ವಾಟ್ಸಪ್‌ನಲ್ಲಿ ಡಾರ್ಕ್‌ಮೋಡ್ ಆಯ್ಕೆ ಆನ್‌ ಮಾಡುವುದು ಹೇಗೆ?

|

ಅತೀ ಜನಪ್ರಿಯವಾಗಿರುವ ಮೆಸೆಜಿಂಗ್ ಅಪ್ಲಿಕೇಶನ್ 'ವಾಟ್ಸಪ್' ಸದ್ಯ ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಒಳಗೊಂಡಿದೆ. ಟೆಕ್ಸ್ಟ್ ಮೆಸೆಜ್ ಸೇರಿದಂತೆ ಅತ್ಯುತ್ತಮ ಮೀಡಿಯಾ ಪ್ಲಾಟ್‌ಫಾರ್ಮ್ ಆಗಿರುವ ವಾಟ್ಸಪ್, ಬಳಕೆದಾರರಿಗಾಗಿ ಅನುಕೂಲಕರ ಫೀಚರ್ಸ್‌ಗಳನ್ನು ಅಳವಡಿಸಿಕೊಂಡಿದೆ. ಹಾಗೆಯೇ ಇತ್ತೀಚಿಗೆ ಮತ್ತಷ್ಟು ಹೊಸ ಫೀಚರ್ಸ್‌ಗಳನ್ನು ಪರಿಚಯಿಸಿದ್ದು, ಅವುಗಳಲ್ಲಿ ತೀರಾ ನೂತನ ಫೀಚರ್ಸ್‌ ಎಂದರೇ ಅದುವೇ ಡಾರ್ಕ್‌ಮೋಡ್ ಆಯ್ಕೆ.

ಹೌದು, ಆಂಡ್ರಾಯ್ಡ್‌ ಬಳಕೆದಾರರು ಬಹುನಿರೀಕ್ಷೆಯಿಂದ ಕಾಯುತ್ತಿದ್ದ 'ಡಾರ್ಕ್‌ಮೋಡ್' ಫೀಚರ್ಸ್‌ ಅನ್ನು ವಾಟ್ಸಪ್ ಅಳವಡಿಸಿಕೊಂಡಿದೆ. ವಾಟ್ಸಪ್ ಡಾರ್ಕ್‌ಮೋಡ್ ಫೀಚರ್ಸ್‌ ಅನ್ನು ತನ್ನ ಆಂಡ್ರಾಯ್ಡ್ ಬೀಟಾ ಆವೃತ್ತಿಯಲ್ಲಿ ಸೇರಿಸಿದ್ದು, ಆಂಡ್ರಾಯ್ಡ್‌ ಫೋನ್ ಬಳಕೆದಾರರಿಗೆ ಲಭ್ಯವಾಗಿದೆ. ಈ ಫೀಚರ್‌ ವಾಟ್ಸಪ್ 2.20.13 ಅಪ್‌ಡೇಟ್ ಆವೃತ್ತಿಯಲ್ಲಿ ಸೇರ್ಪಡೆ ಆಗಿದೆ. ಹಾಗಾದರೇ ವಾಟ್ಸಪ್ ಡಾರ್ಕ್‌ಮೋಡ್ ಫೀಚರ್ ಅನ್ನು ಆಕ್ಟಿವೇಟ್ ಮಾಡುವುದು ಹೇಗೆ ಎನ್ನುವುದನ್ನು ತಿಳಿಯಲು ಮುಂದೆ ಓದಿರಿ.

ಆಂಡ್ರಾಯ್ಡ್‌ ಬೀಟಾ ಆವೃತ್ತಿ

ಆಂಡ್ರಾಯ್ಡ್‌ ಬೀಟಾ ಆವೃತ್ತಿ

ಆಂಡ್ರಾಯ್ಡ್ ಬೀಟಾ ಆವೃತ್ತಿ ಹೊಂದಿಲ್ಲದ ಬಳಕೆದಾರರು, ಗೂಗಲ್ ಪ್ಲೇ ಸ್ಟೋರ್‌ನಲ್ಲಿ ವಾಟ್ಸಪ್ ಬೀಟಾ ಆವೃತ್ತಿಗೆ ಅಪ್‌ಡೇಟ್(enroll) ಮಾಡಿಕೊಳ್ಳುವುದು. ಹಾಗೆಯೇ ವಾಟ್ಸಪ್‌ ಅನ್ನು ಅಪ್‌ಡೇಟ್ ಮಾಡಿಕೊಳ್ಳಿ. ಬೀಟಾ ಆವೃತ್ತಿಗೆ ಅಪ್‌ಡೇಟ್ ಆದ ಬಳಿಕ ವಾಟ್ಸಪ್‌ ಸೆಟ್ಟಿಂಗ್‌ನಲ್ಲಿ ಸುಲಭವಾಗಿ ಡಾರ್ಕ್‌ಮೋಡ್ ಫೀಚರ್ಸ್‌ ಸಕ್ರಿಯ ಮಾಡಿಕೊಳ್ಳಬಹುದು.

ಡಾರ್ಕ್‌ಮೋಡ್ ಪ್ರಯೋಜನ

ಡಾರ್ಕ್‌ಮೋಡ್ ಪ್ರಯೋಜನ

ವಾಟ್ಸಪ್ ಬಳಕೆದಾರರು ಡಾರ್ಕ್‌ಮೋಡ್ ಆಯ್ಕೆ ಆನ್ ಮಾಡಿದಾಗ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ವಾಟ್ಸಪ್‌ ಚಾಟ್, ಸ್ಟೇಟಸ್‌, ಫೀಡ್ ಮತ್ತು ಸೆಟ್ಟಿಂಗ್ ಆಯ್ಕೆಗಳು ಸಹ ಕಪ್ಪು ಬಣ್ಣದಲ್ಲಿ ಕಾಣಿಸಿಕೊಳ್ಳುತ್ತವೆ. ಡಾರ್ಕ್‌ಮೋಡ್‌ ಆಯ್ಕೆ ಸಕ್ರಿಯದಿಂದ ಫೋನಿನ ಡಿಸ್‌ಪ್ಲೇಯ ಪ್ರಖರತೆ ಕಡಿಮೆ ಆಗುತ್ತದೆ ಇದರಿಂದ ಕಣ್ಣಿಗೂ ಉತ್ತಮ ಹಾಗೂ ಬ್ಯಾಟರಿ ಉಳಿಕೆಗೂ ನೆರವಾಗಲಿದೆ.

ಡಾರ್ಕ್‌ಮೋಡ್ ಆನ್ ಮಾಡುವುದು ಹೇಗೆ

ಡಾರ್ಕ್‌ಮೋಡ್ ಆನ್ ಮಾಡುವುದು ಹೇಗೆ

* ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ವಾಟ್ಸಪ್ ಆಪ್ ತೆರೆಯಿರಿ.(ವಾಟ್ಸಪ್ ಬೀಟಾ ಆವೃತ್ತಿ)

* ಮೆನು(ಮೂರು ಡಾಟ್) ಸೆಟ್ಟಿಂಗ್ ಕ್ಲಿಕ್ ಮಾಡಿರಿ.

* ನಂತರ ಚಾಟ್ಸ್‌(chats) ಆಯ್ಕೆ ಸೆಲೆಕ್ಟ್ ಮಾಡಿರಿ.

* ಚಾಟ್ಸ್ ಆಯ್ಕೆ ತೆರೆದಾಗ (Theme) 'ಥೀಮ್' ಆಯ್ಕೆ ಕಾಣಿಸುತ್ತದೆ.

* ಥೀಮ್ ಆಯ್ಕೆಯಲ್ಲಿ- ಸೆಟ್‌ ಬೈ ಬ್ಯಾಟರಿ ಸೇವರ್, ಲೈಟ್ ಮತ್ತು ಡಾರ್ಕ್ ಆಯ್ಕೆಗಳು ಕಾಣಿಸುತ್ತವೆ.

* ಅವುಗಳಲ್ಲಿ ಡಾರ್ಕ್ ಆಯ್ಕೆ ಸೆಲೆಕ್ಟ್ ಮಾಡಿರಿ.

ಸಾಮಾಜಿಕ ತಾಣಗಳಲ್ಲಿ ಡಾರ್ಕ್‌ಮೋಡ್

ಸಾಮಾಜಿಕ ತಾಣಗಳಲ್ಲಿ ಡಾರ್ಕ್‌ಮೋಡ್

ಪ್ರಸ್ತುತ ಜನಪ್ರಿಯ ಸಾಮಾಜಿಕ ತಾಣಗಳಾದ ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಮೆಸೆಂಜರ್ ಸೇರಿದಂತೆ ಗೂಗಲ್‌ ಕ್ರೋಮ್ ಹಾಗೂ ಹಲವು ಆಪ್‌ಗಳು ಡಾರ್ಕ್‌ಮೋಡ್ ಫೀಚರ್ಸ್‌ ಅನ್ನು ಹೊಂದಿವೆ. ಆ ಲಿಸ್ಟಿಗೆ ಈಗ ವಾಟ್ಸಪ್ ಸಹ ಸೇರಿಕೊಂಡಿದೆ. ವಾಟ್ಸಪ್ ಡಾರ್ಕ್‌ಮೋಡ್ ಫೀಚರ್‌ ಡಿಸ್‌ಪ್ಲೇ ಬೆಳಕಿನ ಪ್ರಮಾಣ ತಗ್ಗಿಸಲಿದೆ. ಸದ್ಯದಲ್ಲಿಯೇ ಸೋಶಿಯಲ್ ಮೀಡಿಯಾ ದೈತ್ಯ ಫೇಸ್‌ಬುಕ್‌ನಲ್ಲಿಯೂ ಡಾರ್ಕ್‌ಮೋಡ್ ಸೌಲಭ್ಯ ಸೇರಿಕೊಳ್ಳಲಿದೆ.

Most Read Articles
Best Mobiles in India

English summary
WhatsApp had reportedly rolled out the much-awaited Dark Mode feature for its Android Beta version 2.20.13. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X