ಫೇಸ್‌ಬುಕ್ ಸರ್ಚ್ ರಿಸಲ್ಟ್ ಡಿಲೀಟ್ ಮಾಡುವುದು ಹೇಗೆ?

By Shwetha
|

ಇಂದು ಪ್ರತಿಯೊಬ್ಬರೂ ವಿಶ್ವದ ಅತಿದೊಡ್ಡ ಸಾಮಾಜಿಕ ಮಾಧ್ಯಮದಲ್ಲಿ ಖಾತೆಯನ್ನು ಸಂಗ್ರಹಿಸಿಡುತ್ತಾರೆ. ನಿಮ್ಮ ಹುಡುಕಾಟ ವಿವರ ಕೂಡ ಟಾಪ್‌ನಲ್ಲಿ ಗೋಚರಿಸುತ್ತದೆ. ಕೆಲವೊಂದು ಹೆಸರುಗಳನ್ನು ಆಟೊ ಸ್ಟೋರ್ ಮಾಡುವುದು ನಿಮಗೆ ಸರಳವಾಗಿರುತ್ತದೆ, ಆದರೆ ಇದು ನಿಮ್ಮನ್ನು ತೊಂದರೆಗೆ ಸಿಲುಕಿಸುತ್ತದೆ. ಅದರಲ್ಲೂ ನಿಮ್ಮ ಆಪ್ತರು ನಿಮ್ಮ ಹುಡುಕಾಟ ಇತಿಹಾಸವನ್ನು ವೀಕ್ಷಿಸುವಾಗ ಇದು ನಿಮ್ಮನ್ನು ಸಂಕಷ್ಟಕ್ಕೆ ಸಿಲುಕಿಸಬಹುದು.

ಓದಿರಿ: ವಾಟ್ಸಾಪ್ ಬಗ್ಗೆ ಯಾರು ತಿಳಿಯದ 10 ಕ್ರೇಜಿ ವಿಷಯಗಳು

ಹೀಗೆ ತಮ್ಮ ಪತಿ/ಪತ್ನಿಯರು ಸಂಬಂಧಿಕರ ಎದುರು ಮುಜುಗರದ ಸನ್ನಿವೇಶವನ್ನು ತೊಡೆದು ಹಾಕಲು, ಇಂದಿನ ಲೇಖನದಲ್ಲಿ ಇತ್ತೀಚಿನ ಫೇಸ್‌ಬುಕ್ ಸರ್ಚ್ ಇತಿಹಾಸವನ್ನು ವೆಬ್‌ ಮತ್ತು ಫೇಸ್‌ಬುಕ್ ಅಪ್ಲಿಕೇಶನ್‌ನಿಂದ ಡಿಲೀಟ್ ಮಾಡುವುದು ಹೇಗೆ ಎಂಬುದನ್ನು ಕೆಳಗಿನ ವಿಧಾನಗಳಿಂದ ತಿಳಿದುಕೊಳ್ಳಿರಿ.

ಹಂತ: 1

ಹಂತ: 1

ವೆಬ್‌ಸೈಟ್‌ನಲ್ಲಿ, ನಿಮ್ಮ ಪ್ರೊಫೈಲ್ ಪೇಜ್‌ಗೆ ಹೋಗಿ ಮತ್ತು ಇಲ್ಲಿ 'ಆಕ್ಟಿವಿಟಿ ಲಾಗ್' ಅಥವಾ 'ವ್ಯೂ ಆಕ್ಟವಿಟಿ ಲಾಗ್' ಆಪ್ಶನ್ ಅನ್ನು ಹುಡುಕಾಡಿ. ನಿಮ್ಮ ಕವರ್ ಪುಟದ ಬಲ ಮೇಲ್ಭಾಗದಲ್ಲಿ ಈ ಆಪ್ಶನ್ ಅನ್ನು ಕಂಡುಕೊಳ್ಳುತ್ತೀರಿ.

ಹಂತ:2

ಹಂತ:2

'ಆಕ್ಟಿವಿಟಿ ಲಾಗ್' ಆಪ್ಶನ್ ಅನ್ನು ಒಮ್ಮೆ ನೀವು ಕ್ಲಿಕ್ ಮಾಡಿದ ನಂತರ, ನೀವು ಲೈಕ್ ಮಾಡಿದ, ರಿಯಾಕ್ಟ್ ಮಾಡಿದ, ಕಮೆಂಟ್ ಅಥವಾ ಶೇರ್ ಮಾಡಿದ ನಿಮ್ಮ ಚಟುವಟಿಕೆಗಳನ್ನು ಕಂಡುಕೊಳ್ಳುತ್ತೀರಿ. ಇದೇ ಪುಟದಲ್ಲಿ ಫೋಟೋಗಳ, ಲೈಕ್ಸ್ ಮತ್ತು ಕಾಮೆಂಟ್ ಸೆಕ್ಶನ್‌ಗಳ ಕೆಳಗೆ ಎಡಭಾಗದಲ್ಲಿ ಮೋರ್ ಆಪ್ಶನ್ ಅನ್ನು ನೀವು ಕಾಣುತ್ತೀರಿ.

ಹಂತ:3

ಹಂತ:3

'ಮೋರ್' ಆಪ್ಶನ್ ಅನ್ನು ಕ್ಲಿಕ್ ಮಾಡುವ ಮೂಲಕ, ಫಿಲ್ಟರ್‌ಗಳ ವಿಸ್ತರಿತ ಪಟ್ಟಿಯನ್ನು ನೀವು ಕಂಡುಕೊಳ್ಳುತ್ತೀರಿ. ಈ ಪಟ್ಟಿಯಲ್ಲಿ, 'ಸರ್ಚ್' ಟ್ಯಾಬ್ ಅನ್ನು ನೀವು ಕಾಣುತ್ತೀರಿ.

ಹಂತ: 4

ಹಂತ: 4

'ಸರ್ಚ್' ಟ್ಯಾಬ್‌ನ ಒಳಭಾಗದಲ್ಲಿ, ನಿಮಗೆ ಎಲ್ಲಾ ಪುಟಗಳ ಸಂಪೂರ್ಣ ಪಟ್ಟಿ ದೊರೆಯುತ್ತದೆ ಮತ್ತು ನೀವು ಇದುವರೆಗೆ ಹುಡುಕಾಡಿದ ಬಳಕೆದಾರರ ಪಟ್ಟಿ ಕೂಡ. ಸಮಯ, ದಿನಾಂಕ, ತಿಂಗಳು ಮತ್ತು ವರ್ಷವನ್ನು ಅನುಸರಿಸಿ ಈ ಹುಡುಕಾಟಗಳನ್ನು ಸಾರ್ಟ್ ಮಾಡಿರಲಾಗುತ್ತದೆ.

ಹಂತ: 5

ಹಂತ: 5

ಇದೇ ಪುಟದಲ್ಲಿ, ಬಲ ಮೇಲ್ಭಾಗದಲ್ಲಿ, 'ಕ್ಲಿಯರ್ ಸರ್ಚಸ್' ಟ್ಯಾಬ್‌ಗಾಗಿ ನೋಡಿ, ಫಲಿತಾಂಶಗಳನ್ನು ಶಾಶ್ವತವಾಗಿ ಅಳಿಸಲು ಅದರ ಮೇಲೆ ಕ್ಲಿಕ್ ಮಾಡಿ, ನಿಮ್ಮ ಕೆಲಸ ಆದಂತೆಯೇ!

ಫೇಸ್‌ಬುಕ್ ಅಪ್ಲಿಕೇಶನ್‌ನಲ್ಲೂ ಇದೇ ಕಾರ್ಯವನ್ನು ನಿಮಗೆ ಮಾಡಬಹುದಾಗಿದೆ

ಫೇಸ್‌ಬುಕ್ ಅಪ್ಲಿಕೇಶನ್‌ನಲ್ಲೂ ಇದೇ ಕಾರ್ಯವನ್ನು ನಿಮಗೆ ಮಾಡಬಹುದಾಗಿದೆ

ಅಪ್ಲಿಕೇಶನ್ ಒಳಗಡೆ ನೀವು ಹುಡುಕಾಟ ಬಾರ್ ಅನ್ನು ಸ್ಪರ್ಶಿಸಬೇಕಾಗುತ್ತದೆ ಇದು ನಿಮಗೆ ರೀಸೆಂಟ್ ಹುಡುಕಾಟಗಳ ಫಲಿತಾಂಶವನ್ನು ನೀಡುತ್ತದೆ.

ಆಕ್ಟಿವಿಟಿ ಲಾಗ್ ಪೇಜ್

ಆಕ್ಟಿವಿಟಿ ಲಾಗ್ ಪೇಜ್

ಅಪ್ಲಿಕೇಶನ್ ಒಳಭಾಗದಲ್ಲಿ ಬಲ ಮೇಲ್ಭಾಗದಲ್ಲಿ 'ಎಡಿಟ್' ಆಪ್ಶನ್ ನಿಮಗೆ ದೊರೆಯುತ್ತದೆ. ಇದನ್ನು ಕ್ಲಿಕ್ ಮಾಡುವುದು ನೀವು ದಿನಾಂಕದವರೆಗೆ ಹುಡುಕಾಡಿದ ಆಕ್ಟಿವಿಟಿ ಲಾಗ್ ಪೇಜ್ ಅನ್ನು ತೆರೆಯುತ್ತದೆ.

'ಕ್ಲಿಯರ್ ಸರ್ಚ್‌'

'ಕ್ಲಿಯರ್ ಸರ್ಚ್‌'

ಇದೇ ಪುಟದಲ್ಲಿ ಕನ್‌ಫರ್ಮ್ ಟ್ಯಾಬ್ ಅನ್ನು ಹೊಂದಿಕೊಂಡಿರುವ 'ಕ್ಲಿಯರ್ ಸರ್ಚ್‌ಗಳ' ಆಪ್ಶನ್ ಅನ್ನು ಕ್ಲಿಕ್ ಮಾಡಿ.

Best Mobiles in India

English summary
Here are 5 simple steps how you can completely wipe out your recent Facebook search history from the Web and the Facebook app.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X