ಹಿಡೆನ್‌ ಕ್ಯಾಮೆರಾಗಳನ್ನು ಪತ್ತೆಮಾಡುವುದು ಹೇಗೆ?

Posted By: Staff
<ul id="pagination-digg"><li class="next"><a href="/how-to/how-to-detect-hidden-cameras-and-microphones-in-rooms-2.html">Next »</a></li></ul>
ಹಿಡೆನ್‌ ಕ್ಯಾಮೆರಾಗಳನ್ನು ಪತ್ತೆಮಾಡುವುದು ಹೇಗೆ?

ಇತ್ತೀಚಿನ ದಿನಗಳಲ್ಲಿ ಬೆಳಕಿಗೆ ಬಂದಿರುವಂತಹ ಆತಂಕಕಾರಿ ವಿಶಷವೇನೆಂದರೆ ಹೋಟೆಲ್‌ ಹಾಗೂ ಟ್ರಯಲ್‌ ರೂಂಗಳಲ್ಲಿ ಕದ್ದು ಕ್ಯಾಮೆರಾಗಳನ್ನು ಅಳವಡಿಸಿ ಚಿತ್ರೀಕರಿಸಿ ಆನ್‌ಲೈನ್‌ನಲ್ಲಿ ಹರಿಬಿಡಲಾಗುತ್ತಿದೆ. ಇಂತಹ ಸುದ್ಧಿಗಳನ್ನು ನೀವೂಕೂಡಾ ದಿನ ನಿತ್ಯ ಸುದ್ದಿ ವಾಹಿನಿಗಳಲ್ಲಿ ಹಾಗೂ ದಿನಪತ್ರಿಕೆಗಳಲ್ಲಿ ಓದಿಯೇ ಇರುತ್ತೀರಿ ಆದರೂ ಕೂಡಾ ಇಂತಹ ಪ್ರಕರಣಗಳಿಗೆ ಬ್ರೇಕ್‌ಬಿದ್ದಿಲ್ಲ. ದಿನೇ ದಿನೇ ಒಂದಲ್ಲಾ ಒಂದು ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಆದ್ದರಿಂದ ಇಂತಹ ಪರಿಸ್ಥಿತಿ ನಮಗೆ ಎದುರಾಗದಂತೆ ಎಚ್ಚರ ವಹಿಸಿಕೊಳ್ಳುವುದು ಸೂಕ್ತ ಅಲ್ಲವೇ.

ಸಾರ್ವಜನಿಕ ಪ್ರದೇಷಗಳಲ್ಲಿ ಅಂದರೆ ಅಂಗಡಿ ಮಳಿಗೆಗಳ ಟ್ರಯಲ್ ರೂಂಗಳನ್ನು ಬಳಸುವಾಗ ಹಾಗೂ ಹೋಟೆಲ್‌ಗಳಲ್ಲಿ ಉಳಿದುಕೊಂಡಂತಹ ಸಂದರ್ಭಗಳಲ್ಲಿ ಇಲ್ಲವೆ ಸರ್ವಜನಿಕ ಶೌಚಾಲಯವನ್ನು ಬಳಸುವಾಗ ಎಚ್ಚರಿಕೆ ವಹಿಸುವುದು ಸೂಕ್ತ ಏಕೆಂದರೆ ಇಂತಹ ಸ್ಥಳಗಳಲ್ಲಿಯೇ ಕಿಡಿಗೇಡಿಗಳು ಹಿಡೆನ್‌ ಕ್ಯಾಮೆರಾಗಳನ್ನು ಅಳವಡಿಸಿರುವ ಸಾಧ್ಯತೆಗಳು ಹೆಚ್ಚಿರುತ್ತದೆ. ಅದಕ್ಕಾಗಿಯೇ ಗಿಜ್ಬಾಟ್ ಇಂದು ಹಿಡೆನ್‌ ಕ್ಯಾಮೆರಾಗಳನ್ನು ಪತ್ತೆಹಚ್ಚಲು ಕೆಲ ಸರಳ ವಿಧಾನಗಳ ಕುರಿತಾಗಿ ತಿಳಿಸಿದೆ ಒಮ್ಮೆ ಓದಿ ನೋಡಿ.

ಸಾಮಾನ್ಯವಾಗಿ ಈಕೆಳಗಿನ ಜಾಗಗಳಲ್ಲಿ ಹಿಡೆನ್‌ ಕ್ಯಾಮೆರಾಗಳನ್ನು ಅಳವಡಿಸಿರುತ್ತಾರೆ.

  • ರೂಮಿನಲ್ಲಿ ಇರಿಸಲಾದ ಫ್ಲವರ್ ಪಾಟ್‌ನಲ್ಲಿ.

  • ಫೋಟೋ ಫ್ರೇಮ್‌ಗಳಲ್ಲಿ.

  • ನೆತ್ತಿ ಮೇಲಿನ ಫ್ಯಾನ್‌ಗಳಲ್ಲಿ.

  • ಬಾತ್‌ರೂಂನ ಶವರ್‌ನಲ್ಲಿ.
<ul id="pagination-digg"><li class="next"><a href="/how-to/how-to-detect-hidden-cameras-and-microphones-in-rooms-2.html">Next »</a></li></ul>
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot