ಫೋನ್ ಹ್ಯಾಂಗಿಂಗ್: ನಿವಾರಣೆಗಾಗಿ ಇಲ್ಲಿದೆ ಸರಳ ಟಿಪ್ಸ್

By Shwetha
|

ಇಂದಿನ ದಿನಗಳಲ್ಲಿ ಹೆಚ್ಚಿನ ಮೊಬೈಲ್ ಫೋನ್‌ಗಳು ಮಾರುಕಟ್ಟೆಯನ್ನು ಆಳುತ್ತಿವೆ. ಬಜೆಟ್ ಫೋನ್‌ಗಳು, ದುಬಾರಿ ಫೋನ್‌ಗಳು, ಕಡಿಮೆ ದರದ ಫೋನ್‌ಗಳು ಹೀಗೆ ಬೇರೆ ಬೇರೆ ವರ್ಗಗಳನ್ನು ನಮಗೆ ಕಾಣಬಹುದು. ತಮ್ಮ ಅಗತ್ಯ ಮತ್ತು ಬಜೆಟ್‌ಗೆ ಅನುಸಾರವಾಗಿ ಬಳಕೆದಾರರು ಫೋನ್ ಅನ್ನು ಖರೀದಿಸುತ್ತಾರೆ.

ಓದಿರಿ: ಫೋನ್ ಫೋಟೋಗ್ರಫಿ ತಿಳಿದುಕೊಳ್ಳಬೇಕಾಗಿರುವ ಅಂಶಗಳೇನು?

ಇನ್ನು ಯಾವ ಬಗೆಯ ಫೋನ್ ಆದರೂ ಅದರಲ್ಲಿ ಸಣ್ಣಪುಟ್ಟ ದೊಷಗಳು ಇದ್ದೇ ಇರುತ್ತವೆ. ಒಮ್ಮೊಮ್ಮೆ ಹ್ಯಾಂಗ್ ಆಗುವುದು, ಫೋನ್ ಫ್ರೀಜ್ ಆಗುವುದು ಹೀಗೆ ದೋಷಗಳು ಕಾಣಸಿಗುತ್ತಿರುತ್ತವೆ. ಇಂದಿನ ನಮ್ಮ ಲೇಖನದಲ್ಲಿ ಈ ಬಗೆಯ ದೋಷಗಳನ್ನು ಹೇಗೆ ನಿವಾರಿಸುವುದು ಎಂಬುದನ್ನು ಕುರಿತು ಅರಿತುಕೊಳ್ಳೋಣ.

ಸ್ವಿಚ್ ಆಫ್ ಮಾಡಿ

ಸ್ವಿಚ್ ಆಫ್ ಮಾಡಿ

ನಿಮ್ಮ ಫೋನ್ ಅನ್ನು ಸ್ವಿಚ್ ಆಫ್ ಮಾಡಿ.

ಬ್ಯಾಟರಿ ಹೊರತೆಗೆಯಿರಿ

ಬ್ಯಾಟರಿ ಹೊರತೆಗೆಯಿರಿ

ಅದಾಗ್ಯೂ ಅದು ಕೆಲಸ ಮಾಡುತ್ತಿಲ್ಲ ಎಂದಾದಲ್ಲಿ ಬ್ಯಾಟರಿ ಹೊರತೆಗೆಯಿರಿ. ಬ್ಯಾಟರಿಯನ್ನು ಫೋನ್‌ಗೆ ಅಳವಡಿಸಿ ಪುನಃ ಅದನ್ನು ಮರುಪ್ರಾರಂಭಿಸಿ.

ಸಮಸ್ಯೆ ಉಂಟುಮಾಡುತ್ತಿರುವ ಅಪ್ಲಿಕೇಶನ್ ಹುಡುಕಿ

ಸಮಸ್ಯೆ ಉಂಟುಮಾಡುತ್ತಿರುವ ಅಪ್ಲಿಕೇಶನ್ ಹುಡುಕಿ

ಕೆಲವೊಂದು ಅಪ್ಲಿಕೇಶನ್ ಮಧ್ಯೆ ನಿಮ್ಮ ಫೋನ್ ಫ್ರೀಜ್ ಆಗುತ್ತಿದೆ ಎಂದಾದಲ್ಲಿ, ಆ ಅಪ್ಲಿಕೇಶನ್‌ನಲ್ಲಿ ಏನಾದರೂ ಸಮಸ್ಯೆ ಇದೆ ಎಂದೇ ಅರ್ಥ. ಅದಕ್ಕಾಗಿ ಕೆಲವೊಂದು ಫೈಲ್‌ಗಳು ಮತ್ತು ಅಪ್ಲಿಕೇಶನ್‌ಗಳನ್ನು ನಿವಾರಿಸಬೇಕಾಗುತ್ತದೆ.

ಮೊಬೈಲ್ ರಿಸ್ಟೋರ್ ಮಾಡಿ

ಮೊಬೈಲ್ ರಿಸ್ಟೋರ್ ಮಾಡಿ

ಮೇಲೆ ತಿಳಿಸಿದ ಎಲ್ಲಾ ವಿಧಾನಗಳು ಫಲಪ್ರದವಾಗಲಿಲ್ಲ ಎಂದಾದಲ್ಲಿ ನಿಮ್ಮ ಫೋನ್ ಅನ್ನು ರೀಸೆಟ್ ಮಾಡುವುದು ಅತ್ಯವಶ್ಯಕವಾಗಿದೆ.

ಸ್ಮಾರ್ಟ್‌ಫೋನ್ ರೀಸ್ಟಾರ್ಟ್

ಸ್ಮಾರ್ಟ್‌ಫೋನ್ ರೀಸ್ಟಾರ್ಟ್

ಫ್ಯಾಕ್ಟ್ರಿ ಸೆಟ್ಟಿಂಗ್ಸ್‌ಗೆ ಹೋಗಿ ಮತ್ತು ಸ್ಮಾರ್ಟ್‌ಫೋನ್ ರೀಸ್ಟಾರ್ಟ್ ಎಂಬ ಆಯ್ಕೆಯನ್ನು ಒತ್ತಿರಿ. ಇದು ನಿಮ್ಮ ಫೋನ್ ಅನ್ನು ಹೊಸದಾಗಿ ಮಾರ್ಪಡಿಸುತ್ತದೆ.

ಸಾಫ್ಟ್‌ವೇರ್ ಅಪ್‌ಡೇಟ್ ಮಾಡಿ

ಸಾಫ್ಟ್‌ವೇರ್ ಅಪ್‌ಡೇಟ್ ಮಾಡಿ

ನಿಮ್ಮ ಫೋನ್ ಸಾಕಷ್ಟು ಬಾರಿ ಸಮಸ್ಯೆಗಳನ್ನು ಉಂಟು ಮಾಡುತ್ತಿದೆ ಎಂದಾದಲ್ಲಿ, ಫೋನ್ ಸಾಫ್ಟ್‌ವೇರ್ ಬಗ್‌ನದ್ದೇ ಇದು ಸಮಸ್ಯೆಯಾಗಿರುತ್ತದೆ. ಅಬೌವ್ ಫೋನ್ ಇದರಡಿಯಲ್ಲಿ ಸೆಟ್ಟಿಂಗ್ಸ್ ಟ್ಯಾಬ್ ಅನ್ನು ಪರಿಶೀಲಿಸಿ.

ಸಮಸ್ಯೆ ಉಂಟಾಗುವುದು ಹೇಗೆ

ಸಮಸ್ಯೆ ಉಂಟಾಗುವುದು ಹೇಗೆ

ಹಲವಾರು ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್ ಮಾಡುವುದಾಗಲೀ ಬ್ಯಾಟರಿ ಸೇವರ್ ಅಳವಡಿಸುವುದಾಗಲೀ ನಿಮ್ಮ ಫೋನ್‌ನ ಹ್ಯಾಂಗಿಂಗ್‌ಗೆ ಕಾರಣವಾಗಿರುವುದಿಲ್ಲ.

RAM ಸಮಸ್ಯೆ

RAM ಸಮಸ್ಯೆ

ಒಮ್ಮೊಮ್ಮೆ ಫೋನ್‌ನಲ್ಲಿ RAM ಕ್ಲಿಯರ್ ಮಾಡದೇ ಇರುವುದು ಸಮಸ್ಯೆಗೆ ಕಾರಣವಾಗಿರುತ್ತದೆ.

ರೀಸ್ಟಾರ್ಟ್ ಮಾಡಿ

ರೀಸ್ಟಾರ್ಟ್ ಮಾಡಿ

ನಿಮ್ಮ ಫೋನ್‌ನ ಉತ್ತಮ ಕಾರ್ಯನಿರ್ವಹಣೆಗಾಗಿ 2-3 ದಿನಗಳಿಗೊಮ್ಮೆ ಅದನ್ನು ಮರುಪ್ರಾರಂಭಿಸಿ. ಇದರಿಂದ ನಿಮ್ಮ ಫೋನ್ ಹ್ಯಾಂಗ್ ಆಗುವುದನ್ನು ತಡೆಯಬಹುದಾಗಿದೆ.

Most Read Articles
Best Mobiles in India

English summary
if we are using our mobile phone and it hangs or freezes, then its a hectic task for us to fix the problem as soon as possible. At that moment we are helpless and mind says how to I fix this mobile hanging problem.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X