ಆನ್‌ಲೈನ್‌ನಲ್ಲಿ ಸುಲಭವಾಗಿ LIC ಇನ್ಶೂರೆನ್ಸ್‍ ಕಂತು ಪಾವತಿಸಲು ಹೀಗೆ ಮಾಡಿ!

|

ಕೊರೊನಾ ಎರಡನೇ ಅಲೆ ಅಬ್ಬರ ಹೆಚ್ಚಿದ್ದು, ಅದರ ನಿಯಂತ್ರಣಕ್ಕಾಗಿ ಸರ್ಕಾರ ಲಾಕ್‌ಡೌನ್ ಜಾರಿ ಮಾಡಿದೆ. ಲಾಕ್‌ಡೌನ್‌ ಇರುವುದರಿಂದ ಜನರು ಆನ್‌ಲೈನ್‌ನಲ್ಲಿಯೇ ಬಿಲ್ ಪಾವತಿಗಳು, ರೀಚಾರ್ಜ್‌ ಗಳನ್ನು ಮಾಡುತ್ತಿದ್ದಾರೆ. ಹಾಗೆಯೇ ಜೀವ ವಿಮೆ ಇನ್ಶೂರೆನ್ಸ್‍ ಪಾಲಿಸಿಗಳ ಪ್ರೀಮಿಯಂ ಕಂತುಗಳನ್ನು ಸಹ ಆನ್‌ಲೈನ್‌ನಲ್ಲಿ ಪಾವತಿ ಮಾಡಬಹುದಾಗಿದ್ದು, ಹೀಗಾಗಿ ಪಾಲಸಿದಾರರು ಕಛೇರಿಗೆ ಹೋಗುವ ಅಗತ್ಯವಿಲ್ಲ. ನೇರವಾಗಿ ವಿಮಾ ಕಂಪನಿಯ ಅಧಿಕೃತ ವೆಬ್‌ಸೈಟ್‌ ಮೂಲಕ ಇಲ್ಲವೇ ಯುಪಿಐ ಆಪ್‌ಗಳ ಮೂಲಕ ಪೇಮೆಂಟ್ ಮಾಡಬಹುದಾಗಿದೆ.

ಮೊಬೈಲ್

ಪ್ರಸ್ತುತ, ಫೋನ್‌ಪೇ ಮತ್ತು ಗೂಗಲ್‌ ಪೇ ಅಪ್ಲಿಕೇಶನ್‌ಗಳು ಲೀಡಿಂಗ್‌ನಲ್ಲಿ ಇರುವ ಯುಪಿಐ ಪೇಮೆಂಟ್‌ ಆಪ್‌ಗಳಾಗಿ ಗುರುತಿಸಿಕೊಂಡಿವೆ. ಈ ಆಪ್‌ಗಳ ಮೂಲಕ ವಿದ್ಯುತ್ ಬಿಲ್, ನೀರಿನ ಬಿಲ್, ಮೊಬೈಲ್ ರೀಚಾರ್ಜ್, ಡಿಟಿಎಚ್‌ ರೀಚಾರ್ಜ್ ಸೇರಿದಂತೆ ಇನ್ನು ಹಲವು ಅಗತ್ಯ ಸೇವೆಗಳನ್ನು ನಡೆಸಬಹುದಾಗಿದೆ. ಇದರೊಂದಿಗೆ ಇನ್ಶೂರೆನ್ಸ ಪಾವತಿ ಮಾಡುವ ಸೇವೆಯನ್ನು ಹೊಂದಿವೆ. ಹೀಗಾಗಿ ಎಲ್‌ಐಸಿ ಸೇರಿದಂತೆ ಇತರೆ ಜೀವ ವಿಮಾ ಪಾಲಸಿದಾರರು ಪ್ರೀಮಿಯಂ ಕಂತುಗಳನ್ನು ಈ ಆಪ್‌ ಮೂಲಕ ಇಲ್ಲವೇ ವಿಮಾ ಕಂಪನಿಯ ಅಧಿಕೃತ ವೆಬ್‌ಸೈಟ್‌ ಮೂಲಕ ಪಾವತಿ ಮಾಡಬಹುದಾಗಿದೆ. ಹಾಗಾದರೇ ಆನ್‌ಲೈನ್‌ ಮೂಲಕ ಎಲ್‌ಐಸಿ ಪ್ರೀಮಿಯಂ ಕಂತು ಪಾವತಿಸುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ.

ಫೋನ್‌ಪೇ ಆಪ್‌ನಲ್ಲಿ  LIC ಪ್ರೀಮಿಯಂ ಪಾವತಿಸಲು ಹೀಗೆ ಮಾಡಿರಿ:

ಫೋನ್‌ಪೇ ಆಪ್‌ನಲ್ಲಿ LIC ಪ್ರೀಮಿಯಂ ಪಾವತಿಸಲು ಹೀಗೆ ಮಾಡಿರಿ:

* ಫೋನ್‌ಪೇ ಅಪ್ಲಿಕೇಶನ್ ತೆರೆಯಿರಿ ಮತ್ತು ಎಲ್‌ಐಸಿ ಪ್ರೀಮಿಯಂ ಐಕಾನ್ ಕ್ಲಿಕ್ ಮಾಡಿ
* ವಿವರಗಳನ್ನು ನಮೂದಿಸಿ, ಬಾಕಿ ಮೊತ್ತವನ್ನು ಪಾವತಿಸಿ
* ತೆರಿಗೆ ಪ್ರಯೋಜನಗಳನ್ನು ಪಡೆಯಲು ರಶೀದಿಯನ್ನು ತ್ವರಿತವಾಗಿ ವೀಕ್ಷಿಸಲು ಮತ್ತು ಡೌನ್‌ಲೋಡ್ ಮಾಡಲು ‘View Receipt' ಕ್ಲಿಕ್ ಮಾಡಿ.

ಗೂಗಲ್ ಪೇ ಆಪ್‌ನಲ್ಲಿ LIC ಪ್ರೀಮಿಯಂ ಪಾವತಿಸಲು ಈ ಹಂತಗಳನ್ನು ಅನುಸರಿಸಿ:

ಗೂಗಲ್ ಪೇ ಆಪ್‌ನಲ್ಲಿ LIC ಪ್ರೀಮಿಯಂ ಪಾವತಿಸಲು ಈ ಹಂತಗಳನ್ನು ಅನುಸರಿಸಿ:

* ಮೊದಲು, ನಿಮ್ಮ ಮೊಬೈಲ್‌ನಲ್ಲಿ Google Pay ಅಪ್ಲಿಕೇಶನ್ ತೆರೆಯಿರಿ.

* ಬ್ಯುಸಿನೆಸ್‌ ಮತ್ತು ಬಿಲ್ ಆಯ್ಕೆಯಲ್ಲಿ ಕಾಣಿಸುವ ಎಲ್‌ಐಸಿ ಐಕಾನ್ ಟ್ಯಾಪ್ ಮಾಡಿ.

* ಎಲ್‌ಐಸಿ ಪಾಲಿಸಿಯನ್ನು ಲಿಂಕ್ ಮಾಡಬೇಕಾಗಿರುವುದರಿಂದ ನಿಮ್ಮ ಪಾವತಿಗಳನ್ನು ಸುಲಭವಾಗಿ ಪಾವತಿಸಬಹುದು ಮತ್ತು ಟ್ರ್ಯಾಕ್ ಮಾಡಬಹುದು. ಪ್ರಾರಂಭಿಸಿ ಟ್ಯಾಪ್ ಮಾಡಿ.

* ನಿಮ್ಮ ಪಾಲಿಸಿ ಸಂಖ್ಯೆ, ಇಮೇಲ್ ಐಡಿ, ಖಾತೆಯ ಹೆಸರನ್ನು ಎಲ್ಐಸಿ ಪಾಲಿಸಿ ರೆಕಾರ್ಡ್ಸ್ ಪ್ರಕಾರ ಭರ್ತಿ ಮಾಡಿ ಇದರಿಂದ ನಿಮ್ಮ ಎಲ್ಐಸಿ ಪಾಲಿಸಿಯನ್ನು ಲಿಂಕ್ ಮಾಡಬಹುದು ಮತ್ತು ಪ್ರೀಮಿಯಂ ಪಾವತಿಸಬಹುದು.

ಅಧಿಕೃತ LIC ವೆಬ್‌ಸೈಟ್‌ನಲ್ಲಿ ಈ ಕ್ರಮಗಳನ್ನು ಅನುಸರಿಸಿ (Without login)

ಅಧಿಕೃತ LIC ವೆಬ್‌ಸೈಟ್‌ನಲ್ಲಿ ಈ ಕ್ರಮಗಳನ್ನು ಅನುಸರಿಸಿ (Without login)

* ಅಧಿಕೃತ ಎಲ್‌ಐಸಿ ವೆಬ್‌ಸೈಟ್‌ಗೆ ಭೇಟಿ ನೀಡಿ. www.licindia.in
* ಪೇ ಪ್ರೀಮಿಯಂ ಆಯ್ಕೆ ಸೆಲೆಕ್ಟ್‌ ಮಾಡಿರಿ, ನಂತರ ಪೇ ಡೈರೆಕ್ಟ್‌ ಆಯ್ಕೆ ಕ್ಲಿಕ್ ಮಾಡಿ
* ಪ್ರೀಮಿಯಂ ಪೇಮೆಂಟ್ ಆಯ್ಕೆ ಒತ್ತಿರಿ, ಆನಂತರ ಪ್ರೊಸಿಡ್ ಆಯ್ಕೆ ಕ್ಲಿಕ್ಕ್ ಮಾಡಿರಿ
* ಪಾಲಿಸಿ ನಂಬರ್, ಪಾಲಿಸಿ ಮೊತ್ತ, ಸೇರಿದಂತೆ ಅಗತ್ಯ ಮಾಹಿತಿಗಳನ್ನು ತುಂಬಿರಿಸು
* ಮಾಹಿತಿ ತುಂಬಿದ ನಂತರ ಕ್ಯಾಪ್ಚಾ ಕೋಡ್ ನಮೂದಿಸಿ (captcha code), 'ಐ ಅಗ್ರೀ' ಬಾಕ್ಸ್ ಸೆಲೆಕ್ಟ್ ಮಾಡಿ, ಸಬ್ಮಿಟ್ ಒತ್ತಿರಿ.
* ಪಾಲಿಸಿ ಮಾಹಿತಿ ಮತ್ತು ಪಾವತಿಸುವ ಮೊತ್ತ ಚೆಕ್‌ ಮಾಡಿ. ಚೆಕ್‌ ಮತ್ತು ಪೇ ಆಯ್ಕೆ ಕ್ಲಿಕ್ಕ್ ಮಾಡಿ.
* ಆಗ ಹಣ ಪಾವತಿಯ ವಿವಿಧ ಆಯ್ಕೆಗಳು ಕಾಣಿಸುತ್ತವೆ ಅವುಗಳಲ್ಲಿ ನಿಮಗೆ ಅನುಕೂಲವಾದ ಪೇಮೆಂಟ್ ಆಯ್ಕೆ ಮಾಡಿ ಹಣ ಪಾವತಿಸಿ.

ಆಪ್‌ಗಳ ಮೂಲಕ ಪ್ರೀಮಿಯಂ ಪಾವತಿಸಬಹುದು

ಆಪ್‌ಗಳ ಮೂಲಕ ಪ್ರೀಮಿಯಂ ಪಾವತಿಸಬಹುದು

ಎಲ್‌ಐಸಿ ಪಾಲಿಸಿದಾರನು ತನ್ನ ಸ್ಮಾರ್ಟ್‌ಫೋನ್‌ನಲ್ಲಿ ಎಲ್ಐಸಿಯ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವ ಮೂಲಕ ತನ್ನ ಎಲ್‌ಐಸಿ ಪಾಲಿಸಿ ಪ್ರೀಮಿಯಂ ಪಾವತಿಸುವ ಆಯ್ಕೆ ಸಹ ದೊರೆಯುತ್ತದೆ. ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್‌ನ ಆಪ್ ಸ್ಟೋರ್‌ನಲ್ಲಿ ಮುಖ್ಯವಾಗಿ ಮೂರು ಅಪ್ಲಿಕೇಶನ್‌ಗಳು ಲಭ್ಯ ಇವೆ. ಅವುಗಳೆಂದರೇ LIC Customer, LIC Pay Direct ಮತ್ತು My LIC ಆಪ್ಸ್‌ಗಳು ಉಪಯುಕ್ತ.

Best Mobiles in India

English summary
How To Pay Lic Premium Payment Via Google Pay, Phonepe And Lic Site.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X