ನಾಡ ಕಚೇರಿಗೆ ಹೋಗದೆ RTC ಪಹಣಿ ಪಡೆಯುವುದು ಹೇಗೆ ಗೊತ್ತಾ?

|

ನಿಮಗೆ ನಿಮ್ಮ ಹೋಲದ ಪಹಣಿ ಪಡೆಯಬೇಕಿದ್ದರೇ, ಮೊದಲಿನಂತೆ ನಾಡ ಕಚೇರಿಗೆ ಹೋಗಿ ಕ್ಯೂನಲ್ಲಿ ನಿಲ್ಲುವ ಅಗತ್ಯವಿಲ್ಲ. ಆನ್‌ಲೈನ್‌ ಮೂಲಕ ಅತೀ ಸುಲಭವಾಗಿ ಹೋಲದ RTC ಉತಾರ/ ಪಹಣಿಯನ್ನು ನೀವು ಪಡೆಯಬಹುದಾಗಿದೆ. ಹಾಗೆಯೇ ಪಹಣಿಯನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ಸಹ ಅವಕಾಶವಿದೆ.

ಆನ್‌ಲೈನ್‌

ಹೌದು, ಸದ್ಯ ತಂತ್ರಜ್ಞಾನ ಬಹುತೇಕ ಎಲ್ಲ ಕೆಲಸಗಳನ್ನು ಸರಳಗೊಳಿಸಿದೆ. ಸರ್ಕಾರ ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿದ್ದು, ಆನ್‌ಲೈನ್‌ ಮೂಲಕ ಯಾವಾಗ ಬೇಕಾದರೂ ಪಹಣಿಯಲ್ಲಿ ಪಡೆಯಬಹುದಾಗಿದೆ. ಪಹಣಿ ಪಡೆಯಲು ಅಗತ್ಯ ಮಾಹಿತಿಗಳಾದ ಹೋಲದ ಸರ್ವೇ ನಂಬರ್, ಹಿಸ್ಸಾ, ಯಾವ ಜಿಲ್ಲೆ, ಯಾವ ತಾಲೂಕ್, ಯಾವ ಹೋಬಳಿಗಳ ಇವುಗಳ ಮಾಹಿತಿ ನೀಡಬೇಕಿರುತ್ತದೆ. ಹಾಗಾದರೇ ಆನ್‌ಲೈನ್‌ನಲ್ಲಿ ಪಹಣಿ ಪಡೆಯುವುದು ಹೇಗೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ನೋಡೋಣ ಬನ್ನಿರಿ.

ಆನ್‌ಲೈನ್‌ನಲ್ಲಿ ಪಹಣಿ ಪಡೆಯಲು ಈ ಕ್ರಮ ಅನುಸರಿಸಿ

ಆನ್‌ಲೈನ್‌ನಲ್ಲಿ ಪಹಣಿ ಪಡೆಯಲು ಈ ಕ್ರಮ ಅನುಸರಿಸಿ

ಹಂತ 1
ಮೊದಲು ನೀವು ಬ್ರೌಸರ್‌ನಲ್ಲಿ https://landrecords.karnataka.gov.in ಅಥವಾ Bhoomi ವೆಬ್‌ಸೈಟ್‌ ತೆರೆಯಿರಿ.

ಹಂತ 2
ಆ ನಂತರ ಮೇಲಿನ ಚಿತ್ರದಲ್ಲಿ ತೋರಿಸಿರುವಂತೆ View RTC and MR ಆಯ್ಕೆಯನ್ನು ಕ್ಲಿಕ್‌ ಮಾಡಿ.

ಹಂತ 3
View RTC and MR ಆಯ್ಕೆ ಕ್ಲಿಕ್‌ ಮಾಡಿದ ನಂತರ ಮೇಲೆ ತೋರಿಸಿರುವ ವಿಂಡೋ ತೆರದುಕೊಳ್ಳುತ್ತದೆ.

ಜಿಲ್ಲೆ

ಹಂತ 4
ನಂತರ ಅಲ್ಲಿ ಕೇಳಲಾಗಿರುವ, ಹೋಲ ಇರುವ ಜಿಲ್ಲೆ ಯಾವುದು, ತಾಲೂಕು ಯಾವುದು, ಹೋಬಳಿ, ಗ್ರಾಮ, ಸರ್ವೇ ನಂಬರ್ ಎಲ್ಲ ಮಾಹಿತಿಗಳನ್ನು ಭರ್ತಿ ಮಾಡಿ.

ಹಂತ 5
ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿದ ನಂತರ Fetch Details ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.

ಹಂತ 6
Fetch Details ಆಯ್ಕೆ ಕ್ಲಿಕ್ ಮಾಡಿದ ಮೇಲೆ ನೀವು ನಮೂದಿಸಿದ ಜಾಗದ/ಭೂಮಿಯ ಮಾಹಿತಿಯನ್ನಾಧರಿಸಿ ಆ ಸರ್ವೇ ನಂಬರ್‌ನಲ್ಲಿರುವ ಭೂಮಿಯ ವಿವರಗಳು ನಿಮಗೆ ಕಾಣುತ್ತವೆ.

ಪಹಣಿ

ಹಂತ 7
ಭೂಮಿಯ ವಿವರಗಳು ಕಾಣಿಸಿಕೊಂಡ ನಂತರ View ಆಯ್ಕೆಯನ್ನು ಸೆಲೆಕ್ಟ್ ಮಾಡಿ.

ಹಂತ 8
View ಆಯ್ಕೆ ಕ್ಲಿಕ್ ಮಾಡಿದ ನಂತರ ಬೇರೊಂದು ಪುಟದಲ್ಲಿ ನಿಮ್ಮ ಪಹಣಿ ಕಾಣುತ್ತದೆ. ನೀವು ಅಲ್ಲಿ ಕಾಣುವ ಪಹಣಿಯನ್ನು ಸೇವ್‌ ಮಾಡಿಕೊಂಡು ಪ್ರಿಂಟ್‌ ತೆಗೆಸಿಕೊಳ್ಳಬಹುದು.

ಹಂತ 9
ಆನ್‌ಲೈನ್‌ನಲ್ಲಿ ವೀಕ್ಷಿಸುವ ಪಹಣಿ ವೀಕ್ಷಣೆಗೆ ಮಾತ್ರ. ಆದರೆ ನಿಗದಿತ ಸರ್ಕಾರಿ ಶುಲ್ಕ ಪಾವತಿಸುವ ಮೂಲಕ ಕೆಲಸಗಳಿಗೆ ಮಾನ್ಯತೆ ಇರುವಂತಹ ಪಹಣಿ ಸಹ ಪ್ರಿಂಟ್ ಮಾಡಬಹುದಾಗಿದೆ.

Best Mobiles in India

English summary
How To Download RTC Pahani Online In Karnataka 2021.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X