ಡೆಸ್ಕ್‌ಟಾಪ್‌ ಸ್ಕ್ರೀನ್‌ ಕಾರ್ಯಗಳನ್ನು ಯೂಟ್ಯೂಬ್‌ನೊಂದಿಗೆ ರೆಕಾರ್ಡ್‌ ಹೇಗೆ?

By Suneel
|

ಕಂಪ್ಯೂಟರ್‌ನಲ್ಲಿ ನಿರ್ವಹಿಸುವ ಕೆಲವೊಂದು ಸೃಜನಶೀಲ ಕಾರ್ಯಗಳನ್ನು ಇತರರಿಗೆ ತಿಳಿಸಲು ಅದನ್ನು ವೀಡಿಯೋ ಮಾಡಿ ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡುವುದು ಹಲವರಿಗೆ ತಿಳಿದಿರಬಹುದು. ಇಂತಹ ಕಾರ್ಯಗಳಿಗಾಗಿ ಕೆಲವರು ಡೆಸ್ಕ್‌ಟಾಪ್‌ನಲ್ಲಿ ನಿರ್ವಹಿಸುವ ಕಾರ್ಯಗಳನ್ನು ರೆಕಾರ್ಡ್‌ ಮಾಡಲು ಕೆಲವು ಸಾಫ್ಟ್‌ವೇರ್‌ಗಳನ್ನು ಬಳಸುತ್ತಾರೆ. ಇನ್ನೂ ಕೆಲವರು ನೇರವಾಗಿ ಕ್ಯಾಮೆರಾಗಳನ್ನು ಇಟ್ಟು ವೀಡಿಯೋ ಮಾಡುತ್ತಾರೆ. ಆದರೆ ಗಿಜ್‌ಬಾಟ್‌ ನಿಮಗೆ ಇಂದು ಯಾವುದೇ ಸಾಫ್ಟ್‌ವೇರ್‌ಗಳನ್ನು ಬಳಸದೇ, ಕ್ಯಾಮೇರಾವನ್ನು ಬಳಸದೇ ಯೂಟ್ಯೂಬ್‌ನ ಸಹಾಯದಿಂದ ಡೆಸ್ಕ್‌ಟಾಪ್‌ನಲ್ಲಿನ ನಿರ್ವಹಿಸುವ ಕಾರ್ಯಗಳನ್ನು ಸುಲಭವಾಗಿ ರೆಕಾರ್ಡ್‌ ಮಾಡುವುದು ಹೇಗೆ ಎಂದು ತಿಳಿಸುತ್ತಿದೆ. ಅದು ಹೇಗೆ ಎಂದು ತಿಳಿಯಲು ಲೇಖನದಲ್ಲಿನ ತಿಳಿಸಿರುವ ವಿಧಾನಗಳನ್ನು ಅನುಸರಿಸಿ.

1

1

ಮೊದಲಿಗೆ ನೀವು ಗೂಗಲ್‌ ಖಾತೆಯನ್ನು ತೆರೆದಿರಬೇಕು. ಒಂದು ವೇಳೆ ಗೂಗಲ್‌ ಖಾತೆ ಇಲ್ಲದಿದ್ದಲ್ಲಿ ಗೂಗಲ್‌ ಖಾತೆಯನ್ನು ತೆರೆಯಿರಿ. ನಂತರ ಗೂಗಲ್‌ ಖಾತೆಯೊಂದಿಗೆ ಯೂಟ್ಯೂಬ್‌ಗೆ ಲಾಗಿನ್‌ ಆಗಿರಿ.

2

2

ಗೂಗಲ್‌ ಖಾತೆಯೊಂದಿಗೆ ಯೂಟ್ಯೂಬ್‌ಗೆ ಲಾಗಿನ್ ಆದ ನಂತರ ಯೂಟ್ಯೂಬ್‌ ಪೇಜ್‌ನಲ್ಲಿ ಸ್ಕೀನ್‌'ನ ಎಡಭಾಗದಲ್ಲಿರುವ 'Upload' ಬಟನ್‌ ಕ್ಲಿಕ್‌ ಮಾಡಿ. ನಂತರದಲ್ಲಿ ಲೈವ್‌ ಸ್ಟ್ರೀಮಿಂಗ್‌ ಕೆಳಗೆ "Events" ಎಂಬುದನ್ನು ಆಯ್ಕೆ ಮಾಡಿ. ನೆನಪಿಡಿ ಯೂಟ್ಯೂಬ್‌'ಗೆ ನೀವು ಇದೇ ಮೊದಲು ವೀಡಿಯೋ ಅಪ್‌ಲೋಡ್‌ ಮಾಡುವವರಾಗಿದ್ದಲ್ಲಿ ಫೋನ್‌ ನಂಬರ್‌ ಪರಿಶೀಲನೆ ಮಾಡಬೇಕಾಗಿರುತ್ತದೆ.

3

3

"Event" ಆಯ್ಕೆ ಮಾಡಿದ ನಂತರ ಓಪನ್‌ ಆದ ಪೇಜ್‌ನಲ್ಲಿ ನೀವು ಡೆಸ್ಕ್‌ಟಾಪ್‌ನಲ್ಲಿ ರೆಕಾರ್ಡ್‌ ಮಾಡಲು ಹೊರಟಿರುವ ವೀಡಿಯೋ ಬಗ್ಗೆ ವಿವರವನ್ನು ಟೈಪ್‌ ಮಾಡಿ. ನಂತರ "Go Live Button" ಅನ್ನು ಕ್ಲಿಕ್‌ ಮಾಡಿ.

4

4

ಮೇಲಿನ ಎಲ್ಲಾ ವಿಧಾನ ಅನುಸರಿಸಿದ ನಂತರ ಏರ್‌ ಪೇಜ್‌'ನಲ್ಲಿ ಹ್ಯಾಂಗೌಟ್ಸ್ ತಲುಪುತ್ತೀರಿ. ಆ ಪೇಜ್‌ನಲ್ಲಿ ಕ್ಯಾಮೆರಾ ಐಕಾನ್‌ ಮೇಲೆ ಕ್ಲಿಕ್‌ ಮಾಡಿ ವೆಬ್‌ಕ್ಯಾಮ್‌ ಅನ್ನು ಟರ್ನ್‌ ಆಫ್‌ ಮಾಡಿ. ಇದೇ ರೀತಿಯಲ್ಲಿ ಮೈಕ್ರೋಫೋನ್‌ ಐಕಾನ್‌ ಅನ್ನು ಕ್ಲಿಕ್‌ ಮಾಡಿ ಆಡಿಯೋ ರೆಕಾರ್ಡಿಂಗ್‌ ನಿಲ್ಲಿಸಿ. ಇದು ಅಗತ್ಯವಾಗಿ ಮಾಡಬೇಕಾದ ವಿಧಾನವಾಗಿದೆ. ಇಲ್ಲವಾದಲ್ಲಿ ಅನಗತ್ಯ ಆಡಿಯೋ ಮತ್ತು ವೀಡಿಯೋ ರೆಕಾರ್ಡ್‌ ಡೆಸ್ಕ್‌ಟಾಪ್‌ ರೆಕಾರ್ಡ್‌ ಅಲ್ಲದೇ ಆಗುತ್ತದೆ.

5

5

ಈ ಹಂತದಲ್ಲಿ ಕೇವಲ ನೀವು ಎಡಭಾಗದ ಟೂಲ್‌ಬಾಕ್ಸ್‌ನಲ್ಲಿ "Screenshare" ಬಟನ್‌ ಕ್ಲಿಕ್‌ ಮಾಡಿ ನಂತರ "desktop Window" ಆಯ್ಕೆ ಮಾಡಿ. "desktop Window" ಆಯ್ಕೆ ಮಾಡಿದ ನಂತರ ನೀವು ಡೆಸ್ಕ್‌ಟಾಪ್‌ನಲ್ಲಿ ನಿರ್ವಹಿಸುವುದು ರೆಕಾರ್ಡ್ ಆಗುತ್ತದೆ. ಇದು ನಿಮ್ಮ ಪ್ರಸ್ತುತ ಡೆಸ್ಕ್‌ಟಾಪ್‌ನಲ್ಲಿ ನೆಡೆಯುವ ಕಾರ್ಯತೋರಿಸುತ್ತದೆ. ವಿಂಡೋ ಆಯ್ಕೆ ಮಾಡಿದ ನಂತರ "Start Screenshare" ಬಟನ್‌ ಮೇಲೆ ಕ್ಲಿಕ್‌ ಮಾಡಿ. ನಂತರ "Start Broadcast" ಬಟನ್‌ ಮೇಲೆ ಕ್ಲಿಕ್‌ ಮಾಡಿ.

6

6

ಮೇಲಿನ ಎಲ್ಲಾ ಹಂತ ಪಾಲಿಸುವುದರೊಂದಿಗೆ ಆಯ್ಕೆ ಮಾಡಲಾದ ವಿಂಡೋ ರೆಕಾರ್ಡ್‌ ಆಗುತ್ತದೆ. ನಂತರದಲ್ಲಿ ರೆಕಾರ್ಡ್‌ ಮುಗಿದ ನಂತರ "Stop Screenshare" ಮೇಲೆ ಕ್ಲಿಕ್‌ ಮಾಡಿ. ನಂತರ ಯೂಟ್ಯೂಬ್‌ ವೆಬ್‌ಸೈಟ್‌ಗೆ ಸ್ವಿಚ್‌ ಮಾಡಿ. ನಂತರ ನಿಮ್ಮ ವೀಡಿಯೋ ವಯಕ್ತಿಕವಾಗಿರುತ್ತದೆ ಮತ್ತು ಯಾರಿಗೂ ಶೇರ್ ಆಗಿರುವುದಿಲ್ಲ. ನಂತರದಲ್ಲಿ ನಿಮ್ಮ ವೀಡಿಯೋವನ್ನು ಗೂಗಲ್‌ ಡ್ರೈವ್‌'ಗೆ ಡೌನ್‌ಲೋಡ್‌ ಮಾಡಿ, "Broadcast" ಬಟನ್‌ ಮೇಲೆ ಟ್ಯಾಪ್‌ ಮಾಡಿ ಪ್ರಪಂಚಕ್ಕೆ ಹಂಚಿರಿ.

Best Mobiles in India

English summary
How To Record Desktop Screen with Youtube. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X