ಗ್ಯಾಲಾಕ್ಸಿ ಎಸ್‌3 ಸ್ಮಾರ್ಟ್‌ಫೋನ್‌ನಲ್ಲಿ ರೀಸೆಟ್‌ ಮಾಡುವುದು ಹೇಗೆ?

Posted By: Staff

image-Samsung-Galaxy-S31.jpg kannada.gizbot.com}

ನಿಮ್ಮ ಗ್ಯಾಲಾಕ್ಸಿ ಎಸ್‌3 ಸ್ಮಾರ್ಟ್‌ಪೋನ್‌ ಹ್ಯಾಂಗ್‌ ಆಗುತ್ತಿದೆಯೇ? ಅಥವಾ ಆಗಾಗಾ ಸಣ್ಣ ಪುಟ್ಟ ತೊಂದರೆಗಳು ಕಾಣಿಸಿಕೊಳ್ಳುತ್ತಿದೆಯೆ? ಇದಕ್ಕಾಗಿ ಹೆಚ್ಚ ತಲೆ ಕೆಡಿಸಿಕೊಳ್ಳುವ ಅಗತ್ಯವೇ ಇಲ್ಲ ಸರಳವಾಗಿ ನಿಮ್ಮ ಗ್ಯಾಲಾಕ್ಸಿ ಎಸ್‌3 ಸ್ಮಾರ್ಟ್‌ಫೋನ್‌ ಅನ್ನು ರೀಸೆಟ್‌ ಮಾಡಿದರೆ ಸಾಕು ಎಲ್ಲಾ ಸಮಸ್ಯೆಗಳು ಪರಿಹಾರವಾಗಿಬಿಡುತ್ತದೆ. ಅಂದಹಾಗೆ ರೀಸೆಟ್‌ ಮಾಡುವುದು ಎಂದು ಆಲೋಚಿಸುತ್ತಿದ್ದೀರಾ? ನಿಮ್ಮ ಗ್ಯಾಲಾಕ್ಸಿ ಎಸ್‌3 ಸ್ಮಾರ್ಟ್‌ಫೋನ್‌ ರೀಸೆಟ್‌ ಮಾಡವುವ ಸರಳ ವಿಧಾನವನ್ನು ಗಿಜ್ಬಾಟ್‌ ನಿಮ್ಮೆದುರು ತಂದಿದ್ದು ಈ ಕೆಳಗೆ ತಿಳಿಸಿರವಂತೆ ಅನುಸರಿಸುವ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ ಸುಲಭವಾಗಿ ರೀಸೆಟ್‌ ಮಾಡಿಕೊಳ್ಳಿ. ಅಂದಹಾಗೆ ರೀಸೆಟ್‌ ಮಾಡುವ ಮುನ್ನ ಕೆಲ ಎಚ್ಚರಿಕೆಗಳನ್ನು ವಹಿಸುವುದು ಅತ್ಯವಶ್ಯಕವಾಗಿದೆ.

  • ಫೋನ್‌ ರೀಸೆಟ್‌ ಮಾಡುವುದರಿಂದ ನಿಮ್ಮ ಪೋನ್‌ನಲ್ಲಿ ಸೇವ್‌ ಆಗಿರುವಂತಹ ಎಲ್ಲಾ ಡೇಟಾಗಳು ಡಿಲೀಟ್‌ ಆಗಿ ಬಿಡುತ್ತದೆ.

  • ಅಂದಹಾಗೆ ರೀಸೆಟ್‌ ಮಾಡಿದಲ್ಲಿ ನಿಮ್ಮ ಫೋನ್‌ ಬುಕ್‌ನಲ್ಲಿ ಸೇವ್‌ ಆಗಿರುವಂತಹ ಕಾಂಟ್ಯಾಕ್ಟ್‌ ನಂಬರ್‌ಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅಂದರೆ ಯಾವುದೂ ಕೂಡಾ ಡಿಲೀಟ್‌ ಆಗುವುದಿಲ್ಲ.

  • ಫೋನ್‌ ರೀಸೆಟ್‌ ಮಾಡಲು ಮೊದಲಿಗೆ ಸೆಟ್ಟಿಂಗ್ಸ್‌ಗೆ ತೆರಳಿ ಬ್ಯಾಕಪ್‌ ಅಂಡ್‌ ರೀಸೆಟ್‌ ಆಪ್ಷನ್‌ ಕ್ಲಿಕ್‌ ಮಾಡಿ.
  • ಬ್ಯಾಕಪ್‌ ಅಂಡ್‌ ರೀಸೆಟ್‌ ಆಪ್ಷನ್‌ ಕ್ಲಿಕ್‌ ಮಾಡುತ್ತಿದ್ದ ಹಾಗೆಯೇ ನಿಮ್ಮೆದುರು ಬ್ಯಾಕಪ್‌ ಮೈ ಡೇಟಾ, ಆಟೋಮ್ಯಾಟಿಕ್‌ ರೀಸೆಟ್‌ ಹಾಗೂ ಫ್ಯಾಕ್ಟರಿ ಡೇಟಾ ರೀಸೆಟ್‌ ನಂತಹ ಮೂರು ಆಪ್ಷನ್‌ಗಳು ತೆರೆದುಕೊಳ್ಳುತ್ತವೆ.

  • ಈ ಮೂರು ಆಪ್ಷನ್‌ಗಳಲ್ಲಿ ಫ್ಯಾಕ್ಟರಿ ಡೇಟಾ ರೀಸೆಟ್‌ ಆಪ್ಷನ್‌ ಆಯ್ಕೆ ಮಾಡಿ ಸ್ವಲ್ಪ ಸಮಯದ ಬಳಿಕ ನಿಮ್ಮ ಎಸ್‌3 ಸ್ಮಾರ್ಟ್‌ಫೋನ್‌ ರೀಸೆಟ್‌ ಆಗಿಬಿಡುತ್ತದೆ. ರೀಸೆಟ್‌ ಆದ ಬಳಿಕ ಫೋನ್‌ ತಂತಾನೆ ರೀಸ್ಟಾರ್ಟ್‌ ಆಗುತ್ತದೆ.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot