ಫೇಸ್‌ಬುಕ್ ಟೈಮ್‌ಲೈನ್‌ನಿಂದ ಹಳೆಯ ಪೋಸ್ಟ್ ಅಳಿಸುವುದು ಹೇಗೆ?

By Shwetha
|

ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಂಡಿರುವ ಫೋಟೋಗಳು ಮತ್ತು ಮೆಮೊರಿಗಳಿಗೆ ಫೇಸ್‌ಬುಕ್ ಉತ್ತಮ ಸ್ಥಳವಾಗಿದೆ. ಈ ನೆನಪುಗಳನ್ನು ಇದು ವಾಲ್ ಟೈಮ್‌ನಲ್ಲಿ ಆಗಾಗ್ಗೆ ನೆನಪಿಸುತ್ತಿರುತ್ತದೆ. ಆದರೆ ಕೆಲವೊಮ್ಮೆ ಈ ಹಳೆಯ ಫೋಟೋಗಳನ್ನು ನೀವು ಒಮ್ಮೊಮ್ಮೆ ನೋಡಲು ಇಚ್ಛಿಸಿರುವುದಿಲ್ಲ. ಆದರೆ ಇದನ್ನು ಅಳಿಸುವುದು ಹೆಚ್ಚು ಸುಲಭವಾಗಿದೆ. ಈ ಹಳೆಯ ಪೋಸ್ಟ್‌ಗಳು ಫೇಸ್‌ಬುಕ್ ಟೈಮ್‌ಲೈನ್‌ನಲ್ಲಿ ಎಂದಿಗೂ ಪ್ರದರ್ಶನಗೊಳ್ಳುವುದಿಲ್ಲ.

ಓದಿರಿ: ಐಫೋನ್‌ನಲ್ಲಿ ಸ್ಪೇಸ್ ಕ್ಲಿಯರ್ ಮಾಡುವುದು ಹೇಗೆ?

ಹಾಗಿದ್ದರೆ ಇದನ್ನು ಅಳಿಸುವುದು ಹೇಗೆ ಎಂಬುದನ್ನೇ ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಕೆಲವೊಂದು ಸರಳ ಟಿಪ್ಸ್‌ಗಳನ್ನು ಅನುಸರಿಸುವ ಮೂಲಕ ನೀವು ಇದನ್ನು ಕಾರ್ಯಗತಗೊಳಿಸಬಹುದಾಗಿದೆ. ಅದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

ಟೈಮ್ ಲೈನ್ ಹೇಗೆ ಕಾಣಿಸುತ್ತದೆ

ಟೈಮ್ ಲೈನ್ ಹೇಗೆ ಕಾಣಿಸುತ್ತದೆ

ಆರಂಭಿಸುವುದಕ್ಕೂ ಮುನ್ನ ನಿಮ್ಮ ಸ್ನೇಹಿತರ ಪಟ್ಟಿಯಲ್ಲಿ ಇರುವವರಿಗೆ ನಿಮ್ಮ ಟೈಮ್ ಲೈನ್ ಹೇಗೆ ಕಾಣಿಸುತ್ತದೆ ಎಂಬುದನ್ನು ಅರಿತುಕೊಳ್ಳಿ.

ಆಕ್ಟಿವಿಟಿ ಲಾಗ್ ಬಟನ್

ಆಕ್ಟಿವಿಟಿ ಲಾಗ್ ಬಟನ್

ಇದನ್ನು ಪರಿಶೀಲಿಸಲು, ನಿಮ್ಮ ಟೈಮ್ ಲೈನ್‌ಗೆ ಹೋಗಿ, ಆಕ್ಟಿವಿಟಿ ಲಾಗ್ ಬಟನ್ ಬಲಕ್ಕೆ ಮೂರು ಡಾಟ್‌ಗಳಿದ್ದು ಅದನ್ನು ಕ್ಲಿಕ್ ಮಾಡಿ. ನಂತರ ವ್ಯೂ ಏಸ್ ಆಪ್ಶನ್ ಅನ್ನು ಆಯ್ಕೆಮಾಡಿ.

'ಓನ್ಲಿ ಮಿ'

'ಓನ್ಲಿ ಮಿ'

ನಿಮಗೆ ಯಾವುದೂ ಇಷ್ಟವಾಗಿಲ್ಲದ ಸಂದರ್ಭದಲ್ಲಿ, ಗ್ಲೋಬ್ ಐಕಾನ್ ಮೇಲೆ ಕ್ಲಿಕ್ಕಿಸಿ ಮತ್ತು 'ಪಬ್ಲಿಕ್' ಆಪ್ಶನ್ ಅನ್ನು 'ಫ್ರೆಂಡ್ಸ್' ಗೆ ಬದಲಾಯಿಸಿ. 'ಓನ್ಲಿ ಮಿ' ಅಥವಾ 'ಕಸ್ಟಮ್' ಗೂ ನೀವು ಬದಲಾಯಿಸಿಕೊಳ್ಳಬಹುದಾಗಿದೆ. 'x' ಬಟನ್ ಅನ್ನು ಕ್ಲಿಕ್ ಮಾಡುವ ಮೂಲಕ ಪೋಸ್ಟ್ ಅನ್ನು ನಿಮಗೆ ಅಳಿಸಬಹುದಾಗಿದೆ.

ಹಳೆಯ ಪೋಸ್ಟ್‌ಗಳನ್ನು ಮರೆಮಾಡುವುದು

ಹಳೆಯ ಪೋಸ್ಟ್‌ಗಳನ್ನು ಮರೆಮಾಡುವುದು

ನೀವು ಬಹು ಸಾರ್ವಜನಿಕ ಪೋಸ್ಟ್‌ಗಳನ್ನು ಹೊಂದಿದ್ದೀರಿ ಎಂದಾದಲ್ಲಿ ಫೇಸ್‌ಬುಕ್ ಬಿಲ್ಟ್ ಇನ್ ಸಲ್ಯೂಶನ್ ಬಳಸಿಕೊಂಡು ನೀವು ಅದನ್ನು ಮರೆಮಾಡಬಹುದಾಗಿದೆ. ಫೇಸ್‌ಬುಕ್‌ನ ಬಲ ಮೇಲ್ಭಾಗದಲ್ಲಿರುವ ಸೆಕ್ಯುರಿಟಿ ಲಾಕ್ ಐಕಾನ್ ಅನ್ನು ಕ್ಲಿಕ್ ಮಾಡಿ. ನಂತರ 'ಸೀ ಮೋರ್ ಸೆಟ್ಟಿಂಗ್ಸ್' ಆಪ್ಶನ್ ಅನ್ನು ಆಯ್ಕೆಮಾಡಿ.

ಜಸ್ಟ್ ಫ್ರೆಂಡ್ಸ್

ಜಸ್ಟ್ ಫ್ರೆಂಡ್ಸ್

ಈಗ 'ಲಿಮಿಟ್ ಓಲ್ಟ್ ಪೋಸ್ಟ್' ಕ್ಲಿಕ್ಕಿಸಿ. ಈಗ ನಿಮ್ಮ ಹಳೆಯ ಫೇಸ್‌ಬುಕ್ ಪೋಸ್ಟ್‌ಗಳನ್ನು 'ಜಸ್ಟ್ ಫ್ರೆಂಡ್ಸ್' ಗೆ ಬದಲಾಯಿಸಿಕೊಳ್ಳಬೇಕು.

ಟೈಮ್ ಲೈನ್ ಸೆಟ್ಟಿಂಗ್ಸ್ ಫಿಕ್ಸ್ ಮಾಡಿ

ಟೈಮ್ ಲೈನ್ ಸೆಟ್ಟಿಂಗ್ಸ್ ಫಿಕ್ಸ್ ಮಾಡಿ

ಪೋಸ್ಟ್‌ಗಳನ್ನು ನಿರ್ವಹಿಸಲು ನಿಮ್ಮ ಟೈಮ್ ಲೈನ್ ಸೆಟ್ಟಿಂಗ್‌ಗಳನ್ನು ನೀವು ಪರಿಶೀಲಿಸಬಹುದಾಗಿದೆ. ಸೆಟ್ಟಿಂಗ್ ಅನ್ನು ಮರು ಹೊಂದಿಸಲು, ಲಾಕ್ ಐಕಾನ್ ಅನ್ನು ಪುನಃ ಕ್ಲಿಕ್ ಮಾಡಿ. ಈಗ 'ಟೈಮ್ ಲೈನ್ ಮತ್ತು ಟ್ಯಾಗಿಂಗ್ ಸೆಟ್ಟಿಂಗ್ಸ್' ಅನ್ನು ಆಯ್ಕೆಮಾಡಿ. ಇದು ಎಡಭಾಗದಲ್ಲಿರುತ್ತದೆ.

ಫ್ರೆಂಡ್ಸ್ ಪಟ್ಟಿ

ಫ್ರೆಂಡ್ಸ್ ಪಟ್ಟಿ

ಇದಾದ ನಂತರ, ಫ್ರೆಂಡ್ಸ್ ಪಟ್ಟಿಯಲ್ಲಿರುವ ಮೊದಲನೆಯ, ನಾಲ್ಕನೆಯ, ಐದನೆಯ ಮತ್ತು ಆರನೆಯ ಮತ್ತು ಏಳನೆಯ ಆಯ್ಕೆಯನ್ನು ನಿಮಗೆ ಹೊಂದಿಸಬಹುದಾಗಿದೆ.

Best Mobiles in India

English summary
Facebook wall time and again. But sometimes, those old posts might be some that you don't want others to see.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X