ನಿಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಯನ್ನು ಕೆಲವರಿಗೆ ಹೈಡ್‌ ಮಾಡುವುದು ಹೇಗೆ ಗೊತ್ತಾ?

|

ಇನ್‌ಸ್ಟಾಗ್ರಾಮ್‌ ತಾಣವು ಸ್ಟೋರಿ ಫೀಚರ್‌ ಅನ್ನು ಹೊಂದಿದ್ದು, ಅದು ಹೆಚ್ಚು ಜನಪ್ರಿಯತೆ ಗಳಿಸಿದೆ. ಬಳಕೆದಾರರು ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿಸ್‌ ನಲ್ಲಿ ಫೋಟೊ, ವಿಡಿಯೋ ಹಾಕುತ್ತಾರೆ. ನಿಗದಿತ ಅವಧಿ ಮುಗಿದ ಬಳಿಕ ಸ್ಟೋರಿಸ್‌ ಮರೆಯಾಗುತ್ತದೆ. ಬಳಕೆದಾರರು ತನ್ನ ಇನ್‌ಸ್ಟಾ ಖಾತೆಯಲ್ಲಿ ಇಡುವ ಸ್ಟೋರಿಸ್‌ ಎವರ ಎಲ್ಲ ಫಾಲೋವರ್ಸ್‌ ವೀಕ್ಷಿಸ ಬಹುದಾಗಿದೆ. ಬೇಕಿದ್ರೆ, ಬಳಕೆದಾರರು ಸ್ಟೋರಿಸ್‌ ಅನ್ನು ಕೆಲವರು ಮಾತ್ರ ನೋಡುವಂತೆ ಸೆಟ್ ಮಾಡಬಹುದಾಗಿದೆ.

ನಿಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಯನ್ನು ಕೆಲವರಿಗೆ ಹೈಡ್‌ ಮಾಡುವುದು ಹೇಗೆ ಗೊತ್ತಾ?

ಹೌದು, ಮೆಟಾ ಮಾಲೀಕತ್ವದ ಇನ್‌ಸ್ಟಾಗ್ರಾಮ್‌ ತಾಣದಲ್ಲಿ ಸ್ಟೋರಿಸ್‌ ಆಯ್ಕೆ ಹೆಚ್ಚು ಗಮನ ಸೆಳೆದಿದೆ. ಈ ಆಯ್ಕೆಯಲ್ಲಿ ನಿಗದಿತ ಅವಧಿಗೆ ಫೋಟೊ, ವಿಡಿಯೋ ಅಪ್‌ಲೋಡ್ ಮಾಡಬಹುದಾಗಿದೆ. ಇನ್ನು ಬಳಕೆದಾರರು ಇಡುವ ಸ್ಟೋರಿಸ್‌ ಅನ್ನು ಕೆಲವು ಫಾಲೋವರ್ಸ್‌ ಮಾತ್ರ ನೋಡುವಂತೆ ಸೆಟ್‌ ಮಾಡಲು ಅವಕಾಶ ಇದೆ. ಈ ಆಯ್ಕೆ ಮೂಲಕ ಬಳಕೆದಾರರು ತಾವು ಅಪ್‌ಲೋಡ್ ಮಾಡುವ ಸ್ಟೋರಿಸ್‌ ಅನ್ನು ಕುಟುಂಬದವರು ಮತ್ತು ಸ್ನೇಹಿತರು ಮಾತ್ರ ವೀಕ್ಷಿಸವಂತೆ ಮಾಡಬಹುದು. ಹಾಗಾದರೆ ಇನ್‌ಸ್ಟಾಗ್ರಾಮ್‌ ತಾಣದಲ್ಲಿ ಬಳಕೆದಾರರು ಸ್ಟೋರಿ ಅನ್ನು ಕೆಲವು ನಿರ್ದಿಷ್ಟ ಫಾಲೋವರ್ಸ್‌ ಗೆ ಮಾತ್ರ ಹೈಡ್‌ ಮಾಡುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ನಿಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಯನ್ನು ಕೆಲವರಿಗೆ ಹೈಡ್‌ ಮಾಡುವುದು ಹೇಗೆ ಗೊತ್ತಾ?

ಇನ್‌ಸ್ಟಾಗ್ರಾಮ್‌ ಸ್ಟೋರಿ ಅನ್ನು ಇತರರಿಂದ ಮರೆಮಾಡಲು ಹೀಗೆ ಮಾಡಿ:
* ನಿಮ್ಮ ಪ್ರೊಫೈಲ್‌ಗೆ ಹೋಗಲು ಕೆಳಗಿನ ಬಲಭಾಗ ದಲ್ಲಿರುವ ನಿಮ್ಮ ಪ್ರೊಫೈಲ್ ಚಿತ್ರದ ಮೇಲೆ ಟ್ಯಾಪ್ ಮಾಡಿ.
* ಮೇಲಿನ ಬಲಭಾಗದಲ್ಲಿರುವ ಹೆಚ್ಚಿನ ಆಯ್ಕೆಗಳನ್ನು ಟ್ಯಾಪ್ ಮಾಡಿ, ನಂತರ ಸೆಟ್ಟಿಂಗ್‌ಗಳನ್ನು ಟ್ಯಾಪ್ ಮಾಡಿ
* ಗೌಪ್ಯತೆ ಟ್ಯಾಪ್ ಮಾಡಿ, ನಂತರ ಸ್ಟೋರಿ ಟ್ಯಾಪ್ ಮಾಡಿ.
* ಹೈಡ್‌ ಸ್ಟೋರಿ ಫ್ರಾಮ್‌ ಪಕ್ಕದಲ್ಲಿರುವ ಜನರ ಸಂಖ್ಯೆ ಯನ್ನು ಟ್ಯಾಪ್ ಮಾಡಿ.
* ನಿಮ್ಮ ಸ್ಟೋರಿ ಅನ್ನು ಮರೆಮಾಡಲು ನೀವು ಬಯಸುವ ಜನರನ್ನು ಆಯ್ಕೆ ಮಾಡಿ, ನಂತರ ಮುಗಿದಿದೆ (ಐಫೋನ್) ಟ್ಯಾಪ್ ಮಾಡಿ ಅಥವಾ ಮೇಲಿನ ಎಡಭಾಗದಲ್ಲಿ (ಆಂಡ್ರಾಯ್ಡ್) ಹಿಂದಕ್ಕೆ ಟ್ಯಾಪ್ ಮಾಡಿ.
* ನಿಮ್ಮ ಸ್ಟೋರಿ ಯಾರಿಗಾದರೂ ಮರೆ ಮಾಡಲು, ನೀವು ಅವರ ಆಯ್ಕೆಯನ್ನು ರದ್ದುಗೊಳಿಸಬೇಕು.
* ನಿಮ್ಮ ಸ್ಟೋರಿ ಯಾರು ನೋಡಿದ್ದಾರೆಂದು ನೀವು ನೋಡುತ್ತಿರುವಂತೆಯೇ ನಿಮ್ಮ ಸ್ಟೋರಿ ಅನ್ನು ಮರೆ ಮಾಡಲು ಜನರನ್ನು ಆಯ್ಕೆ ಮಾಡಬಹುದು.
* ಹೆಚ್ಚು ಆಯ್ಕೆಗಳನ್ನು (ಐಫೋನಿ ನಲ್ಲಿ ಮೂರು ಅಡ್ಡ ಚುಕ್ಕೆಗಳು) ಅಥವಾ ಹೆಚ್ಚಿನ ಆಯ್ಕೆಗಳನ್ನು (ಆಂಡ್ರಾಯ್ಡ್‌ ನಲ್ಲಿ ಮೂರು ಲಂಬ ಚುಕ್ಕೆಗಳು) ಅವರ ಹೆಸರಿನ ಬಲಕ್ಕೆ ಟ್ಯಾಪ್ ಮಾಡಿ ಮತ್ತು ನಿಮ್ಮ ಸ್ಟೋರಿ ಅನ್ನು ಮರೆ ಮಾಡಿ ಆಯ್ಕೆ ಮಾಡಿ.

ಇನ್‌ಸ್ಟಾಗ್ರಾಮ್‌ ಸ್ಟೋರಿ ಅನ್ನು ಮ್ಯೂಟ್ ಮಾಡುವುದು ಹೇಗೆ?
* ಫೀಡ್‌ನ ಮೇಲ್ಭಾಗದಲ್ಲಿ, ನೀವು ಯಾರ ಕಥೆಯನ್ನು ಮ್ಯೂಟ್ ಮಾಡಲು ಬಯಸುತ್ತೀರೋ ಅವರ ಪ್ರೊಫೈಲ್ ಚಿತ್ರ ವನ್ನು ಟ್ಯಾಪ್ ಮಾಡಿ ಮತ್ತು ಹಿಡಿದುಕೊಳ್ಳಿ.
* ಮ್ಯೂಟ್ ಆಯ್ಕೆಮಾಡಿ, ನಂತರ ಮ್ಯೂಟ್ ಸ್ಟೋರಿ ಟ್ಯಾಪ್ ಮಾಡಿ.
* ಅವರ ಫೀಡ್ ಪೋಸ್ಟ್‌ ನಿಂದ ಅವರ ಬಳಕೆದಾರ ಹೆಸರನ್ನು ಟ್ಯಾಪ್ ಮಾಡಿ ಅಥವಾ ಎಕ್ಸ್‌ಪ್ಲೋರ್ ಮಾಡಿ ಮತ್ತು ಅವರ ಪ್ರೊಫೈಲ್‌ಗೆ ಹೋಗಲು ಅವರ ಬಳಕೆದಾರ ಹೆಸರನ್ನು ಹುಡುಕಿ.
* ಅವರ ಬಯೋ ಕೆಳಗೆ ಅನುಸರಿಸುವುದನ್ನು ಟ್ಯಾಪ್ ಮಾಡಿ.
* ಮ್ಯೂಟ್ ಟ್ಯಾಪ್ ಮಾಡಿ, ನಂತರ ಸ್ಟೋರಿ ಗಳನ್ನು ಟಾಗಲ್ ಮಾಡಿ.

Best Mobiles in India

English summary
How to Hide Your Instagram Stories From a Specific Someone: Follow These Steps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X