ನೀವು ಏರ್‌ಟೆಲ್‌ ಗ್ರಾಹಕರೇ?..ಮೊಬೈಲ್‌ ನಂಬರ್ ಮರೆತ್ತಿದ್ದಿರಾ?..ಹೀಗೆ ಮಾಡಿ!

|

ದೇಶದ ಪ್ರಮುಖ ಟೆಲಿಕಾಂಗಳ ಪೈಕಿ ಭಾರ್ತಿ ಏರ್‌ಟೆಲ್ ಸಹ ಒಂದಾಗಿದೆ. ಏರ್‌ಟೆಲ್‌ ತನ್ನ ಗ್ರಾಹಕರಿಗಾಗಿ ಹಲವು ಆಕರ್ಷಕ ಪ್ರಯೋಜನಗಳ ಪ್ರಿಪೇಯ್ಡ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಇನ್ನು ಕೆಲವು ಬಳಕೆದಾರರು ಎರಡು ಸಿಮ್ ಬಳಕೆ ಮಾಡುತ್ತಿರುತ್ತಾರೆ. ಕೆಲವು ಬಾರಿ ಬಳಕೆದಾರರು ವಿರಳವಾಗಿ ಬಳಸುವ ಎರಡನೇ ಸಿಮ್‌ ನಂಬರ್ ಅನ್ನು ಮರೆತಿರುತ್ತಾರೆ. ಇಂತಹ ಸಂದರ್ಭದಲ್ಲಿ ಮೊಬೈಲ್ ಸಂಖ್ಯೆ ತಿಳಿಯಲು ಗೊಂದಲಕ್ಕಿಡಾಗುತ್ತಾರೆ.

ಸಂಪರ್ಕ

ಹೌದು, ಕೆಲವೊಮ್ಮೆ ಬಳಕೆದಾರರಿಗೆ ಮೊಬೈಲ್‌ ಸಂಖ್ಯೆ ನೆನಪಿಗೆ ಬರುವುದಿಲ್ಲ. ಕರೆ ಮಾಡಿ ತಿಳಿಯಲು ರೀಚಾರ್ಜ್ ಸಹ ಮಾಡಿರುವುದಿಲ್ಲ. ಈ ರೀತಿ ಸಂದರ್ಭದಲ್ಲಿ ಬಳಕೆದಾರರು ಇಂಟರ್ನೆಟ್‌ಗೆ ಸಂಪರ್ಕ ಹೊಂದಿದ್ದರೆ, ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಬಳಸಿ ಸಂಖ್ಯೆಯನ್ನು ಕಂಡುಹಿಡಿಯಬಹುದು. ಇಲ್ಲವೇ ಪರ್ಯಾಯವಾಗಿ, ನಿರ್ದಿಷ್ಟ ಕೋಡ್ ಅನ್ನು ಡಯಲ್ ಮಾಡುವುದನ್ನು ಒಳಗೊಂಡಿರುವ USSD ಕೋಡ್‌ಗಳನ್ನು ನೀವು ಬಳಸಬಹುದು. ಹಾಗೆಯೇ USSD ಕೋಡ್‌ಗಳ ಮೂಲಕ ಬ್ಯಾಲೆನ್ಸ್, ಡೇಟಾ, ವ್ಯಾಲಿಡಿಟಿ ಮತ್ತು ಇತರೆ ಪ್ರಯೋಜನಗಳ ಮಾಹಿತಿ ಸಹ ಪರಿಶೀಲಿಸಬಹುದು. ಹಾಗಾದರೇ ಏರ್‌ಟೆಲ್‌ ಸಂಖ್ಯೆ ಮತ್ತು ಬ್ಯಾಲೆನ್ಸ್‌ ತಿಳಿಯುವುದು ಹೇಗೆ ಎನ್ನುವ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

USSD ಕೋಡ್ ಬಳಸಿ ಏರ್‌ಟೆಲ್ ಮೊಬೈಲ್ ಸಂಖ್ಯೆ ತಿಳಿಯಲು ಹೀಗೆ ಮಾಡಿ

USSD ಕೋಡ್ ಬಳಸಿ ಏರ್‌ಟೆಲ್ ಮೊಬೈಲ್ ಸಂಖ್ಯೆ ತಿಳಿಯಲು ಹೀಗೆ ಮಾಡಿ

- ಫೋನ್‌ ಆಪ್ ತೆರೆಯಿರಿ ಮತ್ತು ಡಯಲರ್‌ಗೆ ಹೋಗಿ.
- ಬಳಿಕ *129*9#, *121*1# ಅಥವಾ *282# ಅನ್ನು ಡಯಲ್ ಮಾಡಿ.
- ನಂತರ ಫೋನ್‌ನ ಸ್ಕ್ರೀನ್‌ನ ಮೇಲೆ ಏರ್‌ಟೆಲ್ ಮೊಬೈಲ್ ಸಂಖ್ಯೆಯನ್ನು ತೋರಿಸುವ ಪಾಪ್ಅ ಪ್ ಸಂದೇಶವನ್ನು ಸ್ವೀಕರಿಸುತ್ತೀರಿ.
- ಅಥವಾ ಗ್ರಾಹಕರು ಏರ್‌ಟೆಲ್ ಕಸ್ಟಮರ್ ಕೇರ್ ದೊಂದಿಗೆ ಮಾತನಾಡಲು 121 ಅಥವಾ 198 ಗೆ ಕರೆ ಮಾಡಬಹುದು.

ಆನ್‌ಲೈನ್‌ ಮೂಲಕ ನಿಮ್ಮ ಏರ್‌ಟೆಲ್ ಮೊಬೈಲ್ ಸಂಖ್ಯೆ ತಿಳಿಯಲು ಹೀಗೆ ಮಾಡಿರಿ:

ಆನ್‌ಲೈನ್‌ ಮೂಲಕ ನಿಮ್ಮ ಏರ್‌ಟೆಲ್ ಮೊಬೈಲ್ ಸಂಖ್ಯೆ ತಿಳಿಯಲು ಹೀಗೆ ಮಾಡಿರಿ:

ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಮೂಲಕ ನಿಮ್ಮ ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಲು ಏರ್‌ಟೆಲ್ ನಿಮಗೆ ಅನುಮತಿಸುತ್ತದೆ. ನೀವು ಮಾಡಬೇಕಾಗಿರುವುದು ಈ ಹಂತ ಗಳನ್ನು ಅನುಸರಿಸಿ:


* ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್‌ನಿಂದ ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ.
* ಡೌನ್‌ಲೋಡ್ ಅಪ್ಲಿಕೇಶನ್ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇನ್‌ಸ್ಟಾಲ್ ಮಾಡಿ.
* ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ತೆರೆಯಿರಿ ಮತ್ತು ಲಾಗ್ ಇನ್ ಮಾಡಿ.
* ಸ್ಕ್ರೀನ್ ಮೇಲ್ಭಾಗದಲ್ಲಿ ನಿಮ್ಮ ಏರ್‌ಟೆಲ್ ಮೊಬೈಲ್ ಸಂಖ್ಯೆಯನ್ನು ವೀಕ್ಷಿಸಲು ನಿಮಗೆ ಸಾಧ್ಯವಾಗುತ್ತದೆ.

ಸಂಖ್ಯೆಗೆ

ಹಾಗೆಯೇ ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಬ್ಯಾಲೆನ್ಸ್, ವ್ಯಾಲಿಡಿಟಿ, ಡೇಟಾ ಬಳಕೆ ಮತ್ತು ಎಸ್‌ಎಮ್‌ಎಸ್‌ ಸೇರಿದಂತೆ ನಿಮ್ಮ ಮೊಬೈಲ್ ಸಂಖ್ಯೆಗೆ ಸಂಬಂಧಿಸಿದ ಎಲ್ಲಾ ಮಾಹಿತಿ ಯನ್ನು ತೋರಿಸುತ್ತದೆ. ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್‌ನಿಂದ ನೇರವಾಗಿ ರೀಚಾರ್ಜ್ ಮಾಡಬಹುದು. ಏರ್‌ಟೆಲ್‌ ಕೆಲವು ಹೆಚ್ಚುವರಿ ಕೊಡುಗೆಗಳನ್ನು ಸಹ ಒದಗಿಸುತ್ತದೆ.

ಕಸ್ಟಮರ್ ಕೇರ್ ಮೂಲಕ ನಿಮ್ಮ ಏರ್‌ಟೆಲ್ ಮೊಬೈಲ್ ಸಂಖ್ಯೆಯನ್ನು ತಿಳಿಯುವುದು ಹೇಗೆ?

ಕಸ್ಟಮರ್ ಕೇರ್ ಮೂಲಕ ನಿಮ್ಮ ಏರ್‌ಟೆಲ್ ಮೊಬೈಲ್ ಸಂಖ್ಯೆಯನ್ನು ತಿಳಿಯುವುದು ಹೇಗೆ?

ಗ್ರಾಹಕರು ತಮ್ಮ ಏರ್‌ಟೆಲ್ ಮೊಬೈಲ್ ಸಂಖ್ಯೆ ಯನ್ನು ಕಸ್ಟಮರ್ ಕೇರ್ ಸಂಖ್ಯೆಗೆ ಕರೆ ಮಾಡುವ ಮೂಲಕ ಪರಿಶೀಲಿಸಬಹುದು. ಬಳಕೆದಾರರು ತಮ್ಮ ನೋಂದಾಯಿತ ಏರ್‌ಟೆಲ್ ಮೊಬೈಲ್ ಸಂಖ್ಯೆಯಿಂದ 121 ಅಥವಾ 198 ಅನ್ನು ಡಯಲ್ ಮಾಡಬಹುದು ಮತ್ತು ಮೊಬೈಲ್ ಸಂಖ್ಯೆಯನ್ನು ಅದರ ಬ್ಯಾಲೆನ್ಸ್ ಮತ್ತು ಸಿಂಧುತ್ವ ದೊಂದಿಗೆ ತಿಳಿಯಲು ಸೂಚನೆಗಳನ್ನು ಅನುಸರಿಸಬಹುದು.

Best Mobiles in India

English summary
How to Know Your Airtel Mobile Number Through USSD Code and Airtel Thanks App.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X