ವೊಡಾಫೋನ್ ನೆಟ್‌ವರ್ಕ್ ಸಮಸ್ಯೆಗೆ ಪರಿಹಾರ ಹೇಗೆ?

Written By:

ಯಾವಾಗಲಾದರೂ ತುರ್ತು ಪರಿಸ್ಥಿತಿಗಳಲ್ಲಿ ನಿಮ್ಮ ನೆಟ್‌ವರ್ಕ್ ಕೈಕೊಡುವುದು ಹೆಚ್ಚು ಅಸಹನೀಯವಾಗಿರುತ್ತದೆ. ಇಂತಹ ಸಂದರ್ಭಗಳಲ್ಲಿ ಈ ನೆಟ್‌ವರ್ಕ್ ಅನ್ನು ನಾನು ಏಕಾದರೂ ಬಳಸುತ್ತಿದ್ದೇನೆ ಎಂಬ ಕೋಪ ಉಂಟಾಗುವುದು ಖಂಡಿತ. ನೊ ನೆಟ್‌ವರ್ಕ್, ಕರೆನಿರತವಾಗಿರುವುದು, ನೀವು ಕರೆಮಾಡುವ ವ್ಯಕ್ತಿಗೆ ಕರೆತಲುಪದೇ ಇರುವುದು ಹೀಗೆ ನೆಟ್‌ವರ್ಕ್ ಸಮಸ್ಯೆಗಳು ಎರ್ರಾಬಿರ್ರಿಯಾಗಿ ನಿಮ್ಮನ್ನು ಕಾಡುತ್ತದೆ.

ಓದಿರಿ: ಇಂಟರ್ನೆಟ್ ಇಲ್ಲದೆಯೇ ಫೇಸ್‌ಬುಕ್ ಬಳಸುವುದು ಹೇಗೆ?

ಈ ಸಂದರ್ಭದಲ್ಲಿ ನಾವು ಗ್ರಾಹಕ ಸೇವಾ ವೇದಿಕೆಗೆ ಕರೆಮಾಡಿ ಅವರನ್ನು ತರಾಟೆಗೆ ತೆಗೆದುಕೊಳ್ಳುವುದು ವಾಡಿಕೆ. ಆದರಿಲ್ಲಿ ನಾವು ನಿಮಗೆ ನೀಡುತ್ತಿರುವ ಕಿವಿ ಮಾತು ಈ ಸಮಸ್ಯೆಯನ್ನು ನೀವೇ ಪರಿಹರಿಸಿಕೊಳ್ಳುವುದು ಹೇಗೆ ಎಂಬುದಾಗಿದೆ. ವೊಡಾಫೋನ್‌ನಲ್ಲಿ ಉಂಟಾಗುತ್ತಿರುವ ಸಿಗ್ನಲ್ ಸಮಸ್ಯೆಗೆ ನಾವು ಇಲ್ಲಿ ಪರಿಹಾರವನ್ನು ನೀಡುತ್ತಿದ್ದು ಇದು ನಿಮಗೆ ಖಂಡಿತ ಪ್ರಯೋಜನಕಾರಿ ಎಂದೆನಿಸಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನಿಮ್ಮ ಸ್ಮಾರ್ಟ್‌ಫೋನ್ ರಿಸ್ಟಾರ್ಟ್ ಮಾಡಿ

ನಿಮ್ಮ ಸ್ಮಾರ್ಟ್‌ಫೋನ್ ರಿಸ್ಟಾರ್ಟ್ ಮಾಡಿ

ನೆಟ್‌ವರ್ಕ್ ಸಂಬಂಧಿ ಯಾವುದೇ ಸಮಸ್ಯೆಗಳನ್ನು ನೀವು ಎದುರಿಸುತ್ತಿದ್ದೀರಿ ಎಂದಾದಲ್ಲಿ ನಿಮ್ಮ ಫೋನ್ ಅನ್ನು ರಿಸ್ಟಾರ್ಟ್ ಮಾಡುವುದು ಉತ್ತಮ ಉಪಾಯವಾಗಿದೆ. ಇದರಿಂದಾಗಿಯೇ ಹೆಚ್ಚಿನ ಸಂದರ್ಭಗಳಲ್ಲಿ ಸಮಸ್ಯೆ ನಿವಾರಣೆಯಾಗುತ್ತದೆ.

ಏರ್‌ಪ್ಲೇನ್ ಮೋಡ್ ಆಫ್ ಮಾಡಿ

ಏರ್‌ಪ್ಲೇನ್ ಮೋಡ್ ಆಫ್ ಮಾಡಿ

ಕೆಲವೊಮ್ಮೆ ನಮಗೆ ಗೊತ್ತಿಲ್ಲದೆಯೇ ಏರ್‌ಪ್ಲೇನ್ ಮೋಡ್ ಆನ್ ಆಗಿರುತ್ತದೆ. ಆದ್ದರಿಂದ ಏರ್‌ಪ್ಲೇನ್ ಮೋಡ್ ಆನ್ ಆಗಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ ಹೀಗಾಗಿದ್ದಲ್ಲಿ ಅದನ್ನು ಆಫ್ ಮಾಡಿ.

ಸಿಮ್ ಕಾರ್ಡ್ ರಿಇನ್‌ಸರ್ಟ್ ಮಾಡಿ

ಸಿಮ್ ಕಾರ್ಡ್ ರಿಇನ್‌ಸರ್ಟ್ ಮಾಡಿ

ಈ ಸಮಸ್ಯೆ ಇನ್ನೂ ಹಾಗೆಯೇ ಇದೆ ಎಂದಾದಲ್ಲಿ, ಸಿಮ್ ಕಾರ್ಡ್ ಅನ್ನು ಸರಿಯಾಗಿ ಇನ್‌ಸರ್ಟ್ ಮಾಡಲಾಗಿದೆಯೇ ಎಂಬುದನ್ನು ಕಂಡುಕೊಳ್ಳಿ. ಫೋನ್‌ನಿಂದ ಸಿಮ್ ಕಾರ್ಡ್ ಅನ್ನು ತೆಗೆದು ಇನ್ನೊಮ್ಮೆ ಹಾಕಿ. ಸ್ವಲ್ಪ ನಿಮಿಷ ಹಾಗೆಯೇ ಇರಿ ನಂತರ ಪುನಃ ಒಳತೂರಿಸಿ.

ಸ್ವಯಂಚಾಲಿತವಾಗಿ ನೆಟ್‌ವರ್ಕ್ ಆಯ್ಕೆಮಾಡಲು ಬಿಡಿ

ಸ್ವಯಂಚಾಲಿತವಾಗಿ ನೆಟ್‌ವರ್ಕ್ ಆಯ್ಕೆಮಾಡಲು ಬಿಡಿ

ನಿಮ್ಮ ಫೋನ್ ಸ್ವಯಂಚಾಲಿತವಾಗಿ ನೆಟ್‌ವರ್ಕ್ ಆಯ್ಕೆಮಾಡಲು ಬಿಡಿ. ಇದನ್ನು ಮಾಡಲು, ಸೆಟ್ಟಿಂಗ್ಸ್ > ವೈರ್‌ಲೆಸ್ ಮತ್ತು ನೆಟ್‌ವರ್ಕ್ ಸೆಟ್ಟಿಂಗ್ಸ್ > ಮೊಬೈಲ್ ನೆಟ್‌ವರ್ಕ್ಸ್ ಇಲ್ಲಿಗೆ ಹೋಗಿ. ನಂತರ ಸ್ವಯಂಚಾಲಿತ ಕ್ಲಿಕ್ ಮಾಡಿ.

ಫರ್ಮ್‌ವೇರ್ ಅಪ್‌ಡೇಟ್

ಫರ್ಮ್‌ವೇರ್ ಅಪ್‌ಡೇಟ್

ಮೇಲೆ ತಿಳಿಸಿದ ಎಲ್ಲವೂ ವಿಫಲವಾಗಿದೆ ಎಂದಾದಲ್ಲಿ, ನೀವು ಫರ್ಮ್‌ವೇರ್ ಅಪ್‌ಡೇಟ್‌ಗಳನ್ನು ಹೊಂದಿದ್ದೀರಾ ಎಂಬುದನ್ನು ಕಂಡುಕೊಳ್ಳಿ. ಇದನ್ನು ಕಂಡುಕೊಳ್ಳಲು, ಸೆಟ್ಟಿಂಗ್ಸ್ > ಅಬೌಟ್ ಫೋನ್ > ಸಾಫ್ಟ್‌ವೇರ್ ಅಪ್‌ಡೇಟ್ > ಅಪ್‌ಡೇಟ್ ಚೆಕ್ಸ್ ಹೀಗೆ ಮಾಡಿ. ಯಾವುದೇ ಅಪ್‌ಡೇಟ್ ಲಭ್ಯವಿದೆ ಎಂದಾದಲ್ಲಿ, ಅದನ್ನು ಇನ್‌ಸ್ಟಾಲ್ ಮಾಡಿಕೊಳ್ಳಿ. ಹೆಚ್ಚಿನ ಸಮಯಗಳಲ್ಲಿ ಈ ಅಪ್‌ಡೇಟ್‌ಗಳು ಸಮಸ್ಯೆಗಳನ್ನು ನಿವಾರಿಸುತ್ತವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
So, in this article, we will tell you a few simple tricks to improve the signal reception instantaneously. Take a look at them below if you are a Vodafone user.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot