'ಗೂಗಲ್‌ ಪ್ಲೇ ಸ್ಟೋರ್‌'ನಲ್ಲಿ ಖರೀದಿಯ ಹಣ ರೀಫಂಡ್‌ ಪಡೆಯುವುದು ಹೇಗೆ?

By Suneel
|

ಹಲವು ವೇಳೆ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಆಪ್‌ ಮತ್ತು ಇತರೆ ಸಾಫ್ಟ್‌ವೇರ್‌ಗಳನ್ನು ಖರೀದಿಸುತ್ತೇವೆ. ಆದರೆ ಒಮ್ಮೆ ಬಳಕೆ ನಂತರ ಆಪ್‌ ನಮ್ಮ ಅಗತ್ಯಗಳನ್ನು ಪೂರೈಸುವುದಿಲ್ಲ ಎಂದು ತಿಳಿಯುತ್ತದೆ. ಕೊನೆಗೂ ಆಪ್‌ ಅನ್ನು ಗೂಗಲ್‌ಗೆ ತಿರುಗಿ ನೀಡುತ್ತೇವೆ.

ಯಾವುದೇ ಒಂದು ಆಪ್‌ ಅನ್ನು ಪ್ಲೇ ಸ್ಟೋರ್‌ನಿಂದ ಖರೀದಿಸಬೇಕಾದರೆ ಇತರರು ನೀಡಿರುವ ವಿಮರ್ಶೆಗಳನ್ನು ಓದಿಯೇ ಆಪ್‌ ಖರೀದಿಸಿದರು ಕೆಲವೊಮ್ಮೆ ನಿರೀಕ್ಷಿಸಿದ ಸೇವೆ ಆಪ್‌ನಿಂದ ಸಿಗುವುದಿಲ್ಲ. ಅಂತಹ ಸಮಯದಲ್ಲಿ ಆಪ್‌ ಅನ್ನು ತಿರುಗಿ ನೀಡಲು ಬಯಸುತ್ತೇವೆ. ಆದರೆ ಖರೀದಿ ವೆಚ್ಚವನ್ನು ಹಿಂಪಡೆಯಲು ಸಾಧ್ಯವಿಲ್ಲ. ಅಲ್ಲದೇ ಗೂಗಲ್‌ ಅನ್ನು ನೇರವಾಗಿ ಸಂಪರ್ಕಿಸಲು ಸಾಧ್ಯವಿಲ್ಲ ಎಂದು ಕೊಂಡಿರುವವರು ಇದ್ದಾರೆ.

ಅಂದಹಾಗೆ ಗುಡ್‌ ನ್ಯೂಸ್‌ ಎಂದರೆ ಗೂಗಲ್‌ ರೀಫಂಡ್ ಪಾಲಿಸಿಯನ್ನು ಪ್ಲೇ ಸ್ಟೋರ್‌ಗೆ ಅಳವಡಿಸಿದೆ. ಉಚಿತ ರೀಫಂಡ್ ಪ್ರಕ್ರಿಯೆಯು ಇದೆ. ನೀವು ಯಾವುದೇ ಆಪ್‌ ಅನ್ನು ಗೂಗಲ್‌(Google) ಪ್ಲೇ ಸ್ಟೋರ್‌ನಿಂದ ಖರೀದಿಸಿದಲ್ಲಿ, ಆಫ್‌'ಗೆ ಸಂಬಂಧಿಸಿದಂತೆ ರೀಫಂಡ್‌ ಪಡೆಯುವುದು ಹೇಗೆ ಎಂದು ಇಂದಿನ ಲೇಖನದಲ್ಲಿ ಓದಿ ತಿಳಿಯಿರಿ.

'ಗೂಗಲ್‌ ಅಲ್ಲೊ' ಆಪ್‌ ಬಳಸುವ ಮುನ್ನ ಈ 8 ಹಂತಗಳನ್ನು ಓದಿಕೊಳ್ಳಿ

 ಆಪ್‌ ಅಥವಾ ಗೇಮ್ ಅಭಿವೃದ್ದಿಗಾರರನ್ನು ರೀಫಂಡ್‌ಗಾಗಿ ಸಂಪರ್ಕಿಸಿ

ಆಪ್‌ ಅಥವಾ ಗೇಮ್ ಅಭಿವೃದ್ದಿಗಾರರನ್ನು ರೀಫಂಡ್‌ಗಾಗಿ ಸಂಪರ್ಕಿಸಿ

ಆಪ್‌ ಅಥವಾ ಗೇಮ್‌ಗೆ ಸಂಬಂಧಿಸಿದಂತೆ ಅಸಮಾಧಾನವನ್ನು ಅಭಿವೃದ್ದಿಗಾರರಿಗೆ ತಿಳಿಸಿ, ರೀಫಂಡ್‌ ಪಡೆಯಲು ಕೇಳಿಕೊಳ್ಳಬಹುದು. ಆದರೆ ರೀಫಂಡ್‌ ಮಾಡುವುದು ಮಾತ್ರ ಅವರ ವಿವೇಚನೆಗೆ ಬಿಟ್ಟಿದ್ದು.

ಆಪ್‌ ಅಭಿವೃದ್ದಿಗಾರರ ಸಂಪರ್ಕ ವಿಳಾಸ ಪ್ಲೇ ಸ್ಟೋರ್‌ನಲ್ಲಿ ಆಪ್‌ ಪರಿಚಯದ ಕೆಳಗೆ ಇರುತ್ತದೆ. ರೀಫಂಡ್‌ಗಾಗಿ ಕನ್ವಿಂನ್ಸ್‌ ಮಾಡಬಹುದು.

 2 ಗಂಟೆಗಳಲ್ಲಿ ಸುಲಭ ರೀಫಂಡ್‌ ಪಡೆಯಿರಿ

2 ಗಂಟೆಗಳಲ್ಲಿ ಸುಲಭ ರೀಫಂಡ್‌ ಪಡೆಯಿರಿ

ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಯಾವುದೇ ಆಪ್‌ ಅನ್ನು ಖರೀದಿಸುವ ಮುನ್ನ ರೀಫಂಡ್‌ ಪಾಲಿಸಿಯನ್ನು ತಿಳಿದುಕೊಳ್ಳಿ. ಗೂಗಲ್ ಮೊದಲ 2 ಗಂಟೆಗಳಲ್ಲಿ ಸುಲಭ ರೀಫಂಡ್ ಪಾಲಿಸಿಯನ್ನು ಆಪ್‌ ಖರೀದಿಗೆ ಹೊಂದಿದೆ. ಆಪ್‌ ಖರೀದಿಸಿದ 2 ಗಂಟೆಗಳಲ್ಲಿ ಖರೀದಿದಾರರು ಸಂಪೂರ್ಣ ಹಣ ಹಿಂಪಡೆಯಬಹುದು.

ಸಂಪೂರ್ಣ ರೀಫಂಡ್‌ಗಾಗಿ ನಿಮ್ಮ ಆಂಡ್ರಾಯ್ಡ್ ಡಿವೈಸ್‌ನಲ್ಲಿ ಪ್ಲೇ ಸ್ಟೋರ್‌ ಓಪನ್‌ ಮಾಡಿ menu button>>My account>>my Orders>>Locate the app to be refunded>>ಆಪ್ ಖರೀದಿಸಿ ಇನ್ನೂ 2 ಗಂಟೆಗಳು ಆಗಿಲ್ಲ ಎಂದರೆ 'Refund' ಆಪ್ಶನ್ ಕಾಣುತ್ತದೆ>> ಅದನ್ನು ಕ್ಲಿಕ್ ಮಾಡಿ. ಗೂಗಲ್‌ ಸಂಪೂರ್ಣ ಹಣವನ್ನು ರೀಫಂಡ್‌ ಮಾಡುತ್ತದೆ. ಆಪ್‌ ಅನ್ನು ಅನ್‌ಇನ್‌ಸ್ಟಾಲ್‌ ಮಾಡಿ.

ಸಹಾಯಕ್ಕಾಗಿ ಗೂಗಲ್ ಸಂಪರ್ಕಿಸಿ

ಸಹಾಯಕ್ಕಾಗಿ ಗೂಗಲ್ ಸಂಪರ್ಕಿಸಿ

ಆಪ್‌ ಅಭಿವೃದ್ದಿಗಾರರು ರೀಫಂಡ್ ಬೇಡಿಕೆಯನ್ನು ತಿರಸ್ಕರಿಸಿದರೆ, ನಂತರ ನೀವು ಗೂಗಲ್‌ ಪ್ಲೇ ಗ್ರಾಹಕ ಸೇವೆಯಲ್ಲಿ ಮನವಿ ಮಾಡಬಹುದು. ಆದರೆ ನೀವು ನಿಖರವಾದ ಮತ್ತು ಉತ್ತಮವಾದ ಕಾರಣಗಳನ್ನು ನೀಡಿದರೆ, ನಂತರ ಗೂಗಲ್‌ ನಿಮ್ಮ ಹಣವನ್ನು ರೀಫಂಡ್‌ ಮಾಡಬೇಕೋ, ಬೇಡವೋ ಎಂಬುದನ್ನು ತೀರ್ಮಾನ ಮಾಡುತ್ತದೆ.

 ಗೂಗಲ್‌ನಲ್ಲಿ ರಿಕ್ವೆಸ್ಟ್ ಮಾಡುವುದು ಹೇಗೆ?

ಗೂಗಲ್‌ನಲ್ಲಿ ರಿಕ್ವೆಸ್ಟ್ ಮಾಡುವುದು ಹೇಗೆ?

ಗೂಗಲ್‌ನಲ್ಲಿ ರೀಫಂಡ್‌ ರಿಕ್ವೆಸ್ ಮಾಡಲು , ಗೂಗಲ್‌ ಪ್ಲೇ ಹೆಲ್ಪ್‌ ವೆಬ್‌ಸೈಟ್‌ಗೆ ಭೇಟಿ ನೀಡಿ>> ನಂತರ Contackt us ಆಪ್ಶನ್‌ ಕ್ಲಿಕ್ ಮಾಡಿ>> Android apps and games ಟ್ಯಾಪ್‌ ಮಾಡಿ>> ರೀಫಂಡ್‌ ರಿಕ್ವೆಸ್ಟ್ ಮಾಡಿ. ಈಗ ಗ್ರಾಹಕ ಗೂಗಲ್‌ ಅನ್ನು ಫೋನ್, ಎಸ್‌ಎಂಎಸ್‌, ಇಮೇಲ್‌ ಮುಖಾಂತರ ಸಂಪರ್ಕಿಸಬಹುದು.

ಹಣ ರೀಫಂಡ್‌ ಮಾಡಲು ಪ್ಲೇ ಸ್ಟೋರ್‌ ತೆಗೆದುಕೊಳ್ಳುವ ಸಮಯ ಎಷ್ಟು?

ಹಣ ರೀಫಂಡ್‌ ಮಾಡಲು ಪ್ಲೇ ಸ್ಟೋರ್‌ ತೆಗೆದುಕೊಳ್ಳುವ ಸಮಯ ಎಷ್ಟು?

ಕ್ರೆಡಿಟ್‌ ಕಾರ್ಡ್ ಅಥವಾ ಪೇಪಾಲ್‌ಗಳಿಗೆ, 3-5 ಬ್ಯುಸಿನೆಸ್‌ ದಿನಗಳನ್ನು ರೀಫಂಡ್‌ಗಾಗಿ ತೆಗೆದುಕೊಳ್ಳುವುದಾಗಿ ಗೂಗಲ್‌ ಹೇಳಿದೆ. ಗೂಗಲ್‌ ಪ್ಲೇ ಬ್ಯಾಲೆನ್ಸ್ ಅಥವಾ ಗೂಗಲ್‌ ವಾಲೆಟ್ ಬ್ಯಾಲೆನ್ಸ್ , ಕೇವಲ ಒಂದು ದಿನನಲ್ಲಿ ನಿಮ್ಮ ಖಾತೆಗೆ ಹಣ ರೀಫಂಡ್‌ ಮಾಡುತ್ತದೆ.

Best Mobiles in India

English summary
How to Get Your Money Back on Google Play Store, on Purchases. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X