Subscribe to Gizbot

ಫೋನ್ ನೀರಲ್ಲಿ ಬಿದ್ದಾಗ ಏನು ಮಾಡಬೇಕು?

Written By:

ನಿಮ್ಮ ಫೋನ್ ಆಕಸ್ಮಿಕವಾಗಿ ನೀರಿಗೆ ಬಿದ್ದು ಹಾನಿಗೊಳಗಾಗಿದೆಯೇ? ಹಾಗಿದ್ದರೆ ಫೋನ್‌ನ ಕಾಳಜಿಯನ್ನು ಹೇಗೆ ಮಾಡಬೇಕು ಎಂಬುದ ಬಗ್ಗೆ ವಿಸ್ಮಯಕಾರಿಯಾದ ಟಿಪ್ಸ್‌ಗಳನ್ನು ನಾವು ಇಲ್ಲಿ ನೀಡುತ್ತಿದ್ದೇವೆ. ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿದರೆ ನಿಮ್ಮ ಫೋನ್‌ ಅನ್ನು ಸುಲಭವಾಗಿ ಸಕ್ರಿಯಗೊಳಿಸಬಹುದು.

ಓದಿರಿ: ಚಾರ್ಜರ್ ಇಲ್ಲದೆಯೇ ಫೋನ್ ಚಾರ್ಜಿಂಗ್ ಈಗ ಸಾಧ್ಯ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೊರತೆಗೆಯಿರಿ

ನೀರಿನಿಂದ ಆದಷ್ಟು ಬೇಗ ಫೋನ್ ಹೊರತೆಗೆಯಿರಿ

ಮೈಕ್ರೋಫೋನ್‌ನ ಸಣ್ಣ ತೂತು, ಚಾರ್ಜಿಂಗ್, ಯುಎಸ್‌ಬಿ ಕೇಬಲ್ ಹೀಗೆ ಈ ಸ್ಥಳಗಳಲ್ಲಿ ನೀರು ಆದಷ್ಟು ಬೇಗನೇ ಪ್ರವೇಶಿಸಬಹುದಾಗಿದೆ. ಆದ್ದರಿಂದ ಫೋನ್ ಅನ್ನು ನೀರಿನಿಂದ ಹೊರತೆಗೆದು ಅದನ್ನು ಸ್ವಿಚ್ ಆಫ್ ಮಾಡಿ.

ಚಾರ್ಜರ್‌ನಿಂದ ಫೋನ್ ಅನ್ನು ಅಸಂಪರ್ಕಗೊಳಿಸಿ

ಹೆಚ್ಚು ಹಾನಿಯಾಗಿರುವುದಿಲ್ಲ

ನಿಮ್ಮ ಫೋನ್ ನೀರಿಗೆ ಬಿದ್ದ ಸಮಯದಲ್ಲಿ ಅದು ಚಾರ್ಜರ್‌ಗೆ ಸಂಪರ್ಕಗೊಂಡಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಕೂಡಲೇ ಚಾರ್ಜರ್‌ನಿಂದ ಫೋನ್ ಅನ್ನು ಅಸಂಪರ್ಕಗೊಳಿಸಿ.

ಒರೆಸಿ

ಬಟ್ಟೆಯಿಂದ ಒರೆಸಿ

ಇನ್ನು ಫೋನ್ ಅನ್ನು ನೀರಿನಿಂದ ಹೊರತೆಗೆದ ತಕ್ಷಣ ಅದನ್ನು ಬಟ್ಟೆಯಿಂದ ಒರೆಸಿ. ಮೃದು ಬಟ್ಟೆಯನ್ನೇ ಇದಕ್ಕೆ ಬಳಸಿ.

ಸಿಮ್ ಕಾರ್ಡ್

ಸಿಮ್ ಕಾರ್ಡ್ ಹೊರತೆಗೆಯಿರಿ

ಫೋನ್‌ನಿಂದ ಸಿಮ್ ಕಾರ್ಡ್ ಅನ್ನು ಹೊರತೆಗೆಯಿರಿ. ಇದನ್ನು ಹೊರಗಿಟ್ಟು ಒಣಗಿಸಿಕೊಳ್ಳಿ.

ಗಾಳಿಗೆ ಆರಲು ಬಿಡಿ

ಮೆಮೊರಿ ಕಾರ್ಡ್, ಇಯರ್ ಫೋನ್ ಹೊರತೆಗೆಯಿರಿ

ಇನ್ನು ಫೋನ್‌ನಿಂದ ಈ ಎಲ್ಲಾ ಸಲಕರಣೆಗಳನ್ನು ಹೊರತೆಗೆದು ಗಾಳಿಗೆ ಆರಲು ಬಿಡಿ.

ಫೋನ್ ಒರೆಸಿ

ಮೃದು ಬಟ್ಟೆಯಿಂದ ಫೋನ್ ಒರೆಸಿ

ನೀರಿನ ಸ್ವಲ್ಪ ಭಾಗ ಫೋನ್‌ ಹೀರಿಕೊಂಡಿದ್ದರೆ ಅದನ್ನು ಬಟ್ಟೆಯಿಂದ ಒರೆಸಿ ಮತ್ತು ಒಣಗಿಸಿ.

ವಾಕ್ಯುಮ್ ಕ್ಲೀನರ್

ವಾಕ್ಯುಮ್ ಕ್ಲೀನರ್ ಬಳಸಿ

ಇನ್ನು ಫೋನ್‌ನ ನೀರಿನ ಅಂಶವನ್ನು ಹೊರತೆಗೆಯಲು ವಾಕ್ಯೂಮ್ ಕ್ಲೀನರ್ ಬಳಸಿ.

ಹೇರ್ ಡ್ರೈಯರ್

ಹೇರ್ ಡ್ರೈಯರ್ ಬಳಸಬೇಡಿ

ನಿಮ್ಮ ಫೋನ್ ಅನ್ನು ಒಣಗಿಸಲು ಹೇರ್ ಡ್ರೈಯರ್ ಬಳಕೆ ಮಾಡದಿರಿ. ಇದರಿಂದ ಫೋನ್‌ನಲ್ಲಿರುವ ನೀರಿನಂಶ ಪೂರ್ಣವಾಗಿ ಹೋಗಲಾರದು.

ಮಿತದರದ ಮಾರ್ಗ

ಅಕ್ಕಿಯಲ್ಲಿ ಹುದುಗಿಸಿ

ಇನ್ನು ಹೆಚ್ಚು ಖರ್ಚಿಲ್ಲದ ಮಿತದರದ ಕೆಲವೊಂದು ಮಾರ್ಗಗಳನ್ನು ಅನುಸರಿಸುವ ಮೂಲಕ ಫೋನ್‌ನ ರಕ್ಷಣೆಯನ್ನು ನಿಮಗೆ ಮಾಡಬಹುದಾಗಿದೆ. ಅಕ್ಕಿ ಚೀಲದ ಬಳಕೆ ಮಾಡಿ

24 ಗಂಟೆಗಳ ಅವಧಿ

24 ಗಂಟೆಗಳ ನಿರೀಕ್ಷೆ

ಫೋನ್ ಅನ್ನು ಈ ಎಲ್ಲಾ ವಿಧಾನಗಳ ಮೂಲಕ ಒಣಗಿಸಿದ ನಂತರ 24 ಗಂಟೆಗಳ ಅವಧಿಯನ್ನು ನೀಡಿ. ಯಾವುದೇ ಧೂಳು ಅಥವಾ ಕೊಳೆಯನ್ನು ಫೋನ್‌ನಿಂದ ನಿವಾರಿಸಿಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Getting your cell phone wet usually means you have to replace it, but sometimes if you're fast enough, you might be able to save the phone! Follow the steps outlined in this article to try and save your wet cell phone.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot