ವಾಟ್ಸಾಪ್‌ನಲ್ಲಿ ಸೆಂಡ್ ಆದ, ಆದರೆ ಡಿಲಿವರಿಯಾಗದ ಮೆಸೇಜ್‌ ಡಿಲೀಟ್‌ ಹೇಗೆ?

By Suneel
|

ವಾಟ್ಸಾಪ್ ಅನ್ನು ಇಂದು ದಿನನಿತ್ಯವು ಬಹುಸಂಖ್ಯಾತರು ಬಳಸುತ್ತಾರೆ. 700 ದಶಲಕ್ಷ ಬಳಕೆದಾರರನ್ನು ಮತ್ತು 1 ಶತಕೋಟಿ ಪ್ರತಿ ತಿಂಗಳ ಬಳಕೆದಾರರನ್ನು ವಾಟ್ಸಾಪ್‌ ಹೊಂದಿದೆ. ಅಲ್ಲದೇ ಟಾಪ್‌ ಒನ್‌ ಮೆಸೇಜಿಂಗ್‌ ಆಪ್ ಸಹ ಆಗಿದೆ.

ವಾಟ್ಸಾಪ್‌ನಲ್ಲಿ ಸೆಂಡ್ ಆದ, ಆದರೆ ಡಿಲಿವರಿಯಾಗದ ಮೆಸೇಜ್‌ ಡಿಲೀಟ್‌ ಹೇಗೆ?

ವಾಟ್ಸಾಪ್‌ ಅನ್ನು ದಿನನಿತ್ಯ ಬಳಸುವವರು ನಿರ್ದಿಷ್ಟ ವ್ಯಕ್ತಿಗೆ ಯಾವುದಾದರೂ ಮೆಸೇಜ್‌ ಕಳುಹಿಸುವಾಗ ತಪ್ಪಾಗಿ ಸೆಂಡ್ ಮಾಡುತ್ತಾರೆ. ಹಾಗೆ ಕೆಲವು ಮೀಡಿಯಾ, ವೀಡಿಯೊ ಫೈಲ್‌ಗಳನ್ನು ಸಹ ಯಾರಿಗೋ ಕಳುಹಿಸಲು ಹೋಗಿ ಇನ್ಯಾರಿಗೋ ಆಕಸ್ಮಿಕವಾಗಿ ಕಳುಹಿಸುತ್ತಾರೆ. ಕೆಲವೊಮ್ಮೆ ಇಂತಹ ತಪ್ಪು ಮೆಸೇಜ್‌ಗಳಿಂದಾಗಿ ಸ್ನೇಹಿತರ, ಸ್ನೇಹಿತೆಯರ ನಡುವೆ ಜಗಳಗಳು, ವೈಮನಸ್ಸುಗಳು ಉಂಟಾಗಬಹುದು.

ವಾಟ್ಸಾಪ್‌ನಲ್ಲಿ ಯಾವುದಾದರೂ ಕಾಂಟ್ಯಾಕ್ಟ್ ಬ್ಲಾಕ್‌ ಮಾಡಿದರೆ ಏನಾಗಬಹುದು ಗೊತ್ತೇ?

ಅಂದಹಾಗೆ ಇಂದಿನ ಲೇಖನದಲ್ಲಿ ವಾಟ್ಸಾಪ್‌ನಲ್ಲಿ ತಪ್ಪಾಗಿ ಸೆಂಡ್‌ ಮಾಡಿದ ಮೆಸೇಜ್‌ಗಳು ಡಿಲಿವರಿ ಆಗಿರದಿದ್ದಲ್ಲಿ, ಅಂತಹ ಮೆಸೇಜ್‌ಗಳನ್ನು ಡಿಲೀಟ್‌ ಮಾಡುವುದು ಹೇಗೆ ಎಂದು ತಿಳಿಸುತ್ತಿದ್ದೇವೆ. ಈ ಸರಳ ಹಂತಗಳನ್ನು ಆಂಡ್ರಾಯ್ಡ್ ಮತ್ತು ಐಓಎಸ್‌ ಬಳಕೆದಾರರು ಪ್ರಯತ್ನಿಸಬಹುದು. ನಾವು ತಿಳಿಸುವ ಹಂತಗಳನ್ನು ಫಾಲೋ ಮಾಡುವ ಮೊದಲು ಕೆಳಗಿನ 4 ವಾಟ್ಸಾಪ್‌ ಮೆಸೇಜ್‌ಗಳನ್ನು ಓದಿಕೊಳ್ಳಿ

ಕ್ಲಾಕ್ ಸಿಂಬಲ್‌: ವಾಟ್ಸಾಪ್‌ನಲ್ಲಿ ಕ್ಲಾಕ್‌ ಸಿಂಬಲ್‌ ಇದ್ದಲ್ಲಿ ನೀವು ಕಳುಹಿಸಿದ ಮೆಸೇಜ್‌ ಇನ್ನೂ ಸಹ ಸೆಂಟ್ ಆಗಿಲ್ಲ. ನೆಟ್‌ವರ್ಕ್ ಮತ್ತು ಸಂಪರ್ಕದ ಸಮಸ್ಯೆಯಿಂದ ಸಂಪೂರ್ಣವಾಗಿ ಸೆಂಟ್‌ ಆಗಿರುವುದಿಲ್ಲ.
ಸಿಂಗಲ್‌ ಟಿಕ್‌ ಮಾರ್ಕ್: ಸಿಂಗಲ್‌ ಟಿಕ್‌ ಪ್ರದರ್ಶನವಾದಲ್ಲಿ ಮೆಸೇಜ್‌ ನಿಮ್ಮ ಕಡೆಯಿಂದ ಸೆಂಟ್‌ ಆಗಿದೆ. ಅದರೆ ಅವರಿಗೆ ಡಿಲಿವರಿ ಆಗಿಲ್ಲ ಎಂದರ್ಥ
ಡಬಲ್ ಟಿಕ್‌ ಮಾರ್ಕ್: ಈ ಮಾರ್ಕ್‌ ಯಶಸ್ವಿಯಾಗಿ ಡಿಲಿವರಿಯಾಗಿದೆ ಎಂಬುದನ್ನು ಸೂಚಿಸುತ್ತದೆ. ಆದರೆ ಅವರು ಇನ್ನು ಸಹ ಓದಿಲ್ಲ ಎಂದರ್ಥ
ಡಬಲ್‌ ಟಿಕ್‌ ಮಾರ್ಕ್‌ಗಳು ನೀಲಿ ಬಣ್ಣದಲ್ಲಿ ಪ್ರದರ್ಶನ: ಮೆಸೇಜ್‌ ಸ್ವೀಕೃತಿದಾರರಿಗೆ ಯಶಸ್ವಿಯಾಗಿ ಸೆಂಡ್‌ ಆಗಿದೆ ಮತ್ತು ಅವರು ಮೆಸೇಜ್‌ ಅನ್ನು ನೋಡಿದ್ದಾರೆ ಎಂದರ್ಥ

ವಾಟ್ಸಾಪ್‌ನಲ್ಲಿ ಸೆಂಡ್ ಆದ, ಆದರೆ ಡಿಲಿವರಿಯಾಗದ ಮೆಸೇಜ್‌ ಡಿಲೀಟ್‌ ಹೇಗೆ?

ಹಂತ 1: ಮೆಸೇಜ್‌ ಇನ್ನೂ ಸಹ ಸೆಂಟ್‌ ಆಗಿಲ್ಲ
ನಿರ್ದಿಷ್ಟ ವ್ಯಕ್ತಿಗೆ ಸೆಂಡ್ ಮಾಡಿದ ಮೆಸೇಜ್‌ ಅನ್ನು ನೀವು ಸೆಂಡ್ ಮಾಡಬಾರದಿತ್ತು ಎಂದು ಭಾವಿಸಿದಲ್ಲಿ, ಸೆಂಡ್‌ ಮಾಡಿರುವ ಮೆಸೇಜ್‌, ಕ್ಲಾಕ್‌ ಸಿಂಬಲ್ ತೋರಿಸುತ್ತಿದ್ದಲ್ಲಿ, ಆ ಮೆಸೇಜ್‌ ಅನ್ನು ಡಿಲೀಟ್ ಮಾಡಿ. ಅದು ಆ ವ್ಯಕ್ತಿಗೆ ಸೆಂಡ್‌ ಆಗುವುದಿಲ್ಲ.

ಈ ರೀತಿಯ ಸಮಸ್ಯೆ ವಾಟ್ಸಾಪ್‌ ಸರ್ವರ್‌ ಕನೆಕ್ಟ್‌ ಆಗದಿರುವ ಸಮಯದಲ್ಲಿ ಆಗುತ್ತದೆ.

ಹಂತ 2: ಮೆಸೇಜ್‌ ಯಶಸ್ವಿಯಾಗಿ ಸೆಂಡ್‌ ಆಗಿದ್ದಲ್ಲಿ
ನಿಮ್ಮ ಆಪೋಸಿಟ್‌ ವ್ಯಕ್ತಿಗೆ ಮೆಸೇಜ್‌ ಸೆಂಡ್‌ ಮಾಡಿದ್ದೀರಿ, ಆದರೆ ಮೆಸೇಜ್‌ ಅನ್ನು ತಪ್ಪು ವ್ಯಕ್ತಿಗೆ ಕಳುಹಿಸಿದ್ದೀರಿ. ಇದರಿಂದ ತಿಳಿಯಬಹುದಾದ ಸೂಚನೆ ಎಂದರೆ ನೀವು ಖಚಿತವಾಗಿ ಮೆಸೇಜ್‌ ಸೆಂಡ್‌ ಮಾಡಬೇಕಿದ್ದ ವ್ಯಕ್ತಿ ಇಂಟರ್ನೆಟ್ ಸಂಪರ್ಕ ಪಡೆದಿಲ್ಲ ಅಥವಾ ಇದುವರೆಗೂ ವಾಟ್ಸಾಪ್‌ ಅನ್ನು ಮೊಬೈಲ್‌ಗೆ ಇನ್‌ಸ್ಟಾಲ್ ಮಾಡಿಲ್ಲ ಎಂದರ್ಥ. ಆದರೆ ಮೆಸೇಜ್‌ ಅವರು ಇಂಟರ್ನೆಟ್ ಸಂಪರ್ಕ ಪಡೆದಲ್ಲಿ ಡಿಲಿವರಿ ಆಗುತ್ತದೆ. ಅದುವರೆಗೆ ಮೆಸೇಜ್‌ ವಾಟ್ಸಾಪ್‌ ಸರ್ವರ್‌ನಲ್ಲಿ ಸ್ಟೋರ್ ಅಗಿರುತ್ತದೆ. ಆ ಮೆಸೇಜ್‌ ಡಿಲಿವರಿ ಆಗದಂತೆ ತಡೆಯುವುದು ಹೇಗೆ ಎಂದು ಮುಂದೆ ಓದಿ ತಿಳಿಯಿರಿ.

ವಾಟ್ಸಾಪ್‌ನಲ್ಲಿ ಸೆಂಡ್ ಆದ, ಆದರೆ ಡಿಲಿವರಿಯಾಗದ ಮೆಸೇಜ್‌ ಡಿಲೀಟ್‌ ಹೇಗೆ?

ಸುಲಭ ಮಾರ್ಗವೆಂದರೆ, ವಾಟ್ಸಾಪ್(WhatsApp) ಖಾತೆಯಲ್ಲಿ ಆ ಕಾಂಟ್ಯಾಕ್ಟ್ ಅನ್ನು 30 ದಿನಗಳವರೆಗೆ ಬ್ಲಾಕ್‌ ಮಾಡಿ. ಕಾರಣ ವಾಟ್ಸಾಪ್ ಡಿಲಿವರಿ ಆಗದ ಮೆಸೇಜ್‌ಗಳನ್ನು 30 ದಿನಗಳವರೆಗೆ ಸ್ಟೋರ್‌ ಮಾಡಿಕೊಂಡಿರುತ್ತದೆ. 30 ದಿನದೊಳಗೆ ಅವರನ್ನು ಅನ್‌ಬ್ಲಾಕ್‌ ಮಾಡದಿರಿ, ನಂತರ ಅವರಿಗೆ ನಿಮ್ಮ ಮೆಸೇಜ್‌ ಸೆಂಡ್ ಆಗುವುದಿಲ್ಲ. 30 ದಿನಗಳೊಳಗೆ ಅನ್‌ಬ್ಲಾಕ್ ಮಾಡಿದರೆ ಮೆಸೇಜ್‌ ಡಿಲಿವರಿ ಆಗುತ್ತದೆ.

ಹಂತ 3 ಮತ್ತು ಹಂತ 4: ಮೆಸೇಜ್‌ ಡಿಲಿವರಿ
ಮೆಸೇಜ್‌ ಡಿಲೀಟ್ ಅನ್ನು ನೆನಪಿಸಿಕೊಂಡಾಗಲೇ ನಿರ್ವಹಿಸಿ. ನಂತರದಲ್ಲಿ ಭಾಗಶಃ ನೆನಪಿಸಿಕೊಳ್ಳಲು ಸಾಧ್ಯವಿಲ್ಲ.

Best Mobiles in India

English summary
How to Delete Already Sent, Undelivered Messages in WhatsApp. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X