Subscribe to Gizbot

ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಫಾರ್ಮಾಟ್‌ ಮಾಡುವುದು ಹೇಗೆ?

Posted By: Super
ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಫಾರ್ಮಾಟ್‌ ಮಾಡುವುದು ಹೇಗೆ?

ಈಗಂತೂ ಮಾರುಕಟ್ಟೆಯಲ್ಲಿ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳದ್ದೇ ದರ್ಬಾರು, ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳು ಮೊದಲಿಗೆ ಮಾರುಕಟ್ಟೆಗೆ ಕಾಲಿರಿಸಿದ ಸಂದರ್ಭದಲ್ಲಿ ಹೆಚ್ಚು ದುಬಾರಿ ಎಂದೆನಿಸಿಕೊಂಡಿದ್ದವು ಆದರೆ ಈಗಂತೂ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳ ಬೆಲೆ ಗಣನೀಯ ರೀತಿಯಲ್ಲಿ ಕಡಿಮೆಯಾಗಿದ್ದು ಕೈಗೆಟಕುವ ದರದಲ್ಲಿ ಲಭ್ಯವಾಗುತ್ತಿದೆ. ಅಂದಹಾಗೆ ನೀವೂ ಕೂಡಾ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಬಳಸುತಿದ್ದೀರ? ಹಾಗಿದ್ದಲ್ಲಿ ಆಂಡ್ರಾಯ್ಡ್‌ ಸ್ಮಾರ್ಟ್‌ಫೊನ್‌ ಕುರಿತಾಗಿ ತಿಳಿದುಕೊಳ್ಳ ಬೇಕಾದ ಕೆಲ ಪ್ರಮುಖ ಅಂಶಗಳು ಈ ಕೆಳಗಿನಂತಿವೆ ಒಮ್ಮೆ ಓದಿ ನೋಡಿ.

ಅಂದಹಾಗೆ ಆಂಡ್ರಾಯ್ಡ ನಿಮ್ಮ ಕಂಪ್ಯೂಟರ್‌ ಬಳಸಲು ನೀಡಲಾಗುವ ವಿಂಡೂಸ್‌ 7, ಎಕ್ಸಪಿ ರೀತಿಯಲ್ಲಿನ ಒಂದು ಆಪರೇಟಿಂಗ್‌ ಸಿಸ್ಟಂ ಆಗಿದ್ದು, ನಿಮ್ಮ ಸ್ಮಾರ್ಟ್‌ಫೋನ್‌ ಬಳಸಲು ನೆರವಾಗುತ್ತದೆ. ಕೆಲ ಸಂದರ್ಭಗಳಲ್ಲಿ ಆಂಡ್ರಾಯ್ಡ್‌ ಫೋನ್‌ಗಳಲ್ಲಿ ಕೆಲ ದೋಷಗಳು ಕಾಣಿಸಿಕೊಂಡು ನಿಮ್ಮ ಮೊಬೈಲ್‌ಗೆ ಯಾವುದೇ ಒಳ ಕರೆಗಳು ಬರದಂತಾಗುತ್ತದೆ, ಅಲ್ಲದೆ ನೀವೂ ಕೂಡ ಯಾವುದೇ ಹೊರ ಕರೆಗಳನ್ನು ಮಾಡಲು ಸಾದ್ಯವಾಗದಂತಾಗಿ ಬಿಡುತ್ತದೆ.

ವೈರಸ್‌ ದಾಳಿಯಿಂದಾಗಿ ಇಲ್ಲವೆ ಕರಪ್ಟೆಡ್‌ ಫೈಲ್‌ ಡೌನ್ಲೋಡ್‌ ಮಾಡಿಕೊಂಡಂತಹ ಸಂದರ್ಭಗಳಲ್ಲಿ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಈ ರೀತಿಯ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಇಂತಹ ತೊಂದರೆಗಳನ್ನು ಸರಿಪಡಿಸಲು ನಿಮ್ಮ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಫಾರ್ಮಾಟ್‌ ಮಾಡಿಕೊಳ್ಳದೆ ಬೇರೆ ದಾರಿಯಿಲ್ಲ. ಅದಕ್ಕಾಗಿಯೇ ಗಿಜ್ಬಾಟ್‌ ಇಂದು ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಫಾರ್ಮಾಟ್‌ ಮಾಡುವ ವಿಧಾನದ ಕುರಿತು ತಿಳಿಸಿದೆ ಒಮ್ಮೆ ಓದಿ ನೋಡಿ.

ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಫಾರ್ಮಾಟ್‌ ಮಾಡಲು ಮೊದಲಿಗೆ ಮೆನ್ಯು(Menu) ಕೀ ಪ್ರೆಸ್‌ ಮಾಡಿ.

ಮೆನ್ಯು ಗೆ ತೆರಳಿ ಸೆಟ್ಟಿಂಗ್ಸ್‌ ಆಪ್ಷನ್‌ ಕ್ಲಿಕ್‌ ಮಾಡಿ,

ಸೆಟ್ಟಿಂಗ್ಸ್‌ನಿಂದ ಪ್ರೈವೆಸಿ ಆಪ್ಷನ್‌ ಕ್ಲಿಕ್‌ಮಾಡಿ,

ಪ್ರೈವೆಸಿನಲ್ಲಿ ಫ್ಯಾಕ್ಟರಿ ಡೇಟಾ ರೀಸೆಟ್‌ ಆಪ್ಷನ್‌ಗೆ ಕ್ಲಿಕ್‌ ಮಾಡಿ,

ರೀಸೆಟ್‌ ಫ್ಯಾಕ್ಟರಿ ಡೇಟಾನಲ್ಲಿ ರೀಸೆಟ್‌ ಫೋನ್‌ ಆಪ್ಷನ್‌ ಕ್ಲಿಕ್‌ ಮಾಡಿ,

ರೀಸೆಟ್‌ ಫೋನ್‌ ಆಪ್ಷನ್‌ ಮೇಲೆ ಕ್ಲಿಕ್‌ ಮಾಡುತ್ತಿದ್ದಂತೆ ನಿಮ್ಮ ಸ್ಮಾರ್ಟ್‌ಫೋನ್‌ ರೀಸೆಟ್‌ ಆಗಿಬಿಡುತ್ತದೆ.

ಇಲ್ಲವಾದಲ್ಲಿ

ನಿಮ್ಮ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ನಲ್ಲಿ *2767*3855# ಸಂಖ್ಯೆಯನ್ನು ಡಯಲ್‌ ಮಾಡಿ.

ಡಯಲ್‌ ಮಾಡುತ್ತಿದ್ದಂತೆ ನಿಮ್ಮ ಸ್ಮಾರ್ಟ್‌ಫೋನ್‌ ರೀಸೆಟ್‌ ಆಗಿಬಿಡುತ್ತದೆ.

ಎಸ್‌ಎಂಎಸ್‌ ಮೂಲಕ ಸ್ಮಾರ್ಟ್‌ಫೋನ್‌ ನಿಯಂತ್ರಿಸುವುದು ಹೇಗೆ?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot