ಅಮೆಜಾನ್‌ ಪ್ರೈಮ್‌ ವಿಡಿಯೋ ಸರ್ಚ್‌ ಹಿಸ್ಟರಿ ಡಿಲೀಟ್ ಮಾಡುವುದು ಹೇಗೆ?

|

ಪ್ರಸ್ತುತ ಮನರಂಜನೆಗಾಗಿ ಸ್ಮಾರ್ಟ್‌ಫೋನ್‌ನಲ್ಲಿ ಹಲವು ಭಿನ್ನ ಆಪ್ಸ್‌ಗಳು ಲಭ್ಯ ಇವೆ. ಆ ಪೈಕಿ ಇತ್ತೀಚಿಗಂತೂ ಓಟಿಟಿ- ವಿಡಿಯೊ ಸ್ಟ್ರಿಮಿಂಗ್ ಅಪ್ಲಿಕೇಶನ್‌ಗಳು ವ್ಯಾಪಕ ಲೀಡಿಂಗ್‌ನಲ್ಲಿ ಕಾಣಿಸಿಕೊಳ್ಳುತ್ತಿವೆ. ಮುಖ್ಯವಾಗಿ ನೆಟ್‌ಫ್ಲೆಕ್ಸ್‌, ಅಮೆಜಾನ್ ಪ್ರೈಮ್ ವಿಡಿಯೋ, ಜೀ5, ಹಾಟ್‌ಸ್ಟಾರ್, ಸೇರಿದಂತೆ ಹಲವು ಓಟಿಟಿ ಆಪ್ಸ್‌ಗಳು ಹೊಸ ತರಹದ ಕಾರ್ಯಕ್ರಮಗಳ ಮೂಲಕ ವೀಕ್ಷಕರನ್ನು ತಮ್ಮತ್ತ ಸೆಳೆದಿವೆ. ಇನ್ನು ಈ ಆಪ್‌ನಲ್ಲಿ ಹಲವು ಟಿವಿ ಶೋ ಮತ್ತು ಜನಪ್ರಿಯ ಸಿನಿಮಾಗಳನ್ನು ಅತ್ಯುತ್ತಮ ಗುಣಮಟ್ಟದಲ್ಲಿ ವೀಕ್ಷಿಸಬಹುದಾಗಿದೆ.

ಪ್ಲಾಟ್‌ಫಾರ್ಮ್

ಹೌದು, ಓಟಿಟಿ ಪ್ಲಾಟ್‌ಫಾರ್ಮ್ ಗಳು ವೀಕ್ಷಕರಿಗೆ ಹೊಸ ಅನುಭೂತಿಯನ್ನು ಒದಗಿಸಿವೆ. ಈ ವಿಡಿಯೊ ಸ್ಟ್ರಿಮಿಂಗ್ ಆಪ್ಸ್‌ಗಳಲ್ಲಿ ಸದ್ಯ ನೆಟ್‌ಫ್ಲಿಕ್ಸ್‌ ಮತ್ತು ಅಮೆಜಾನ್ ಪ್ರೈಮ್ ವಿಡಿಯೋ ಭಾರಿ ಟ್ರೆಂಡಿಂಗ್‌ ಇವೆ. ಈ ತಾಣಗಳು ಜನಪ್ರಿಯ ವೆಬ್‌ ಸಿರೀಸ್‌ ಶೋ ಮತ್ತು ಹೊಸ ಸಿನಿಮಾಗಳಿಂದ ವೀಕ್ಷಕ ಸಮೂಹವನ್ನು ಹಿಡಿದಿಟ್ಟುಕೊಂಡಿವೆ. ಬಳಕೆದಾರರು ಅಮೆಜಾನ್ ಪ್ರೈಮ್ ವಿಡಿಯೋದ ಸರ್ಚ್‌ನಲ್ಲಿ ಅನೇಕ ವಿಡಿಯೊಗಳನ್ನು ಸರ್ಚ್ ಮಾಡಿರುತ್ತಾರೆ ಆದರೆ ಎಷ್ಟೋ ಬಾರಿ ಸರ್ಚ್‌ ಹಿಸ್ಟರಿ ಡಿಲೀಟ್ ಮಾಡುವುದೇ ಇಲ್ಲ. ಆದರೆ ಸರ್ಚ್ ಹಿಸ್ಟರಿ ಕ್ಲಿಯರ್ ಮಾಡುವುದು ಉತ್ತಮ. ಹಾಗಾದರೇ ಅಮೆಜಾನ್ ಪ್ರೈಮ್ ವಿಡಿಯೋ ಆಪ್‌ನಲ್ಲಿ ಸರ್ಚ್‌ ಹಿಸ್ಟರಿ ಡಿಲೀಟ್ ಮಾಡುವುದು ಹೇಗೆ ಎಂಬುದನ್ನು ನೋಡೋಣ ಬನ್ನಿರಿ.

ಅಮೆಜಾನ್ ಪ್ರೈಮ್ ವಿಡಿಯೋ ಸರ್ಚ್ ಹಿಸ್ಟರಿ ಡಿಲೀಟ್ ಮಾಡಲು ಈ ಕ್ರಮ ಫಾಲೋ ಮಾಡಿ:

ಅಮೆಜಾನ್ ಪ್ರೈಮ್ ವಿಡಿಯೋ ಸರ್ಚ್ ಹಿಸ್ಟರಿ ಡಿಲೀಟ್ ಮಾಡಲು ಈ ಕ್ರಮ ಫಾಲೋ ಮಾಡಿ:

* ಮೊದಲಿಗೆ ಡಿವೈಸ್‌ನಲ್ಲಿ ಅಮೆಜಾನ್ ಪ್ರೈಮ್ ವಿಡಿಯೋ ಆಪ್ ಅನ್ನು ತೆರೆಯಿರಿ.
* ನಂತರ ಕೆಳಗಿನ ಬಲ ವಿಭಾಗದಲ್ಲಿರುವ ಮೈ ಸ್ಟಫ್ (My Stuff) ಅನ್ನು ಟ್ಯಾಪ್ ಮಾಡಿ.
* ಅಲ್ಲಿ ಪ್ರೈಮ್ ವಿಡಿಯೋ ಸೆಟ್ಟಿಂಗ್ಸ್ ಆರಂಭಿಸಲು ಮೇಲಿನ ಬಲ ಭಾಗದಲ್ಲಿ ಗೇರ್ ಐಕಾನ್ ಟ್ಯಾಪ್ ಮಾಡಿ.
* ಬಳಿಕ ವೀಡಿಯೊ ಸರ್ಚ್ ಹಿಸ್ಟರಿ ಯನ್ನು ಕ್ಲಿಯರ್ ಆಯ್ಕೆ ಕ್ಲಿಕ್ ಮಾಡಿ.

ಬ್ರೌಸರ್ ಮೂಲಕ ಅಮೆಜಾನ್ ಪ್ರೈಮ್‌ ವಿಡಿಯೋ ಸರ್ಚ್ ಹಿಸ್ಟರಿ ಡಿಲೀಟ್ ಮಾಡಲು ಹೀಗೆ ಮಾಡಿ:

ಬ್ರೌಸರ್ ಮೂಲಕ ಅಮೆಜಾನ್ ಪ್ರೈಮ್‌ ವಿಡಿಯೋ ಸರ್ಚ್ ಹಿಸ್ಟರಿ ಡಿಲೀಟ್ ಮಾಡಲು ಹೀಗೆ ಮಾಡಿ:

* ಮೊದಲಿಗೆ ಅಮೆಜಾನ್ ಪ್ರೈಮ್‌ ವಿಡಿಯೋ ವೆಬ್‌ಸೈಟ್‌ಗೆ ಹೋಗಿ
* ನಿಮ್ಮ ಖಾತೆಗೆ ಲಾಗ್ ಇನ್ ಮಾಡಿ ಪೇಜ್‌ನ ಮೇಲಿನ ಬಲ ಭಾಗದ ಕಾರ್ನರ್‌ನಲ್ಲಿರುವ ಗೇರ್ ಐಕಾನ್ ಮೇಲೆ ಕ್ಲಿಕ್ ಮಾಡಿ.
* ಆಗ ಡ್ರಾಪ್-ಡೌನ್ ಮೆನು ಕಾಣಿಸುತ್ತದೆ. ಅಲ್ಲಿ ನೀವು ಸೆಟ್ಟಿಂಗ್ಸ್ ಆಯ್ಕೆ ಮಾಡಿ.
* ಸರ್ಚ್ ಹಿಸ್ಟರಿ ವೀಕ್ಷಿಸಿ (Watch History.) ಆಯ್ಕೆ ಕ್ಲಿಕ್ ಮಾಡಿ.(ಒಂದು ವೇಳೆ ಮತ್ತೊಮ್ಮೆ ಲಾಗ್‌ ಇನ್ ಕೇಳಿದರೇ ಲಾಗ್ ಇನ್ ಮಾಡಿ)
* ನಂತರ ಡಿಲೀಟ್ ಮ್ಯೂವಿಸ್/ಎಪಿಸೋಡ್‌ ಸೆಲಕ್ಟ್ ಮಾಡಿ ಡಿಲೀಟ್ ಆಯ್ಕೆ ಕ್ಲಿಕ್ ಮಾಡಿ

ನೆಟ್‌ಫ್ಲಿಕ್ಸ್‌ನಲ್ಲಿ ಸರ್ಚ್ ಹಿಸ್ಟರಿ ಡಿಲೀಟ್ ಮಾಡಲು ಈ ಕ್ರಮ ಫಾಲೋ ಮಾಡಿರಿ:

ನೆಟ್‌ಫ್ಲಿಕ್ಸ್‌ನಲ್ಲಿ ಸರ್ಚ್ ಹಿಸ್ಟರಿ ಡಿಲೀಟ್ ಮಾಡಲು ಈ ಕ್ರಮ ಫಾಲೋ ಮಾಡಿರಿ:

ಆಂಡ್ರಾಯ್ಡ್ ಓಎಸ್‌ನಲ್ಲಿ ಸರ್ಚ್ ಹಿಸ್ಟರಿ ಡಿಲೀಟ್/ಹೈಡ್ ಮಾಡಲು ಹೀಗೆ ಮಾಡಿ
ಆಂಡ್ರಾಯ್ಡ್ ಡಿವೈಸ್‌ನಲ್ಲಿ ನಿಮ್ಮ ನೆಟ್‌ಫ್ಲಿಕ್ಸ್ ಖಾತೆಗೆ ಲಾಗ್ ಇನ್ ಆಗಿರಿ. ನಂತರ ಬಲ ಭಾಗದ ಬಾಟಮ್‌ನಲ್ಲಿ ಕಾಣುವ 'ಮೋರ್' ಟ್ಯಾಬ್ ಆಯ್ಕೆ ಸೆಲೆಕ್ಟ್ ಮಾಡಿರಿ. ಆನಂತರ 'ಅಕೌಂಟ್' ಆಯ್ಕೆ ಮೇಲೆ ಕ್ಲಿಕ್ ಮಾಡಿ. ಆಗ ಕಾಣಿಸುವ 'ವ್ಯೂವಿಂಗ್ ಆಕ್ಟಿವಿಟಿ' ಆಯ್ಕೆಯನ್ನು ಒತ್ತಿರಿ. ಆನಂತರ 'ಹೈಡ್‌ ಆಲ್' ಆಯ್ಕೆಯನ್ನು ಸೆಲೆಕ್ಟ್ ಮಾಡಿ ವೀಕ್ಷಿಸಿದ ಎಲ್ಲ ಹಿಸ್ಟರಿಯನ್ನು ಕಾಣದಂತೆ ತಡೆಯಬಹುದು. ಅಥವಾ ಒಂದೊಂದೆ ಡಿಲೀಟ್ ಸಹ ಮಾಡಬಹುದಾಗಿದೆ.

ಐಫೋನ್‌ನಲ್ಲಿ ಸರ್ಚ್ ಹಿಸ್ಟರಿ ಡಿಲೀಟ್/ಹೈಡ್ ಮಾಡಲು ಹೀಗೆ ಮಾಡಿ

ಐಫೋನ್‌ನಲ್ಲಿ ಸರ್ಚ್ ಹಿಸ್ಟರಿ ಡಿಲೀಟ್/ಹೈಡ್ ಮಾಡಲು ಹೀಗೆ ಮಾಡಿ

* ನೆಟ್‌ಫ್ಲಿಕ್ಸ್ ತೆರೆದು ಬಲಗಡೆಯ ಸೈನ್‌ಇನ್ ಆಯ್ಕೆ ಮೂಲಕ ಲಾಗ್‌ಇನ್ ಆಗಿರಿ.
* ನಂತರ ಮೆನು ಆಯ್ಕೆಯನ್ನು ಕ್ಲಿಕ್ ಮಾಡಿರಿ
* ನಿಮ್ಮ ಖಾತೆಯನ್ನು ಟ್ಯಾಪ್ ಮಾಡಿರಿ
* ಸರ್ಚ್ ಹಿಸ್ಟರಿ ಡಿಲೀಟ್ ಮಾಡುವ ಪ್ರೊಫೈಲ್ ಸೆಲೆಕ್ಟ್ ಮಾಡಿ
* ಆನಂತರ ಮತ್ತೆ ಮೆನು ಆಯ್ಕೆ ಒತ್ತಿರಿ ಮತ್ತು ಅಕೌಂಟ್ ಟ್ಯಾಪ್ ಮಾಡಿ
* ಆಗ ವ್ಯೂವಿಂಗ್ ಆಕ್ಟಿವಿಟಿ ಆಯ್ಕೆ ಕಾಣಿಸುತ್ತದೆ.
* ಮೈ ಆಕ್ಟಿವಿಟಿಯ ಆಯ್ಕೆ ಕ್ಲಿಕ್ ಮಾಡಿ ಮತ್ತು ಹೈಡ್ (Hide) ಆಲ್ ಒತ್ತಿರಿ.

Most Read Articles
Best Mobiles in India

English summary
How To Clear Your Amazon Prime Video Search History.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X