ಮೊಬೈಲ್‌ನಲ್ಲಿ ಯೂಟ್ಯೂಬ್‌ ಸರ್ಚ್‌ ಹಿಸ್ಟರಿ ಕ್ಲಿಯರ್‌ ಮಾಡುವುದು ಹೇಗೆ?

|

ಜನಪ್ರಿಯ ವಿಡಿಯೊ ಪ್ಲಾಟ್‌ಫಾರ್ಮ್‌ ಗಳ ಪೈಕಿ ಗೂಗಲ್ ಒಡೆತನದ ಯೂಟ್ಯೂಬ್‌ ಲೀಡಿಂಗ್‌ನಲ್ಲಿ ಕಾಣಿಸಿಕೊಂಡಿದೆ. ಯೂಟ್ಯೂಬ್‌ನಲ್ಲಿ ಯಾವುದೇ ವಿಷಯದ ಕುರಿತು ವಿಡಿಯೊ ಮಾದರಿಯಲ್ಲಿ ಮಾಹಿತಿ ಪಡೆಯಬಹುದಾಗಿದೆ. ಯೂಟ್ಯೂಬ್‌ ತಾಣದಲ್ಲಿ ಬಳಕೆದಾರರು ಮ್ಯೂಸಿಕ್, ಲೈವ್‌ ನ್ಯೂಸ್‌, ಭಿನ್ನ ಭಿನ್ನ ಯೂಟ್ಯೂಬ್ ಚಾನೆಲ್ಸ್, ಸೇರಿದಂತೆ ಹಲವು ಬಗೆಯ ವಿಡಿಯೊಗಳನ್ನು ವೀಕ್ಷಿಸಬಹುದಾಗಿದೆ. ಹೀಗೆ ಬಳಕೆದಾರರು ಏನನ್ನಾದರೂ ಸರ್ಚ್ ಮಾಡಿ ಮಾಹಿತಿ ಪಡೆಯಬಹುದಾಗಿದೆ.

ಯೂಟ್ಯೂಬ್‌

ಹೌದು, ಯೂಟ್ಯೂಬ್‌ ತಾಣವು ಫುಡ್‌, ಹೆಲ್ತ್, ನ್ಯೂಸ್‌, ಲೈಫ್‌ಸ್ಟೈಲ್‌, ತಂತ್ರಜ್ಞಾನ್, ವಿಜ್ಞಾನ, ಶಿಕ್ಷಣ ಹೀಗೆ ಎಲ್ಲ ವಿಷಯದ ವಿಡಿಯೊಗಳ ಹೂರಣವನ್ನು ತುಂಬಿಕೊಂಡಿದೆ. ಬಳಕೆದಾರರು ಅವರಿಗೆ ಅಗತ್ಯವಾಗಿರುವ ವಿಷಯವನ್ನು ಸರ್ಚ್ ಮಾಡಿ ವೀಕ್ಷಿಸುತ್ತಾರೆ. ಆದರೆ ಬಳಕೆದಾರರು ಯೂಟ್ಯೂಬ್‌ನಲ್ಲಿ ಸರ್ಚ್ ಮಾಡಿರುವ ಕೀ ವರ್ಡ್‌ಗಳ ಮಾಹಿತಿ ಸರ್ಚ್ ಹಿಸ್ಟರಿಯಲ್ಲಿ ಹಾಗೆಯೇ ಉಳಿದಿರುತ್ತವೆ. ಬೇರೆಯವರು ಇವರ ಸರ್ಚ್ ಹಿಸ್ಟರಿ ನೋಡುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಸರ್ಚ್ ಹಿಸ್ಟರಿ ಡಿಲೀಟ್ ಮಾಡುವುದು ಉತ್ತಮ. ಹಾಗಾದರೇ ಯೂಟ್ಯೂಬ್‌ ಸರ್ಚ್ ಹಿಸ್ಟರಿ ಡಿಲೀಟ್ ಮಾಡುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

incognito ಮೋಡ್‌ ಆಯ್ಕೆ

incognito ಮೋಡ್‌ ಆಯ್ಕೆ

ಬಳಕೆದಾರರಿಗೆ ಅನುಕೂಲವಾಗಲಿ ಎಂದೇ ಯೂಟ್ಯೂಬ್‌ನಲ್ಲಿ ಸರ್ಚ್ ಹಿಸ್ಟರಿ ಡಿಲೀಟ್‌ ಮಾಡಲು ಅವಕಾಶ ನೀಡಿದೆ. ಬಳಕೆದಾರರು ಮೇಲಿಂದ ಮೇಲೆ ಯೂಟ್ಯೂಬ್ ಸರ್ಚ್ ಹಿಸ್ಟರಿ ಡಿಲೀಟ್ ಮಾಡಬಹುದಾಗಿದೆ. ಜೊತೆಗೆ incognito ಮೋಡ್ ಆಯ್ಕೆ ಇದೆ ಆದರೆ ಬಹುತೇಕರು incognito ಮೋಡ್‌ ಸೌಲಭ್ಯವನ್ನು ಬಳಸುವುದಿಲ್ಲ. ಹೀಗಾಗಿ ಸರ್ಚ್ ಹಿಸ್ಟರಿ ಡಿಲೀಟ್‌ ಮಾಡುವುದು ಉತ್ತಮ. ಡಿಲೀಟ್ ಮಾಡಲು ಅನುಸರಿಸಬೇಕಾದ ಹಂತಗಳ ಬಗ್ಗೆ ಮುಂದೆ ಓದಿ.

ಮೊಬೈಲ್‌ನಲ್ಲಿ ಯೂಟ್ಯೂಬ್ ಸರ್ಚ್ ಹಿಸ್ಟರಿ ಡಿಲೀಟ್ ಮಾಡಲು ಈ ಹಂತ ಅನುಸರಿಸಿ

ಮೊಬೈಲ್‌ನಲ್ಲಿ ಯೂಟ್ಯೂಬ್ ಸರ್ಚ್ ಹಿಸ್ಟರಿ ಡಿಲೀಟ್ ಮಾಡಲು ಈ ಹಂತ ಅನುಸರಿಸಿ

* ಯೂಟ್ಯೂಬ್ ಆಪ್ ತೆರೆದು, ಪ್ರೋಫೈಲ್‌ ಇಮೇಜ್‌ ಟಚ್‌ ಮಾಡಿ.
* ನಂತರ ಸೆಟ್ಟಿಂಗ್ ಆಯ್ಕೆಯನ್ನು ಟ್ಯಾಪ್ ಮಾಡಿರಿ.
* ಆನಂತರ ಸ್ಕ್ರಾಲ್ ಡೌನ್ ಮಾಡಿ ಹಿಸ್ಟರಿ ಮತ್ತು ಪ್ರೈವೆಸಿ ಸೆಕ್ಷನ್‌ ಸೆಲೆಕ್ಟ್ ಮಾಡಿ.
* ವಾಚ್ ಹಿಸ್ಟರಿ ಕ್ಲಿಯರ್ ಆಯ್ಕೆಯನ್ನು ಟ್ಯಾಪ್‌ ಮಾಡಿರಿ.
* ಕ್ಲಿಯರ್‌ ಸರ್ಚ್ ಹಿಸ್ಟರಿ ಆಯ್ಕೆ ಒತ್ತಿರಿ.

ವೆಬ್‌ನಲ್ಲಿ ಯೂಟ್ಯೂಬ್ ಸರ್ಚ್ ಹಿಸ್ಟರಿ ಡಿಲೀಟ್ ಮಾಡಲು ಹೀಗೆ ಮಾಡಿ:

ವೆಬ್‌ನಲ್ಲಿ ಯೂಟ್ಯೂಬ್ ಸರ್ಚ್ ಹಿಸ್ಟರಿ ಡಿಲೀಟ್ ಮಾಡಲು ಹೀಗೆ ಮಾಡಿ:

- ನೀವು ಯೂಟ್ಯೂಬ್ ವೆಬ್‌ಸೈಟ್‌ಗೆ ಭೇಟಿ ನೀಡಬೇಕಾಗುತ್ತದೆ.

- ನಿಮ್ಮ ರುಜುವಾತುಗಳೊಂದಿಗೆ ನಿಮ್ಮ ಖಾತೆಗೆ ಸಹಿ ಮಾಡಿ- ಐಡಿ, ಪಾಸ್‌ವರ್ಡ್.

- ಮೇಲಿನ ಎಡ ಭಾಗದಲ್ಲಿರುವ ಮೆನು ಐಕಾನ್ ಮೇಲೆ ಮುಂದಿನ ಕ್ಲಿಕ್ ಮಾಡಿ, ಯೂಟ್ಯೂಬ್ ಐಕಾನ್ ಬಳಿ ಬಲಕ್ಕೆ ಗೋಚರಿಸುತ್ತದೆ.

- ಹಿಸ್ಟರಿ ಆಯ್ಕೆಯನ್ನು ಅಲ್ಲಿ ಆಯ್ಕೆ ಮಾಡಿ ನಂತರ ಸರ್ಚ್ ಹಿಸ್ಟರಿಯನ್ನು ಕ್ಲಿಕ್ ಮಾಡಿ. ನಿಮ್ಮ ಸರ್ಚ್‌ ಪಟ್ಟಿ ಕಾಣಿಸುತ್ತದೆ

- ಒಂದು ಐಟಂ ಅನ್ನು ಅಳಿಸಲು, ‘x' ಬಟನ್ ಕ್ಲಿಕ್ ಮಾಡಿ. ನೀವು ಪೂರ್ಣ ಸರ್ಚ್‌ ಹಿಸ್ಟರಿಯನ್ನು ತೆರವುಗೊಳಿಸಲು ಬಯಸಿದರೆ, ಅಲ್ಲಿ "clear all search history" ಆಯ್ಕೆಯನ್ನು ಕ್ಲಿಕ್ ಮಾಡಿ.

Most Read Articles
Best Mobiles in India

English summary
How To Delete YouTube Search History In Simple Steps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X