ವಾಟ್ಸಾಪ್ ಚಾಟ್‌ಗಳನ್ನು ಡಿಲೀಟ್ ಮಾಡದೇ, ಮರೆಮಾಡುವುದು ಹೇಗೆ?

|

ಜನಪ್ರಿಯ ಇನ್‌ಸ್ಟಂಟ್ ಮೆಸೆಜ್ ಆಪ್‌ ವಾಟ್ಸಾಪ್‌ ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಒಳಗೊಂಡಿದೆ. ಮೆಟಾ ಮಾಲೀಕತ್ವದ ವಾಟ್ಸಾಪ್ ತನ್ನ ಬಳಕೆದಾರರಿಗಾಗಿ ಹಲವು ಉಪಯುಕ್ತ ಫೀಚರ್ಸ್‌ಗಳನ್ನು ಅಳವಡಿಸಿದೆ. ಹಾಗೆಯೇ ಬಳಕೆದಾರರ ಖಾಸಗಿ ಮಾಹಿತಿಗೆ ಸುರಕ್ಷತೆ ಒದಗಿಸುವ ಆಯ್ಕೆಗಳನ್ನು ಸಹ ನೀಡಿದೆ. ಆ ಪೈಕಿ ವಾಟ್ಸಾಪ್‌ ಚಾಟ್‌ ಗಳನ್ನು ಡೀಲಟ್ ಮಾಡದೇ ಆರ್ಕೈವ್ ಮಾಡುವ ಮೂಲಕ ಮರೆಮಾಡುವುದು ಆಯ್ಕೆ ಸಹ ಒಂದಾಗಿದೆ.

ವಾಟ್ಸಾಪ್‌

ಹೌದು, ಬಳಕೆದಾರರು ವಾಟ್ಸಾಪ್‌ ಚಾಟ್‌ಗಳನ್ನು ಡಿಲೀಟ್ ಮಾಡದೇ ಅವುಗಳನ್ನು ಮರೆಮಾಡುವ (ಹೈಡ್) ಆಯ್ಕೆ ಒದಗಿಸಿದೆ. ವಾಟ್ಸಾಪ್‌ನಲ್ಲಿ ಹೊಸ ಸಂದೇಶವನ್ನು ಸ್ವೀಕರಿಸಿದ ತಕ್ಷಣ ಆರ್ಕೈವ್ ಚಾಟ್ ಸಾಮಾನ್ಯವಾಗಿ ಮೇಲ್ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಆರ್ಕೈವ್ ಮಾಡಿದ ಚಾಟ್‌ಗಳು, ಆರ್ಕೈವ್ ಮಾಡಿದ ಚಾಟ್‌ಗಳ ಫೋಲ್ಡರ್‌ನಲ್ಲಿ ಸೇವ್ ಆಗುತ್ತವೆ. ಮುಖ್ಯ ಚಾಟ್ ಪಟ್ಟಿಯ ಮೇಲ್ಭಾಗದಲ್ಲಿ ಕಾಣಿಸುವುದಿಲ್ಲ. ಹಾಗಾದರೇ ವಾಟ್ಸಾಪ್ ಚಾಟ್ ಅನ್ನು ಸುಲಭವಾಗಿ ಮರೆಮಾಡಲು ಬಗ್ಗೆ ತಿಳಿಯಲು ಮುಂದೆ ಓದಿರಿ.

ಈ ಕ್ರಮಗಳನ್ನು ಅನುಸರಿಸಿ:

ಈ ಕ್ರಮಗಳನ್ನು ಅನುಸರಿಸಿ:

ಹಂತ 1: ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸಾಪ್‌ ಅಪ್ಲಿಕೇಶನ್ ತೆರೆಯಿರಿ

ಹಂತ 2: ಗುಂಪು ಚಾಟ್ ಆಗಿರಬಹುದು ಅಥವಾ ವೈಯಕ್ತಿಕ ಚಾಟ್ ಆಗಿರಬಹುದು

ಹಂತ 3: ಮೇಲಿನ ಪಿನ್, ಮ್ಯೂಟ್, ಆರ್ಕೈವ್‌ನಲ್ಲಿ ಮೂರು ಆಯ್ಕೆಗಳು ಗೋಚರಿಸುತ್ತವೆ

ಹಂತ 4: ಆರ್ಕೈವ್ ಬಟನ್ ಮೇಲೆ ಟ್ಯಾಪ್ ಮಾಡಿ

ಬಟನ್

ಹಂತ 5: ಆರ್ಕೈವ್ ಬಟನ್ ಈಗ ನಿಮ್ಮ ಚಾಟ್ ಫೀಡ್‌ನ ಮೇಲ್ಭಾಗದಲ್ಲಿ ಕಾಣಿಸುತ್ತದೆ.

ಹಂತ 6: ಆಯ್ಕೆ ಮಾಡಿದ ಚಾಟ್ ಅನ್ನು ಆರ್ಕೈವ್ ಮಾಡಲು ಬಟನ್ ಮೇಲೆ ಕ್ಲಿಕ್ ಮಾಡಿ

ಹಂತ 7: ಅಪ್ಲಿಕೇಶನ್‌ನಲ್ಲಿ ಲಭ್ಯವಿರುವ ಎಲ್ಲಾ ಚಾಟ್‌ಗಳನ್ನು ಆರ್ಕೈವ್ ಮಾಡಬಹುದು

ಹಂತ 8: ಚಾಟ್‌ಗಳ ಮೇಲೆ ಟ್ಯಾಪ್ ಮಾಡಿ

ಮೇಲೆ

ಹಂತ 9: ಇನ್ನಷ್ಟು ಆಯ್ಕೆಗಳಿಗೆ ಹೋಗಿ

ಹಂತ 10: ಸೆಟ್ಟಿಂಗ್‌ಗಳ ಮೇಲೆ ಕ್ಲಿಕ್ ಮಾಡಿ

ಹಂತ 11: ಈಗ ಚಾಟ್ಸ್ ಮೇಲೆ ಟ್ಯಾಪ್ ಮಾಡಿ

ಹಂತ 12: ಚಾಟ್ ಹಿಸ್ಟರಿ ಆಯ್ಕೆ ಮೇಲೆ ಕ್ಲಿಕ್ ಮಾಡಿ

ಹಂತ 13: ಎಲ್ಲಾ ಚಾಟ್‌ಗಳನ್ನು ಆರ್ಕೈವ್ ಮಾಡಿ ಕ್ಲಿಕ್ ಮಾಡಿ

ವಾಟ್ಸಾಪ್‌ನಲ್ಲಿ ಬ್ಲೂ ಟಿಕ್ ಕಾಣಿಸದಂತೆ ಮಾಡುವುದು ಹೇಗೆ ಗೊತ್ತಾ?

ವಾಟ್ಸಾಪ್‌ನಲ್ಲಿ ಬ್ಲೂ ಟಿಕ್ ಕಾಣಿಸದಂತೆ ಮಾಡುವುದು ಹೇಗೆ ಗೊತ್ತಾ?

ಬ್ಲೂ ಟಿಕ್ ಕಾಣಿಸದಂತೆ ಸೆಟ್ ಮಾಡಲು ಸೆಟ್ಟಿಂಗ್‌ ವಿಭಾಗದಲ್ಲಿ ಅವಕಾಶ ಇದೆ. ಆದರೆ ಅದೇ ಹೆಸರಿನಿಂದ ಆಯ್ಕೆ ಒದಗಿಸಿಲ್ಲ. ಬದಲಾಗಿ Read Receipts option ಆಯ್ಕೆ ಇದೆ. ಈ ಆಯ್ಕೆ ಆಫ್ ಮಾಡುವ ಮೂಲಕ ವಾಟ್ಸಾಪ್‌ನಲ್ಲಿ ಬ್ಲೂ ಟಿಕ್ ಕಾಣಿಸದಂತೆ ಸೆಟ್ ಮಾಡಬಹುದಾಗಿದೆ. ಮುಂದಿನ ಕ್ರಮಗಳನ್ನು ಫಾಲೋ ಮಾಡಿರಿ.

ಅಪ್ಲಿಕೇಶನ್

ಹಂತ 1: ಮೊದಲು ವಾಟ್ಸಾಪ್ ಅಪ್ಲಿಕೇಶನ್ ಗೆ ಭೇಟಿ ನೀಡಿ ಮತ್ತು ನಂತರ ಸೆಟ್ಟಿಂಗ್ಸ್ ವಿಭಾಗವನ್ನು ತೆರೆಯಿರಿ.

ಹಂತ 2: ನಂತರ, Account/ಖಾತೆ ಗೆ ಹೋಗಿ ಮತ್ತು Privacy/ಗೌಪ್ಯತೆ ಆಯ್ಕೆಯನ್ನು ಸೆಲೆಕ್ಟ್ ಮಾಡಿ.

ಹಂತ 3: ತದ ನಂತರ Read Receipts ಆಯ್ಕೆಗೆ ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಚಾಟ್‌ಗಳಲ್ಲಿ ಬ್ಲೂ ಟಿಕ್ ಕಾಣಿಸದಂತೆ ಸೆಟ್ ಮಾಡಲು ಅದನ್ನು ನಿಷ್ಕ್ರಿಯಗೊಳಿಸಿ.

ಸಕ್ರಿಯಗೊಳಿಸಲು

ಈ ಹಂತಗಳನ್ನು ಅನುಸರಿಸುವ ಮೂಲಕ ಬಳಕೆದಾರರು ತಮಗೆ ಯಾವಾಗ ಬೇಕಾದರೂ ಈ ಆಯ್ಕೆಯನ್ನು ಮತ್ತೆ ಸಕ್ರಿಯಗೊಳಿಸಲು ಅವಕಾಶ ಇದೆ. ಈ ಆಯ್ಕೆಯನ್ನು ಸಕ್ರಿಯ ಮಾಡಿದರೇ ನೀವು ಕಳುಹಿಸಿದ ಮೆಸೆಜ್‌ಗಳು ಇತರರು ಓದಿದಾಗ ಬ್ಲೂ ಟಿಕ್ ನೋಡಲು ನಿಮಗೆ ಸಾಧ್ಯವಾಗುವುದಿಲ್ಲ.

Best Mobiles in India

English summary
How To Hide WhatsApp Chats Without Deleting Them: Follow These Steps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X