Subscribe to Gizbot

ಆಂಡ್ರಾಯ್ಡ್ ಫೋನ್‌ನಿಂದ ಚಿತ್ರಗಳನ್ನು ಇಮೇಲ್ ಮಾಡುವುದು ಹೇಗೆ?

Written By:

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನೀವು ಬಹಳಷ್ಟು ಕೆಲಸಗಳನ್ನು ಮಾಡಬಹುದಾಗಿದ್ದು ಪುಟ್ಟ ಕಂಪ್ಯೂಟರ್ ಮಾದರಿಯಲ್ಲೇ ಇದನ್ನು ಬಳಸಿಕೊಳ್ಳಬಹುದಾಗಿದೆ. ಆದರೆ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಸುವ ಸಲಹೆ ಸೂಚನೆಗಳನ್ನು ನೀವು ಪಾಲಿಸುವುದು ಅನಿವಾರ್ಯವಾಗಿದೆ. ಇಂದು ಫೋನ್‌ನಿಂದಲೇ ಹೆಚ್ಚಿನವರು ಕಚೇರಿ ಕೆಲಸಗಳನ್ನು ನಿಭಾಯಿಸುತ್ತಿದ್ದಾರೆ.

ಓದಿರಿ: ಸ್ಮಾರ್ಟ್‌ಫೋನ್‌ನಲ್ಲಿ ಫೋಟೋ ಸ್ಕ್ಯಾನ್ ಮಾಡುವುದು ಹೇಗೆ?

ಇಂದಿನ ಲೇಖನದಲ್ಲಿ ಇಂತಹುದೇ ಮಹತ್ತರವಾದ ಟಿಪ್ಸ್ ಅನ್ನು ತಿಳಿಸುತ್ತಿದ್ದು ಆಂಡ್ರಾಯ್ಡ್ ಫೋನ್‌ನಿಂದ ಚಿತ್ರಗಳನ್ನು ಇಮೇಲ್ ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡಲಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫೋನ್ ಇಂಟರ್ನೆಟ್‌ಗೆ ಸಂಪರ್ಕ ಹೊಂದಿರುವುದು

ಫೋನ್ ಇಂಟರ್ನೆಟ್‌ಗೆ ಸಂಪರ್ಕ ಹೊಂದಿರುವುದು

ನಿಮ್ಮ ಡಿವೈಸ್ ಇಂಟರ್ನೆಟ್ ಸಂಪರ್ಕವನ್ನು ಪಡೆದುಕೊಂಡಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ವೈಫೈ ಇಲ್ಲವೇ ಡೇಟಾ ನಿಖರವಾಗಿರಲಿ.

ವೈಫೈ ಅಥವಾ ಡೇಟಾ

ವೈಫೈ ಅಥವಾ ಡೇಟಾ

ಸೆಟ್ಟಿಂಗ್ಸ್‌ಗೆ ಹೋಗಿ ಇಲ್ಲಿ ವೈರ್‌ಲೆಸ್ ಮತ್ತು ನೆಟ್‌ವರ್ಕ್ ಅಡಿಯಲ್ಲಿ ವೈಫೈ ಅಥವಾ ಡೇಟಾ ಎರಡರಲ್ಲಿ ಒಂದಕ್ಕೆ ಸಂಪರ್ಕವನ್ನು ಪಡೆದುಕೊಂಡಿರಬೇಕು.

ಡಿವೈಸ್‌ನಲ್ಲಿ ಗೂಗಲ್ ಖಾತೆ

ಡಿವೈಸ್‌ನಲ್ಲಿ ಗೂಗಲ್ ಖಾತೆ

ಡಿವೈಸ್‌ನಲ್ಲಿ ಗೂಗಲ್ ಖಾತೆಯನ್ನು ಸಕ್ರಿಯಗೊಳಿಸಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಹೀಗೆ ಮಾಡದೇ ಇದ್ದಲ್ಲಿ ಸೆಟ್ಟಿಂಗ್ಸ್ > ಖಾತೆಗಳು, ಗೂಗಲ್ ಕ್ಲಿಕ್ ಮಾಡಿ. ನೀವು ಒಮ್ಮೆ ಲಾಗಿನ್ ಮಾಡಿದ ನಂತರ, ನಿಮ್ಮ ಜಿಮೇಲ್ ಅಪ್ಲಿಕೇಶನ್ ಅನ್ನು ಬಳಸಲು ನಿಮ್ಮಿಂದ ಸಾಧ್ಯ.

ಅಪ್ಲಿಕೇಶನ್ ಬಾರ್‌ನಲ್ಲಿ ಇಮೇಲ್ ಕ್ಲಿಕ್ ಮಾಡಿ

ಅಪ್ಲಿಕೇಶನ್ ಬಾರ್‌ನಲ್ಲಿ ಇಮೇಲ್ ಕ್ಲಿಕ್ ಮಾಡಿ

ನೀವು ಜಿಮೇಲ್ ಬಳಸುತ್ತಿಲ್ಲ ಎಂದಾದಲ್ಲಿ, ಇಮೇಲ್ ಕ್ಲಿಕ್ ಮಾಡಿ. ಇಲ್ಲಿ ಖಾತೆ ಸೇರಿಸಲು ನಿಮ್ಮನ್ನು ವಿನಂತಿಸಿಕೊಳ್ಳಲಾಗುತ್ತದೆ.

ಬಳಕೆದಾರ ಹೆಸರು ಮತ್ತು ಪಾಸ್‌ವರ್ಡ್

ಬಳಕೆದಾರ ಹೆಸರು ಮತ್ತು ಪಾಸ್‌ವರ್ಡ್

ನಿಮ್ಮ ಬಳಕೆದಾರ ಹೆಸರು ಮತ್ತು ಪಾಸ್‌ವರ್ಡ್ ಅನ್ನು ಸಿದ್ಧವಾಗಿರಿಸಿಕೊಳ್ಳಿ. ನಿಮ್ಮ ದಾಖಲೆಗಳನ್ನು ಒಮ್ಮೆ ನೀವು ದಾಖಲಿಸಿದ ನಂತರ, ನೀವು ಮುಂದುವರಿಯಬಹುದು.

ಯಾಹೂ ಬಳಸುತ್ತಿದ್ದಲ್ಲಿ ಯಾಹೂ ಇನ್‌ಸ್ಟಾಲ್ ಮಾಡಿ

ಯಾಹೂ ಬಳಸುತ್ತಿದ್ದಲ್ಲಿ ಯಾಹೂ ಇನ್‌ಸ್ಟಾಲ್ ಮಾಡಿ

ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಮೇಲ್ ಅಪ್ಲಿಕೇಶನ್ ಉಚಿತವಾಗಿರುತ್ತದೆ. ಯಾಹೂ ಮೇಲ್ ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್ ಮಾಡಿಕೊಂಡು, ನೀವು ಚಿತ್ರಗಳನ್ನು ಕಳುಹಿಸಬಹುದಾಗಿದೆ.

ಕಂಪೋಸ್

ಕಂಪೋಸ್

ನೀವು ಬಳಸುತ್ತಿರುವ ಅಪ್ಲಿಕೇಶನ್ ಕ್ಲಿಕ್ ಮಾಡಿಕೊಂಡು ಕಂಪೋಸ್ ಒತ್ತಿರಿ. ಅಟ್ಯಾಚ್ ಬಟನ್ ಅನ್ನು ಲೊಕೇಟ್ ಮಾಡಿ, ಇದು ಪೇಪರ್ ಕ್ಲಿಪ್ ಮಾದರಿಯಲ್ಲಿರುತ್ತದೆ. ನೀವು ಚಿತ್ರವನ್ನು ತೆಗೆಯಬೇಕು ಎಂದಾದಲ್ಲಿ, ನಿಮ್ಮ ಕ್ಯಾಮೆರಾ ಅಪ್ಲಿಕೇಶನ್‌ಗೆ ಹಿಂತಿರುಗಬೇಕು ನಂತರ ಫೋಟೋ ತೆಗೆಯಬೇಕು.

ಕ್ಯಾಪ್ಚರ್ ನ್ಯೂ ಬಟನ್

ಕ್ಯಾಪ್ಚರ್ ನ್ಯೂ ಬಟನ್

ನೀವು ಜಿಮೇಲ್ ಬಳಸುತ್ತಿದ್ದೀರಿ ಎಂದಾದಲ್ಲಿ, ಕ್ಯಾಪ್ಚರ್ ನ್ಯೂ ಬಟನ್ ಅನ್ನು ಕ್ಲಿಕ್ ಮಾಡಬಹುದಾಗಿದೆ. ನಿಮಗೆ ಬೇಕಾದ ಚಿತ್ರವನ್ನು ಆಯ್ಕೆಮಾಡಿ.

ಚಿತ್ರವನ್ನು ಅಟ್ಯಾಚ್ ಮಾಡಿ

ಚಿತ್ರವನ್ನು ಅಟ್ಯಾಚ್ ಮಾಡಿ

ಚಿತ್ರವನ್ನು ಅಟ್ಯಾಚ್ ಮಾಡಿಕೊಂಡು ರೆಸಿಪೀಂಟ್ ಆರಿಸಿ, ಈಗ ಚಿತ್ರವನ್ನು ನಿಮಗೆ ಕಳುಹಿಸಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article will teach you how to send a simple picture to an e-mail recipient via your Android phone or tablet. You will be sending pictures of your dog to all your friends in under five minutes.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot