ಸಿಗ್ನಲ್‌ ಆಪ್‌ನಲ್ಲಿ ಕಳುಹಿಸಿದ ಮೆಸೆಜ್‌ಗಳನ್ನು ಡಿಲೀಟ್‌ ಮಾಡುವುದು ಹೇಗೆ?

|

ಪ್ರಸ್ತುತ ಸಿಗ್ನಲ್ ಆಪ್ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್‌ ಆಗಿದ್ದು, ಈ ಆಪ್ ಅನ್ನು ವಿಶ್ವದಾದ್ಯಂತ ಲಕ್ಷಾಂತರ ಬಳಕೆದಾರರು ಸಕ್ರಿಯವಾಗಿ ಬಳಸುತ್ತಾರೆ. ಫೇಸ್‌ಬುಕ್ ಒಡೆತನದ ಇನ್‌ಸ್ಟಂಟ್ ಮೆಸೆಜ್‌ ಆಪ್‌ ವಾಟ್ಸಾಪ್ ಮತ್ತು ಹೆಸರಾಂತ ಮೆಸೇಜಿಂಗ್ ಅಪ್ಲಿಕೇಶನ್ ಟೆಲಿಗ್ರಾಮ್‌ ಆಪ್‌ಗೆ ಸಿಗ್ನಲ್ ಆಪ್ ಪೈಪೋಟಿ ನೀಡುವಂತಹ ಅನೇಕ ಸೇವೆಗಳು ಮತ್ತು ಪ್ರಯೋಜನಗಳನ್ನು ಇದು ಒಳಗೊಂಡಿದೆ. ಹಾಗೆಯೇ ಇತರೆ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಂತೆಯೇ, ಸಿಗ್ನಲ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಮೆಸೆಜ್‌ಗಳನ್ನು ಡಿಲೀಟ್ ಮಾಡಲು ಬಳಕೆದಾರರಿಗೆ ಅನುಮತಿಸುತ್ತದೆ.

ಬಳಕೆದಾರರಿಗೆ

ಹೌದು, ಲೀಡಿಂಗ್‌ನಲ್ಲಿ ಕಾಣಿಸಿಕೊಂಡಿರುವ ಮೆಸೆಜಿಂಗ್ ಆಪ್‌ ಸಿಗ್ನಲ್‌ ಕಳುಹಿಸಿದ ಮೆಸೆಜ್‌ಗಳನ್ನು ಸುಲಭವಾಗಿ ಡಿಲೀಟ್ ಮಾಡುವ ಅವಕಾಶ ನೀಡಿದೆ. ಬಳಕೆದಾರರು ಮೆಸೆಜ್‌ ಕಳುಹಿಸಿದ 3 ಗಂಟೆಗಳ ಅವಧಿಯಲ್ಲಿ ಡಿಲೀಟ್ ಮೆಸೆಜ್‌ ಫಾರ್‌ ಎವರಿಒನ್ (delete the message for everyone) ಆಯ್ಕೆ ಮೂಲಕ ಆ ಮೆಸೆಜ್‌ಗಳನ್ನು ಮಾಡಿಬಿಡಬಹುದು. ಅದೇ ಮೂರು ಗಂಟೆಗಳ ನಂತರ, ಬಳಕೆದಾರರಿಗೆ ತಮ್ಮದೇ ಆದ ಮೆಸೆಜ್‌ಗಳನ್ನು ಮಾತ್ರ ಡಿಲೀಟ್ ಮಾಡಲು ಅನುಮತಿಸಲಾಗುತ್ತದೆ. ಹಾಗಾದರೇ ಜನಪ್ರಿಯ ಸಿಗ್ನಲ್‌ ಮೆಸೆಜ್‌ ಆಪ್‌ನಲ್ಲಿ ಕಳುಹಿಸಿದ ಮೆಸೆಜ್‌ಗಳನ್ನು ಡಿಲೀಟ್‌ ಮಾಡುವ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಮುಂದೆ ಓದಿರಿ.

ಡೆಸ್ಕ್‌ಟಾಪ್‌ನಲ್ಲಿ ಸಿಗ್ನಲ್ ಮೆಸೆಜ್‌ಗಳನ್ನು ಡಿಲೀಟ್ ಮಾಡಲು ಹೀಗೆ ಮಾಡಿರಿ:

ಡೆಸ್ಕ್‌ಟಾಪ್‌ನಲ್ಲಿ ಸಿಗ್ನಲ್ ಮೆಸೆಜ್‌ಗಳನ್ನು ಡಿಲೀಟ್ ಮಾಡಲು ಹೀಗೆ ಮಾಡಿರಿ:

ಸಿಗ್ನಲ್ ಡೆಸ್ಕ್‌ಟಾಪ್‌ನಲ್ಲಿ ಸಂದೇಶಗಳನ್ನು ಅಳಿಸಲು, ಸಿಗ್ನಲ್ ಡೆಸ್ಕ್‌ಟಾಪ್ ಅಪ್ಲಿಕೇಶನ್ ತೆರೆಯಿರಿ ಮತ್ತು ಚಾಟ್‌ಗೆ ನ್ಯಾವಿಗೇಟ್ ಮಾಡಿ ಮತ್ತು ನೀವು ಡಿಲೀಟ್ ಮಾಡ ಬಯಸುವ ಸಂದೇಶವನ್ನು ಹುಡುಕಿ. ನೀವು ಸಂದೇಶವನ್ನು ಕಂಡುಕೊಂಡ ನಂತರ, ನೀವು ತೆಗೆದುಹಾಕಲು ಬಯಸುವ ಸಂದೇಶದ ಪಕ್ಕದಲ್ಲಿರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ. ಪಾಪ್-ಮೆನು ಕಾಣಿಸಿಕೊಂಡ ನಂತರ, ‘delete message' ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ದೃಢೀಕರಣ ವಿಂಡೋದಲ್ಲಿ, ಡಿಲೀಟ್ ಬಟನ್ ಕ್ಲಿಕ್ ಮಾಡಿ. ಪ್ರತಿಯೊಬ್ಬರಿಗೂ ಡಿಲೀಟ್ ಮಾಡುವಿಕೆ ಅಪ್ಲಿಕೇಶನ್‌ನ ಡೆಸ್ಕ್‌ಟಾಪ್ ಆವೃತ್ತಿಯಲ್ಲಿ ಲಭ್ಯವಿರುವುದಿಲ್ಲ ಎಂಬುದನ್ನು ಸಿಗ್ನಲ್ ಬಳಕೆದಾರರು ಗಮನಿಸಬೇಕು.

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಈ ಕ್ರಮ ಅನುಸರಿಸಿ:

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಈ ಕ್ರಮ ಅನುಸರಿಸಿ:

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಸಿಗ್ನಲ್ ಸಂದೇಶಗಳನ್ನು ಡಿಲೀಟ್ ಮಾಡಲು, ಚಾಟ್ ತೆರೆಯಿರಿ ಮತ್ತು ಸಂದೇಶ ಬಬಲ್ ಅನ್ನು ಟ್ಯಾಪ್ ಮಾಡಿ. ಹೆಚ್ಚಿನ ಆಯ್ಕೆಯನ್ನು ಟ್ಯಾಪ್ ಮಾಡಿ ಮತ್ತು ಯಾವುದೇ ಹೆಚ್ಚುವರಿ ಸಂದೇಶ bubbles ಅಥವಾ alerts ಅನ್ನು ಟ್ಯಾಪ್ ಮಾಡಿ. ಸಂದೇಶವನ್ನು ಆಯ್ಕೆ ಮಾಡಿದ ನಂತರ, ಡಿಲೀಟ್ ಬಟನ್‌ ಅನ್ನು ಟ್ಯಾಪ್ ಮಾಡಿ ಮತ್ತು ಸೂಕ್ತವಾದ ಆಯ್ಕೆಯನ್ನು ಆರಿಸಿ.

ಐಒಎಸ್ ಸ್ಮಾರ್ಟ್‌ಫೋನ್‌ಗಳಲ್ಲಿ ಈ ಕ್ರಮ ಅನುಸರಿಸಿ:

ಐಒಎಸ್ ಸ್ಮಾರ್ಟ್‌ಫೋನ್‌ಗಳಲ್ಲಿ ಈ ಕ್ರಮ ಅನುಸರಿಸಿ:

ನೀವು ಐಒಎಸ್ ಸ್ಮಾರ್ಟ್ಫೋನ್ ಬಳಕೆದಾರರಾಗಿದ್ದರೆ, ನಿಮ್ಮ ಐಫೋನ್‌ನಲ್ಲಿ ಸಿಗ್ನಲ್ ಅಪ್ಲಿಕೇಶನ್ ತೆರೆಯಿರಿ ಮತ್ತು ಕಾಂಟ್ಯಾಕ್ಟ್‌ನ ಚಾಟ್ ತೆರೆಯಿರಿ. ಸಂದೇಶ ಬಬಲ್ ಅನ್ನು ಟ್ಯಾಪ್ ಮಾಡಿ ಮತ್ತು ಹಿಡಿದುಕೊಳ್ಳಿ. ಪರ್ಯಾಯವಾಗಿ, ನೀವು ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ ನಂತರ ಯಾವುದೇ ಹೆಚ್ಚುವರಿ ಸಂದೇಶಗಳು ಅಥವಾ ಬಬಲ್ ಟ್ಯಾಪ್ ಮಾಡಬಹುದು. ಡಿಲೀಟ್ ಬಟನ್ ಮೇಲೆ ಟ್ಯಾಪ್ ಮಾಡಿ. ಒಮ್ಮೆ ನೀವು ಅಳಿಸು ಬಟನ್ ಕ್ಲಿಕ್ ಮಾಡಿದರೆ, ಟೆಕ್ಸ್ಟ್‌ ಸಂದೇಶವನ್ನು ನಿಮಗಾಗಿ ಮಾತ್ರ ಡಿಲೀಟ್ ಆಗಲಿವೆ. ಅವರು ಗುಂಪು ಚಾಟ್ ಅನ್ನು ಅಳಿಸಿದರೆ, ಅವರು ಇನ್ನೂ ಗುಂಪಿನ ಸಕ್ರಿಯ ಪಾಲ್ಗೊಳ್ಳುವವರಾಗಿರುತ್ತಾರೆ ಎಂಬುದನ್ನು ಬಳಕೆದಾರರು ಗಮನಿಸಬೇಕು.

Best Mobiles in India

English summary
How to Delete Messages On Signal App?. Follow These Steps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X