್ಟ್‌ಚಾರ್ಜ್‌ ತಂತ್ರಜ್ಞಾನದ ಬೆಂಬಲವನ್ನು ಹೊಂದಿದ್ದರೇ, ಫೋನ್‌ಗಳಿಗೆ ಏನು ಸಮಸ್ಯೆ ಇಲ್ಲ.

ಓವರ್ ಚಾರ್ಜ್‌ ಬೇಡಾ

ಓವರ್ ಚಾರ್ಜ್‌ ಬೇಡಾ

ಫೋನ್ ಚಾರ್ಜರ್ ಕಂಡ ಕೂಡಲೇ ಚಾರ್ಜಿಂಗ್ ಹಾಕುವುದು ಹಾಗೆಯೇ ಪದೇ ಪದೇ ಮೊಬೈಲ್ ಚಾರ್ಜ್ ಮಾಡುವ ಅಭ್ಯಾಸ ಬಿಟ್ಟುಬಿಡಿ. ಮೊಬೈಲ್ ಬ್ಯಾಟರಿಯನ್ನು ಒಮ್ಮೆ ( 80%-90%) ಪೂರ್ತಿಯಾಗುವವರೆಗೂ ಚಾರ್ಜ್ ಮಾಡಿ. ಪದೇ ಪದೇ ಚಾರ್ಜ್ ಮಾಡುವುದರಿಂದ ಬ್ಯಾಟರಿ ಮೇಲೆ ಪರಿಣಾಮ ಬೀರುತ್ತದೆ ಮತ್ತು ಸ್ಮಾರ್ಟ್‌ಫೋನಿನ ಬ್ಯಾಟರಿ ಚಾರ್ಜ್ ಪಿನ್ ಸಹ ಹಾಳಾಗಿಬಿಡುತ್ತದೆ.

ಬ್ಯಾಟರಿ ಸೇವಿಂಗ್ ಆಪ್ಸ್‌

ಬ್ಯಾಟರಿ ಸೇವಿಂಗ್ ಆಪ್ಸ್‌

ಬ್ಯಾಟರಿ ಸೇವಿಂಗ್ ಗಾಗಿ ಥರ್ಡ್ ಪಾರ್ಟಿ ಬ್ಯಾಟರಿ ಆಪ್‌ಗಳನ್ನು ಬಳಸುತ್ತಿದ್ದರೇ ಮೊದಲು ಡಿಲೀಟ್ ಮಾಡಿ. ಈ ಥರ್ಡ್ ಪಾರ್ಟಿ ಬ್ಯಾಟರಿ ಆಪ್‌ಗಳೂ ಜಾಹೀರಾತುಗಳನ್ನು ನಿಮ್ಮ ಸ್ಮಾರ್ಟ್‌ಫೋನಿಗೆ ಲೋಡ್ ಮಾಡುವುದಲ್ಲದೇ, ಇತರ ಆಪ್‌ಗಳನ್ನು ಡೌನ್‌ಲೋಡ್ ಮಾಡಲು ನಿಮಗಾಗಿ ಶಿಫಾರಸ್ಸು ಮಾಡುತ್ತಲೇ ಇರುತ್ತವೆ. ಜೊತೆಗೆ ಫೋನ್ ಬ್ಯಾಟರಿಯನ್ನು ಸಹ ಕಬಳಿಸುತ್ತಲೇ ಇರುತ್ತದೆ.

ಮೇಲಿಂದ ಮೇಲೆ ಚಾರ್ಜ್

ಮೇಲಿಂದ ಮೇಲೆ ಚಾರ್ಜ್

ಪೂರ್ಣ ರಾತ್ರಿಯಿಡೀ ಫೋನನ್ನು ಚಾರ್ಜ್‌ಗೆ ಇಡುವುದು ಹಾಗೂ ಮೇಲಿಂದ ಮೇಲೆ ಚಾರ್ಜ್ ಮಾಡುವುದು ಕೂಡ ಒಳ್ಳೆಯ ಅಭ್ಯಾಸವೇನಲ್ಲ. ಮೊಬೈಲ್ ಚಾರ್ಜ್ ಮಾಡುವಾಗ ಹೆಚ್ಚೆಂದರೆ ಶೇ.85%ರಷ್ಟು ಬ್ಯಾಟರಿ ಚಾರ್ಜ್ ಮಾಡಿ ಮತ್ತು ಕಡಿಮೆ ಎಂದರೂ 20 ಪರ್ಸೆಂಟ್ ಬ್ಯಾಟರಿ ಚಾರ್ಜ್ ಇರುವಂತೆ ನೋಡಿಕೊಳ್ಳಿ. ಅಗತ್ಯಕ್ಕಿಂತ ಹೆಚ್ಚು ಚಾರ್ಜಿಂಗ್ ನಿಮ್ಮ ಫೋನ್ ಬ್ಯಾಟರಿಯ ಬಾಳಿಕೆಯನ್ನು ಕಡಿತಗೊಳಿಸಬಹುದು.

Most Read Articles
Best Mobiles in India

English summary
How To Clean Earphones: Follow These Simple Tips.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X