ಆಂಡ್ರಾಯ್ಡ್ ಫೋನ್ ವೇಗ ವರ್ಧನೆಗಾಗಿ ಸರಳ ಟಿಪ್ಸ್

By Shwetha
|

ನೀವು ಎಷ್ಟೇ ಬ್ರ್ಯಾಂಡ್ ಫೋನ್ ಅನ್ನೇ ಖರೀದಿಸಿ ಸಮಯ ಜಾರಿದಂತೆಲ್ಲಾ ಅದು ನಿಧಾನವಾಗುತ್ತಾ ತನ್ನ ವೇಗದಲ್ಲಿ ಆಮೆನಡಿಗೆಯನ್ನು ಕಂಡುಕೊಳ್ಳುವುದು ಸಹಜ. ನಿಮ್ಮ ಫೋನ್‎ ವೇಗತೆಯನ್ನು ಕಳೆದುಕೊಳ್ಳುತ್ತಿದೆ ಎಂದಾದಲ್ಲಿ ಅದು ಕೆಲವೊಂದು ದೋಷಗಳನ್ನು ಹೊಂದಿದೆ ಎಂಬುದು ನಿಚ್ಚಳವಾಗಿ ಕಂಡುಬರುತ್ತದೆ. ಆದರೆ ಈ ದೋಷಗಳನ್ನು ಕೆಲವೊಂದು ಸರಳ ವಿಧಾನಗಳನ್ನು ಪಾಲಿಸುವುದರ ಮೂಲಕ ಸರಿಪಡಿಸಬಹುದಾಗಿದೆ.

ಓದಿರಿ: ಒದ್ದೆ ಫೋನ್‌ಗೆ ಈ ಮದ್ದುಗಳೇ ಪರಿಹಾರ!!!

ಅದಕ್ಕೆಂದೇ ಇಂದಿನ ಲೇಖನದಲ್ಲಿ ನಿಮ್ಮ ಆಂಡ್ರಾಯ್ಡ್ ಫೋನ್‎ ಅನ್ನು ವೇಗಗೊಳಿಸುವ ಕೆಲವೊಂದು ಸಲಹೆಗಳನ್ನು ನೀಡುತ್ತಿದ್ದು ಅವುಗಳನ್ನು ನೀವು ಸರಳವಾಗಿ ಪಾಲಿಸಬಹುದು ಬನ್ನಿ ಅದು ಏನು ಎಂಬುದನ್ನು ಅರಿತುಕೊಳ್ಳೋಣ.

ಅಪ್ಲಿಕೇಶನ್ ಕ್ಯಾಶ್ ತೆರವುಗೊಳಿಸಿ

ಅಪ್ಲಿಕೇಶನ್ ಕ್ಯಾಶ್ ತೆರವುಗೊಳಿಸಿ

ಅಪ್ಲಿಕೇಶನ್ ಕ್ಯಾಶ್ ಕೂಡ ಫೋನ್ ಅನ್ನು ನಿಧಾನಗೊಳಿಸುವಲ್ಲಿ ಪ್ರಮುಖ ಕಾರಣವಾಗಿದೆ. ಆದ್ದರಿಂದ ಕ್ಯಾಶ್ ನಿವಾರಣೆ ಮಾಡಲು ಮರೆಯದಿರಿ ಇದನ್ನು ತೆರವುಗೊಳಿಸಲು ಸೆಟ್ಟಿಂಗ್‎ಗಳಲ್ಲಿರುವ ಸ್ಟೋರೇಜ್‎ಗೆ ಹೋಗಿ ಮತ್ತು ಕ್ಯಾಶ್ ಸ್ಪೇಸ್ ಎಷ್ಟಿದೆ ಎಂಬುದನ್ನು ನಿಮಗಿಲ್ಲಿ ಕಾಣಬಹುದು.

ಬ್ಲೋಟ್ ವೇರ್ ನಿಷ್ಕ್ರಿಯಗೊಳಿಸಿ

ಬ್ಲೋಟ್ ವೇರ್ ನಿಷ್ಕ್ರಿಯಗೊಳಿಸಿ

ಅಪ್ಲಿಕೇಶನ್‎ಗಳಲ್ಲದೆ ಕೆಲವೊಂದು ಪಾರ್ಟಿ ಅಮೆಜಾನ್ ಅಪ್ಲಿಕೇಶನ್‎ಗಳೂ ಕೂಡ ಫೋನ್‎ನ ವೇಗಕ್ಕೆ ಬ್ರೇಕ್ ಹಾಕಬಹುದು. ನೀವು ಬಳಸದೇ ಇದ್ದರೂ ಈ ಅಪ್ಲಿಕೇಶನ್‎ಗಳು ಹಿನ್ನಲೆಯಲ್ಲಿ ಚಾಲನೆಗೊಂಡು ಫೋನ್ ಅನ್ನು ನಿಧಾನಗೊಳಿಸುತ್ತಿರಬಹುದು. ಅಪ್ಲಿಕೇಶನ್ ಮ್ಯಾನೇಜರ್ > ಇಲ್ಲಿ ಆಲ್ ಟ್ಯಾಬ್‎ಗೆ ಸ್ವೈಪ್ ಮಾಡಿ ಇಲ್ಲಿ ನಿಮಗೆ ಯಾವ ಆಪ್ ಬೇಡವೋ ಅದನ್ನು ಆಯ್ಕೆಮಾಡಿ. ಇಲ್ಲಿ ಡಿಸೇಬಲ್ ಅಥವಾ ಅನ್‎ಇನ್‎ಸ್ಟಾಲ್ ಸ್ಪರ್ಶಿಸಿ ಓಕೆ ಹಿಟ್ ಮಾಡಿ.

 ಕ್ರೋಮ್‎ನ ಮೆಮೊರಿ ಮಿತಿಯನ್ನು ಹೆಚ್ಚಿಸುವುದು

ಕ್ರೋಮ್‎ನ ಮೆಮೊರಿ ಮಿತಿಯನ್ನು ಹೆಚ್ಚಿಸುವುದು

ಡೀಫಾಲ್ಟ್ ಮೂಲಕ ಕ್ರೋಮ್ ಬ್ರೌಸರ್ ಲಭ್ಯವಾಗಿರುವ RAM ನಲ್ಲಿ 128 ಎಮ್‎ಬಿಯನ್ನು ಮಾತ್ರ ಬಳಸಿಕೊಳ್ಳುತ್ತದೆ ಇದರ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಕ್ರೋಮ್‎ಗೆ ಹೋಗಿ ಕೆಳಕ್ಕೆ ಎಳೆದ ಮೆನುವಿನಲ್ಲಿ 512 ಅನ್ನು ಆಯ್ಕೆಮಾಡಿ. ಡೀಫಾಲ್ಟ್ ಪದದ ಮೇಲೆ ಸ್ಪರ್ಶಿಸುವ ಮೂಲಕ ಮೆನುವನ್ನು ನಿಮಗೆ ತೆರೆಯಬಹುದು.

.ಅನಿಮೇಶನ್ ನಿಷ್ಕ್ರಿಯಗೊಳಿಸಿ

.ಅನಿಮೇಶನ್ ನಿಷ್ಕ್ರಿಯಗೊಳಿಸಿ

ಇದಕ್ಕಾಗಿ ಸೆಟ್ಟಿಂಗ್‎ಗಳಲ್ಲಿ ಅಬೌಟ್ ಫೋನ್‎ಗೆ ಹೋಗಿ ಬಿಲ್ಡ್ ನಂಬರ್ ಮೇಲೆ ಏಳುಬಾರಿ ತಟ್ಟಿರಿ. ಸೆಟ್ಟಿಂಗ್‎ಗಳಲ್ಲಿ ಡೆವಲಪರ್ ಆಪ್ಶನ್ಸ್ ಇಲ್ಲಿಗೆ ಹೋಗಿ. ಸಿಲಿಕ್ಟ್ ವಿಂಡೊ ಅನಿಮೇಶನ್ ಸ್ಕೇಲ್ ಆಯ್ಕೆಮಾಡಿ. ಅನಿಮೇಶನ್ ಆಫ್ ಮಾಡುವಂತೆ ಆಯ್ಕೆಮಾಡಿ. ಟ್ರಾನ್ಸೀಶನ್ ಅನಿಮೇಶನ್ ಸ್ಕೇಲ್ ಆಯ್ಕೆಮಾಡಿ ಮತ್ತು ಅನಿಮೇಶನ್ ಸ್ಕೇಲ್ ಇದನ್ನು ಆಫ್ ಮಾಡಿ.

 ಲಾಕ್ ಸ್ಕ್ರೀನ್ ಅನಿಮೇಶನ್ ನಿಷ್ಕ್ರಿಯಗೊಳಿಸಿ

ಲಾಕ್ ಸ್ಕ್ರೀನ್ ಅನಿಮೇಶನ್ ನಿಷ್ಕ್ರಿಯಗೊಳಿಸಿ

ನಿಮ್ಮ ಲಾಕ್ ಸ್ಕ್ರೀನ್ ಅನಿಮೇಶನ್ ಒಮ್ಮೆಗೆ ನಿಮಗೆ ಸುಂದರವಾಗಿ ಕಾಣಿಸಿದರೂ ಇದೂ ಬೇಡದ ಕಿರಿಕಿರಿಯನ್ನುಂಟು ಮಾಡುವುದು ಸಹಜವಾಗಿದೆ. ಸೆಟ್ಟಿಂಗ್ ಮೆನುವಿನಲ್ಲಿ ಲಾಕ್ ಸ್ಕ್ರೀನ್‎ಗೆ ನ್ಯಾವಿಗೇಟ್ ಮಾಡಿ. ಅನ್‎ಲಾಕ್ ಇಫೆಕ್ಟ್ ಆಯ್ಕೆಮಾಡಿ. ಯಾವುದೂ ಬೇಡ ಆರಿಸಿ.

ಸಮಸ್ಯೆ ಅರಿತುಕೊಳ್ಳಿ

ಸಮಸ್ಯೆ ಅರಿತುಕೊಳ್ಳಿ

ಮೊದಲು ನಿಮ್ಮ ಫೋನ್‌ನಲ್ಲಿನ ಸಮಸ್ಯೆಯನ್ನು ಅರಿತುಕೊಳ್ಳಿ. ವೈಫೈ ಬಳಕೆ, RAM, ಇಂಟರ್ನೆಟ್ ಮೊದಲಾದವುಗಳ ಮಾಹಿತಿಯನ್ನು ಅರಿತುಕೊಳ್ಳಿ

ಸ್ಥಳಾವಕಾಶ ಕೊರತೆ

ಸ್ಥಳಾವಕಾಶ ಕೊರತೆ

ನೀವು ಫೋನ್‌ನಲ್ಲಿ ತೆಗೆದಿರುವ ಫೋಟೋಗಳು ಮತ್ತು ಅಪ್ಲಿಕೇಶನ್‌ಗಳ ಕುರಿತ ಮಾಹಿತಿಯನ್ನು ಪಡೆದುಕೊಳ್ಳಿ. ಹೆಚ್ಚುವರಿ ಸ್ಥಳಾವಕಾಶವನ್ನು ಫೋನ್ ತೆಗೆದುಕೊಂಡಿದೆ ಎಂದಾದಲ್ಲಿ ಫೋನ್ ನಿಧಾನವಾಗುತ್ತದೆ.

ಕಪ್ಪು ವಿಜೆಟ್ ತೆಗೆದುಹಾಕಿ

ಕಪ್ಪು ವಿಜೆಟ್ ತೆಗೆದುಹಾಕಿ

ನಿಮ್ಮ ಫೋನ್‌ನಲ್ಲಿ ನೀವು ರನ್ ಮಾಡುತ್ತಿರುವ ಎಲ್ಲಾ ವಿಜೆಟ್‌ಗಳು ಉಪಯೋಗಕಾರಿಯಾಗಿರಬೇಕು ಎಂದೇನಿಲ್ಲ. ಇವುಗಳು ಕೂಡ ನಿಮ್ಮ ಅಪ್ಲಿಕೇಶನ್ ಸ್ಥಳಾವಕಾಶವನ್ನು ತೆಗೆದುಕೊಳ್ಳಬಹುದು.

ಅನಿಮೇಶನ್‌ಗಳು

ಅನಿಮೇಶನ್‌ಗಳು

ನಿಮ್ಮ ಫೋನ್‌ನಲ್ಲಿ ಅನಗತ್ಯ ಅನಿಮೇಶನ್‌ಗಳು ಫೋನ್‌ನ ನಿಧಾನಗತಿಗೆ ಕಾರಣವಾಗಿರಬಹುದು.

ಅಪ್ಲಿಕೇಶನ್‌ಗಳನ್ನು ಮುಚ್ಚಿ ಮತ್ತು RAM ಮುಕ್ತಗೊಳಿಸಿ

ಅಪ್ಲಿಕೇಶನ್‌ಗಳನ್ನು ಮುಚ್ಚಿ ಮತ್ತು RAM ಮುಕ್ತಗೊಳಿಸಿ

ನಿಮ್ಮ ಫೋನ್‌ನಲ್ಲಿ ಹೆಚ್ಚುವರಿ ಅಪ್ಲಿಕೇಶನ್‌ಗಳು ಚಾಲನೆಯಾಗುತ್ತಿವೆ ಎಂದಾದಲ್ಲಿ ಅವುಗಳನ್ನು ಮುಚ್ಚಿರಿ ಮತ್ತು RAM ಸ್ಥಳಾವಕಾಶವನ್ನು ಮುಕ್ತಗೊಳಿಸಿ.

Best Mobiles in India

English summary
In this article we are giving some tremendous tips on how to speed your android phone. Thease simple tips if u applied means your phones major issues will be perfect.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X