Subscribe to Gizbot

ಆಂಡ್ರಾಯ್ಡ್‌ ಫೋನ್‌ನಲ್ಲಿ RAM ಹೆಚ್ಚಿಸುವುದು ಹೇಗೆ?

Written By:

ಫೋನ್‌ ಹ್ಯಾಂಗ್‌ ಆಗ್ತಿದೆ. ಕಾರಣ ಏನು? ಗೊತ್ತಿಲ್ಲಾ. ಹಾ.. ಸರ್ವೀಸ್‌ಗೆ ಕೊಟ್ರೆ ಒಳ್ಳೇದು. ಬೇಗ ರೆಡಿ ಮಾಡಿಕೊಡ್ತಾರೆ. ಈ ಅಲೋಚನೆಗಳೆಲ್ಲಾ ಫೋನ್‌ ಹ್ಯಾಂಗ್‌ ಆಗೋಕೆ, ಹಾಗೂ ಬೇಗ ಆಪರೇಟ್‌ ಆಗದಿದ್ದಾಗ ಬರುವುದು ಸಹಜ ಆದ್ರೆ ಫೋನ್‌ ಹ್ಯಾಂಗ್ ಆಗೋಕೆ ವಾಸ್ತವ ಕಾರಣ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿನ ಅಧಿಕವಾದ ಅಪ್ಲಿಕೇಶನ್‌ಗಳು, ಜಂಕ್‌ ಫೈಲ್‌ಗಳು, ಗೇಮ್‌ಳು ಹಾಗೂ ಇವೆಲ್ಲವುಗಳಿಂದ ಕಡಿಮೆ ಆದ RAM ಸ್ಪೇಸ್‌. ಹೌದು, ಚೆನ್ನಾಗಿರುವ ನಿಮ್ಮ ಸ್ಮಾರ್ಟ್‌ಫೋನ್‌ ಹ್ಯಾಂಗ್‌ ಆಗಿ ನಿಮ್ಮ ಸ್ಮಾರ್ಟ್‌ಫೋನ್‌ ರಿಪೇರಿಗೆ ಕೊಡುವುದು ಇದೇ ಕಾರಣದಿಂದ. ಆದರೆ ಇಂದಿನ ಲೇಖನದಲ್ಲಿ ಗಿಜ್‌ಬಾಟ್‌ ತಿಳಿಸುವ ಸರಳ ವಿಧಾನಗಳಿಂದ ನಿಮ್ಮ RAM ಸ್ಪೇಸ್‌ ಹೆಚ್ಚಿಸಿ ಸ್ಮಾರ್ಟ್‌ಫೋನ್‌ ಹ್ಯಾಂಗ್ ಮತ್ತು ನಿಧಾನದ ಕಾರ್ಯಾಚರಣೆ ಸಮಸ್ಯೆ ಪರಿಹರಿಸಿಕೊಳ್ಳಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅಗತ್ಯಾಂಶಗಳು

RAM ಹೆಚ್ಚಿಸಿಕೊಳ್ಳುವುದು ಹೇಗೆ?

* SD ಕಾರ್ಡ್‌ (4GB ಅಥವಾ ಹೆಚ್ಚಿನದು)
* ರೂಟೆಡ್‌ ಸ್ಮಾರ್ಟ್‌ಫೋನ್‌ ಅಥವಾ ರೂಟೆಡ್‌ ಟ್ಯಾಬ್ಲೆಟ್‌ (ಆಂಡ್ರಾಯ್ಡ್‌ ರೂಟ್‌)
* ವಿಂಡೋಸ್‌ ಪಿಸಿ
* SD ಕಾರ್ಡ್‌ ರೀಡರ್

ಹಂತ 1

RAM ಹೆಚ್ಚಿಸಿಕೊಳ್ಳುವುದು ಹೇಗೆ?

RAM ಹೆಚ್ಚಿಸಲು ಮೊದಲು ನೀವು ಕಂಪ್ಯೂಟರ್‌ಗೆ Mini tool Partition ಸಾಫ್ಟ್‌ವೇರ್‌ ಅನ್ನು ಡೌನ್‌ಲೋಡ್‌ ಮಾಡಿ ಇನ್‌ಸ್ಟಾಲ್‌ ಮಾಡಿ. ನಂತರ ಕಾರ್ಡ್‌ ರೀಡರ್‌ ಮುಖಾಂತರ ನಿಮ್ಮ SD ಕಾರ್ಡ್‌ ಅನ್ನು ಕಂಪ್ಯೂಟರ್‌ಗೆ ಸಂಪರ್ಕಿಸಿ.

ಹಂತ 2

RAM ಹೆಚ್ಚಿಸಿಕೊಳ್ಳುವುದು ಹೇಗೆ?

Mini tool Partition ಸಾಫ್ಟ್‌ವೇರ್‌ ಅನ್ನು ಓಪನ್‌ ಮಾಡಿದಾಗ ವಿಜಾರ್ಡ್‌ ಓಪನ್‌ ಆಗುತ್ತದೆ. ಅಲ್ಲಿ ನಿಮ್ಮ SD ಕಾರ್ಡ್‌ ಮೇಲೆ ಕ್ಲಿಕ್‌ ಮಾಡಿ ಬಲಭಾಗದ ಬಟನ್‌ ಕ್ಲಿಕ್‌ ಮಾಡಿ Delete ಆಯ್ಕೆ ಮಾಡಿ. SD ಕಾರ್ಡ್‌ ಸಂಪೂರ್ಣ ಫಾರ್ಮ್ಯಾಟ್‌ ಆಗುತ್ತದೆ. ಮುಂದಿನ ಹಂತಕ್ಕೆ ಮೊದಲು ಬ್ಯಾಕಪ್‌ ಸೆಟ್ಟಿಂಗ್‌ ಚೆಕ್‌ ಮಾಡಿಕೊಳ್ಳಿರಿ.

ಹಂತ 3

RAM ಹೆಚ್ಚಿಸಿಕೊಳ್ಳುವುದು ಹೇಗೆ?

SD ಕಾರ್ಡ್‌ ಫಾರ್ಮ್ಯಾಟ್‌ ಆದಮೇಲೆ SD ಕಾರ್ಡ್‌ ಮೇಲೆ ಕರ್ಸರ್‌ ಇಟ್ಟು ಬಲಭಾಗದ ಮೌಸ್‌ ಬಟನ್‌ ಕ್ಲಿಕ್ ಮಾಡಿ "Make" ಆಪ್ಶನ್‌ ಆಯ್ಕೆ ಮಾಡಿ. ನಂತರ ಓಪನ್‌ ಆದ ವಿಜಾರ್ಡ್‌ನಲ್ಲಿ File system ಎಂಬಲ್ಲಿ FAT32 ಎಂದು ಆಯ್ಕೆ ಮಾಡಿ

ಹಂತ 4

RAM ಹೆಚ್ಚಿಸಿಕೊಳ್ಳುವುದು ಹೇಗೆ?

ಸ್ಪೇಸ್‌ ಆಗಿ ನೀವೆ ಆಯ್ಕೆ ಮಾಡಿ ನಂತರದ ವಿಭಜನೆಗಾಗಿ DONE ಎಂದು ನೀಡಿ. ಮತ್ತೆ Make ಆಪ್ಶನ್‌ ಆಯ್ಕೆ ಮಾಡಿ. Ext2, Ext3 or Ext4 ಫೈಲ್‌ ಸಿಸ್ಟಮ್‌ ಅನ್ನು ಈ ರೀತಿಯಲ್ಲಿ ಬದಲಿಸಿ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಆಂಡ್ರಾಯ್ಡ್ ಫೋನ್‌ನಲ್ಲಿ ಫೋಟೋ ಡಿಲೀಟ್ ಆಗಿದೆಯೇ? ಇಲ್ಲಿದೆ ಟಿಪ್ಸ್

ವೋಡಾಫೋನ್ ಬಳಕೆದಾರರು ಉಚಿತ ಇಂಟರ್ನೆಟ್‌ ಬಳಸುವುದು ಹೇಗೆ?

ಭಾರತದಾದ್ಯಂತ ಬಿಎಸ್‌ಎನ್‌ಎಲ್‌ ಉಚಿತ ಇಂಟರ್ನೆಟ್‌ ಬಳಕೆ ಹೇಗೆ?

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ನಿರಂತರ ಟೆಕ್ನಾಲಜಿ ಕುರಿತ ಲೇಖನಗಳಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌, ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
How To Increase RAM On Your Android Smartphone. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot