ಎಸ್‌ಎಂಎಸ್‌ ಮೂಲಕ ಸ್ಮಾರ್ಟ್‌ಫೋನ್‌ ನಿಯಂತ್ರಿಸುವುದು ಹೇಗೆ?

Posted By: Staff
ಎಸ್‌ಎಂಎಸ್‌ ಮೂಲಕ ಸ್ಮಾರ್ಟ್‌ಫೋನ್‌ ನಿಯಂತ್ರಿಸುವುದು ಹೇಗೆ?
ಮೀಟಿಂಗ್‌ ನಲ್ಲಿದ್ದಾಗ ಅಥವಾ ಕ್ಲಾಸ್‌ ರೂಮಿನಲ್ಲಿ ಪಾಠ ಕೇಲುವಾಗ ಇದ್ದಕ್ಕಿದಂತೆ ನಮ್ಮ ಮೊಬೈಲ್‌ ಫೋನ್‌ ಬಡಿದುಕೊಳ್ಳಲು ಶುರುಮಾಡಿತೆಂದರೆ ಏನು ಮಾಡುವುದು ಎಂದು ದಿಕ್ಕೇ ತೋಚದಂತಾಗುತ್ತದೆ ಅಲ್ಲವೆ. ಇಂತಹ ಪರಿಸ್ಥಿತಿಯನ್ನು ಪ್ರತಿಯೊಬ್ಬರು ಒಂದಲ್ಲಾ ಒಂದು ಬಾರಿ ಅನುಭವಿಸಿಯೇ ಇರುತ್ತಾರೆ. ಅಂದಹಾಗೆ ಇಂದು ತಂತ್ರಜ್ಞಾನ ಯಾವರೀತಿ ಬೆಳೆದಿದೆ ಎಂದರೆ ನಿಮ್ಮ ಮೊಬೈಲ್‌ ಫೋನ್‌ ಜೇಬಿನಿಂದ ಹೊರತೆಗೆಯದಂತೆಯೇ ಅದನ್ನು ಸೈಲೆಂಟ್‌ ಮೋಡ್‌ಗೆ ಹಾಕಬಹುದಾಗಿದೆ. ಆದರೆ ಇದಕ್ಕಾಗಿ ನೀವು ನಿಮ್ಮ ಸ್ನೇಹಿತರ ಅಥವಾ ಸಹೋದ್ಯೋಗಿಗಳ ಸಹಾಯ ಪಡೆದುಕೊಳ್ಳ ಬೇಕಾಗುತ್ತದೆ.

ಗೂಗಲ್‌ ಪ್ಲೇನಲ್ಲಿ ಅಗಸ್ಥ್ಯ ಹೆಸರಿನ ಒಂದು ಅಪ್ಲಿಕೇಷನ್‌ ಲಭ್ಯವಿದ್ದು ಈ ಅಪ್ಲಿಕೇಷನ್‌ ಮೂಲಕ ನಿಮ್ಮ ಫೋನ್‌ ನಿಯಂತ್ರಿಸುವುದರ ಜೊತೆಗೆ ಟ್ಯಾಬ್ಲೆಟ್‌ಗಳ ಫಂಕ್ಷನ್ಸ್‌ಗಳನ್ನು ದೂರದಿಂದಲೇ ಆಕ್ಟಿವೇಟ್‌ ಮಾಡ ಬಹುದಾಗಿದೆ.

ಆತುರದಲ್ಲಿ ನೀವು ನಿಮ್ಮ ಫೋನ್‌ ಮನೆಯಲ್ಲಯೇ ಬಿಟ್ಟು ಬಂದಿದ್ದೀರ ಅಂತ ಅಂದುಕೊಳ್ಳಿ, ಈಗ ತಕ್ಷಣಕ್ಕೆ ನಿಮ್ಮ ಕ್ಲೈಂಟ್‌ಗೆ ಕರೆ ಮಾಡಬೇಕಾದ ಸಂದರ್ಭ ಬರುತ್ತದೆ ಆದರೆ ಕ್ಲೈಂಟ್‌ ನಂಬರ್ ನಿಮ್ಮ ಮೋಬೈಲ್‌ ಫೋನ್‌ನಲ್ಲಿದೆ ಎಂದುಕೊಳ್ಳಿ ಇಂತಹ ಸಂದರ್ಭಗಳಲ್ಲಿ ಅಗಸ್ಥ್ಯ ಅಪ್ಲಿಕೇಷನ್‌ ಮೂಲಕ ನಿಮ್ಮ ಆಫೀಸ್‌ನಲ್ಲಿಯೇ ಕುಳಿತು ನಿಮ್ಮ ಮನೆಯಲ್ಲಿರುವ ಮೊಬೈಲ್‌ ಫೋನ್‌ನಲ್ಲಿರುವ ಎಲ್ಲಾ ಕಾಂಟ್ಯಾಕ್ಟ್‌ ನಂಬರ್‌ಗಳನ್ನು ಪಡೆದುಕೊಳ್ಳ ಬಹುದಾಗಿದೆ.

ಮೀಟಿಂಗ್‌ನಲ್ಲಿರುವ ಸಂದರ್ಭದಲ್ಲಿ ನಿಮ್ಮ ಮೊಬೈಲ್‌ ಫೋನ್‌ ಸೈಲೆಂಟ್‌ ಮೋಡ್‌ನಲ್ಲಿಡ ಬೇಕಾದರೆ ಹೊರಗಿನಿಂದಲೇ ಮತ್ತೊಂದು ಮೊಬೈಲ್‌ ಫೋನ್‌ ಮೂಲಕ ಒಂದೇ ಒಂದು ಎಸ್‌ಎಂಎಸ್‌ ಕಳುಹಿಸಿದರೆ ಸಾಕು ನಿಮ್ಮ ಮೊಬೈಲ್‌ ಸೈಲೆಂಟ್‌ ಆಗಿಬಿಡುತ್ತದೆ. ಇದಲ್ಲದೆ ಫೋನ್‌ಗೆ ಬಂದಿರುವ ಹಿಂದಿನ 5 ಕರೆಗಳು ಹಾಗೂ ಎಸ್‌ಎಂಎಸ್‌ಗಳನ್ನು ಕೂಡಾ ವೀಕ್ಷಿಸ ಬುದಾಗಿದೆ.

ನಿಮ್ಮ ಆಂಡ್ರಾಯ್ಡ್‌ ಸ್ಮಾರ್ಟ್‌ ಫೋನ್‌ ನಿಯಂತತ್ರಿಸಲು ಯಾವ ಎಸ್‌ಎಂಎಸ್‌ ಮಾಡಬೇಕು

  • ಸೈಲೆಂಟ್‌ ಮೋಡ್‌ಗೆ ಪರಿವರ್ತಿಸಲು (SILENT) ಟೈಪ್‌ ಮಾಡಿಕಳುಹಿಸಿ.

  • ಸೈಲೆಂಟ್‌ ಮೋಡ್‌ ರದ್ದು ಪಡಿಸಲು (RINGER) ಎಂದು ಕಳುಹಿಸಿ.

  • ನಿಮ್ಮ ಮೊಬೈಲ್‌ ಫೋನ್‌ನ ಐಎಂಇಐ ನಂಬರ್‌ ತಿಳಿಯಲು (IMEI) ಎಂದು ಕಳುಹಿಸಿ.

  • ಹಿಂದಿನ ಕರೆಗಳನ್ನು ತಿಳಿದುಕೊಳ್ಳಲು (LAST CALLS) ಎಂದು ಎಸ್‌ಎಂಎಸ್‌ ಮಾಡಿ.

  • ಫೋನ್‌ನಲ್ಲಿ ಸೇವ್‌ ಮಾಡಲಾಗಿರುವ ಸಂಪರ್ಕ ಸಂಖ್ಯೆಯನ್ನು ಪಡೆಯಲು () ಎಸ್‌ಎಂಎಸ್‌ ಕಳುಹಿಸಿ.

ಅಗಸ್ಥ್ಯ ಅಪ್ಲಿಕೇಷನ್‌ ಬಳಸುವುದು ಹೇಗೆ?

  • ಮೊದಲಿಗೆ ಗೂಗಲ್‌ ಪ್ಲೇ ಮೂಲಕ 'ಅಗಸ್ಥ್ಯ' ಅಪ್ಲಿಕೇಷನ್‌ ಡೌನ್ಲೋಡ್‌ ಮಾಡಿಕೊಳ್ಳಿ.

  • ನಂತರ ಅಪ್ಲಿಕೇಷನ್‌ ಓಪನ್‌ ಮಾಡಿ ಸದರಲ್ಲಿ ನಿಮ್ಮ ಅಕೌಂಟ್‌ ಕ್ರಿಯೇಟ್‌ ಮಾಡಿ.

  • ಅಪ್ಲಿಕೇಷನ್‌ ಡೌನ್ಲೋಡ್‌ ಮಾಡಿಕೊಂಡ ಬಳಿಕ ನಿಮ್ಮ ಸ್ಮಾರ್ಟ್ಫೋನ್‌ನಲ್ಲಿನ ಎಲ್ಲಾ ಕಾಂಟ್ಯಾಕ್ಟ್‌ ನಂಬರ್‌ಗಳು ಅಪ್ಲಿಕೇಷನ್‌ನಲ್ಲಿ ಸೇವ್‌ ಆಗಿಬಿಡುತ್ತದೆ. ಇದರಿಂದಾಗಿ ನಿಮಗೆ ಬೇಕಾದ ಮಾಹಿತಿಯನ್ನು ಮತ್ತೊಂದು ಮೊಬೈಲ್‌ ಫೋನ್‌ನಿಂದ ಎಸ್‌ಎಂಎಸ್‌ ಮಾಡದಲ್ಲಿ ನೀವು ಕೇಳಿದ ಮಾಹಿತಿಯನ್ನು ಅಪ್ಲಿಕೇಷನ್‌ ಅದೇ ನಂಬರ್‌ಗೆ ಎಸ್‌ಎಂಎಸ್‌ ಮೂಲಕ ಮಾಹಿತಿ ಕಳುಹಿಸುತ್ತದೆ.

ಅಂದಹಾಗೆ ಈ ಅಪ್ಲಿಕೇಷನ್‌ ಹೈ ಎಂಡ್ ಸಿಂಬಿಯನ್‌ ಸ್ಮಾರ್ಟ್‌ಫೋನ್ಸ್‌, ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್ಸ್, ಐಓಎಸ್‌ ಸ್ಮಾರ್ಟ್‌ಫೋನ್ಸ್‌ ಹಾಗೂ ಬ್ಲಾಕ್‌ ಬೆರಿ ಸ್ಮಾರ್ಟ್‌ಫೋನ್ಸ್‌ಗಳಿಗೆ ಸಹಕರಿಸಬಲ್ಲ ಮಾದರಿಗಳಲ್ಲಿ ಲಭ್ಯವಿದೆ.

ಸ್ಮಾರ್ಟ್‌ಫೋನ್‌ ಮೂಲಕ ಭೂತಗಳನ್ನು ಹುಡುಕುವುದು ಹೇಗೆ?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot