ನಿಮ್ಮ PF ಪಾಸ್‌ಬುಕ್ ಡೌನ್‌ಲೋಡ್ ಮಾಡಲು ಈ ಕ್ರಮ ಅನುಸರಿಸಿ!

|

ನೌಕರರ ಭವಿಷ್ಯ ನಿಧಿ (PF) ನೌಕರರ ಪಾಲಿಗೆ ತುರ್ತು ಸಂದರ್ಭದಲ್ಲಿ ನೆರವಿನ ಹಸ್ತವಾಗಿದೆ. ಪ್ರತಿ ತಿಂಗಳು ಕಾರ್ಯನಿರತ ನೌಕರರ ಸಂಬಳದಲ್ಲಿನ ಒಂದು ನಿರ್ದಿಷ್ಟ ಮೊತ್ತ ಮತ್ತು ಆತ ಕೆಲಸ ಮಾಡುವ ಸಂಸ್ಥೆಯಿಂದ ಒಂದು ನಿರ್ದಿಷ್ಟ ಮೊತ್ತ ನೌಕರನ ಪಿಎಫ್‌ ಖಾತೆಯಲ್ಲಿ ಜಮಾ ಆಗುತ್ತದೆ. ಹಾಗೆಯೇ ಬ್ಯಾಂಕ್‌ಗಳಲ್ಲಿ ನಾಮಿನಿ (nominee) ಹೆಸರು ಸೇರಿಸುವಂತೆ ಪಿಎಫ್‌ ಖಾತೆಯಲ್ಲಿಯೂ ನಾಮಿನಿ ಹೆಸರು ನಮೂದಿಸಬಹುದಾಗಿದೆ. ಹಾಗೆಯೇ ಇ-ಪಾಸ್‌ಬುಕ್ ಮೂಲಕ ಜಮಾ ಮೊತ್ತವನ್ನು ತಿಳಿಯಬಹುದಾಗಿದೆ.

ಉದ್ಯೋಗದಾತ

ನೌಕರರ ಭವಿಷ್ಯ ನಿಧಿ ಪಾಸ್‌ಬುಕ್‌ನಲ್ಲಿ ಇಪಿಎಫ್ ಮತ್ತು ನೌಕರರ ಪಿಂಚಣಿ ಯೋಜನೆ (ಇಪಿಎಸ್) ಖಾತೆಗಳಲ್ಲಿ ಉದ್ಯೋಗದಾತ ಸಂಸ್ಥೆ ಮತ್ತು ಉದ್ಯೋಗಿ ಇವರಿಬ್ಬರು ಮಾಡಿರುವ ವಹಿವಾಟುಗಳು ದಾಖಲಾಗಿರುತ್ತವೆ. ಅಧಿಕೃತ ವೆಬ್‌ಸೈಟ್‌ನಲ್ಲಿ ನಿಮ್ಮ ಯುನಿವರ್ಸಲ್ ಅಕೌಂಟ್ ನಂಬರ್ (UAN) ಮೂಲಕ ಪಾಸ್‌ಬುಕ್ ಚೆಕ್ ಮಾಡಬಹುದಾಗಿದೆ. ಪಿಎಫ್‌ ಖಾತೆಯ ಪಾಸ್‌ಬುಕ್‌ ಅನ್ನು ಡೌನ್‌ಲೋಡ್ ಸಹ ಮಾಡಬಹುದಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

PF ಪಾಸ್‌ಬುಕ್ ಡೌನ್‌ಲೋಡ್ ಮಾಡಲು ಈ ಕ್ರಮ ಅನುಸರಿಸಿ:

PF ಪಾಸ್‌ಬುಕ್ ಡೌನ್‌ಲೋಡ್ ಮಾಡಲು ಈ ಕ್ರಮ ಅನುಸರಿಸಿ:

PF ಪಾಸ್‌ಬುಕ್ ಅನ್ನು ವೀಕ್ಷಿಸಲು ಮತ್ತು ಡೌನ್‌ಲೋಡ್ ಮಾಡಲು ಪ್ರಕ್ರಿಯೆಯು ಸುಲಭವಾಗಿದೆ. ಈ ಪ್ರಕ್ರಿಯೇ ಅನ್ನು ಅಧಿಕೃತ EPFO ಪೋರ್ಟಲ್‌ನಲ್ಲಿ ಮಾಡಬಹುದು. ಆದಾಗ್ಯೂ, ಉದ್ಯೋಗಿಯು PF ಪಾಸ್‌ಬುಕ್ ಅನ್ನು ಆನ್‌ಲೈನ್‌ನಲ್ಲಿ ವೀಕ್ಷಿಸಲು ಬಯಸಿದರೇ ಅಥವಾ ಡೌನ್‌ಲೋಡ್ ಮಾಡಲು ಬಯಸದಿರೇ ಅದಕ್ಕೆ ಅವಕಾಶ ಇದೆ. ಅದಕ್ಕಾಗಿ ಈ ಕ್ರಮ ಅನುಸರಿಸಿ.

ಗಮನಿಸಬೇಕಾದ ಪ್ರಮುಖ ಅಂಶಗಳು

ಗಮನಿಸಬೇಕಾದ ಪ್ರಮುಖ ಅಂಶಗಳು

* EPFO ಪೋರ್ಟಲ್‌ನಲ್ಲಿ UAN ನೋಂದಣಿ ಪೂರ್ಣಗೊಳಿಸಿದ ಸದಸ್ಯರಿಗೆ ಮಾತ್ರ PF ಪಾಸ್‌ಬುಕ್ ಸೌಲಭ್ಯ ಲಭ್ಯವಿದೆ.
* ನೋಂದಣಿ ಅಥವಾ ಸಕ್ರಿಯಗೊಳಿಸುವಿಕೆ ಮುಗಿದ 6 ಗಂಟೆಗಳ ನಂತರ ಮಾತ್ರ ಪಾಸ್ ಬುಕ್ ಸೌಲಭ್ಯ ಲಭ್ಯವಿರುತ್ತದೆ.
* PF ಪೋರ್ಟಲ್‌ನಲ್ಲಿ ಮಾಡಿದ ಯಾವುದೇ ಬದಲಾವಣೆಗಳನ್ನು 6 ಗಂಟೆಗಳ ನಂತರ ಮಾತ್ರ ನವೀಕರಿಸಲಾಗುತ್ತದೆ.
* PF ಪಾಸ್‌ಬುಕ್‌ನಲ್ಲಿ ಮಾಡಿದ ನಮೂದುಗಳು EPFO ಕ್ಷೇತ್ರ ಕಚೇರಿಗಳಿಂದ ಮಾಡಿದವುಗಳಿಗೆ ಅನುಗುಣವಾಗಿರಬೇಕು.

PF ಪಾಸ್‌ಬುಕ್ ವೀಕ್ಷಿಸಲು ಮತ್ತು ಡೌನ್‌ಲೋಡ್ ಮಾಡಲು ಈ ಕ್ರಮ ಫಾಲೋ ಮಾಡಿ:

PF ಪಾಸ್‌ಬುಕ್ ವೀಕ್ಷಿಸಲು ಮತ್ತು ಡೌನ್‌ಲೋಡ್ ಮಾಡಲು ಈ ಕ್ರಮ ಫಾಲೋ ಮಾಡಿ:

* ಮೊದಲಿಗೆ ಉದ್ಯೋಗಿಯು https://www.epfindia.gov.in/site_en/index.php ಗೆ ಭೇಟಿ ನೀಡಬೇಕು.
* ನಂತರ, ಉದ್ಯೋಗಿ 'ಇ-ಪಾಸ್ ಬುಕ್' ಆಯ್ಕೆಯನ್ನು ಕ್ಲಿಕ್ ಮಾಡಬೇಕು.
* ಬಳಿಕ ಹೊಸ ಟ್ಯಾಬ್‌ನಲ್ಲಿ, ಉದ್ಯೋಗಿಯು ತನ್ನ UAN, ಪಾಸ್‌ವರ್ಡ್ ಮತ್ತು ಕ್ಯಾಪ್ಚಾ ವಿವರಗಳನ್ನು ನಮೂದಿಸಬೇಕು.
* ಆ ನಂತರ, ಉದ್ಯೋಗಿ 'ಲಾಗಿನ್' ಮೇಲೆ ಕ್ಲಿಕ್ ಮಾಡಬೇಕು.
* ಹೊಸ ಪುಟದಲ್ಲಿ, ಉದ್ಯೋಗಿಯ ಸದಸ್ಯ ID ಯನ್ನು ಕಾಣಿಸಲಾಗುತ್ತದೆ. ಉದ್ಯೋಗಿಯು ವಿವಿಧ ಸದಸ್ಯರ ಐಡಿಗಳನ್ನು ಹೊಂದಿದ್ದರೆ, ಅವೆಲ್ಲವನ್ನೂ ಡಿಸ್‌ಪ್ಲೇಯ ಮೇಲೆ ಕಾಣಿಸಿಕೊಳ್ಳುತ್ತದೆ.

ಮಾಡಬೇಕು

* ಉದ್ಯೋಗಿಯು ಡೌನ್‌ಲೋಡ್ ಮಾಡಲು ಬಯಸುವ PF ಸ್ಟೇಟ್‌ಮೆಂಟ್‌ನ ಸದಸ್ಯರ ಐಡಿಯನ್ನು ಕ್ಲಿಕ್ ಮಾಡಬೇಕು.
* ಉದ್ಯೋಗಿ ಸದಸ್ಯ ID ಯನ್ನು ಕ್ಲಿಕ್ ಮಾಡಿದ ನಂತರ, PF ಖಾತೆಯ ಎಲ್ಲಾ ವಿವರಗಳನ್ನು ಸಂಸ್ಥೆಯ ಹೆಸರು, ಉದ್ಯೋಗಿಯ ಹೆಸರು, ಕಚೇರಿ ಇರುವ ಸ್ಥಳ, ಉದ್ಯೋಗದಾತ ಮತ್ತು ಉದ್ಯೋಗಿಯ ಪಾಲು ಮತ್ತು ನೀಡಿದ ಕೊಡುಗೆ ಇತರೆ ಮಾಹಿತಿ ಕಾಣಿಸಲಾಗುತ್ತದೆ. ಉದ್ಯೋಗಿಗಳ ಪಿಂಚಣಿ ಯೋಜನೆ (ಇಪಿಎಸ್) ಖಾತೆಗೆ.
* ಉದ್ಯೋಗಿಯು PF ಸ್ಟೇಟ್‌ಮೆಂಟ್‌ ಅನ್ನು PDF ಮಾದರಿಯಲ್ಲಿ ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತದೆ.

PF ಖಾತೆಯಲ್ಲಿ ನಿಮ್ಮ ಫೋನ್ ಸಂಖ್ಯೆಯನ್ನು ಬದಲಾಯಿಸುವುದು ಹೇಗೆ?

PF ಖಾತೆಯಲ್ಲಿ ನಿಮ್ಮ ಫೋನ್ ಸಂಖ್ಯೆಯನ್ನು ಬದಲಾಯಿಸುವುದು ಹೇಗೆ?

ಹಂತ:1 https://www.epfindia.gov.in/site_en/index.php ಗೆ ಭೇಟಿ ನೀಡಿ ಮತ್ತು ನಿಮ್ಮ ಯುಎಎನ್ ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಮಾಡಿ
ಹಂತ:2 ಮ್ಯಾನೇಜ್ ಟ್ಯಾಬ್ ಕ್ಲಿಕ್ ಮಾಡಿ ಮತ್ತು ಡ್ರಾಪ್-ಡೌನ್ ಮೆನುವಿನಿಂದ ಸಂಪರ್ಕ ವಿವರಗಳ ಆಯ್ಕೆಯನ್ನು ಆರಿಸಿ
ಹಂತ:3 ಇಲ್ಲಿ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಿ ಚೆಕ್‌ಬಾಕ್ಸ್ ಆಯ್ಕೆಯನ್ನು ಆರಿಸಿ
ಹಂತ:4 ನಿಮ್ಮ ಹೊಸ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ಅದನ್ನು ಖಚಿತಪಡಿಸಲು ಮರು ನಮೂದಿಸಿ
ಹಂತ:5 ನಂತರ ಒಟಿಪಿ ಸ್ವೀಕರಿಸಲು ಗೆಟ್ ಆಥರೈಸೇಶನ್ ಪಿನ್ ಬಟನ್ ಕ್ಲಿಕ್ ಮಾಡಿ
ಹಂತ:6 ಈಗ, ಹಿಂದಿನ ಹಂತದಲ್ಲಿ ನಮೂದಿಸಲಾದ ನಿಮ್ಮ ಹೊಸ ಮೊಬೈಲ್ ಸಂಖ್ಯೆಯಲ್ಲಿ ಸ್ವೀಕರಿಸಿದ ಒಟಿಪಿ ನಮೂದಿಸಿ ಮತ್ತು ಬದಲಾವಣೆಗಳನ್ನು ಉಳಿಸು ಬಟನ್ ಕ್ಲಿಕ್ ಮಾಡಿ
ಹಂತ:7 ಇದರ ನಂತರ, ಸಂಪರ್ಕ ವಿವರಗಳನ್ನು ಯಶಸ್ವಿಯಾಗಿ ನವೀಕರಿಸಲಾಗಿದೆ ಎಂದು ಹೊಸ ಸಂದೇಶ ಕಾಣಿಸುತ್ತದೆ.

Best Mobiles in India

English summary
How To Download PF Passbook In Pdf: Follow These Steps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X