Subscribe to Gizbot

ಚಾರ್ಜರ್ ಬಳಸದೆಯೇ ಫೋನ್ ಚಾರ್ಜ್ ಮಾಡಲು ಟಾಪ್ ವಿಧಾನಗಳು

Written By:

ಚಾರ್ಜರ್ ಬಳಸಿ ಫೋನ್ ಚಾರ್ಜ್ ಮಾಡುವುದು ದೊಡ್ಡ ವಿಷಯವೇನಲ್ಲ. ಆದರೆ ಇಲೆಕ್ಟ್ರಿಕ್ ಶಕ್ತಿ ಇಲ್ಲದೆಯೇ ಫೋನ್ ಚಾರ್ಜ್ ಮಾಡುವುದನ್ನು ಕುರಿತು ತಿಳಿದಿದ್ದೀರಾ? ವಿದ್ಯುತ್ ಇಲ್ಲದ ಸಂದರ್ಭದಲ್ಲಿ ತುರ್ತು ಪರಿಸ್ಥಿತಿಗಳಲ್ಲಿ ನಿಮ್ಮ ಫೋನ್ ಚಾರ್ಜ್ ಮಾಡಬೇಕು ಎಂದಾದಲ್ಲಿ ಅದೂ ಈಗ ಸಾಧ್ಯ

ಓದಿರಿ: ಫೋನ್ ಚಾರ್ಜಿಂಗ್ ಕುರಿತ ಸತ್ಯಗಳು: ಗಟ್ಟಿ ಗುಂಡಿಗೆಯವರಿಗೆ ಮಾತ್ರ

ಇಂದಿನ ಲೇಖನದಲ್ಲಿ ವಿದ್ಯುತ್ ಶಕ್ತಿ ಇಲ್ಲದೇ ಚಾರ್ಜರ್ ಸಹಾಯವಿಲ್ಲದೆ ಫೋನ್ ಚಾರ್ಜ್ ಮಾಡುವ ಸರಳ ವಿಧಾನಗಳನ್ನು ನಾವು ಕೆಳಗಿನ ಸ್ಲೈಡರ್‌ಗಳಲ್ಲಿ ನೀಡುತ್ತಿದ್ದೇವೆ. ಸಂಶೋಧನಾ ಹಂತದಲ್ಲಿ ಈ ವಿಧಾನಗಳು ಇದ್ದು ಜಾರಿಯಾದಲ್ಲಿ ಫೋನ್ ಕ್ಷೇತ್ರದಲ್ಲೇ ಇದು ಮಿಂಚಿನ ಸಂಚಾರವನ್ನುಂಟು ಮಾಡುವುದು ಸಾಧ್ಯ.

ಓದಿರಿ: ದಿನವಿಡೀ ಫೋನ್ ಚಾರ್ಜ್ ಮಾಡಿ ನಿಶ್ಚಿಂತೆಯಿಂದಿರಿ

ಹಾಗಿದ್ದರೆ ಕೆಳಗಿನ ಸ್ಲೈಡರ್‌ಗಲ್ಲಿ ನಾವು ನೀಡಿರುವ ಕೆಲವೊಂದು ಸರಳ ಹಂತಗಳನ್ನು ಬಳಸಿ ನಿಮ್ಮ ಫೋನ್‌ಗೆ ವಿದ್ಯುತ್ ಯಾ ಚಾರ್ಜರ್ ಬಳಸದೇ ಚಾರ್ಜ್ ಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಮೂತ್ರದಿಂದ ಫೋನ್ ಚಾರ್ಜ್

ಇಂಗ್ಲೇಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮೂತ್ರವನ್ನು ಶಕ್ತಿಯ ಮೂಲವನ್ನಾಗಿ ಬಳಸಿ ಫೋನ್ ಚಾರ್ಜ್ ಮಾಡುವ ವಿಧಾನವನ್ನು ಪತ್ತೆಹಚ್ಚಿದ್ದಾರೆ. ಮೈಕ್ರೊಬಯಾಲ್ ಫ್ಯುಯೆಲ್ ಸೆಲ್ಸ್ (MFCs) ಮೂಲಕ ಮೂತ್ರ ರವಾನೆಯಾದಾಗ ಇದು ಶಕ್ತಿಯ ಪರ್ಯಾಯ ವಿಧಾನವನ್ನು ನಿರ್ಮಿಸುತ್ತದೆ. ಈ ಸಂಶೋಧನೆ ಯಶಸ್ವಿಯಾಯಿತು ಎಂದಾದಲ್ಲಿ ಮೂತ್ರವನ್ನು ಬಳಸಿ ಫೋನ್ ಚಾರ್ಜ್ ಮಾಡಬಹುದಾಗಿದೆ.

ಗಾಳಿ

ಗಾಳಿಯನ್ನು ಬಳಸಿ ಫೋನ್ ಚಾರ್ಜ್ ಮಾಡುವುದು

ಶಕ್ತಿಯ ಮೂಲವೇ ಗಾಳಿಯಾಗಿದ್ದು, ಇದನ್ನು ಬಳಸಿ ನಿಮ್ಮ ಫೋನ್ ಅನ್ನು ಚಾರ್ಜ್ ಮಾಡಲು ಬಳಸಬಹುದು. ನೆದರ್‌ಲ್ಯಾಂಡ್ ಸಂಶೋಧಕರು ಐಫ್ಯಾನ್ ಅನ್ನು ತಯಾರಿಸಿದ್ದು, ಐಫೋನ್ ಅನ್ನು ಚಾರ್ಜ್ ಮಾಡಲು ಇದು ಗಾಳಿಯನ್ನು ಬಳಸುತ್ತದೆ. ಐಫೋನ್ 5 ಗಂಟೆಗಳಲ್ಲಿ ಚಾರ್ಜ್ ಅನ್ನು ಪಡೆದುಕೊಳ್ಳುತ್ತದೆ.

ತಂಪು ಪಾನೀಯ

ತಂಪು ಪಾನೀಯ

ಚೀನಾದ ವಿನ್ಯಾಸಕಾರರೊಬ್ಬರು ತಂಪು ಪಾನೀಯ ಬಳಸಿ ಫೋನ್ ಚಾರ್ಜ್ ಮಾಡುವ ವಿಧಾನವನ್ನು ಕಂಡುಹುಡುಕಿದ್ದಾರೆ. ಕುಡಿಯುವ ಬದಲಿಗೆ ತಂಪು ಪಾನೀಯವನ್ನು ಒಂದು ವಿಶೇಷ ಕೋಶದಲ್ಲಿ ಹಾಕಬೇಕು. ಇದು ಶಕ್ತಿಯನ್ನು ಉತ್ಪಾದಿಸಿ ನಿಮ್ಮ ಫೋನ್ ಅನ್ನು ಚಾರ್ಜ್ ಮಾಡುತ್ತದೆ.

ಆಹಾರ ಬೇಯಿಸಿ

ಆಹಾರ ಬೇಯಿಸಿ ಫೋನ್ ಚಾರ್ಜ್ ಮಾಡಿ

ಪಾನ್ ಚಾರ್ಜರ್ ಎಂಬ ವಿಧಾನ ಇದಾಗಿದ್ದು ಆಹಾರ ಬೇಯಿಸುವುದರ ಮೂಲಕ ನಿಮ್ಮ ಫೋನ್‌ಗೆ ಚಾರ್ಜ್ ಮಾಡಬಹುದಾಗಿದೆ. ಪ್ಯಾನ್‌ನಲ್ಲಿರುವ 100 ಸೆಲ್ಶಿಯಸ್ ನೀರು ಫೋನ್ ಚಾರ್ಜ್ ಮಾಡುತ್ತದೆ.

ಕಿರುಚು

ಕಿರುಚುವುದರ ಮೂಲಕ ಫೋನ್ ಚಾರ್ಜ್ ಮಾಡಿ

ದಕ್ಷಿಣ ಕೊರಿಯಾದ ಸಂಶೋಧಕರು ಕಿರುಚುವುದರ ಮೂಲಕ ಫೋನ್ ಚಾರ್ಜ್ ಮಾಡಬಹುದು ಎಂಬುದನ್ನು ಪತ್ತೆಹಚ್ಚಿದ್ದಾರೆ. ನಿಮ್ಮ ಕಿರುಚುವಿಕೆಯಲ್ಲಿ ಉಂಟಾಗುವ ವೈಬ್ರೇಶನ್ ಫೋನ್ ಚಾರ್ಜಿಂಗ್ ಮಾಡಲು ಅನುಕೂಲ ಮಾಡಿಕೊಡುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
We have tried to come-up with some unconventional, unorthodox ways using which you can charge a smartphone, without using electricity! Please note that some of these methods are still in the experimental stage, and can take some time to get materialized.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot