1 ಇನ್‌ಸ್ಟಗ್ರಾಂ ಆಪ್‌ನಲ್ಲಿ ಹಲವು ಖಾತೆಗಳ ನಿರ್ವಹಣೆ ಹೇಗೆ?

By Suneel
|

ಸಿಂಪಲ್‌ಲ್ಲಾಗಿ ಒಂದ್ ಫಿಲ್ಟರ್‌ ಆಧಾರಿತ ಫೋಟೋ ಶೇರಿಂಗ್‌ ಆಪ್‌ ಸ್ಟಾರ್ಟ್‌ ಮಾಡೋದು ಕಷ್ಟವೇನಲ್ಲ. ಯಾಕಂದ್ರೆ ಈಗಾಗಲೇ ಪ್ರಖ್ಯಾತವಾಗಿರೋ ಇನ್‌ಸ್ಟಗ್ರಾಂ ವೇದಿಕೆ ಇದೆ. ಅಂದಹಾಗೆ ಸಣ್ಣ ಸಣ್ಣ ಉದ್ಯಮಗಳು ಸಹ ತಮ್ಮ ಪ್ರಾಡಕ್ಟ್‌ಗಳನ್ನು ಶೇರ್‌ ಮಾಡಲು ಇನ್‌ಸ್ಟಗ್ರಾಂ ಅನ್ನು ಬಳಸುತ್ತಾರೆ. ಅಂದಹಾಗೆ ಉತ್ತಮ ಫೋಟೋಗಳ ಗ್ಯಾಲರಿಗಾಗಿ ಇಂದು ಫೋಟೋಗ್ರಾಫರ್‌ಗಳು, ಫೋಟೋ ಪ್ರಿಯರು ಇನ್‌ಸ್ಟಗ್ರಾಂ ಅನ್ನು ಬಳಸುತ್ತಾರೆ.

ಯಾರು ತಮ್ಮ ಫ್ರೊಫೆಶನಲ್‌ ಬೆಳವಣಿಗೆಗಾಗಿ ಇನ್‌ಸ್ಟಗ್ರಾಂ ಅನ್ನು ಬಳಸುತ್ತಾರೋ , ಅವರು ಅಗತ್ಯವಾಗಿ ಪತ್ರ್ಯೇಕ ಇನ್‌ಸ್ಟಗ್ರಾಂ ಖಾತೆಯನ್ನು ಮೇನ್‌ಟೈನ್‌ ಮಾಡುವುದು ಉತ್ತಮ. ಅಂದ್ರೆ ಹಲವು ಇನ್‌ಸ್ಟಗ್ರಾಂ ಖಾತೆ ಬಳಸಬೇಕು.

ಇನ್‌ಸ್ಟಗ್ರಾಂ ಕಂಪನಿ ಈ ವರ್ಷದಲ್ಲಿ ತನ್ನ ಆಪ್‌ಗೆ ಹೊಸ ಫೀಚರ್‌ ಅನ್ನು ಬಿಡುಗಡೆ ಮಾಡಿತು. ಆ ವಿಶೇಷ ಫೀಚರ್ ಎಂದರೆ ಇನ್‌ಸ್ಟಗ್ರಾಂನ ಒಂದು ಆಪ್‌ಗೆ 5 ಖಾತೆಗಳನ್ನು ಆಡ್‌ ಮಾಡಬಹುದಾಗಿದೆ. ಆಂಡ್ರಾಯ್ಡ್ ಮತ್ತು ಐಓಎಸ್‌ನ ಒಂದು ಆಪ್‌ನಲ್ಲಿಯೇ 5 ಖಾತೆಗಳನ್ನು ಆಡ್‌ ಮಾಡಬಹುದಾಗಿದೆ.

ಒಂದೇ ಡಿವೈಸ್‌ನಲ್ಲಿ ಹಲವು ಇನ್‌ಸ್ಟಗ್ರಾಂ ಖಾತೆಗಳನ್ನು ನಿರ್ವಹಣೆ ಮಾಡಬೇಕೆ, ಹಾಗಿದ್ದಲ್ಲಿ ಹೇಗೆ ಎಂದು ಲೇಖನದ ಸ್ಲೈಡರ್‌ ಓದಿ ತಿಳಿಯಿರಿ.

ಐಫೋನ್ ಕ್ಯಾಮೆರಾ ಮತ್ತು ಫ್ಲ್ಯಾಶ್‌ ನಡುವಿನ ಸಣ್ಣ ಬ್ಲಾಕ್‌ ಹೋಲ್‌ ರಹಸ್ಯ ಇಲ್ಲಿದೆ

ಹಂತ 1

ಹಂತ 1

ನಿಮ್ಮ ಇನ್‌ಸ್ಟಗ್ರಾಂ ಪ್ರೊಫೈಲ್‌ನಲ್ಲಿ ಮೇಲ್ಭಾಗದಲ್ಲಿ ಸೆಟ್ಟಿಂಗ್ಸ್‌ ಅನ್ನು ಟ್ಯಾಪ್‌ ಮಾಡಿ.

ಹಂತ 2

ಹಂತ 2

ಸ್ಕ್ರಾಲ್‌ ಡೌನ್‌ ಮಾಡಿ "Add account' ಆಯ್ಕೆ ಮಾಡಿ.

ಹಂತ 3

ಹಂತ 3

ಆಡ್‌ ಮಾಡಲು ಬಯಸುವ ಖಾತೆಯ ಹೆಸರು ಮತ್ತು ಪಾಸ್‌ವರ್ಡ್‌ ಅನ್ನು ನೀಡಿ.

ಹಂತ 4

ಹಂತ 4

ನಿಮ್ಮ ಇನ್‌ಸ್ಟಗ್ರಾಂ ಖಾತೆಗೆ ಲಾಗಿನ್‌ ಆದ ನಂತರ ಫ್ರೊಫೈಲ್‌ ಐಕಾನ್ ಇನ್‌ಸ್ಟಗ್ರಾಂ ಫ್ರೊಫೈಲ್ ಫೋಟೋ ಬದಲಾಗಿ ಬರುತ್ತದೆ. ಇದು ನೀವು ಇನ್ನೊಂದು ಇನ್‌ಸ್ಟಗ್ರಾಂ ಖಾತೆಯನ್ನು ಆಡ್‌ ಮಾಡಿರುವುದನ್ನು ಸೂಚಿಸುತ್ತದೆ.

ಹಂತ 5

ಹಂತ 5

ನೀವು ಖಾತೆಯನ್ನು ಚೇಂಜ್‌ ಮಾಡಲು ಬಯಸಿದಲ್ಲಿ ಪ್ರೊಫೈಲ್‌ಗೆ ಹೋಗಿ ಟಾಪ್‌ನಲ್ಲಿ ಟ್ಯಾಪ್‌ ಮಾಡಿ. ನಂತರ ಆಪ್‌ನಲ್ಲಿ ನೀವು ಆಡ್‌ ಮಾಡಿರುವ ಎಲ್ಲಾ ಖಾತೆಗಳ ಲೀಸ್ಟ್‌ ಓಪನ್‌ ಆಗುತ್ತದೆ. ಈಗ ನೀವು ಸುಲಭವಾಗಿ ಇತರೆ ಖಾತೆಗಳಿಗೆ ಟ್ಯಾಪ್ ಮಾಡುವ ಮುಖಾಂತರ ಲಾಗಿನ್‌ ಆಗಬಹುದು. ಪ್ರತಿಯೊಂದು ಖಾತೆಗಳ ನೋಟಿಫಿಕೇಶನ್‌ ನೋಡಲು ಪ್ರೊಫೈಲ್ ಪೇಜ್‌ಗೆ ಹೋಗಿ ಖಾತೆಯ ಹೆಸರನ್ನು ಸೆಲೆಕ್ಟ್‌ ಮಾಡಿ.

ಹಂತ 6

ಹಂತ 6

ನಿಮ್ಮ ಮೈಂಡ್‌ ಸೆಟ್‌ ಚೇಂಜ್‌ ಆಗಿ ಹೆಚ್ಚಾಗಿ ಆಡ್‌ ಮಾಡಿದ ಖಾತೆಗಳನ್ನು ರಿಮೂವ್‌ ಮಾಡಬೇಕು ಎನಿಸಿದರೆ, ಮೊದಲು ರಿಮೂವ್‌ ಮಾಡಬೇಕು ಎನಿಸಿದ ಪ್ರೊಫೈಲ್‌ ಸೆಲೆಕ್ಟ್ ಮಾಡಿ. ನಂತರ ಸೆಟ್ಟಿಂಗ್‌ಗೆ ಹೋಗಿ ಲಾಗ್‌ ಔಟ್‌ ಮಾಡಿ. ರಿಮೂವ್‌ ಫೀಚರ್ ಪ್ರದರ್ಶನವಾದಾಗ ಅದನ್ನು ಟ್ಯಾಪ್‌ ಮಾಡಿ.

ಗಿಜ್‌ಬಾಟ್‌

ಗಿಜ್‌ಬಾಟ್‌

ವಾಟ್ಸಾಪ್ ಫೇಸ್‌ಬುಕ್‌ಗೆ ವೈಯಕ್ತಿಕ ಮಾಹಿತಿ ಶೇರ್‌ ಸ್ಟಾಪ್ ಹೇಗೆ?ವಾಟ್ಸಾಪ್ ಫೇಸ್‌ಬುಕ್‌ಗೆ ವೈಯಕ್ತಿಕ ಮಾಹಿತಿ ಶೇರ್‌ ಸ್ಟಾಪ್ ಹೇಗೆ?

ಐಫೋನ್‌ಗೆ ಡುಪ್ಲಿಕೇಟ್‌ ಚಾರ್ಜರ್ ಬಳಸಿದಲ್ಲಿ ಆಗುವ ಅನಾಹುತಗಳು ಏನು ಗೊತ್ತೇ?ಐಫೋನ್‌ಗೆ ಡುಪ್ಲಿಕೇಟ್‌ ಚಾರ್ಜರ್ ಬಳಸಿದಲ್ಲಿ ಆಗುವ ಅನಾಹುತಗಳು ಏನು ಗೊತ್ತೇ?

Best Mobiles in India

English summary
How to manage multiple accounts on Instagram. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X