ಲ್ಯಾಪ್‌ಟಾಪ್‌ಗೆ ಬ್ಲೂಟೂತ್ ಮೌಸ್ ಅಳವಡಿಸುವುದು ಹೇಗೆ?

ಇದರ ಹೊರತಾಗಿಯೂ ಇಂದು ಬ್ಲೂಟೂತ್ ಮೌಸ್ ಕೂಡಾ ಸಾಕಷ್ಟು ಚಲಾವಣೆಯಲ್ಲಿದೆ. ಆದರೆ ಬ್ಲೂಟೂತ್ ಮೌಸ್ ಮೊದಲ ಬಾರಿಗೆ ಬಳಸುವ ಮುನ್ನ ಅದನ್ನು ನಿಮ್ಮ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ಗೆ ಇನ್ಸ್ಟಾಲ್ ಮಾಡಬೇಕಾಗುತ್ತದೆ. ಅದಕ್ಕಾಗಿಯೆ ಇಂದು ಗಿಜ್ಬಾಟ್ ಬ್ಲೂಟೂತ್ ಮೌಸ್ ಅಳವಡಿಸುವುದು ಹೇಗೆ? ಎಂಬುದನ್ನು ತಂದಿದೆ ಓದಿ ನೋಡಿ.
- ಬ್ಲೂಟೂತ್ ಮೌಸ್ ನಿಮ್ಮ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ಗೆ ಅಳವಡಿಸುವ ಮುನ್ನ ಡಿವೈಸ್‌ನ ಬ್ಲೂಟೂತ್ ಆನ್ ಆಗಿದೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
- ಬ್ಲೂಟೂತ್ ಡಿವೈಜ್ ಬಳಸುವ ಮುನ್ನ ನಿಮ್ಮ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಬ್ಲೂಟೂತ್ ಸೌಲಭ್ಯವಿದೆಯೇ ಎಂದು ಪರೀಕ್ಷಿಸಿಕೊಳ್ಳಿ.
- ಇನ್ಸಟಾಲ್ ಮಾಡಲು ಮೊದಲಿಗೆ ಸ್ಟಾರ್ಟ್ ಮೆನ್ಯು ಬಟನ್ ಮೇಲೆ ಕ್ಲಿಕ್ ಮಾಡಿ.
- ಮೆನಗಯ ಮೇಲೆ ಕ್ಲಿಕ್ ಮಾಡುತ್ತಿದ್ದ ಹಾಗೆಯೇ ಪ್ರೊಗ್ರಾಮ್ ಆಪ್ಷನ್ ಕಾಣಿಸುತ್ತದೆ ಅದರಲ್ಲಿ ಸಾಫ್ಟವೇರ್ ಆಫ್ಷನ್ ಇರುತ್ತದೆ.
- ಸಾಫ್ಷವೇರ್ ಸೆಟಪ್ ಆಪ್ಷನ್ ತಲುಪಿ ಎನೇಬಲ್ ಡ್ರೈವರ್ ಅಥವಾ ಸಾಫ್ಟವೇರ್ ಅಪ್ಲಿಕೇಷನ್ ಬಾಕ್ಸ ಮೇಲೆ ಕ್ಲಿಕ್ ಮಾಡಿ.
- ಬಾಕ್ಸ್‌ನಲ್ಲಿ ಬ್ಲೂಟೂತ್ ಆಪ್ಷನ್ ಎನೇಬಲ್ ಆಪ್ಷನ್ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
- ನೆಟ್ವರ್ಕ್ ಆಪ್ಷನ್ ಕೇಳಿದಲ್ಲಿ ನೆಟ್ವರ್ಕ್ ಆಪ್ಷನ್ ಆಯ್ಕೆ ಮಾಡಿಕೊಂಡು ಫಿನಿಷ್ ಮಾಡಿ.
ಈಗ ನಿಮ್ಮ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಬ್ಲೂಟೂತ್ ಮೌಸ್ ಸಂಪೂರ್ಣವಾಗಿ ಅಳವಡಿಸಲಾಗಿದ್ದು ವೈರ್‌ಲೆಸ್ ಮೌಸ್‌ನ ಆನಂದ ಪಡೆಯಬಹುದಾಗಿದೆ.
ಒಂದೇ ಬ್ರೌಸರ್‌ನಲ್ಲಿ ಎರಡು ಮೇಲ್ ಖಾತೆ ತೆರೆಯುವುದು ಹೇಗೆ?
Comments
Best Mobiles in India


Click it and Unblock the Notifications








