ಹ್ಯಾಕಿಂಗ್‌ನಿಂದ ಸ್ಮಾರ್ಟ್‌ಫೋನ್ ಸಂರಕ್ಷಣೆ ಹೇಗೆ?

By Shwetha
|

ಬಹು ಹಿಂದಿನ ವರ್ಷಗಳಿಂದಲೇ ಆಂಡ್ರಾಯ್ಡ್ ಅನ್ನು ಹೆಚ್ಚು ದಾಳಿಗೊಳಗಾದ ಮೊಬೈಲ್ ಓಎಸ್ ಆಗಿ ಕಾಣಲಾಗಿದೆ. ಈ ದಾಳಿ ಇತ್ತೀಚಿನ ವರ್ಷಗಳಲ್ಲಿ ಅತಿ ಹೆಚ್ಚಾಗಿದೆ ಎಂದೇ ಹೇಳಬಹುದು. ಆದರೆ ನಿಮ್ಮ ಫೋನ್‌ನ ಜಾಗರೂಕತೆಯನ್ನು ನೀವು ಮಾಡುತ್ತಿದ್ದೀರಿ ಎಂದಾದಲ್ಲಿ ನಿಮ್ಮ ಫೋನ್‌ ಮೇಲೆ ದಾಳಿ ನಡೆಯುವ ಸಾಧ್ಯತೆ ಕಡಿಮೆಯಾಗಿರುತ್ತದೆ.

ಓದಿರಿ: ಫೋನ್ ಹ್ಯಾಂಗಿಂಗ್ ಸಮಸ್ಯೆಗೆ ಇಲ್ಲಿದೆ ಟಾಪ್ ಪರಿಹಾರ

ನಿಮ್ಮ ಕೆಲವೊಂದು ಅಜಾಗರೂಕತೆಗಳು ನಿಮ್ಮ ಫೋನ್‌ನಲ್ಲಿರುವ ಅತ್ಯಮೂಲ್ಯ ಡೇಟಾವನ್ನು ನುಂಗಿ ಹಾಕಬಹುದು ಅಂತೆಯೇ ನಿಮ್ಮ ಫೋನ್ ಅನ್ನು ಇತರೆ ಸಮಾಜ ಬಾಹಿರ ಕೃತ್ಯಗಳಿಗೆ ಬಳಸಿಕೊಳ್ಳಬಹುದು. ಇಂದಿನ ಲೇಖನದಲ್ಲಿ ಇದನ್ನು ತಡೆಯುವುದು ಹೇಗೆ ಮತ್ತು ಇದಕ್ಕಾಗಿ ನೀವು ಕೈಗೊಳ್ಳಬೇಕಾದ ಕ್ರಮಗಳೇನು ಎಂಬುದನ್ನು ಅರಿತುಕೊಳ್ಳೋಣ.

#1

#1

ಇಂಟರ್ನೆಟ್‌ನಲ್ಲಿರುವ ಎಲ್ಲಾವನ್ನು ನಂಬದಿರಿ. ನಿಮ್ಮ ಫೋನ್ ಅನ್ನು ದೋಷಪೂರಿತ ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳಿಗೆ ತೆರೆದುಕೊಳ್ಳುವುದು ನಿಮ್ಮ ಗೌಪ್ಯತೆಗೆ ಧಕ್ಕೆಯನ್ನುಂಟು ಮಾಡಬಹುದು.

#2

#2

ನಿಮ್ಮ ಫೋನ್ ಅನ್ನು ಸಂರಕ್ಷಿಸುವಂತಹ ಮೊಬೈಲ್ ಆಕ್ಸಿಸರೀಸ್‌ಗಳಿಗೆ ಆದ್ಯತೆಯನ್ನು ನೀಡಿ. ವೃತ್ತಿಪರರನ್ನು ಸಲಹೆಗಳನ್ನು ಪಡೆದುಕೊಂಡು ಈ ಪರಿಕರಗಳನ್ನು ಖರೀದಿಸಿ.

#3

#3

ನಿಮ್ಮ ಫೋನ್‌ಗೆ ಪಾಸ್‌ವರ್ಡ್ ಅನ್ನು ಅಳವಡಿಸಿಕೊಂಡಿದ್ದರೂ ಅದನ್ನು ಮತ್ತು ಡೇಟಾವನ್ನು ಬ್ಯಾಕಪ್ ಮಾಡಿಕೊಳ್ಳಿ. ಎಲ್ಲದಲ್ಲೂ ಒಂದೇ ಪಾಸ್‌ವರ್ಡ್‌ ಅನ್ನು ಬಳಸಬೇಡಿ ಬದಲಾಯಿಸುತ್ತಿರಿ.

#4

#4

ಸ್ಕ್ರೀನ್ ಲಾಕ್ ಮಾತ್ರವೇ ಭದ್ರತೆ ಎಂಬುದಾಗಿ ಕಂಡುಕೊಳ್ಳಬೇಡಿ. ಆಂಡ್ರಾಯ್ಡ್ ಅಪ್ಲಿಕೇಶನ್, ಆಪ್ ಲಾಕ್, ಮೊದಲಾದ ಅಪ್ಲಿಕೇಶನ್‌ಗಳ ಸಹಾಯವನ್ನು ಪಡೆದುಕೊಂಡು ಫೋನ್ ಲಾಕ್ ಮಾಡಿ.

#5

#5

ಕೆಲವೊಮ್ಮೆ ಸಾರ್ವಜನಿಕ ವೈಫೈಯನ್ನು ಬಳಸುವುದು ಅಗತ್ಯವಾಗಿದ್ದರೂ, ಬ್ಯಾಂಕಿಂಗ್‌ನಂತಹ ಕೆಲಸಗಳನ್ನು ಇವುಗಳ ಮೂಲಕ ಮಾಡದಿರಿ. ಇದರಿಂದ ಹ್ಯಾಕರ್‌ಗಳು ಅತಿ ಸುಲಭವಾಗಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕದಿಯಬಹುದು.

#6

#6

ತಂತ್ರಜ್ಞಾನವು ಸಾಕಷ್ಟು ಪ್ರಯೋಜನಗಳನ್ನು ನೀಡುತ್ತಿದ್ದು ಅವುಗಳ ಬಳಕೆಯನ್ನು ಮಾಡಿ. ಆಧುನಿಕ ಮಾರ್ಪಾಡುಗಳನ್ನು ಫೋನ್‌ನಲ್ಲಿ ಅಳವಡಿಸಿಕೊಳ್ಳುತ್ತಿರಿ.

#7

#7

ನಿಮ್ಮ ಫೋನ್ ಎಂದೆಂದಿಗೂ ಕಳೆದು ಹೋಗಿದೆ ಎಂದಾದಾಗ ನಿಮ್ಮ ಮಹತ್ವಪೂರ್ಣ ಡೇಟಾಗಳನ್ನು ಅಳಿಸಿಬಿಡಿ. ನಿಮ್ಮ ಫೋನ್ ಕಳೆದು ಹೋದಾಗಲೂ ಇನ್ನೊಂದನ್ನು ಖರೀದಿಸಬಹುದು ಆದರೆ ಡೇಟಾ ಹೆಚ್ಚು ಪ್ರಮುಖವಾಗಿರುತ್ತದೆ ಅವುಗಳಿಗೆ ಹಾನಿಯುಂಟಾಗದಂತೆ ಕಾಯ್ದುಕೊಳ್ಳಿ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಮೈಕ್ರೋ ಎಸ್‌ಡಿ ಕಾರ್ಡ್ ಖರೀದಿಸುವಾಗ ಈ ತಪ್ಪುಗಳನ್ನು ಮಾಡದಿರಿ </a><br /><a href=ಫೋನ್ ಹ್ಯಾಂಗಿಂಗ್ ಸಮಸ್ಯೆಗೆ ಇಲ್ಲಿದೆ ಟಾಪ್ ಪರಿಹಾರ
ಏರ್‌ಟೆಲ್‌ನಲ್ಲಿ ಉಚಿತ ರೀಚಾರ್ಜ್‌ ಪಡೆಯುವುದು ಹೇಗೆ?" title="ಮೈಕ್ರೋ ಎಸ್‌ಡಿ ಕಾರ್ಡ್ ಖರೀದಿಸುವಾಗ ಈ ತಪ್ಪುಗಳನ್ನು ಮಾಡದಿರಿ
ಫೋನ್ ಹ್ಯಾಂಗಿಂಗ್ ಸಮಸ್ಯೆಗೆ ಇಲ್ಲಿದೆ ಟಾಪ್ ಪರಿಹಾರ
ಏರ್‌ಟೆಲ್‌ನಲ್ಲಿ ಉಚಿತ ರೀಚಾರ್ಜ್‌ ಪಡೆಯುವುದು ಹೇಗೆ?" />ಮೈಕ್ರೋ ಎಸ್‌ಡಿ ಕಾರ್ಡ್ ಖರೀದಿಸುವಾಗ ಈ ತಪ್ಪುಗಳನ್ನು ಮಾಡದಿರಿ
ಫೋನ್ ಹ್ಯಾಂಗಿಂಗ್ ಸಮಸ್ಯೆಗೆ ಇಲ್ಲಿದೆ ಟಾಪ್ ಪರಿಹಾರ
ಏರ್‌ಟೆಲ್‌ನಲ್ಲಿ ಉಚಿತ ರೀಚಾರ್ಜ್‌ ಪಡೆಯುವುದು ಹೇಗೆ?

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಇನ್ನಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Best Mobiles in India

English summary
Here are few necessary measures to take in order to protect your data.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X