ಟೆಲಿಗ್ರಾಮ್‌ನಲ್ಲಿರುವ ಈ ಆಯ್ಕೆಯು ವಾಟ್ಸಾಪ್‌ಗಿಂತ ಭಿನ್ನವಾಗಿದೆ! ಇದರ ಲಾಭವೇನು?

|

ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ಗಳಲ್ಲಿ ಟೆಲಿಗ್ರಾಮ್‌ ಕೂಡ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ವಾಟ್ಸಾಪ್‌ಗೆ ಪ್ರಬಲ ಪೈಪೋಟಿ ನೀಡುತ್ತಿರುವ ಟೆಲಿಗ್ರಾಮ್‌ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಒಳಗೊಂಡಿದೆ. ಜೊತೆಗೆ ವಿವಿಧ ಮಾದರಿಯ ಫೀಚರ್ಸ್‌ಗಳನ್ನು ತನ್ನ ಬಳಕೆದಾರರಿಗೆ ಪರಿಚಯಿಸುತ್ತಾ ಬಂದಿದೆ. ಅಲ್ಲದೆ ವಾಟ್ಸಾಪ್‌ಗೆ ಸೆಡ್ಡು ಹೊಡೆಯುವ ಅನೇಕ ಫೀಚರ್ಸ್‌ಗಳನ್ನು ಟೆಲಿಗ್ರಾಮ್‌ನಲ್ಲಿ ಕಾಣಬಹುದಾಗಿದೆ.

ಟೆಲಿಗ್ರಾಮ್‌ನಲ್ಲಿರುವ ಈ ಆಯ್ಕೆಯು ವಾಟ್ಸಾಪ್‌ಗಿಂತ ಭಿನ್ನವಾಗಿದೆ! ಇದರ ಲಾಭವೇನು?

ಹೌದು, ಟೆಲಿಗ್ರಾಮ್‌ ಅಪ್ಲಿಕೇಶನ್‌ ವಾಟ್ಸಾಪ್‌ಗೆ ಪೈಪೋಟಿ ನೀಡುವ ಅನೇಕ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದಕ್ಕೆ ಅನುಗುಣವಾಗಿ ಹೊಸ ಅಪ್ಡೇಟ್‌ಗಳ ಮೂಲಕ ಟೆಲಿಗ್ರಾಮ್‌ ಇನ್ನಷ್ಟು ಫೀಚರ್ಸ್‌ಗಳನ್ನು ಸೇರ್ಪಡೆ ಮಾಡುತ್ತಲೇ ಬಂದಿದೆ. ಇನ್ನು ಟೆಲಿಗ್ರಾಮ್‌ ಒಳಗೊಂಡಿರುವ ಪ್ರಮುಖ ಫೀಚರ್ಸ್‌ಗಳಲ್ಲಿ ಆಟೋ ಡಿಲೀಟ್‌ ಆಯ್ಕೆಯು ವಿಶೇಷವಾಗಿದೆ. ಇದು ವಾಟ್ಸಾಪ್‌ಗಿಂತ ಭಿನ್ನವಾಗಿ ಕಾರ್ಯನಿರ್ವಹಿಸಲಿದೆ. ಹಾಗಾದ್ರೆ ಟೆಲಿಗ್ರಾಮ್‌ನಲ್ಲಿ ಆಟೋ ಡಿಲೀಟ್‌ ಫೀಚರ್ಸ್‌ ಅನ್ನು ಆಕ್ಟಿವ್‌ಗೊಳಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಟೆಲಿಗ್ರಾಮ್‌ನಲ್ಲಿರುವ ಆಟೋ ಡಿಲೀಟ್‌ ಫೀಚರ್ಸ್‌ ಸಾಕಷ್ಟು ವಿಶೇಷವಾಗಿದೆ. ಈ ಫೀಚರ್ಸ್‌ ಮೂಲಕ ನೀವು ಟೆಲಿಗ್ರಾಮ್‌ನಲ್ಲಿರುವ ಎಲ್ಲಾ ಚಾಟ್‌ಗಳ ಸಂದೇಶಗಳನ್ನು ಆಟೋ ಡಿಲೀಟ್‌ ಮಾಡಬಹುದಾಗಿದೆ. ಇದಕ್ಕಾಗಿ ನೀವು ಡಿಲೀಟ್‌ ಟೈಮರ್ ಅನ್ನು ಸೆಟ್‌ ಮಾಡಲು ಟೆಲಿಗ್ರಾಮ್‌ ಹೊಸ ಅವಕಾಶವನ್ನು ನೀಡಿದೆ. ಇದರಿಂದ ಟೆಲಿಗ್ರಾಮ್‌ನಲ್ಲಿ ಸ್ಮಾಲ್‌ ಗ್ರೂಪ್‌ಗಳಲ್ಲಿ ಆಟೋ ಡಿಲೀಟ್‌ ಮಾಡುವುದು ಸುಲಭವಾಗಿದೆ. ಇದಲ್ಲದೆ ಗ್ರೂಪ್‌ ನೇಮ್‌ ಹಾಗೂ ಇಮೇಜ್‌ ಬದಲಾಯಿಸುವ ಅವಕಾಶ ಪಡೆದಿರುವ ಯಾವುದೇ ಗ್ರೂಪಿನ ಸದಸ್ಯರು ಆಟೋ ಡಿಲೀಟ್‌ ಟೈಮರ್‌ ಅನ್ನು ಸೆಟ್‌ ಮಾಡಬಹುದಾಗಿದೆ.

ಟೆಲಿಗ್ರಾಮ್‌ನಲ್ಲಿರುವ ಈ ಆಯ್ಕೆಯು ವಾಟ್ಸಾಪ್‌ಗಿಂತ ಭಿನ್ನವಾಗಿದೆ! ಇದರ ಲಾಭವೇನು?

ಎಲ್ಲಾ ಚಾಟ್‌ಗಳಲ್ಲಿಯೂ ಆಟೋ ಡಿಲೀಟ್‌ ಮೆಸೇಜಸ್‌ ಆಕ್ಟಿವ್‌ ಮಾಡಲು ಹೀಗೆ ಮಾಡಿ!
ಹಂತ:1 ಮೊದಲಿಗೆ ಟೆಲಿಗ್ರಾಮ್‌ ಅಪ್ಲಿಕೇಶನ್‌ ತೆರೆಯಿರಿ.
ಹಂತ:2 ಆ್ಯಪ್‌ನಲ್ಲಿ ಕಾಣುವ ಮೂರು ಸಾಲಿನ ಮೆನು ಬಟನ್ ಮೇಲೆ ಟ್ಯಾಪ್ ಮಾಡಿರಿ.
ಹಂತ:3 ಇದೀಗ ಡಿಸ್‌ಪ್ಲೇ ಆಗುವ ಮೆನುವಿನ ಮೂಲಕ ಸೆಟ್ಟಿಂಗ್ಸ್‌ ಆಯ್ಕೆಯನ್ನು ಟ್ಯಾಪ್‌ ಮಾಡಿ
ಹಂತ:4 ನಂತರ ಸೆಟ್ಟಿಂಗ್ಸ್‌ನಲ್ಲಿ ಪ್ರೈವೆಸಿ ಆಂಡ್‌ ಸೆಕ್ಯುರಿಟಿ ಆಯ್ಕೆಯನ್ನು ಟ್ಯಾಪ್‌ ಮಾಡಿರಿ
ಹಂತ:5 ಇದಾದ ನಂತರ ಆಟೋ ಡಿಲೀಟ್‌ ಮೆಸೇಜಸ್‌ ಆಯ್ಕೆಕಾಣಲಿದೆ, ಅದನ್ನು ಟ್ಯಾಪ್ ಮಾಡಿ
ಹಂತ:6 ನಂತರ, ಡಿಸ್‌ಪ್ಲೇ ಆಗುವ ಆಯ್ಕೆಯಗಳ ಮೂಲಕ ಚಾಟ್‌ನಲ್ಲಿ ಆಡೋ ಡಿಲೀಟ್‌ ಟೈಂರ್‌ ಅನ್ನು ಆಯ್ಕೆ ಮಾಡಿ
ಇದಲ್ಲದೆ ನೀವು ನಿಮ್ಮ ಚಾಟ್‌ಗಳ ಆಟೋ ಡಿಲೀಟ್‌ಗಾಗಿ ಕಸ್ಟಮ್ ಆಟೋ-ಡಿಲೀಟ್‌ ಟೈಮರ್ ಅನ್ನು ಸಹ ಸೆಟ್‌ ಮಾಡಬಹುದಾಗಿದೆ.

ಟೆಲಿಗ್ರಾಮ್‌ನಲ್ಲಿರುವ ಈ ಆಯ್ಕೆಯು ವಾಟ್ಸಾಪ್‌ಗಿಂತ ಭಿನ್ನವಾಗಿದೆ! ಇದರ ಲಾಭವೇನು?

ಕೆಲವು ಚಾಟ್‌ಗಳಲ್ಲಿ ಮಾತ್ರ ಆಟೋ ಡಿಲೀಟ್‌ ಮೆಸೇಜಸ್‌ ಫೀಚರ್ಸ್ ಆಕ್ಟಿವ್‌ ಮಾಡಲು ಹೀಗೆ ಮಾಡಿರಿ.
ಹಂತ:1 ಮೊದಲಿಗೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಟೆಲಿಗ್ರಾಮ್‌ ಅಪ್ಲಿಕೇಶನ್‌ ತೆರೆಯಿರಿ.
ಹಂತ:2 ಇದರಲ್ಲಿ ಆಟೋ ಡಿಲೀಟ್‌ ಮೆಸೇಜ್‌ ಆಕ್ಟಿವ್‌ ಮಾಡಬೇಕಾದ ಚಾಟ್‌ ತೆರೆಯಿರಿ.
ಹಂತ:3 ನಂತರ ಚಾಟ್‌ನ ಮೇಲ್ಭಾಗದಲ್ಲಿ ಲಭ್ಯವಿರುವ ರಿಸೀವರ್‌ ಹೆಸರನ್ನು ಟ್ಯಾಪ್‌ ಮಾಡಬೇಕು.
ಹಂತ:4 ಇದೀಗ ಮೇಲಿನ ಬಲ ಮೂಲೆಯಲ್ಲಿ ಕಾಣುವ ಮೂರು-ಡಾಟ್ ಮೆನು ಬಟನ್ ಮೇಲೆ ಟ್ಯಾಪ್ ಮಾಡಿ.
ಹಂತ:5 ನಂತರ ಆಟೋ ಡಿಲೀಟ್‌ ಆಯ್ಕೆಯನ್ನು ಟ್ಯಾಪ್‌ ಮಾಡಿರಿ.
ಹಂತ:6 ಇದೀಗ ನೀವು ಚಾಟ್‌ಗಳನ್ನು ಆಟೋ ಡಿಲೀಟ್‌ ಮಾಡುವ ಟೈಮರ್‌ ಅನ್ನು ಆಯ್ಕೆ ಮಾಡಬೇಕಾಗುತ್ತದೆ.

ಈ ಮೇಲಿನ ನಿಯಮಗಳನ್ನು ಅನುಸರಿಸುವ ಮೂಲಕ ಟೆಲಿಗ್ರಾಮ್‌ನಲ್ಲಿ ಆಟೋ ಡಿಲೀಟ್‌ ಮೆಸೇಜಸ್‌ ಫೀಚರ್ಸ್‌ ಅನ್ನು ಪರಿಣಾಮಕಾರಿಯಾಗಿ ಬಳಸಬಹುದಾಗಿದೆ.

ಇದಲ್ಲದೆ ಟೆಲಿಗ್ರಾಮ್‌ ಅಪ್ಲಿಕೇಶನ್‌ನಲ್ಲಿ ನೀವು ಸೆಂಡ್‌ ಮಾಡಿದ ಸಂದೇಶವನ್ನು ಎಡಿಟ್‌ ಮಾಡುವುದಕ್ಕೆ ಅವಕಾಶ ನೀಡಿದೆ. ಇದರಿಂದ ನೀವು ಸಂದೇಶವನ್ನು ಕಳುಹಿಸಿದ ನಂತರ ಸಂದೇಶದಲ್ಲಿ ಏನಾದರೂ ಬದಲಾವಣೆ ಮಾಡಬೇಕೆಂದುಕೊಂಡರೆ ಎಡಿಟ್‌ ಮಾಡಲು ಸಾಧ್ಯವಿದೆ. ನೀವು ಸಂದೇಶವನ್ನು ಕಳುಹಿಸಿದ 48 ಗಂಟೆಗಳ ನಂತರ ಸಂದೇಶವನ್ನು ಎಡಿಟ್‌ ಮಾಡುವುದಕ್ಕೆ ಅವಕಾಶವನ್ನು ನೀಡಲಿದೆ.

Best Mobiles in India

Read more about:
English summary
How to Enable ‘Auto-Delete Messages’ for all chats on telegram

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X