'ಸಾಂಗ್‌ ಟ್ರಾಕ್‌' ಸರ್ಚ್ ಮಾಡಲು ಹೀಗೆ ಮಾಡಿ!

|

ಏನೇ ಮಾಹಿತಿ ಬೇಕಿದ್ದರೂ ತಕ್ಷಣವೇ ಸ್ಮಾರ್ಟ್‌ಪೋನ್‌ ತೆಗೆದು ಗೂಗಲ್ ಸರ್ಚ್‌ನಲ್ಲಿ ಟೈಪ್‌ ಮಾಡಿಬಿಡುತ್ತಾರಾ ಅಲ್ಲವೇ. ಇನ್ನು ಕೆಲವೊಮ್ಮೆ ಯಾವುದೊ ಮ್ಯೂಸಿಕ್ ಕೇಳಿರುತ್ತಿರಾ ಆದರೆ ಅದು ಯಾವ ಚಿತ್ರದ್ದು?, ಸಿಂಗರ್‌ ಯಾರು? ಏನು ಗೊತ್ತಿರುವುದಿಲ್ಲ. ಆ ಮ್ಯೂಸಿಕ್‌ ಬಗ್ಗೆ ಹೇಗೆ ತಿಳಿಯುವುದು ಎಂಬ ಗೊಂದಲದಲ್ಲಿರುತ್ತಿರಿ. ಅವಾಗ ನಿಮ್ಮ ಸಹಾಯಕ್ಕೆ ಬರುವುದು ವಾಯಿಸ್‌ ಗ್ರಹಿಕೆ ಆಧಾರದ ಮೇಲೆ ಸರ್ಚ್‌ ಮಾಡುವ ಗೂಗಲ್ ಅಸಿಸ್ಟಂಟ್.

'ಸಾಂಗ್‌ ಟ್ರಾಕ್‌' ಸರ್ಚ್ ಮಾಡಲು ಹೀಗೆ ಮಾಡಿ!

ಹೌದು, ಸರ್ಚ್‌ ಇಂಜಿನ್ ದೈತ್ಯ ಗೂಗಲ್ ಸಾಕಷ್ಟು ಅಪ್‌ಡೇಟ್‌ ಆಗಿದ್ದು, ಮಾಹಿತಿ ಸರ್ಚ್‌ ಈಗ ಮತ್ತಷ್ಟು ಸುಲಭ ಎನಿಸಿದೆ. ಆಂಡ್ರಾಯ್ಡ್‌ ಓಎಸ್‌ ಮಾದರಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಗೂಗಲ್ ಅಸಿಸ್ಟಂಟ್ ಇದ್ದರೇ, ಐಓಎಸ್‌ ಓಎಸ್‌ ಮಾದರಿ ಆಪಲ್‌ ಐಫೋನ್‌ಗಳಲ್ಲಿ 'ಸಿರಿ' ವಾಯಿಸ್‌ ಗ್ರಹಿಕೆಯ ಆಧಾರದ ಮೇಲೆ ಮಾಹಿತಿ ಸರ್ಚ್ ಮಾಡಲಿದೆ. ಸದ್ಯ ಹಾಡುಗಳ ಬಗ್ಗೆ ಬೇಗ ಮಾಹಿತಿ ತಿಳಿಯಲು ಈ ಫ್ಲಾಟ್‌ಫಾರ್ಮ್‌ ಬೆಸ್ಟ್‌ ಆಗಿವೆ.

'ಸಾಂಗ್‌ ಟ್ರಾಕ್‌' ಸರ್ಚ್ ಮಾಡಲು ಹೀಗೆ ಮಾಡಿ!

ಮಾಹಿತಿ ತಿಳಿಯಬೇಕಾದ ಹಾಡಿನ ಅಥವಾ ಮ್ಯೂಸಿಕ್‌ ಅನ್ನು ಪ್ಲೇ ಮಾಡಿದರೇ ಸಾಕು ನಿಮ್ಮ ಫೋನ್‌ನಲ್ಲಿರುವ 'ವಾಯಿಸ್‌ ಅಸಿಸ್ಟಂಟ್' ತಕ್ಷಣವೇ ಅದನ್ನು ಗ್ರಹಿಸಿ ಅದರ ಮಾಹಿತಿಯನ್ನು ನೀಡಿಬಿಡುತ್ತದೆ. ಹಾಗಾದರೇ ವಾಯಿಸ್‌ ಅಸಿಸ್ಟಂಟ್ ಮೂಲಕ ಮ್ಯೂಸಿಕ್‌ನ ಮಾಹಿತಿಯನ್ನು ಹೇಗೆ ತಿಳಿಯುವುದು? ಮತ್ತು ವಾಯಿಸ್‌ ಅಸಿಸ್ಟಂಟ್ ಸರಿಯಾಗಿ ಸರ್ಚ್ ಮಾಡದಿದ್ದರೇ ಬೇರೆ ದಾರಿ ಯಾವುದು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಓದಿರಿ : ನೀವು ಊಹಿಸಿರದ 5 ಹೊಸ ಫೀಚರ್ಸ್‌ಗಳು ವಾಟ್ಸಪ್ ಸೇರಲಿವೆ! ಓದಿರಿ : ನೀವು ಊಹಿಸಿರದ 5 ಹೊಸ ಫೀಚರ್ಸ್‌ಗಳು ವಾಟ್ಸಪ್ ಸೇರಲಿವೆ!

ವಾಯಿಸ್‌ ಸರ್ಚ್

ವಾಯಿಸ್‌ ಸರ್ಚ್

ನೀವು ತಿಳಿಯಬೇಕೆಂದು ಕೊಂಡಿರುವ ಮ್ಯೂಸಿಕ್‌ ಅಥವಾ ಹಾಡಿನ ಮಾಹಿತಿ ಪಡೆಯುವುದು ಈಗ ಸುಲಭ. ಗೂಗಲ್ ಅಸಿಸ್ಟಂಟ್ ಅಥವಾ ಐಫೋನ್‌ ಸಿರಿಗಳ ನೆರವಿನಿಂದ ವಾಯಿಸ್‌ ಗ್ರಹಿಕೆಯ ಮೇಲೆ ಹಾಡಿನ ಪೂರ್ಣ ಮಾಹಿತಿ ಲಭ್ಯವಾಗಲಿದೆ. ಹಾಡು ಪ್ಲೇ ಮಾಡಿದರೇ ತಕ್ಷಣ ಈ ವಾಯಿಸ್‌ ಸರ್ಚ್‌ಗಳು ಹಾಡನ್ನು ಗ್ರಹಿಸಿಕೊಂಡು ಆ ಕುರಿತು ಮಾಹಿತಿ ಒದಗಿಸುತ್ತವೆ.

ಕೈ ಕೊಡುತ್ತವೆ ವಾಯಿಸ್‌ ಅಸಿಸ್ಟಂಟ್‌ಗಳು!

ಕೈ ಕೊಡುತ್ತವೆ ವಾಯಿಸ್‌ ಅಸಿಸ್ಟಂಟ್‌ಗಳು!

ಹೌದು, ಮ್ಯೂಸಿಕ್‌ ಟ್ರಾಕ್‌ ಸರ್ಚ್‌ ಮಾಡುವಾಗ ಕೆಲವೊಮ್ಮೆ ಗೂಗಲ್ ಅಸಿಸ್ಟಂಟ್ ಮತ್ತು ಆಪಲ್ ಸಿರಿ ವಾಯಿಸ್‌ ಅಸಿಸ್ಟಂಟ್‌ಗಳು ಸಾಂಗ್ ಟ್ರಾಕ್‌ ಮಾಡುವಲ್ಲಿ ಕೈ ಕೊಡುತ್ತವೆ. ಆಗ ನಿಮ್ಮ ನೆರವಿಗೆ ಬರಲಿವೆ ಥರ್ಡ್‌ಪಾರ್ಟಿ ಮ್ಯೂಸಿಕ್ ಸರ್ಚ್‌ ಆಪ್‌ಗಳು. ಇವುಗಳಲ್ಲಿ ಕೆಲವು ಐಓಎಸ್‌ ಮತ್ತು ಅಂಡ್ರಾಯ್ಡ್‌ ಎರಡು ಓಎಸ್‌ಗಳಿಗೂ ಬೆಂಬಲ ನೀಡುತ್ತವೆ.

ಓದಿರಿ : BSNL 'ಅಭಿನಂದನ್' 151ರೂ. ಪ್ಲ್ಯಾನ್‌!..ಉಚಿತ ಡಾಟಾ ಮತ್ತು ಫ್ರೀ ರೋಮಿಂಗ್! ಓದಿರಿ : BSNL 'ಅಭಿನಂದನ್' 151ರೂ. ಪ್ಲ್ಯಾನ್‌!..ಉಚಿತ ಡಾಟಾ ಮತ್ತು ಫ್ರೀ ರೋಮಿಂಗ್!

ಶಾಜಮ್ ಆಪ್‌ (Shazam app)

ಶಾಜಮ್ ಆಪ್‌ (Shazam app)

ಈ ಶಾಜಮ್ ಆಪ್‌ ಮ್ಯೂಸಿಕ್‌ ಕುರಿತು ಸರ್ಚ್‌ ಮಾಡುವ ಆಪ್‌ ಆಗಿದ್ದು, ಸೌಂಡ್‌ ಅನ್ನು ಗ್ರಹಸಿ ಮ್ಯೂಸಿಕ್‌ನ ಮಾಹಿತಿ ನೀಡುತ್ತದೆ. ಶಾಜಮ್ ಆಪ್‌ ಥರ್ಡ್‌ ಪಾರ್ಟಿ ಆಪ್‌ ಆಗಿದ್ದು, ಆಂಡ್ರಾಯ್ಡ್‌ ಮತ್ತು ಆಪಲ್‌ನ ಐಓಎಸ್‌ ಮಾದರಿಯ ಎರಡು ಡಿವೈಸ್‌ಗಳಲ್ಲಿಯೂ ಬೆಂಬಲ ನೀಡಲಿದೆ. ಸರಳ ಆಯ್ಕೆಗಳನ್ನು ನೀಡಲಾಗಿದ್ದು, ಸರ್ಚ್ ಮಾಡುವುದು ಸುಲಭ ಎನಿಸಲಿದೆ.

ಸೌಂಡ್‌ಹೌಂಡ್‌ (SoundHound)

ಸೌಂಡ್‌ಹೌಂಡ್‌ (SoundHound)

ಸೌಂಡ್‌ಹೌಂಡ್‌ ಆಪ್‌ ಸಹ ಮ್ಯೂಸಿಕ್ ಟ್ರಾಕ್‌ ಫೈಂಡ್‌ಔಟ್‌ ಮಾಡುವ ಅತ್ಯುತ್ತಮ ಆಪ್‌ ಆಗಿದ್ದು, ಇದು ಸಹ ಸಾಂಗಿನ ಸೌಂಡ್‌ ಅನ್ನು ಗ್ರಹಿಸಿ, ಆ ಸಾಂಗ್‌ನ ಪೂರ್ಣ ಮಾಹಿತಿ ಒದಗಿಸುತ್ತದೆ. ಆದರೆ ಇದು ಕೇವಲ ಐಓಎಸ್‌ ಮಾದರಿ ಡಿವೈಸ್‌ಗಳಿಗೆ ಮಾತ್ರ ಬೆಂಬಲ ನೀಡಲಿದೆ. ಹೀಗಾಗಿ ಆಂಡ್ರಾಯ್ಡ್‌ ಓಎಸ್‌ ಬಳಕೆದಾರರಿಗೆ ಈ ಥರ್ಡ್‌ಪಾರ್ಟಿ ಆಪ್‌ ಅಲಭ್ಯ.

ಓದಿರಿ : ನಿಮ್ಮ ಮಕ್ಕಳು ಸ್ಮಾರ್ಟ್‌ಫೋನ್‌ಗೆ ಅಡಿಕ್ಟ್‌ ಆಗದಿರಲು ಈ ಟಿಪ್ಸ್ ಅನುಸರಿಸಿ! ಓದಿರಿ : ನಿಮ್ಮ ಮಕ್ಕಳು ಸ್ಮಾರ್ಟ್‌ಫೋನ್‌ಗೆ ಅಡಿಕ್ಟ್‌ ಆಗದಿರಲು ಈ ಟಿಪ್ಸ್ ಅನುಸರಿಸಿ!

Best Mobiles in India

English summary
Instantly identify a song name and band. We show you the easy way to use Siri and Google Assistant to name that tune in one. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X