ವಾಟ್ಸಪ್‌ ಚಾಟ್‌ಗೆ 'ಫಿಂಗರ್‌ಪ್ರಿಂಟ್ ಲಾಕ್‌' ಸೆಟ್‌ ಮಾಡುವುದು ಹೇಗೆ ಗೊತ್ತಾ!

|

ಜನಪ್ರಿಯ ಮೆಸೆಜಿಂಗ್ ಆಪ್‌ 'ವಾಟ್ಸಪ್‌' ಬಳಕೆದಾರರ ಖಾತೆಯ ಪ್ರೈವೆಸಿಗಾಗಿ ಈಗಾಗಲೇ ಹಲವು ಫೀಚರ್ಸ್‌ಗಳನ್ನು ಪರಿಚಯಿಸಿದೆ. ಅವುಗಳಲ್ಲಿ ಇತ್ತೀಚಿನ ಅಪ್‌ಡೇಟ್‌ ವರ್ಷನ್‌ನಲ್ಲಿ ಫಿಂಗರ್‌ಪ್ರಿಂಟ್ ಲಾಕ್‌ ಫೀಚರ್ ಸೇರ್ಪಡೆ ಆಗಿದ್ದು, ಈ ಸೌಲಭ್ಯವು ಬಳಕೆದಾರರ ವಾಟ್ಸಪ್‌ ಖಾತೆಗೆ ಹೆಚ್ಚಿನ ಸುರಕ್ಷತೆ ವಹಿಸಲಿದೆ. ಈ ಆಯ್ಕೆಯು ಆಂಡ್ರಾಯ್ಡ್‌ ಫೋನ್‌ ಮತ್ತು ಐಫೋನ್‌ ಬಳಕೆದಾರರಿಬ್ಬರಿಗೂ ಈ ಆಯ್ಕೆ ಲಭ್ಯವಾಗಲಿದೆ.

ಹೌದು, ಫೇಸ್‌ಬುಕ್ ಮಾಲೀಕತ್ವದ ವಾಟ್ಸಪ್‌ ಹಲವು ಅಪ್‌ಡೇಟ್‌ ವರ್ಷನ್‌ಗಳನ್ನು ಕಂಡಿದ್ದು, ಇತ್ತೀಚಿನ ಹೊಸ ಅಪ್‌ಡೇಟ್‌ ವರ್ಷನ್‌ನಲ್ಲಿ ಫಿಂಗರ್‌ಪ್ರಿಂಟ್ ಲಾಕ್ ಆಯ್ಕೆಯನ್ನು ಪಡೆದಿದೆ. ಈ ಆಯ್ಕೆಯು ಬಳಕೆದಾರರಿಗೆ ವಾಟ್ಸಪ್‌ ಚಾಟ್‌ ಲಾಕ್‌ ಮಾಡಲು ನೆರವಾಗಲಿದೆ. ಹಾಗಾದರೇ ವಾಟ್ಸಪ್‌ನ ಫಿಂಗರ್‌ಪ್ರಿಂಟ್ ಲಾಕ್ ಫೀಚರ್‌ನ ಹೇಗೆ ಆಕ್ಟಿವ್ ಮಾಡಿಕೊಳ್ಳುವುದು ಮತ್ತು ಇತರೆ ಲಾಕ್ ಫೀಚರ್ಸ್‌ಗಳ ಬಗ್ಗೆ ಎಂಬುದನ್ನು ಮುಂದೆ ತಿಳಿಯಿರಿ.

ಫಿಂಗರ್‌ಪ್ರಿಂಟ್ ಲಾಕ್‌

ಫಿಂಗರ್‌ಪ್ರಿಂಟ್ ಲಾಕ್‌

ಹೊಸ ವಾಟ್ಸಪ್‌ ಅಪ್‌ಡೇಟ್‌ನಲ್ಲಿ ಸೇರಿರುವ ಹೊಸ ಫಿಂಗರ್‌ಪ್ರಿಂಟ್ ಲಾಕ್‌ ಆಯ್ಕೆಯು, ಆಂಡ್ರಾಯ್ಡ್‌ ಮತ್ತು ಐಓಎಸ್‌ ಬಳಕೆದಾರರಿಬ್ಬರಿಗೂ ಲಭ್ಯವಿದ್ದು, ಪ್ರೈವೆಸಿಗೆ ಮತ್ತಷ್ಟು ನೆರವಾಗಲಿದೆ. ಈ ಫೀಚರ್‌ ಬಳಸಿ ವಾಟ್ಸಪ್‌ ಆಪ್‌ ಚಾಟ್‌ಗೆ ಈ ಫೀಚರ್‌ ಅನ್ನು ಬಳಕೆದಾರರು ಬಳಸಿಕೊಳ್ಳಬಹುದಾಗಿದ್ದು, ಬಳಕೆದಾದರ ಬೆರಳೇ ಅವರ ವಾಟ್ಸಪ್‌ ಚಾಟ್‌ನ ಲಾಕ್‌ಗೆ ಕೀಲಿ ಕೈ ಆಗಲಿದೆ.

ಓದಿರಿ : ದೇಶಿಯ ಮಾರುಕಟ್ಟೆಯಲ್ಲಿ ಲಾಂಚ್ ಆಯ್ತು 'ರಿಯಲ್‌ ಮಿ XT'!.ಬೆಲೆ 15,999ರೂ!ಓದಿರಿ : ದೇಶಿಯ ಮಾರುಕಟ್ಟೆಯಲ್ಲಿ ಲಾಂಚ್ ಆಯ್ತು 'ರಿಯಲ್‌ ಮಿ XT'!.ಬೆಲೆ 15,999ರೂ!

ಸೆಕ್ಯುರಿಟಿ ಫೀಚರ್ಸ್‌

ಸೆಕ್ಯುರಿಟಿ ಫೀಚರ್ಸ್‌

ಹೈ ಎಂಡ್‌ ಮಾದರಿಯ ಆಪಲ್‌ ಐಫೋನ್‌ಗಳು ಟಚ್‌ ಐಡಿ, ಫೇಸ್‌ ಐಡಿ ಸೇರಿದಂತೆ ಕೇಲವು ಅಡ್ವಾನ್ಸಡ್ ಲಾಕ್‌ ಫೀಚರ್ಸ್‌ಗಳನ್ನು ಹೊಂದಿವೆ. ಹಾಗೆಯೇ ಇನ್ನಷ್ಟು ಫೀಚರ್‌ಗಳು ವಾಟ್ಸಪ್‌ ಬೇಟಾ ವರ್ಷನ್‌ನಲ್ಲಿ ಲಭ್ಯವಾಗುತ್ತಿವೆ. ಇದರೊಂದಿಗೆ ಇದೀಗ ಆಂಡ್ರಾಯ್ಡ್‌ ಬಳಕೆದಾರರಿಗೂ ಫಿಂಗರ್‌ಪ್ರಿಂಟ್ ಲಾಕ್‌ ಫೀಚರ್‌ ಸೇರಿಕೊಂಡಿದ್ದು, ಬೇಟಾ ವರ್ಷನ್‌ನಲ್ಲಿ ಹೊಸತನದ ಫೀಚರ್‌ಗಳು ಸೇರಲಿವೆ.

ಆಂಡ್ರಾಯ್ಡ್‌ ಫೋನಲ್ಲಿ ಈ ಹಂತಗಳನ್ನು ಅನುಸರಿಸಿ

ಆಂಡ್ರಾಯ್ಡ್‌ ಫೋನಲ್ಲಿ ಈ ಹಂತಗಳನ್ನು ಅನುಸರಿಸಿ

* ವಾಟ್ಸಪ್‌ 2.19.221 ವರ್ಷನ್‌ ಅಪ್‌ಡೇಟ್ ಮಾಡಿಕೊಳ್ಳಿ
* ನಂತರ ವಾಟ್ಸಪ್‌ ಸೆಟ್ಟಿಂಗ್ ತೆರೆಯಿರಿ
* ಅಕೌಂಟ್‌ ವಿಭಾಗಕ್ಕೆ ಭೇಟಿ ನೀಡಿರಿ, ಪ್ರೈವೆಸಿ ಆಯ್ಕೆ ಟ್ಯಾಪ್ ಮಾಡಿರಿ
* ಆನಂತರ ಫಿಂಗರ್‌ಪ್ರಿಂಟ್ ಆಯ್ಕೆ ಸೆಲೆಕ್ಟ್‌ ಮಾಡಿ, ಆಯ್ಕೆಯನ್ನು ಸಕ್ರಿಯಗೊಳಿಸಿ
* ನಿಮ್ಮ ಬೆರಳ ಸ್ಕ್ಯಾನ್‌ ಸೆಟ್‌ ಮಾಡಿ, ಆಯ್ಕೆ ಬಳಸಬಹುದು

ಐಫೋನ್‌ನಲ್ಲಿ ಈ ಹಂತಗಳನ್ನು ಅನುಸರಿಸಿ

* ವಾಟ್ಸಪ್‌ 2.19.20 ವರ್ಷನ್‌ ಅಪ್‌ಡೇಟ್ ಮಾಡಿಕೊಳ್ಳಿ
* ನಂತರ ವಾಟ್ಸಪ್‌ ಸೆಟ್ಟಿಂಗ್ ಆಯ್ಕೆಯಲ್ಲಿ, ಪ್ರೈವೆಸಿ ಆಯ್ಕೆ ಟ್ಯಾಪ್ ಮಾಡಿರಿ.
* ಆನಂತರ ಸ್ಕ್ರೋಲ್‌ ಡೌನ್‌ ಮಾಡಿ, ಸ್ಕ್ರೀನ್ ಲಾಕ್ ಆಯ್ಕೆ ಕ್ಲಿಕ್ ಮಾಡಿ
* ನಿಮ್ಮ ಬೆರಳ ಸ್ಕ್ಯಾನ್‌ ಸೆಟ್‌ ಮಾಡಿ, ಆಯ್ಕೆ ಬಳಸಬಹುದು, ಹಾಗೆಯೇ ಐಫೋನ್‌ನಲ್ಲಿ ಟಚ್‌ ಐಡಿ ಮತ್ತು ಫೇಸ್‌ ಐಡಿ ಆಯ್ಕೆಗಳನ್ನು ಬಳಸಬಹುದು.

ಓದಿರಿ : ಆಪಲ್‌ನ ಒಂದು ಸಣ್ಣ ಮಿಸ್ಟೇಕ್ 'ಐಫೋನ್‌ 11' ಬಗ್ಗೆ ಭಯ ಹುಟ್ಟಿಸುತ್ತಿದೆ!..ಏಕೆ?ಓದಿರಿ : ಆಪಲ್‌ನ ಒಂದು ಸಣ್ಣ ಮಿಸ್ಟೇಕ್ 'ಐಫೋನ್‌ 11' ಬಗ್ಗೆ ಭಯ ಹುಟ್ಟಿಸುತ್ತಿದೆ!..ಏಕೆ?

Best Mobiles in India

English summary
WhatsApp has rolled outFingerprint update on both Android and iOS platforms. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X