ಜಿಯೋ ಫೋನಿನಲ್ಲಿ ಟಿಕ್‌ಟಾಕ್‌ ಆಪ್‌ ಡೌನ್‌ಲೋಡ್‌ ಮಾಡಬಹುದೇ?..ಇಲ್ಲಿದೆ ಮಾಹಿತಿ!

|

ಜಿಯೋ ಫೋನ್‌ ಒಂದು ಫೀಚರ್ ಫೋನಾಗಿದ್ದು, ಆದರೆ ಸ್ಮಾರ್ಟ್‌ಫೋನ್‌ನಲ್ಲಿನ ಜನಪ್ರಿಯ ಅಪ್ಲಿಕೇಶನ್‌ಗಳ ಸಪೋರ್ಟ್‌ ಪಡೆದಿದೆ. ಜಿಯೋ ಫೋನ್‌ಗಳು 4G ನೆಟವರ್ಕ್ ಸಂಪರ್ಕ ಪಡೆದಿದ್ದು, ಕೈಯೋಸ್ ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತವೆ. ಜಿಯೋ ಫೋನ್‌ ಈಗಾಗಲೇ ಫೇಸ್‌ಬುಕ್, ವಾಟ್ಸಪ್‌ ಮತ್ತು ಗೂಗಲ್ ಮ್ಯಾಪ್‌ ಅಪ್ಲಿಕೇಶನ್‌ಗಳ ಸೌಲಭ್ಯ ಹೊಂದಿದೆ. ಹಾಗೆಯೇ ಜಿಯೋ ಫೋನಿನಲ್ಲಿ ಟಿಕ್‌ಟಾಕ್‌ ಆಪ್‌ ಡೌನ್‌ಲೋಡ್ ಮಾಡಿಕೊಳ್ಳಬಹುದೇ ಎನ್ನುವ ಕುತೂಹಲ ಬಹುತೇಕ ಬಳಕೆದಾರರಲ್ಲಿದೆ.

ಜಿಯೋ ಫೋನ್

ಹೌದು, ಭಾರತದಲ್ಲಿ ಜಿಯೋ ಫೋನ್ ಮತ್ತು ಜಿಯೋ ಫೋನ್ 2 ಹೆಚ್ಚು ಮಾರಾಟವಾದ ಫೋನ್‌ಗಳಾಗಿವೆ. ಪ್ರಸ್ತುತ ಜಿಯೋ ಫೋನ್ ಮತ್ತು ಜಿಯೋ ಫೋನ್ 2 ನಲ್ಲಿ ಟಿಕ್‌ಟಾಕ್‌ ಅಪ್ಲಿಕೇಶನ್ ಅನ್ನು ಹೇಗೆ ಇನ್‌ಸ್ಟಾಲ್‌ ಮಾಡುವುದು ಎಂಬುದರ ಕುರಿತು ಸಾಕಷ್ಟು ಟ್ಯುಟೋರಿಯಲ್ ಮತ್ತು ವೀಡಿಯೊಗಳಿವೆ. ಹಾಗಾದರೆ ನಿಜವಾಗಿಯೂ ಟಿಕ್‌ಟಾಕ್ ಅಪ್ಲಿಕೇಶನ್ ಅನ್ನು ಜಿಯೋ ಫೋನ್ ಅಥವಾ ಜಿಯೋ ಫೋನ್ 2 ನಲ್ಲಿ ಇನ್‌ಸ್ಟಾಲ್‌ ಮಾಡಬಹುದೇ? ಆ ಬಗ್ಗೆ ಇಲ್ಲಿದೆ ಮಾಹಿತಿ.

ಜಿಯೋ ಫೋನಿನಲ್ಲಿ ಟಿಕ್‌ಟಾಕ್‌ ಸಾಧ್ಯವೇ?

ಜಿಯೋ ಫೋನಿನಲ್ಲಿ ಟಿಕ್‌ಟಾಕ್‌ ಸಾಧ್ಯವೇ?

ಜಿಯೋ ಫೋನ್‌ನಲ್ಲಿ ಜನಪ್ರಿಯ ಟಿಕ್‌ಟಾಕ್ ಆಪ್‌ ಅನ್ನು ಇನ್‌ಸ್ಟಾಲ್‌ ಮಾಡುವುದು ಹೇಗೆ ಎಂಬ ಬಗ್ಗೆ ಹಲವು ವಿಡಿಯೊಗಳಿವೆ. ಅವುಗಳಲ್ಲಿ ಬಹುತೇಕ ವಿಡಿಯೊಗಳು ಥರ್ಡ್‌ಪಾರ್ಟಿ ವೆಬ್‌ಸೈಟ್‌ಗಳಿಂದ ಟಿಕ್‌ಟಾಕ್‌ ಇನ್‌ಸ್ಟಾಲ್/ಡೌನ್‌ಲೋಡ್‌‌ ಮಾಡಬಹುದು ಅನ್ನುವ ಅಂಶವನ್ನು ಒಳಗೊಂಡಿವೆ. ಇನ್ನು ಕೆಲವು ಟ್ಯುಟೋರಿಯಲ್‌ ವಿಡಿಯೊಗಳಲ್ಲಿ ಜಿಯೋ ಫೋನ್‌ನಲ್ಲಿ ಟಿಕ್‌ಟಾಕ್ ಐಕಾನ್ ಅನ್ನು ತೋರಿಸಬಹುದು ಮತ್ತು ಅವರು ತೆರೆಯಲು ಪ್ರಯತ್ನಿಸಿದಾಗ ಮತ್ತು ಇಂಟರ್ನೆಟ್‌ ಸ್ಲೋ ಇರುವ ಕಾರಣಕ್ಕಾಗಿ ಆಪ್ ತೆರೆಯುವುದಿಲ್ಲ ಎಂದಿವೆ. ಅಷ್ಟಕ್ಕೂ ಅಸಲಿಗೆ ಜಿಯೋ ಫೋನಿನ ಯಾವುದೇ ಆವೃತ್ತಿಯಲ್ಲಿಯೂ ಟಿಕ್‌ಟಾಕ್‌ ಆಪ್‌ ಆಕ್ಸಸ್ ಮಾಡಲಾಗುವುದಿಲ್ಲ.

ಅಧಿಕೃತ ಮಾರ್ಗವಿಲ್ಲ

ಅಧಿಕೃತ ಮಾರ್ಗವಿಲ್ಲ

ಜನಪ್ರಿಯ ಟಿಕ್‌ಟಾಕ್ ಆಪ್ ಪ್ರಸ್ತುತ ಆಂಡ್ರಾಯ್ಡ್ ಮತ್ತು ಐಒಎಸ್ ಸಾಧನಗಳಿಗೆ ಲಭ್ಯವಿದೆ ಮತ್ತು ಇದನ್ನು ಇಂಟರ್ನೆಟ್ ಬ್ರೌಸರ್ ಬಳಸಿ ಸಹ ಬಳಕೆ ಮಾಡಬಹುದಾಗಿದೆ. ಜಿಯೋ ಫೋನ್ ಕೈಓಎಸ್ ಓಎಸ್‌ ಅನ್ನು ಆಧರಿಸಿದ್ದು, ಆದ್ರೆ KaiOS ಓಎಸ್‌ನಲ್ಲಿ ಟಿಕ್‌ಟಾಕ್‌ ಅಪ್ಲಿಕೇಶನ್ ಬೆಂಬಲವಿಲ್ಲ. ಆದ್ದರಿಂದ, ಜಿಯೋ ಫೋನ್‌ನಲ್ಲಿ ಟಿಕ್‌ಟಾಕ್ ಅನ್ನು ಇನ್‌ಸ್ಟಾಲ್/ಡೌನ್‌ಲೋಡ್ ಮಾಡಲು ಯಾವುದೇ ಅಧಿಕೃತ ಮಾರ್ಗಗಳಿಲ್ಲ.

ಟಿಕ್‌ಟಾಕ್‌ ಇನ್‌ಸ್ಟಾಲ್‌ ಪ್ರಯತ್ನಬೇಡ

ಟಿಕ್‌ಟಾಕ್‌ ಇನ್‌ಸ್ಟಾಲ್‌ ಪ್ರಯತ್ನಬೇಡ

ಜಿಯೋ ಫೋನಿನಲ್ಲಿ ಥರ್ಡ್‌ಪಾರ್ಟಿ ಆಪ್ಸ್‌ಗಳಿಂದ ಟಿಕ್‌ಟಾಕ್‌ ಆಪ್ ಇನ್‌ಸ್ಟಾಲ್ ಮಾಡುವ ಬಗ್ಗೆ ಮಾಹಿತಿ ಇವೆ. ಹಾಗಂತ ಥರ್ಡ್‌ಪಾರ್ಟಿ ಆಪ್ಸ್‌ಗಳ ಮೂಲಕ ಜಿಯೋ ಫೋನಿನಲ್ಲಿ ಟಿಕ್‌ಟಾಕ್‌ ಇನ್‌ಸ್ಟಾಲ್ ಮಾಡುವ ಪ್ರಯತ್ನಕ್ಕೆ ಮುಂದಾಗಬೇಡಿ. ಏಕೆಂದರೇ ಕೆಲವು ಥರ್ಡ್‌ಪಾರ್ಟಿ ಆಪ್ಸ್‌ಗಳ ಮಾಲ್ವೇರ್‌(malware) ಆಗಿರುತ್ತವೆ. ಮಾಹಿತಿ ಸೋರಿಕೆ ಆಗುವ ಸಾಧ್ಯತೆಗಳಿರುತ್ತವೆ.

ಬ್ರೌಸರ್‌ನಲ್ಲಿ ಟಿಕ್‌ಟಾಕ್‌

ಬ್ರೌಸರ್‌ನಲ್ಲಿ ಟಿಕ್‌ಟಾಕ್‌

ಅದಾಗ್ಯೂ ನೀವು JioPhone ಅಥವಾ JioPhone 2 ನಲ್ಲಿ ಟಿಕ್‌ಟಾಕ್‌ ವೀಕ್ಷಿಸಬೇಕು ಎಂದಿದ್ದರೇ, ಜಿಯೋ ಫೋನಿನಲ್ಲಿ ವೆಬ್ ಬ್ರೌಸರ್ ತೆರೆಯಿರಿ ಮತ್ತು tiktok.com ಗೆ ಹೋಗಿ. ಟಿಕ್‌ಟಾಕ್‌ ವೀಡಿಯೊಗಳನ್ನು ವೀಕ್ಷಿಸಬಹುದು. ಮತ್ತೆ ಸುಲಭವಾಗಿ ಟಿಕ್‌ಟಾಕ್‌ ವಿಡಿಯೊ ವೀಕ್ಷಿಸಲು ಟಿಕ್‌ಟಾಕ್ ವೆಬ್‌ಸೈಟ್ ಅನ್ನು ಬುಕ್‌ಮಾರ್ಕ್ ಮಾಡಬಹುದು.

Best Mobiles in India

English summary
Jiophones are based on KaiOS which offers a lot of apps like YouTube, WhatsApp, Google Maps, and Facebook.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X