ನೆಟ್‌ಫ್ಲಿಕ್ಸ್‌ನಲ್ಲಿ ಸರ್ಚ್‌ ಹಿಸ್ಟರಿ ಡಿಲೀಟ್ ಮಾಡುವುದು ಹೇಗೆ?

|

ಮನರಂಜನೆಗಾಗಿ ಸ್ಮಾರ್ಟ್‌ಫೋನ್‌ನಲ್ಲಿ ಅನೇಕ ಆಪ್ಸ್‌ಗಳು ಹೊಸದಾಗಿ ಸೇರಿಕೊಂಡಿದ್ದರೂ, ಇತ್ತೀಚಿಗಂತೂ ವಿಡಿಯೊ ಸ್ಟ್ರಿಮಿಂಗ್ ಅಪ್ಲಿಕೇಶನ್‌ಗಳು ವ್ಯಾಪಕವಾಗಿ ಜನಪ್ರಿಯತೆಗಳಿಸುತ್ತಲಿವೆ. ನೆಟ್‌ಫ್ಲೆಕ್ಸ್‌, ಅಮೆಜಾನ್ ಪ್ರೈಮ್, ಹಾಟ್‌ಸ್ಟಾರ್, ಸೇರಿದಂತೆ ಹಲವು ಆಪ್ಸ್‌ಗಳು ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದು, ಆಪ್‌ನಲ್ಲಿ ಹಲವು ಟಿವಿ ಶೋ ಮತ್ತು ಜನಪ್ರಿಯ ಸಿನಿಮಾಗಳನ್ನು ಹೆಚ್‌ಡಿ ಗುಣಮಟ್ಟದಲ್ಲಿ ವೀಕ್ಷಿಸಬಹುದಾಗಿದೆ.

ನೆಟ್‌ಫ್ಲಿಕ್ಸ್‌ನಲ್ಲಿ ಸರ್ಚ್‌ ಹಿಸ್ಟರಿ ಡಿಲೀಟ್ ಮಾಡುವುದು ಹೇಗೆ?

ಹೌದು, ಗ್ರಾಹಕರಿಗೆ ಹೊಸ ಅನುಭೂತಿಯನ್ನು ಒದಗಿಸಿರುವ ಈ ವಿಡಿಯೊ ಸ್ಟ್ರಿಮಿಂಗ್ ಆಪ್ಸ್‌ಗಳಲ್ಲಿ ಸದ್ಯ ನೆಟ್‌ಫ್ಲಿಕ್ಸ್‌ ಭಾರಿ ಟ್ರೆಂಡಿಂಗ್‌ನಲ್ಲಿದೆ. ಇತ್ತೀಚಿಗಷ್ಟೆ ಮೊಬೈಲ್ ತಿಂಗಳ ಶುಲ್ಕದಲ್ಲಿ ರಿಯಾಯಿತಿಯನ್ನು ನೀಡಿದ್ದು, ಜನಪ್ರಿಯ ವೆಬ್‌ ಸಿರೀಸ್‌ ಶೋ ಮತ್ತು ಹೊಸ ಸಿನಿಮಾಗಳಿಂದ ವೀಕ್ಷಕ ಸಮೂಹವನ್ನು ತನ್ನತ್ತ ಸೆಳೆದಿದೆ. ನೆಟ್‌ಫ್ಲಿಕ್ಸ್‌ ಆಪ್‌ನ ಸರ್ಚ್‌ನಲ್ಲಿ ಅನೇಕ ವಿಡಿಯೊಗಳನ್ನು ಹುಡುಕಾಡಿರುತ್ತಾರೆ ಆದರೆ ಸರ್ಚ್‌ ಹಿಸ್ಟರಿ ವಾಶ್‌ ಮಾಡುವುದೇ ಇಲ್ಲ. ಹಾಗಾದರೇ ನೆಟ್‌ಫ್ಲಿಕ್ಸ್ ಸರ್ಚ್‌ ಹಿಸ್ಟರಿ ಡಿಲೀಟ್ ಮಾಡುವುದು ಹೇಗೆ ಎಂಬುದನ್ನು ನೋಡೋಣ ಬನ್ನಿರಿ.

<strong>ಓದಿರಿ : ಬಳಕೆದಾರರು ಕುತೂಹಲದಿಂದ ಕಾಯುತ್ತಿದ್ದ ಹೊಸ ಫೀಚರ್ಸ್ ಈಗ 'ವಾಟ್ಸಪ್‌'ನಲ್ಲಿ ಲಭ್ಯ!</strong>ಓದಿರಿ : ಬಳಕೆದಾರರು ಕುತೂಹಲದಿಂದ ಕಾಯುತ್ತಿದ್ದ ಹೊಸ ಫೀಚರ್ಸ್ ಈಗ 'ವಾಟ್ಸಪ್‌'ನಲ್ಲಿ ಲಭ್ಯ!

ಆಂಡ್ರಾಯ್ಡ್ ಓಎಸ್‌ನಲ್ಲಿ ಡಿಲೀಟ್/ಹೈಡ್ ಮಾಡಿರಿ

ಆಂಡ್ರಾಯ್ಡ್ ಓಎಸ್‌ನಲ್ಲಿ ಡಿಲೀಟ್/ಹೈಡ್ ಮಾಡಿರಿ

ಆಂಡ್ರಾಯ್ಡ್ ಡಿವೈಸ್‌ನಲ್ಲಿ ನಿಮ್ಮ ನೆಟ್‌ಫ್ಲಿಕ್ಸ್ ಖಾತೆಗೆ ಲಾಗ್ ಇನ್ ಆಗಿರಿ. ನಂತರ ಬಲ ಭಾಗದ ಬಾಟಮ್‌ನಲ್ಲಿ ಕಾಣುವ 'ಮೋರ್' ಟ್ಯಾಬ್ ಆಯ್ಕೆ ಸೆಲೆಕ್ಟ್ ಮಾಡಿರಿ. ಆನಂತರ 'ಅಕೌಂಟ್' ಆಯ್ಕೆ ಮೇಲೆ ಕ್ಲಿಕ್ ಮಾಡಿ. ಆಗ ಕಾಣಿಸುವ 'ವ್ಯೂವಿಂಗ್ ಆಕ್ಟಿವಿಟಿ' ಆಯ್ಕೆಯನ್ನು ಒತ್ತಿರಿ. ಆನಂತರ 'ಹೈಡ್‌ ಆಲ್' ಆಯ್ಕೆಯನ್ನು ಸೆಲೆಕ್ಟ್ ಮಾಡಿ ವೀಕ್ಷಿಸಿದ ಎಲ್ಲ ಹಿಸ್ಟರಿಯನ್ನು ಕಾಣದಂತೆ ತಡೆಯಬಹುದು. ಅಥವಾ ಒಂದೊಂದೆ ಡಿಲೀಟ್ ಸಹ ಮಾಡಬಹುದಾಗಿದೆ.

ಐಫೋನ್‌ನಲ್ಲಿ ಈ ಕ್ರಮ ಅನುಸರಿಸಿ

ಐಫೋನ್‌ನಲ್ಲಿ ಈ ಕ್ರಮ ಅನುಸರಿಸಿ

* ನೆಟ್‌ಫ್ಲಿಕ್ಸ್ ತೆರೆದು ಬಲಗಡೆಯ ಸೈನ್‌ಇನ್ ಆಯ್ಕೆ ಮೂಲಕ ಲಾಗ್‌ಇನ್ ಆಗಿರಿ.
* ನಂತರ ಮೆನು ಆಯ್ಕೆಯನ್ನು ಕ್ಲಿಕ್ ಮಾಡಿರಿ
* ನಿಮ್ಮ ಖಾತೆಯನ್ನು ಟ್ಯಾಪ್ ಮಾಡಿರಿ
* ಸರ್ಚ್ ಹಿಸ್ಟರಿ ಡಿಲೀಟ್ ಮಾಡುವ ಪ್ರೊಫೈಲ್ ಸೆಲೆಕ್ಟ್ ಮಾಡಿ
* ಆನಂತರ ಮತ್ತೆ ಮೆನು ಆಯ್ಕೆ ಒತ್ತಿರಿ ಮತ್ತು ಅಕೌಂಟ್ ಟ್ಯಾಪ್ ಮಾಡಿ
* ಆಗ ವ್ಯೂವಿಂಗ್ ಆಕ್ಟಿವಿಟಿ ಆಯ್ಕೆ ಕಾಣಿಸುತ್ತದೆ.
* ಮೈ ಆಕ್ಟಿವಿಟಿಯ ಆಯ್ಕೆ ಕ್ಲಿಕ್ ಮಾಡಿ ಮತ್ತು ಹೈಡ್ (Hide) ಆಲ್ ಒತ್ತಿರಿ.

<strong>ಓದಿರಿ : ಜಿಯೋ, ವೊಡಾಫೋನ್, ಏರ್‌ಟೆಲ್,ನ 999ರೂ. ಪ್ಲ್ಯಾನ್‌ನಲ್ಲಿ ಯಾವುದು ಸೂಕ್ತ!</strong>ಓದಿರಿ : ಜಿಯೋ, ವೊಡಾಫೋನ್, ಏರ್‌ಟೆಲ್,ನ 999ರೂ. ಪ್ಲ್ಯಾನ್‌ನಲ್ಲಿ ಯಾವುದು ಸೂಕ್ತ!

ಡೆಸ್ಕ್‌ಟಾಪ್‌ನಲ್ಲಿ ಈ ಹಂತಗಳನ್ನು ಅನುಸರಿಸಿ

ಡೆಸ್ಕ್‌ಟಾಪ್‌ನಲ್ಲಿ ಈ ಹಂತಗಳನ್ನು ಅನುಸರಿಸಿ

* ನೆಟ್‌ಫ್ಲಿಕ್ಸ್ ತೆರೆದು, ನಿಮ್ಮ ಖಾತೆಯನ್ನು ಟ್ಯಾಪ್ ಮಾಡಿರಿ.
* ಕೆಳಭಾಗದ ಬಲಭಾಗದಲ್ಲಿ ಕಾಣುವ 'ಮೋರ್' ಆಯ್ಕೆ ಕ್ಲಿಕ್ಕ್ ಮಾಡಿ.
* ನಂತರ ಅಕೌಂಟ್ ಆಯ್ಕೆಯನ್ನು ಸೆಲೆಕ್ಟ್ ಮಾಡಿ.
* ಸ್ಕ್ರೋಲ್‌ ಡೌನ್ ಮಾಡಿ, 'ವ್ಯೂವಿಂಗ್ ಆಕ್ಟಿವಿಟಿ' ಟ್ಯಾಪ್ ಮಾಡಿರಿ
* ವ್ಯೂವಿಂಗ್ ಹಿಸ್ಟರಿಯನ್ನು 'ಹೈಡ್ ಆಲ್'(Hide all) ಒತ್ತಿರಿ.

ತಕ್ಷಣವೇ ಡಿಲೀಟ್ ಆಗುವುದಿಲ್ಲ

ತಕ್ಷಣವೇ ಡಿಲೀಟ್ ಆಗುವುದಿಲ್ಲ

ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಿಸಿದ ಹಿಸ್ಟರಿಯನ್ನು ನೀವು ಡಿಲೀಟ್ ಮಾಡಿದ ನಂತರವು ಸಿನಿಮಾ ಮತ್ತು ಸಿರೀಯಲ್ ಹೆಸರುಗಳು ಮುಂದಿನ 24ಗಂಟೆಗಳು ಉಳಿದಿರುತ್ತವೆ. 'ಕಿಡ್ಸ್‌ ಲೆಬೆಲ್' ಇರುವ ಪ್ರೊಫೈಲ್‌ನಲ್ಲಿ ಸರ್ಚ್ ಹಿಸ್ಟರಿ ಡಿಲೀಟ್ ಮಾಡಿದರೂ, 24 ಗಂಟೆಗಳ ನಂತರ ಅವು ಡಿಲೀಟ್ ಆಗುತ್ತವೆ. ಈ ಫೀಚರ್ ಒಂದು ರೀತಿ ಒಳ್ಳೆಯದೇ ಎನ್ನಬಹುದು ಏಕೆಂದರೇ ಮಕ್ಕಳ ನೆಟ್‌ಫ್ಲಿಕ್ಸ್‌ನಲ್ಲಿ ಏನೆಲ್ಲಾ ಸರ್ಚ್ ಮಾಡಿದ್ದಾರೆ ಎಂಬುದರ ಮೇಲೆ ನಿಗಾ ಇಡಬಹುದಾಗಿದೆ.

<strong>ಓದಿರಿ : LIC ಪ್ರೀಮಿಯಂ ಆನ್‌ಲೈನ್‌ನಲ್ಲಿ ಪಾವತಿಸುವುದು ಹೇಗೆ ಗೊತ್ತಾ?</strong>ಓದಿರಿ : LIC ಪ್ರೀಮಿಯಂ ಆನ್‌ಲೈನ್‌ನಲ್ಲಿ ಪಾವತಿಸುವುದು ಹೇಗೆ ಗೊತ್ತಾ?

Best Mobiles in India

English summary
View history can be easily deleted on Netflix. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X